ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

20 Jan 2013

ಲಂಕಾದ ಖ್ಯಾತ ಕ್ರಿಕೆಟಿಗ ದಿಲ್ಶಾನ್ ವಿರುದ್ಧ ಪ್ರಕರಣ ದಾಖಲು..!!



ಶ್ರೀಲಂಕಾ ತಂಡದ ಖ್ಯಾತ  ಬ್ಯಾಟ್ಸ್‌ಮನ್‌ ತಿಲಕರತ್ನೆ ದಿಲ್ಶನ್‌ ಮನೆಯಲ್ಲಿ ಅಳವಡಿಸಿಕೊಂಡಿರುವ ಸಿಸಿಟಿವಿ ಕ್ಯಾಮರಾ ತಮ್ಮ ಮನೆಯ ಈಜುಕೊಳದ ಮುಖವಾಗಿ ಅಳವಡಿಸಲಾಗಿದೆ ಎಂದು ಎದುರುಗಡೆ ಮನೆಯ  ಮಹಿಳೆಯೊಬ್ಬರು ಪೊಲೀಸ್‌ ದೂರು ಸಲ್ಲಿಸಿದ್ದಾರೆ.

ದಿಲ್ಶನ್‌ ವಾಸವಾಗಿರುವ ಪಕ್ಕದ ಮನೆಯಲ್ಲಿ ರೇಣುಕಾ ಡಿ ಕೋಸ್ಟಾ ಎಂಬುವವರು  ವಾಸವಾಗಿದ್ದು, ಅವರು ಮಿರಿಹಾನ ಪೊಲೀಸ್‌ ಸ್ಟೇಸನ್‌ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ಕ್ಯಾಮರಾ ಈಜುಕೊಳ ಮುಖವಾಗಿ ಅಳವಡಿಸಲಾಗಿರುವುದು ಸತ್ಯ ಎಂಬ ಸುದ್ದಿ ಹರಿದಾಡುತ್ತಿದ್ದೆ.

ಮತ್ತೊಂದು  ವರದಿಯ ಪ್ರಕಾರ ಪೊಲೀಸರು ದಿಲ್ಶನ್‌ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಅದು ಈಜುಕೊಳದ ಮುಖವಾಗಿ ಅಳವಡಿಸಿಲ್ಲ ಎಂದು ತಿಳಿಸಲಾಗಿದೆ. ರೇಣುಕಾ ಪತಿ ಇರಾಕ್‌ನಲ್ಲಿ ಉದ್ಯೋದಲ್ಲಿದ್ದು, ತನ್ನ ಎರಡು ಶಾಲಾ ಮಕ್ಕಳ ಜತೆ ವಾಸವಾಗಿದ್ದಾರೆ. ದಿಲ್ಶನ್‌ ಮತ್ನಿ ಮಂಜುಳಾ ಮತ್ತು ರೇಣುಕಾ ಉತ್ತಮ ಸ್ನೇಹಿತರಾಗಿದ್ದು, ದಿಲ್ಶನ್‌ ಕೂಡ ಹಲವು ಬಾರಿ ರೇಣುಕಾ ಮನೆಗೆ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2010ರಲ್ಲಿ ರೇಣುಕಾ ಮತ್ತು ಅವರ ಪತಿ ಹೆಸರಲ್ಲಿ ಮನೆಯನ್ನು ಖರೀದಿಸಿದ್ದರು.ಇದು  ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ರವರ ವರಿಗೆ ತಿಳಿಯದೇ  ನಡೆದಿರುವ ಅಚಾತುರ್ಯವಾಗಿರಬಹುದು ತಪ್ಪಿದ್ದರೆ ಸರಿಪಡಿಸಿಕೊಳ್ಳುವದು  ಸೂಕ್ತ ನಿವೇನಂತಿರಾ?   

7 Nov 2012

ಎರಡನೇ ಬಾರಿ ಅಮೆರಿಕಾ ದ ಅದ್ಯಕ್ಷ್ಯರಾಗಿ ಬರಾಕ್ ಒಬಾಮ ಆಯ್ಕೆ ...!!!


ವಾಷಿಂಗ್ಟನ್, ನ.7: ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಪುನರಾಯ್ಕೆಗೊಂಡಿದ್ದಾರೆ. ತೀವ್ರ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಡೆಮ್ರಾಕೆಟಿಕ್ ಅಭ್ಯರ್ಥಿ ಒಬಾಮಾ ಅವರು ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ಅವರನ್ನು ಸೋಲಿಸಿದ್ದಾರೆ.
ಬರಾಕ್ ಒಬಾಮಾ ಅವರಿಗೆ 275 ಮತಗಳು ಸಿಕ್ಕಿದ್ದರೆ, ರೋಮ್ನಿ ಅವರಿಗೆ 203 ಮತಗಳು ಸಿಕ್ಕಿದೆ.
2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಒಬಾಮಾ ಅತೀವ ಹರ್ಷ ವ್ಯಕ್ತಪಡಿಸಿದ್ದು, 'ಇನ್ನು ನಾಲ್ಕು ವರ್ಷ ನಿಮ್ಮ ಸೇವೆಗೆ, ನಿಮ್ಮಿಂದ ಎಲ್ಲಾ ಸಾಧ್ಯವಾಯಿತು' "We're all in this together. That's how we campaigned, and that's who we are. Thank you. -ಬರಾಕ್ ಒಬಾಮಾ ." ಎಂದು ಟ್ವೀಟ್ ಮಾಡಿದ್ದಾರೆ.
270 ಮತಗಳ ಮ್ಯಾಜಿಕ್ ನಂಬರ್ ದಾಟಿದ ಒಬಾಮಾ ಮುಂದಿದ್ದರೂ ಸುಮಾರು 6 ರಾಜ್ಯಗಳಲ್ಲಿ ರೊಮ್ನೊ ತೀವ್ರ ಪೈಪೋಟಿ ನೀಡುತ್ತಿದ್ದು ಅಚ್ಚರಿ ಫಲಿತಾಂಶ ನೀಡುವ ವಿಶ್ವಾಸದಲ್ಲಿದ್ದಾರೆ.ಅಮೇರಿಕಾ ಕಪ್ಪು ಜನಾಂಗದ ಜನರ ಅಭಿಮಾನ  ಸಂತೋಷ್ ಮುಗಿಲು ಮುಟ್ಟಿದೆ. ಭಾರತದ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್ ಕೂಡ ಶುಭಾಶಯಗಳನ್ನು ಕೋರಿದ್ದಾರೆ.   
ಬರಾಕ್ ಒಬಾಮಾ ಅಮೆರಿಕದ ಅದ್ಭುತ ಆಡಳಿತಗಾರ, ಆತನನ್ನು ಕಳೆದುಕೊಂಡರೆ ನಮಗೆ ಆಪತ್ತು. ಮುಂಬರುವ ಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿ ಎಂದು ಡೆಮೊಕ್ರೆಟಿಕ್ ಪಕ್ಷ ಮುಖಂಡ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಘೋಷಿಸಿದ್ದು ಡೆಮ್ರಾಕೆಟಿಕ್ ಪಕ್ಷಕ್ಕೆ ಲಾಭ ತಂದಿದೆ.
ಚೀನಾದ ಕರೆನ್ಸಿ ಪಾಲಿಸಿ, ಆಟೋಮೊಬೈಲ್ ಕ್ಷೇತ್ರದ ಬೇಲ್ ಔಟ್, ಸ್ಥಳೀಯರಿಗೆ ಉದ್ಯೋಗ, ಹೊರಗುತ್ತಿಗೆ ಹೊರೆ, ಯುಎಸ್ ವಿದೇಶಾಂಗ ನೀತಿ, ವಲಸೆ ನೀತಿ ಈ ಬಾರಿ ಚುನಾವಣಾ ಪ್ರಚಾರದ ಪ್ರಮುಖ ಚರ್ಚಿತ ವಿಷಯಗಳಾಗಿತ್ತು.
ವಾಷಿಂಗ್ಟನ್ ಪೋಸ್ಟ್/ ಎಬಿಸಿ ನ್ಯೂಸ್ ಸಮೀಕ್ಷೆಯಲ್ಲಿ ಒಬಾಮಾ ಹಾಗೂ ರೊಮ್ನಿ ಇಬ್ಬರಿಗೂ ತಲಾ ಶೇ 48 ರಷ್ಟು ಬೆಂಬಲ ವ್ಯಕ್ತವಾಗಿತ್ತು. 538 ಸ್ಥಾನಗಳ ಪೈಕಿ 270 ಮ್ಯಾಜಿಕ್ ನಂಬರ್ ದಾಟಿದ ಬರಾಕ್ ಒಬಾಮಾ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ.ಅವರಿಗೆ ಶುಭವಾಗಲಿ 

10 Oct 2012

ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು ......!!!!!!

ಬೆಂಗಳೂರು: ಚಲನಚಿತ್ರ ಮತ್ತು ಕಿರು ತೆರೆ ನಟಿ ಹೇಮಶ್ರೀ ಅವರುನಿನ್ನೆ  ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ನಗರದ ಚೆನ್ನಮ್ಮನ ಅಚ್ಚು ಕಟ್ಟು ಕೆರೆ ನಿವಾಸಿಯಾದ ಅವರು, ಬೆಳಿಗ್ಗೆ ಪತಿ ಸುಧೀಂದ್ರ ಬಾಬು ಅವರ ಜತೆ ಅನಂತಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.

ಅವರ ಪತಿ  ಮಾರ್ಗ ಮಧ್ಯೆ ಅಸ್ವಸ್ಥ ಗೊಂಡ ಕಾರಣ, ಬೆಂಗಳೂರಿಗೆ ಕರೆತಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರು.
ಆದರೆ, 8 ಗಂಟೆಗೆ  ಮುಂಚೆಯೇ ಹೇಮಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು` ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ ಹೇಮಶ್ರೀ ಅವರು, ಸಿರಿವಂತ, ಮರ್ಮ, ವೀರಪರಂಪರೆ, ಉಗ್ರಗಾಮಿ ಸೇರಿದಂತೆ ಹಲವು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದರು. 2008ರ ವಿಧಾನಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರು, ಜೆಡಿಎಸ್ ಮುಖಂಡರೂ ಆಗಿದ್ದ ಸುಧೀಂದ್ರ ಬಾಬು ಅವರನ್ನು 2011ರ ಜೂನ್ 22ರಂದು ವಿವಾಹವಾಗಿದ್ದರು.

`ಪತಿ ಈಗಾಗಲೇ ಮದುವೆಯಾಗಿದ್ದು, ನನ್ನನ್ನು ವಂಚಿಸಿದ್ದಾರೆ`ಅವರಿಗೆ ಆಗಲೇ 48 ವರ್ಷ ವಯಸ್ಸಾಗಿತ್ತು ಎಂದು ಮದುವೆಯಾದ ಮರುದಿನವೇ ಹೇಮಶ್ರೀ ಪೊಲೀಸರಿಗೆ ದೂರು ನೀಡಿದ್ದರು.ಅಲ್ಲದೆ ಸಂದರ್ಶನವೊಂದರಲ್ಲಿ "ಹೆತ್ತವರಿಗೆ ದುಡ್ಡಿನ ಆಸೆ ತೋರಿಸಿ ನನಗೆ ಇಷ್ಟವಿಲ್ಲದ ಒತ್ತಾಯದ ಮದುವೆ ಮಾಡಿದ್ದಾರೆ ನಾನು ವಿಚ್ಛೇದನ ತೆಗೆದುಕೊಳ್ಳುತೇನೆ" ಎಂದು ಬೇಸರಗೊಂಡು ಕಣ್ಣಿರು ಇಟ್ಟಿದ್ದರು. ಇದರಿಂದ ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.ಆದರೆ  ನಂತರ ದೂರನ್ನು ಹಿಂಪಡೆದು ಪತಿಯೊಂದಿಗೆ ನಗರದಲ್ಲಿ ವಾಸವಾಗಿದ್ದರು.

 `ಘಟನೆ ಸಂಬಂಧ ಅವರ ಪತಿ ಸುರೇಂದ್ರ  ಬಾಬು ಅವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾಸ್ತವಾಂಶ ತಿಳಿಯಲಿದೆ` ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಇಂದು ಮದ್ಯಾಹ್ನ ಪರೀಕ್ಷೆಯ ವರದಿ ಬಂದಿದ್ದು ನಟಿ ಹೇಮಶ್ರೀ ತಲೆ ,ಮೈಮೇಲೆ ಮತ್ತು ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದ್ದು,ಹೊಟ್ಟೆಯಲ್ಲಿ ಕಪ್ಪು ಬಣ್ಣದ ದ್ರಾವಣ ಕಂಡು ಬಂದಿದ್ದು  ವಿಷಪ್ರಾಶನ ವಾಗಿರಬಹುದು ಎಂದು ಶಂಕಿಸಲಾಗಿದೆ ವಿಜ್ಞಾನ ಪ್ರಯೋಗಲಕ್ಕೆ ಕಳುಹಿಸಲಾಗಿದೆ.

ಇದು ಅನುಮಾನಸ್ಪದ ಸಾವು ಎಂದು ವೈದ್ಯರು ದ್ರುಡಿಕರಿಸಿದ್ದಾರೆ ಅವರ ಪತಿ 8 ಗಂಟೆಗಳ ಕಾಲ ಕಾರಿನಲ್ಲಿಯೇ ಇಟ್ಟುಕೊಂಡು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ವರದಿಯಿಂದ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗುವದು.ಶವವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಸಿಲುಕೊಂಡಿರುವ  ಪತಿ ಸುರೇಂದ್ರ  ಬಾಬು ಅವರನ್ನು  ಈಗ ಪೊಲೀಸರು  ವಶಕ್ಕೆ ತೆಗೆದುಕೊಂಡಿದ್ದಾರೆ.
 ಇಂತಹ ಒಬ್ಬ ಒಳ್ಳೆಯ ನಟಿಯನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದು ನೋವಿನ ಸಂಗತಿ ಒಟ್ಟಿನಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ....!!!!    ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು 

28 Sept 2012

ಕರ್ನಾಟಕಕ್ಕೆ ನೀರು ಕುಡಿಸಿ ತ.ನಾಡಿಗೆ ಕಾವೇರಿ ಹರಿಸಲು ಸುಪ್ರಿಂಕೋರ್ಟ್ ಆದೇಶ....!!!!!

ಬೆಂಗಳೂರು,ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಪೆಟ್ಟುಬಿದ್ದಿದೆ.ಕರ್ನಾಟಕದಲ್ಲಿ  ತೀವ್ರ ಬರಗಾಲದ ಪರಿಸ್ಟಿತಿ ಎದುರಾಗಿದ್ದರೂ  ಮೊದಲು ತಮಿಳುನಾಡಿಗೆ ದಿನಾ ಇಂತಿಷ್ಟು ಅಂತ ಕಾವೇರಿ ನೀರು ಬಿಡಬೇಕು ಎಂದು  ಸುಪ್ರೀಂಕೋರ್ಟ್ಆದೇಶಿಸಿದೆ.
ಕಾವೇರಿ ನದಿ ಪ್ರಾಧಿಕಾರವು ಇತ್ತೀಚೆಗೆ ಸೂಚಿಸಿರುವಂತೆ ನೀರು ಬಿಡಿ ಎಂದು ಶುಕ್ರವಾರ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಇದರಿಂದ ದಿನಾ 9 ಸಾವಿರ ಕ್ಯುಸೆಕ್ಸ್ ನೀರನ್ನು ಅಕ್ಟೋಬರ್ 21ರವರೆಗೂ ತಮಿಳುನಾಡಿನತ್ತ ಹರಿಸಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ. 
ಕರ್ನಾಟಕಕ್ಕೆ ನೀರು ಕುಡಿಸಿದ ಸು.ಕೋರ್ಟ್: ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪರಿಪಾಲಿಸದ ಕರ್ನಾಟಕವನ್ನು ಸು.ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವಕೀಲರು ಈ ಹಿಂದೆಯೇ ರಾಜ್ಯವನ್ನು ಎಚ್ಚರಿಸಿದ್ದರು. 
ಸೆ. 19ರಂದು ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಕಾವೇರಿ ಪ್ರಾಧಿಕಾರ ಸಭೆಯ ಆದೇಶದಂತೆ ಕರ್ನಾಟಕ ದಿನಾ ನಮಗೆ 9 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು. ಆದರೆ ಅದು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ. ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿ ಎಂದು ತಮಿಳುನಾಡು ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಹರಿಸಲು  ಸುಪ್ರಿಂಕೋರ್ಟ್ ಆದೇಶ ನೀಡಿದೆ.ಕರ್ನಾಟಕ ಅನಿವಾರ್ಯವಾಗಿ ಕಾವೇರಿ ನೀರು ಬಿಡಲೇಬೆಕಾಗಿದೆ. ಸಕಾಲಕ್ಕೆ ಮಳೆ ಬೆಳೆ ಬಾರದೆ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ರೋಸಿ ಹೋಗಿರುವ ಕರ್ನಾಟಕದ ಜನತೆಗೆ ನುಂಗಲಾರದ ತುತ್ತಾಗಿದೆ.ಒಟ್ಟಿನಲ್ಲಿ ಸುಪ್ರಿಂಕೋರ್ಟ್ ಕರ್ನಾಟಕಕ್ಕೆ ನೀರು ಕುಡಿಸಿದೆ...!!!!  

11 Sept 2012

ಭಾರತದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ವಿಧಿವಶ....!!!!


 ಭಾರತದ ಕ್ಷೀರ ಕ್ರಾಂತಿಯ ಹರಿಕಾರ,ಪಿತಾಮಹ  ‘ಹಾಲಿನ ಮನುಷ್ಯ’ ಎಂದು ಖ್ಯಾತಿ ಪಡೆದಿದ್ದ ಡಾ.ವರ್ಗೀಸ್ ಕುರಿಯನ್ ರವಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಗುಜರಾತನ ಪಟೇಲ್ ಯುರೋಲಾಜಿಕಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ರ ವಾರ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
1921ರ ನವೆಂಬರ್ 26ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಅವರು, ಗುಜರಾತ್ ಸಹಕಾರಿ ಹಾಲು ಒಕ್ಕೂಟ(ಜಿಸಿಎಂಎಂಎಫ್) ಹುಟ್ಟು ಹಾಕಿದರಲ್ಲದೆ, ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಹೈನುಗಾರಿಕೆ ಮಾಡುವ ರೈತರಿಗೆ ಆಶಾದಾಯಕರಾದ ಕುರಿಯನ್  
 ಜೀವಮಾನದಲ್ಲೆಂದೂ ಒಂದು ತೊಟ್ಟು ಹಾಲನ್ನು ಕುಡಿಯದ ಡಾ. ವರ್ಗಿಸ್ ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನೇ ಈ ಅಮೂಲ್ ಬೇಬಿಯ ಅಪ್ಪ-ಅಮ್ಮ.  ಡಾ. ಕುರಿಯನ್ ಅವರ ಅಮೂಲ್ ಹಾಲು ಇಂದು ಭಾರತದಾದ್ಯಂತ ಅತೀ ಹೆಚ್ಚು ಬಳಕೆಯಾಗುತ್ತಿದೆ. 
ಜಸಿಎಂಎಂಎಫ್ ದೇಶದ ಅತೀ ದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವೆಂಬ ಖ್ಯಾತಿ ಪಡೆದಿದೆ. ‘ಆಮುಲ್’ ಬ್ರಾಂಡ್‌ನಲ್ಲಿ ಇದರ ಉತ್ಪನ್ನಗಳು ಇಂದು ದೇಶಾದ್ಯಂತ ಖ್ಯಾತಿ ಪಡೆದಿವೆ.
ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಇವರಿಗೆ ಪದ್ಮಶ್ರೀ (1965), ಪದ್ಮಭೂಷಣ (1966), ಪದ್ಮವಿಭೂಷಣ (1999) ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ ಕುರಿಯನ್ ಅವರ ಚರಿತ್ರೆಯ ಪುಟಗಳನ್ನು ಓದುತ್ತಾ ಹೋದರೆ ಗ್ರಾಮಾಂತರ ಭಾರತ ಹೈನೋದ್ಯಮದ ಮೂಲಕ ಹೇಗೆಲ್ಲ ಪ್ರಗತಿಯನ್ನು ಕಂಡಿತು ಎಂಬುದನ್ನು ತಿಳಿಯಬಹುದು.ಇಂತಹ ಮಹಾನ ಪ್ರಸಿದ್ದ ವ್ಯಕ್ತಿಯನ್ನು ಭಾರತ ಇಂದು ಕಳೆದುಕೊಂಡಿದೆ.  ಅವರ ಆತ್ಮಕ್ಕೆ   ಚಿರಶಾಂತಿ  ಸಿಗಲಿ.....!!!!!!!!   

3 Aug 2012

ಲಂಡನ್ ಒಲಿಂಪಿಕ್: ಚಿನ್ನದ ಪದಕ ಮಿಸ್ ಮಾಡಿಕೊಂಡ ಸೈನಾ ನೆಹ್ವಾಲ್ ....!!


ಲಂಡನ್ ಒಲಿಂಪಿಕ್: ಚಿನ್ನದ ಪದಕ ಮಿಸ್ ಮಾಡಿಕೊಂಡ ಸೈನಾ ನೆಹ್ವಾಲ್  ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಭಾರತದ ದೃವತಾರೆ ಭಾರಿ ನಿರಾಸೆ ಮೂಡಿಸಿದ್ದಾರೆ 

ಶುಕ್ರವಾರ ಇಂದು  ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ವಿರುದ್ಧ 21-13, 21-13ರ ನೇರ ಅಂತರದಲ್ಲಿ ಶರಣಾಗಿರುವ ಸೈನಾ, ಚಿನ್ನದ ಕನಸು ಭಗ್ನಗೊಂಡಿತು. ಇಂದಿನ ಪಂದ್ಯದಲ್ಲಿ ಸೋತರೂ

 ಸೈನಾ ಪದಕ ನಿರೀಕ್ಷೆ ಇನ್ನೂ ಅಂತ್ಯಗೊಂಡಿಲ್ಲ. ಇದೀಗ ನಾಳೆ  ಶನಿವಾರ ನಡೆಯಲಿರುವ ಕಂಚಿಗಾಗಿನ ಹೋರಾಟದಲ್ಲಿ ಎರಡನೇ ಸೆಮಿಫೈನಲ್ ಪಂದ್ಯದ ಸೋತ ಆಟಗಾರ್ತಿಯೊಂದಿಗೆ ಕಂಚಿನ ಪದಕಕ್ಕಾಗಿ ಸವಾಲು ಎದುರಿಸಲಿದ್ದಾರೆ. 

ಕಳೆದ ದಿನವಷ್ಟೇ ಸೆಮಿಫೈನಲ್ ಪ್ರವೇಶ ಮಾಡಿದ್ದ ವಿಶ್ವ ನಂ. 5 ರ‌್ಯಾಂಕ್‌ನ ಸೈನಾ, ಈ ಸಾಧನೆ ಮಾಡಿದ ದೇಶದ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದರು. ಆದರೆ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿಯ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸುವಲ್ಲಿ ವಿಫಲವಾಗಿದ್ದಾರೆ.ಆದರೆ ಇನ್ನು ಗೆಲ್ಲುವ ತವಕದಲ್ಲಿ ಸೈನಾ  ಇದ್ದಾರೆ.ಭಾರತೀಯರು ಗೆಲ್ಲಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ.ಕನಸು ನನಸಾಗಲಿ...!!!   

2012 ವಿಶ್ವದ ಟಾಪ್ 10 ಪ್ರಭಾವಿ ಮಹಿಳೆ ಉದ್ಯಮಿಗಳು ಅದರಲ್ಲಿ ಭಾರತದ ಮಹಿಳೆಗೂ ಸ್ಥಾನ ...!!!!


ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂಮಹಿಳೆಯರು ತಮ್ಮ ಛಾಪು ಮೂಡಿಸಿದ್ದು ತಾವು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಪ್ರಮುಖ ಪತ್ರಿಕೆಗಳಾದ ದಿ ಫೈನಾನ್ಷಿಯಲ್ ಟೈಮ್ಸ್ ಹಾಗೂ ಫಾರ್ಚೂನ್ ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು ವಿವರ ಇಂತಿದೆ.ಅದರಲ್ಲಿ ಭಾರತದ  ಮಹಿಳೆ   ಸ್ಥಾನ  ಸಿಕ್ಕಿದ್ದು ಹೆಮ್ಮೆಯ ವಿಷಯ. 

1. ಐರೀನ್ ರೊಸೆನ್ಫೆಲ್ಡ್: ಅಮೇರಿಕಾದ ಉದ್ಯಮಿ ಐರೀನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಇವರು ಕಳೆದ 30 ವರ್ಷಗಳಿಂದ ಆಹಾರ ಹಾಗೂ ಪಾನೀಯ ಉದ್ಯಮದಲ್ಲಿದ್ದಾರೆ. ಅಮೇರಿಕಾದ ಕ್ರಾಫ್ಟ್ ಫುಡ್ಸ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಯಾಗಿರುವ ಇವರು, ಮೊದಲು ಪೆಪ್ಸಿಕೋ ಕಂಪೆನಿಯಲ್ಲಿ ಕೆಲಸ ಮಾಡುತಿದ್ದು 2006ರಲ್ಲಿ ಕ್ರಾಫ್ಟ್ ಕಂಪೆನಿ ಸೇರಿದರು. ಫೋರ್ಬ್ಸ್ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಇವರು ವಿಶ್ವದ 100 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿಯೂ ಇದ್ದರು.
2. ಇಂದ್ರಾ ನೂಯಿ: ವಿಶ್ವದ ಎರಡನೇ ಅತೀ ದೊಡ್ಡ ಆಹಾರ ಮತ್ತು ಪಾನೀಯ ತಯಾರಿಕಾ ಕಂಪೆನಿ ಪೆಪ್ಸಿಕೋ ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆಯಾಗಿರುವ ಭಾರತೀಯ ಇಂದ್ರಾ ನೂಯಿ ಅವರಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದ್ದು , ಇವರು 1994 ರಲ್ಲಿ ಕಂಪೆನಿ ಸೇರಿ 2001 ರಲ್ಲಿ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಆದರು. ಇವರು 2007 ರಲ್ಲಿ 44 ವರ್ಷಗಳ ಇತಿಹಾಸ ಹೊಂದಿರುವ ಪೆಪ್ಸಿ ಕಂಪೆನಿಯ 5 ನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರು. ಫೋಬ್ಸ್ ಪತ್ರಿಕೆ ಇವರನ್ನು 2008 ರಲ್ಲಿ ವಿಶ್ವದ ಮೂರನೇ ಪ್ರಭಾವೀ ಮಹಿಳೆ ಎಂದು ಗುರುತಿಸಿದ್ದು, ವಾಲ್ ಸ್ಟ್ರೀಟ್ ಜರ್ನಲ್ ಕೂಡ 50 ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.
3.ಮಾರಿಸ್ಸ ಮೇಯರ್: ಅಮೇರಿಕಾ ಸಂಜಾತೆ ಯಾಹೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಮಾರಿಸ್ಸ ಮೇಯರ್ ಅವರು ಮೂರನೇ ಸ್ಥಾನದಲ್ಲಿದ್ದು ಫಾರ್ಚೂನ್ 500 ಕಂಪೆನಿಗಳ ಅತ್ಯಂತ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. 1999 ರಲ್ಲಿ ಗೂಗಲ್ ಸೇರಿದ ಇವರು ಕಂಪೆನಿಯ ಮೊದಲ ಮಹಿಳಾ ಇಂಜಿನಿಯರ್ ಕೂಡ ಆಗಿದ್ದು ಗೂಗಲ್ ನ ವಿವಿಧ ಹುದ್ದೆಗಳಲ್ಲಿ ೧೫ ವರ್ಷ ಕಾರ್ಯನಿರ್ವಹಿಸಿದ್ದಾರೆ. ಕಳೆದ ಜುಲೈ 2012ರಲ್ಲಿ ಇವರು ಯಾಹೂ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.
4 ಎಲ್ಲೆನ್ ಕುಲ್ಮಾನ್: ಅಮೇರಿಕಾದ ಎಲ್ಲೆನ್ ಕುಲ್ಮಾನ್ ಅವರು ಈ ಐ ಡು ಪಾಂಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಯಾಗಿದ್ದು ಜನರಲ್ ಮೋಟಾರ್‍ಸ್ ನ ಮಾಜಿ ನಿರ್ದೇಶಕಿಯೂ ಆಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ಫೋಬ್ಸ್ ಮ್ಯಾಗಜೀನ್ ಇವರಿಗೆ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ನೀಡಿತ್ತು. 206 ವರ್ಷಗಳ ಇತಿಹಾಸವಿರುವ ಡು ಪಾಂಟ್ ಕಂಪೆನಿಯ ಮೊದಲ ಮಾಹಿಳಾ ಮುಖ್ಯಸ್ಥೆಯೂ ಇವರಾಗಿದ್ದಾರೆ.
5. ಏಂಜೆಲಾ ಬ್ರಾಲೇ : ಅಮೇರಿಕಾದ ದೊಡ್ಡ ಆರೋಗ್ಯ ರಕ್ಷಾ ಕಂಪೆನಿ ವೆಲ್ ಪಾಯಿಂಟ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎಂಜೆಲಾ ಕಂಪೆನಿಯ ವಿವಿದ ಹುದೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ.
6. ಆಂಡ್ರಿಯಾ ಜಂಗ್ : ಅಮೇರಿಕಾದ ಏವನ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 1999 ರಲ್ಲಿ ನೇಮಕಗೊಂಡ ಜಂಗ್ ಅವರು ವಿವಿದ ಹುದೆಗಳಲ್ಲಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 2011 ರಲ್ಲಿ ಕಂಪೆನಿಯ ನೂತನ ಮುಖ್ಯಸ್ಥರ ಆಯ್ಕೆಯ ಜವಾಬ್ದಾರಿಯನ್ನೂ ಇವರಿಗೆ ನೀಡಲಾಗಿದ್ದು ಸೇವಾವಧಿಯನ್ನು ಕೂಡ ಎರಡು ವರ್ಷ ಮುಂದುವರೆಸಲಾಗಿದೆ.
7. ವಜೀನಿಯಾ ರೊಮೆಟ್ಟಿ: ವಿಶ್ವದ ಖ್ಯಾತ ಐಬಿಎಮ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಇವರು ಐಬಿಎಮ್ ನ ಮೊದಲ ಮಹಿಳಾ ಮುಖ್ಯಸ್ಥೆ ಆಗಿದ್ದಾರೆ. ಇವರಿಗೆ ಪಟ್ಟಿಯಲ್ಲಿ 7 ನೇ ಸ್ಥಾನ ನೀಡಲಾಗಿದ್ದು ಫಾರ್ಚೂನ್ ಮ್ಯಾಗಜೀನ್ ನಲ್ಲಿ ವಿಶ್ವದ 50 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ಸತತ 7 ನೇ ವರ್ಷ 7 ನೇ ಸ್ಥಾನದಲ್ಲಿದ್ದಾರೆ. 2011 ರ ಡಿಸೆಂಬರ್ ನಲ್ಲಿ ಇವರನ್ನು ಕಂಪೆನಿಯ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು.
8 ಉರ್ಸುಲ ಬರ್ನ್ಸ್: ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ಬರ್ನ್ಸ್ ಅವರು ಜೆರಾಕ್ಸ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿದ್ದಾರೆ. ಆಫ್ರಿಕನ್ ಅಮೇರಿಕನ್ನರಾದ ಇವರು 1980 ರಲ್ಲಿ ಜೆರಾಕ್ಸ್ ಕಂಪೆನಿಗೆ ಸೇರ್ಪಡೆಗೊಂಡರು.
9. ಮೆಗ್ ವಿಟ್ಮಾನ್ : ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪೆನಿ ಹ್ಯೂಲೆಟ್ ಪ್ಯಾಕರ್ಡ್(ಹೆಚ್‌ಪಿ) ಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ವಿಟ್ಮಾನ್ ಅವರು ೯ ನೇ ಸ್ಥಾನದಲ್ಲಿದ್ದು ಮೊದಲು ವಾಲ್ಟ್ ಡಿಸ್ನೆ ಕಂಪೆನಿಯಲ್ಲಿ ಉಪಾದ್ಯಕ್ಷೆಯೂ ಆಗಿದ್ದರು. 2011ರ ಡಿಸೆಂಬರ್ ನಲ್ಲಿ ಕಂಪೆನಿಯ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಅವರು ಕಂಪೆನಿಯ ವಿವಿಧ ಸ್ಥರಗಳಲ್ಲಿ ಮೂರು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
10. ಶೆರಿಲ್ ಸಾಂಡ್‌ಬರ್ಗ್ : ವಿಶ್ವದ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ನ ನಿರ್ದೇಶಕ ಮಂಡಳಿಯಲ್ಲಿದ್ದು ಮುಖ್ಯ ಆಪರೇಟಿಂಗ್ ಆಫೀಸರ್ ಅಗಿ ಕಾರ್ಯ ನಿರ್ವಹಿಸುತ್ತಿರುವ ಶೆರಿಲ್ ಅವರು ಮೊದಲು ಗೂಗಲ್ ನಲ್ಲಿ ಸೇವೆ ಸಲ್ಲಿಸುತಿದ್ದರು. ಟೈಮ್ ಮ್ಯಾಗಜೀನ್ ನ ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲೂ ಇವರಿಗೆ ಸ್ಥಾನ ನೀಡಲಾಗಿದೆ.

    ತೊಟ್ಟಿಲನ್ನು ತೂಗುವ ಕೈ ಇಡೀ ಜಗತ್ತನ್ನೇ ಆಳಬಹುದು ಎನ್ನುವಂತೆ  ಭಾರತದ  ಮಹಿಳೆ  ಮಹಿಳಾಮಣಿಗಳ ಸಾಧನೆ ಅಪ್ರತಿಮವಾದುದು ಹಾಗೇ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯು ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗುತ್ತಿದ್ದಾಳೆ. ಇನ್ನು ಹೆಚ್ಚು  ಹೆಚ್ಚು ಮಹಿಳೆಯರು  ಬೆಳಕಿಗೆ ಬರುವಂತಾಗಲಿ....!!!!!! 

25 Jun 2012

ಕೊಳವೆ ಬಾವಿ ದುರಂತ: ಕೊನೆಗೂ ಅಸುನೀಗಿದ ಪುಟಾಣಿ ಮಾಹಿ..!!


 ಗುರಗಾಂವ್: ಹರಿಯಾಣದ ಮನೆಸರ್ ಪ್ರದೇಶದ ಕೊಳವೆ ಬಾವಿಯೊಂದರ ರಲ್ಲಿ 70 ಅಡಿ ಆಳದಲ್ಲಿ ಸಿಲುಕಿ, ಸಾವು ಬದುಕಿನ ಮದ್ಯ ಹೋರಾಟ ನಡೆಸಿದ್ದ ನಾಲ್ಕು ವರ್ಷದ ಪುಟ್ಟ ಮಗು  ಮಹಿ ಸತತ ನಾಲ್ಕು ದಿನಗಳ ಹರಸಾಹಸದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಭಾನುವಾರ ಶವವಾಗಿ ಸಿಕ್ಕಿದ್ದಾಳೆ.ಮಹಿ ತನ್ನ ಮನೆಯ ಹತ್ತಿರದಲ್ಲ್ಲಿಯೇ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅಲ್ಲಿಯೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಅಕಸ್ಮಾತಾಗಿ ಆಯತಪ್ಪಿ ಬುಧವಾರ 20, ರಂದು ಬಿದ್ದಿದ್ದಳು.ಕೂಡಲೇ ವಿಷಯ ತಿಳಿದ ರಕ್ಷಣಾ ಕಾರ್ಯಕರ್ತರು ಬಂದು ನೆಲ ಅಗೆದು ಬದುಕಿಸಲು ಪ್ರಯತ್ನಪಟ್ಟರು ಯಶಸ್ವಿಯಾಗದೆ ಮಗು ಸತ್ತು ಶವವಾಗಿ ಸಿಕ್ಕಿ ದುರಂತವಾಗಿದೆ.ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
 ಪ್ರಯತ್ನಪಟ್ಟು ಮಹಿಯನ್ನು ಕೊಳವೆಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಕೆ ಬದುಕಿ ಉಳಿದಿರಲಿಲ್ಲ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿ.ಸಿ.ಮೀನಾ ಹೇಳಿದರು.86 ಗಂಟೆಗಳ ಸತತ ಹಗಲಿರುಳು ಎನ್ನದೆ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗಳ ಕಾರ್ಯ ವ್ಯರ್ತವಾಗಿದೆ.   
ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದ ತಂಡಕ್ಕೆ ಮಧ್ಯದಲ್ಲಿ ದೊಡ್ಡ ಕಲ್ಲು ಬಂಡೆಯೊಂದು ಎದುರಾಗಿ ಶೀಘ್ರ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟುಮಾಡಿತ್ತು. ಆದರೆ ಆ ಬಂಡೆ ಕೊರೆಯುವ ಕಾರ್ಯ ಕಳೆದ ರಾತ್ರಿಯಷ್ಟೇ ಮುಗಿಸಿದ ತಂಡ ನಿರೀಕ್ಷಿತ ಗುರಿ ತಲುಪಿದ್ದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹಿ ಕೊನೆಉಸಿರೆಳೆದಿದ್ದಳು. ಓ ದೇವರೇ ಆ ಪುಟ್ಟ ಮಗುವಿನ ಮೇಲೆ ನಿನಗೆ ಕರುಣೆ ಬರಲಿಲ್ಲವೇ...ಹೆತ್ತ ತಾಯಿಯ ನೋವ ನಿನಗೆ ಕೇಳಿಸಲಿಲ್ಲವೇ..ಮಹಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ ಓ ಮುದ್ದು ಕಂದಾ ಎಲ್ಲೆಗೆ ಹೋದೆ...ಮತ್ತೆ ಹುಟ್ಟಿ ನಿನ್ನ ತಾಯಿಯ ಮಡಿಲು  ಸೇರು.....!!!     

Share

Twitter Delicious Facebook Digg Stumbleupon Favorites More