ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

20 Sept 2011

ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ : ಸಾಹಿತ್ಯದ ಅಷ್ಟದಿಕ್ಪಾಲಕರು

ಬೆಂಗಳೂರು ಸೆ ೧೯: ಕಾದಂಬರಿಕಾರ, ನಾಟಕಕಾರ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯಾದ ಕವಿ ಚಂದ್ರಶೇಖರ ಕಂಬಾರರಿಗೆ  ಜ್ಞಾನಪೀಠ ಪ್ರಶಸ್ತಿ ಒಲಿದು ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಎಂಟನೆ ಬಾರಿ ಪಡೆಯುವುದರೊಂದಿಗೆ ಕನ್ನಡ ಸಾಹಿತ್ಯವು ಅಷ್ಟದಿಕ್ಪಾಲಕರ ಪಡೆಯಾಗಿದೆ. ಕನ್ನಡಕ್ಕೆ ಒಟ್ಟು ಎಂಟು ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ. 

ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನೆವರಿ 2, 1937 ರಲ್ಲಿ ಜನಿಸಿದ ಚಂದ್ರಶೇಖರ ಕಂಬಾರರಿಗೆ ಅವರ ತಾಯಿಯೇ ಕಾವ್ಯದ ಮೊದಲು ಗುರು. ಬಹುಮುಖ ಪ್ರತಿಬೆಯಾದ ಕಂಬಾರರಿಗೆ ಇನ್ನೊಂದು ಪ್ರೀತಿಯ ಕ್ಷೇತ್ರ ಸಿನಿಮಾ. ಅದರ ಫಲವಾಗಿಯೇ ಕಾಡುಕುದುರೆ, ಕರಿಮಾಯಿ ಹಾಗು ಸಂಗೀತಾ ರೂಪುಗೊಂಡವು.


15 Sept 2011

KFCC ರಾದಾಂತ ಸ್ವಲ್ಪ ಓದಿ

ಕೆಟ್ಟ ಮೇಲೆ ಬುದ್ಧಿ ಬಂತು....!

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬ ಇಂದು


ಭಾರತ ಕಂಡ ಅತ್ಯದ್ಬುತ ಇಂಜಿನಿಯರ್ ಗಳಲ್ಲಿ ಒಬ್ಬರಾದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ನಮ್ಮ ಗೌರವ ಪೂರ್ವಕ ನಮನಗಳು.ಈ ಮಹಾನ್ ವ್ಯಕ್ತಿಯ ಉದ್ಯಮ ಶೀಲತೆ ಕರ್ನಾಟಕದ ಸ್ವಾವಲಂಬನೆಗೆ ಅತೀವ ಕಾಣಿಕೆ ಎಂದರೆ ತಪ್ಪಾಗಲಾರದು.

12 Sept 2011

ಕ್ರಿಕೆಟ್ : ಭಾರತಕ್ಕೆ ಸರಣಿ ಸೋಲು

ಲಂಡನ್, ಸೆ.11: ಸತತವಾಗಿ ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಮತ್ತೊಂದು ಆಘಾತ. ನಿನ್ನೆ ನಡೆದ 4ನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 280 ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರಗಳಲ್ಲಿ 6 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ರದ್ಡಾಯಿತು. ಡಕ್-ವರ್ತ ನಿಯಮದ ಪ್ರಕಾರ ಇಂಗ್ಲೆಂಡ್ ಅಷ್ಟೇ ಓವರಗಳಲ್ಲಿ 270 ರನ ಗಳಿಸಿದ್ದರಿಂದ ಪಂದ್ಯ ಟೈ ಎಂದು ಘೋಷಿಸಲಾಯಿತು. ಇದಕ್ಕಿಂತ ಮೊದಲು ಮೂರು ಸಲ ಮಳೆಯಿಂದ ಆಟ ನಿಂತಿತ್ತು. ಇದರಿಂದ ಭಾರತ ಸರಣಿ ಸೋಲು ಅನುಭವಿಸಿದೆ. ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಜಂಟಿಯಾಗಿ ಸುರೇಶ ರೈನಾ ಹಾಗೂ ರವಿ ಬೋಪಾರಾಗೆ ನೀಡಲಾಯಿತು. ಮಳೆ ಬಂದು ಎಲ್ಲಾ ಹಾಳು ಮಾಡುಬಿಟ್ಟಿತು ಎಂದು ನಾಯಕ ಧೋನಿ ಹೇಳಿದ್ದಾರೆ.

ನಿರ್ಮಾಪಕರ ಸಂಘದ ಕ್ರಮ : ಎತ್ತಿಗೆ ಜ್ವರ ಎಮ್ಮೆಗೇ ಬರೆ

ಬೆಂಗಳೂರು ಸೆ 11: ನಟಿ ನಿಖಿತಾರವರನ್ನು ಕನ್ನಡ ಚಲನಚಿತ್ರ ರಂಗದಿಂದ ಮೂರು ವರ್ಷಗಳ ಕಾಲ ನಿಷೇಧಿಸಿರುವ ಕ್ರಮ ಕ್ರಮ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೈತಿಕ ದಿವಾಳಿತನವನ್ನು ಎತ್ತಿ ತೋರಿಸಿದೆ.ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿಷೇಧಿಸುವ ದಿಟ್ಟತನವನ್ನು ತೋರಿಸಬೇಕಾಗಿತ್ತು. ಅದು ಬಿಟ್ಟು ಎತ್ತಿಗೆ ಜ್ವರ ಎಮ್ಮೆಗೇ ಬರೆ ಹಾಕಿದಂತಾಗಿದೆ ನಿರ್ಮಾಪಕರ ಸಂಘದ ಈ ಕ್ರಮ.
ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಸಂಬಂಧ ಕೆಲ ತಿಂಗಳಿಂದ ಹಳಸಿತ್ತು ಎನ್ನಲಾಗಿದೆ. ಇದಕ್ಕೆ ಕಾರಣಗಳು ಬಹಿರಂಗವಾಗಿಲ್ಲ. ನಿಖಿತಾ ಜತೆಗೆ ದರ್ಶನ್ ಸ್ನೇಹ ಮುಂದುವರಿಸಿದ್ದೇ ದಂಪತಿ ನಡುವಣ ವೈಮನಸ್ಯಕ್ಕೆ ಕಾರಣವಾಯಿತು ಎನ್ನುತ್ತವೆ ಚಿತ್ರರಂಗದ ಮೂಲಗಳು. ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು.

11 Sept 2011

ಸುಂದರ ಸಂಸಾರಕ್ಕೆ ಹುಳಿಹಿಂಡಿದಳಾ ಸೇಕ್ಸಿ ಕ್ವೀನ್ ನಿಕೀತಾ?


ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಪೆಭ್ರವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು.
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟದ್ದು ವಬ್ಬ ಛಾಯಾಗ್ರಾಹಕನ ಕೈಕೆಳಗೆ ಕೆಲಸ ಮಾಡುತ್ತ ದರ್ಶನಗೆ ದಿಡಿರ್ ಅಂತಾ ಒಂದು ದಿನ
ಕಿರುತೆರೆಯಲ್ಲಿ ನಟಿಸಲು ಅವಕಾಶವದಗಿ ಬಂತು ಅದೆರಿತಿ ಅವರು ವಂದೆರಡು ಕಿರುತೆರೆಯ ದಾರವಾಹಿಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾದರು
ಆಮೇಲೆ ೨೦೦೨ರಲ್ಲಿ ಪಿ ಎನ್ ಸತ್ಯಾ ನಿರ್ದೇಶನದ "ಮೆಜೆಸ್ಟಿಕ್" ಚಿತ್ರದಲ್ಲಿ ನಟಿಸಿದರು ಆಮೇಲೆ ಧ್ರುವ,ನಿನಗೋಸ್ಕರ,ಕಿಟ್ಟಿ,ಹೀಗೆ ಹಲವು ಚಿತ್ರ ಗಳಲ್ಲಿ ನಟಿಸಿದರು ಆದಾರೆ ಅವರಿಗೆ
ಬ್ರೆಕ್ ಕೋಟ್ಟ ಚಿತ್ರ ೨೦೦೩ರಲ್ಲಿ ಪ್ರೇಮ್ ನಿರ್ದೇಶನದ "ಕರಿಯ" ಆಮೇಲೆ ಜನ ಅವರನ್ನ ಮೆಚ್ಚಿದ್ದು ಹೊಡಿ ಬಡಿ ಚಿತ್ರಗಳಲ್ಲಿ
ಹಾಗೆಯೆ ಕನ್ನಡ ಚಿತ್ರರಂಗದಲ್ಲಿ ಅತಿಕಡಿಮೆ ಅವದಿಯಲ್ಲಿ ಹೆಸರುಮಾಡಿ ಛಾಲೆಂಜಿಂಗ್ ಸ್ಟಾರ್ ಅಂತಾ ಕರೆಸಿಕೊಂಡು ಕನ್ನಡದ ಒಬ್ಬ
ದೊಡ್ಡ ಬೇಡಿಕೇಯ ನಟರಾಗಿ ಬೆಳೆದುನಿಂತರು
ಆಮೇಲೆ ನಿಜಜೀವನದ ಪ್ರೀತಿ ಶುರುವಾಗಿದ್ದು ವಿಜಯಲಕ್ಷ್ಮಿಯ ಜೋತೆ ವಿಜಯಲಕ್ಷ್ಮಿಯು ವಬ್ಬ ಕಾಸಗಿ ಟಿವ್ಹಿಯ ನಿರುಪಕಿಯಾಗಿ ಕೆಲಸ ಮಾಡುತ್ತಿದಳು
ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು ಆಮೇಲೆ ಏಳು ವರ್ಷವಾಯಿತ್ತು. ಆಮೆಲೆ ನಿಮಗೆಲ್ಲ ಗೋತ್ತೆಯಿದೆ
ದರ್ಶನ್ ಅವರಿಂದ ನಡೆಯುತ್ತಿದ್ದ ಕೌಟುಂಬಿಕ ಹಿಂಸೆ, ಅವಮಾನ ಇಂದು ನಿನ್ನೆಯದಲ್ಲ. ಮದುವೆಯಾಗಿ ಏಳು ವರ್ಷವಾಗಿತ್ತು. ಮೂರು ವರ್ಷದ ಒಂದು ಗಂಡು ಮಗುನೂ ಇದೆ. ಆದರೆ, ಕಳೆದ ಒಂದು ವರ್ಷದಿಂದ ಅವರ ವರ್ತನೆ ಸರಿಯಿಲ್ಲ ಎನ್ನುವುದು ಪತ್ನಿ ಮತ್ತು ಅತ್ತೆ ಮಾಡುವ ದೋಷಾರೋಪಣೆ. ಇದಕ್ಕೆಲ್ಲಾ ಕಾರಣ ವೇನು ಗೋತ್ತೆ ಅದೇ ಮುಂಬಯ ಮೂಲದ ನಟಿ ನಿಕೀತಾ ಅಂತಾ ಎನ್ನುತ್ತವೆ ಚಿತ್ರರಂಗದ ಮೂಲಗಳು.ಆದರೆ ನಿಕೀತಾ ಇದನ್ನ ತಳ್ಳಿ ಹಾಕಿದ್ದಾರೆ.
ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು. ಚಿತ್ರೋದ್ಯಮದ ಅನೇಕ ಗಣ್ಯರು ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದರು.
ಆದರೆ ಎನೆಇರಲಿ ನಮ್ಮಕನ್ನಡದ ಜನ ಹೇಳೋದಿಸ್ಟೆ ಸ್ವಾಮೀ ... ಅಮ್ಮಾ ನಿಕೀತಮ್ಮಾ ನಮ್ಮ ಹುಡುಗನ ಹಾಳುಮಾಡಬೇಡಾ ಬಿಟ್ಟಬಿಡು.

10 Sept 2011

ನಿಮ್ಮ ಬಾಯಿ ದುರ್ವಾಸನೆಗೆ ಸುಲಭ ಮನೆ ಮದ್ದು


ಬಾಯಿ ದುರ್ನಾತ, ದುರ್ವಾಸನೆ ಒಂದಲ್ಲ ಒಂದು ಬಾರಿ ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಧೂಮಪಾನಿಗಳು ಮದ್ಯ, ಮಾಂಸ ಸೇವಿಸುವವರ ಬಾಯಿ ಮಾತ್ರ ಮೋರಿ ವಾಸನೆಯಂತೆ ದುರ್ನಾತ ಬೀರುತ್ತದೆ ಎಂದು ಮೂಗು ಮುಚ್ಚಿಕೊಳ್ಳುವವರು ಸ್ವಲ್ಪ ತಮ್ಮ ಬಾಯೆಂಬ ಬ್ರಹ್ಮಾಂಡವನ್ನು ನೋಡಿಕೊಳ್ಳುವುದೊಳಿತು. ಬಾಯಿ ದುರ್ನಾತಕ್ಕೆ ಅನೇಕ ಪರಿಹಾರ ಉಪಾಯಗಳಿದ್ದು, ಸರಳ ಹಾಗೂ ಸುಲಭ ವಿಧಾನಗಳಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಬಾಯಿ ದುರ್ವಾಸನೆ ಬಾರದಂತೆ ತಡೆಗಟ್ಟುವುದು ಕೂಡಾ ಅತಿ ಮುಖ್ಯ.

ಬಾಯಿ ದುರ್ನಾತ ತಡೆಯಲು, ನಿವಾರಿಸಲು ಸರಳ ವಿಧಾನಗಳು:
* ದಿನ ಬೆಳಗೆದ್ದು ನೀನು ಬಾಯಿ ಬಿಟ್ಟು ಆಕಳಿಸಿದರೆ ಸಾಕು, ಮನೆಯಲ್ಲಿರುವ ಕ್ರಿಮಿ ಕೀಟಗಳೆಲ್ಲಾ ಫಿನಿಷ್ ಎಂದು ರೂಮ್ ಮೇಟ್ ಗಳು ರೇಗಿಸುವುದು ಮಾಮೂಲಿಯಾಗಿತ್ತು. ಇದನ್ನು ತಪ್ಪಿಸಲು ಬಳಸಿದ ಮೊದಲ ವಿಧಾನ ಹಲ್ಲುಜ್ಜುವುದು. ದಿನನಿತ್ಯ ಎರಡು ಬಾರಿ ಬ್ರಷ್ (ಸಾಧ್ಯವಾದಷ್ಟು ಸಾಫ್ಟ್ ಅಥವಾ ಸೆಮಿ ಸಾಫ್ಟ್ ಬ್ರಷ್ ಬಳಸಿ) ಮಾಡಿ, ಬಾಯಿ ಮುಕ್ಕಳಿಸಬೇಕು. ಆಹಾರ ಸೇವನೆ ನಂತರ, ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ. ಅದರಲ್ಲೂ ಹಲ್ಲು ಹುಳುಕು ಇದ್ದವರಿಗೆ ಬಾಯಿ ಮುಕ್ಕಳಿಸುವುದು ಕಡ್ಡಾಯ.

* ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು, ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ. ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ರೆಡಿಮೇಡ್ ಮೌಥ್ ವಾಷ್ ಗಳನ್ನು ಬಳಸಬಹುದು. ಆದರೆ, ಹೆಚ್ಚು ಕೆಮಿಕಲ್ ಹಾಗೂ ಆಲ್ಕೋಹಾಲ್ ಯುಕ್ತ ಮೌಥ್ ವಾಷ್ ಬಳಸಬೇಡಿ.

* ಸೂರ್ಯಕಾಂತಿ ಬೀಜಗಳು ಬಾಯಿ ದುರ್ನಾತ ತೊಳಗಿಸಲು ತುಂಬಾ ಉಪಯುಕ್ತವಾಗಲಿದೆ. ಅದರಲ್ಲೂ ನಾನ್ ವೆಜ್ ತಿನ್ನುವವರು ಸ್ವಲ್ಪ ಸೂರ್ಯಕಾಂತಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗೆದು, ನೀರು ಕುಡಿದರೆ ಸಾಕು. ದುರ್ಗಂಧ ದೂರವಾಗುತ್ತದೆ.

* ದಿನಕ್ಕೊಂದು ಸೇಬು ಬಳಸಿದರೆ ವೈದ್ಯರನ್ನು ದೂರವಿಡಬಹುದು ಎಂದು ಮಾತು ನಿಜ. ಸೇಬು ಹಣ್ಣು ತಿನ್ನುವುದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ.

* ನಿಂಬೆ ಹಣ್ಣು ತುಂಬಾ ಪರಿಣಾಮಕಾರಿಯಾಗಬಲ್ಲುದು. ನಿಂಬೆ ರಸವನ್ನು ಬಿಸಿ ನೀರಿನೊಂದಿಗೆ ಸೇವಿಸಿ ಬಾಯಿ ಗಳಗಳ ಮಾಡುತ್ತಾ ಬಂದರೆ, ಬಾಯಿ ದುರ್ವಾಸನೆ ನಾಶವಾಗಿ ಹೊಸ ಆಹ್ಲಾದ ಮೂಡುತ್ತದೆ. ಇದಕ್ಕಿಂತ ಉತ್ತಮ ಮನೆಮದ್ದು ಇಲ್ಲ ಎನ್ನಬಹುದು.

* ಬಾಯಿ ದುರ್ನಾತ ತೊಲಗಿಸಿ, ಸುವಾಸನೆ ಬೀರುವಂತೆ ಮಾಡಲು ಒಂದೆರಡು ಏಲಕ್ಕಿ ಎಸಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಇರಿ. ಏಲಕ್ಕಿ ಅಗಿಯುವುದರಿಂದ ಮೈ ಕೂಡಾ ಬೆಚ್ಚಗಾಗುತ್ತದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಿಗುವ ಮೌಥ್ ರಿಫ್ರೆಷ್ ನರ್ ಗಿಂತ ನೈಸರ್ಗಿಕವಾದ ಏಲಕ್ಕಿ ಸೇವನೆ ಉತ್ತಮ.

ಇದಲ್ಲದೆ, ಮಿಂಟ್, ಪುದೀನ ಬರಿತ ಕ್ಯಾಂಡಿಗಳು, ಈರುಳ್ಳಿ, ಕರಿಬೇವು ಮುಂತಾದವುಗಳನ್ನು ಸೇವಿಸಿ ಧೂಮಪಾನಿಗಳು ತಮ್ಮ ಚಟದಿಂದ ಇತರರಿಗೆ ಉಂಟಾಗುವ ಮುಜುಗರ, ತೊಂದರೆಗಳನ್ನು ತಪ್ಪಿಸಲು ಹೆಣಗುತ್ತಾರೆ.

ಬಾಯಿ ದುರ್ನಾತ ತಡೆಗಟ್ಟುವುದು ಹೇಗೆ?:

* ಅತ್ಯಂತ ಸರಳ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವುದು. ಬಾಯಿ ದುರ್ವಾಸನೆಗೆ ಮುಖ್ಯ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲಲು ನೀರಿಗಿಂತ ಪ್ರಬಲ ಅಸ್ತ್ರ ಮತ್ತೊಂದಿಲ್ಲ. ಬಿಸಿ ನೀರು ಸೇವನೆ ಕೂಡಾ ಒಳ್ಳೆಯದು.

* ಬಾಯಿ ಸ್ವಚ್ಛತೆಯಲ್ಲಿ ಪ್ರಮುಖವಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ನಾಲಗೆ ಸ್ವಚ್ಛತೆಯೂ ಮುಖ್ಯ. ನಾಲಗೆ ಸ್ವಚ್ಛಗೊಳಿಸಲು ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳ ಬಳಕೆ ಭಾರತೀಯರಲ್ಲಿ ತುಂಬಾನೇ ಕಮ್ಮಿ. ಆದರೂ, ಕೈ ಬೆರಳುಗಳ ಸಹಾಯದಿಂದ ನಾಲಗೆ ಒಂದೆರಡು ಬಾರಿ ತಿಕ್ಕಿ, ನೀರು ಹಾಕಿಕೊಂಡು ಬಾಯಿ ಮುಕ್ಕಳಿಸುವುದು ಸರಳ ವಿಧಾನ. ಹಲ್ಲುಜ್ಜಿದ ನಂತರ ತೋರು ಬೆರಳನ್ನು ಬ್ರಷ್ ನಂತೆ ಬಳಸಿ ಒಸಡುಗಳನ್ನು ಉಜ್ಜುವುದರಿಂದ ಒಸಡುಗಳಲ್ಲಿ ರಕ್ತ ಸಂಚಾರ ಹೆಚ್ಚಿ, ಹಲ್ಲುಗಳನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತವೆ.

* ದುಶ್ಚಟಗಳ ಸಹವಾಸವಿಲ್ಲದವರೂ ಕೂಡಾ ಬಾಯಿ ದುರ್ನಾತಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಹುಳುಕು ಹಲ್ಲು ಇದ್ದರೆ ಮೊದಲು ಸರಿಪಡಿಸಿಕೊಳ್ಳಿ. ಕಾಫಿ ಸೇವನೆ ಚಟವುಳ್ಳವರು ಕಾಫಿಗಿಂತ ಟೀ ಸೇವಿಸುವುದು ಒಳ್ಳೆಯದು. ಬಾಯಿ ದುರ್ನಾತ ತಡೆಗೆ ಚಹಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಚಹಾ ಪುಡಿ ಕಲಬೆರಕೆ ವ್ಯಾಪಕವಾಗಿರುವ ಕಾರಣ, ಕಾಫಿ ಇರಲಿ, ಟೀ ಇರಲಿ ಕುಡಿದ ನಂತರ ಬಾಯಿ ಮುಕ್ಕಳಿಸುವುದು ಒಳ್ಳೆಯದು.

* ಆಗಾಗ ಸಕ್ಕರೆ ಅಂಶ ಕಮ್ಮಿಯಿರುವ ಚ್ಯೂಯಿಂಗ್ ಗಮ್ ತಿನ್ನಬಹುದು. ಬಾಯಿಯನ್ನು ಎಂಜಲು ಪ್ರಮಾಣ ಹೆಚ್ಚಿಸಿ, ಬಾಯಿ ದುರ್ವಾಸನೆ ಹೊಗಲಾಡಿಸಲು ಇದು ಸಹಾಯಕಾರಿ. ಆದರೆ, ಬಬ್ಬಲ್ ಗಮ್, ಚ್ಯೂಯಿಂಗ್ ಗಮ್ ಅಗಿಯುವುದನ್ನೇ ಚಟ ಮಾಡಿಕೊಳ್ಳಬೇಡಿ. ಇನ್ನೂ ಹಲ್ಲು ಹುಳುಕು ಇದ್ದವರು ಚಾಕಲೋಟ್, ಸಿಹಿ ಪದಾರ್ಥ ಸೇವಿಸಬಾರದು ಎಂದರೆ ಕ್ಲೀಷೆಯಾದೀತು.

* ಈ ಎಲ್ಲಾ ಉಪಾಯಗಳು ವಿಫಲವಾದರೆ, ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ ಅದರಲ್ಲೂ ಪಾನ್ ಬೀಡಾ ಹಾಕುವ ಚಟ ಉಳ್ಳವರು, ಧೂಮಪಾನಿಗಳು, ಮದ್ಯಪಾನಿಗಳು ಅಗ್ಗಿಂದಾಗ್ಗೆ ವೈದ್ಯರನ್ನು ಕಾಣಲೇಬೇಕು.

ಇಷ್ಟಲ್ಲದೆ, ಇನ್ನೂ ಅನೇಕಾನೇಕ ವಿಧಾನಗಳನ್ನು ಜನ ಬಳಸುತ್ತಿರಬಹುದು. ಅದರ ಅರಿವು ನಿಮಗಿದ್ದರೆ, ನಮಗೂ ಒಂದಿಷ್ಟು ತಿಳಿಸಿ, ನಿಮ್ಮ ಸ್ನೇಹಿತರಿಗೆ ಬಾಯಿ ದುರ್ವಾಸನೆ ಇದ್ದರೆ ಮೂಗು ಮುಚ್ಚಿಕೊಳ್ಳಬೇಡಿ. ಮೇಲಿನ ಸಲಹೆ ತಿಳಿಸಿ.

9 Sept 2011

ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ


ಕೌಟುಂಬಿಕ ಕಲಹದಿಂದಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಮೂರು ವರ್ಷದ ಪುತ್ರನ ಮೇಲೆ ನಡು ರಾತ್ರಿ 12 ಗಂಟೆ ವೇಳೆ ವಿಜಯನಗರದ ತನ್ನ ಗೆಳತಿಯಮನೆಯಲ್ಲಿದ್ದ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಕನ್ನಡದ ಖ್ಯಾತ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಅವರು ತಮ್ಮ ಪತ್ನಿಗೆ ರಿವಾಲ್ವರ್ ತೋರಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ತೀವ್ರ ವಾಗಿ ಗಾಯಗೊಂಡಿರುವ ವಿಜಯಲಕ್ಷ್ಮಿ ಮತ್ತು ಪುತ್ರನನ್ನು ವಿಜಯನಗರದ ಗಾಯತ್ರಿ ನರ್ಸಿಂಗ್ ಹೋಂಗೆ ದಾಖಲಿಸಲಾಗಿದೆ.
ಈ ಮಧ್ಯೆ, ಸಕಲೇಶಪುರದಲ್ಲಿ ನಡೆಯುತ್ತಿದ್ದ ದರ್ಶನ್ ತಾರಾಗಣದ 'ಚಿಂಗಾರಿ' ಸಿನಿಮಾ ಚಿತ್ರೀಕರಣವನ್ನು ರದ್ದುಪಡಿಸಲಾಗಿದೆ.
ದಂಪತಿ ಮಧ್ಯೆ ಇತ್ತೀಚೆಗೆ ವಿರಸ ನೆಲೆಸಿತ್ತು. ರಾಜರಾಜೇಶ್ವರಿ ನಗರದಲ್ಲಿರುವ ಗಂಡನ ಮನೆಯಿಂದ ವಿಜಯನಗರದಲ್ಲಿರುವ ಸ್ನೇಹಿತೆ ವಿದ್ಯಾ ಮನೆಗೆ ವಿಜಯಲಕ್ಷ್ಮಿ ಬಂದಿದ್ದರು. ಆದರೆ ಅಲ್ಲಿಗೇ ತೆರಳಿದ ದರ್ಶನ್, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಐಪಿಸಿ ಸೆಕ್ಷನ್ 301, 498 ಎ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆಯಡಿ ನಟ ದರ್ಶನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಕ್ಷಣ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

7 Sept 2011

ಜನಾರ್ದನ ರೆಡ್ಡಿ ಅರ್ಜಿ ವಿಚಾರಣೆ ಗುರುವಾರಕ್ಕೆ

ಹೈದರಾಬಾದ್ ಸೆ.7:ಅಕ್ರಮ ಗಣಿಗಾರಿಕೆ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.ಸಿಬಿಐ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ವಹಿಸಬೇಕು ಎಂದು ಮನವಿ ಸಲ್ಲಿಸಿದರೆ ರೆಡ್ಡಿಗಳಿಗೆ ಜಾಮೀನು ಸಿಗುವುದು ಕಷ್ಟ.ಕ್ರಿಮಿನಲ್ ಸಂಚು ಆರೋಪವೊಂದನ್ನು ಬಿಟ್ಟರೆ ಉಳಿದೆಲ್ಲ ಆರೋಪಗಳಿಗೂ ಜಾಮೀನು ಮಂಜೂರು ಮಾಡುವ ಅವಕಾಶವಿರುತ್ತದೆ.ವಿಚಾರಾಧೀನ ಖೈದಿಗಳಿಗೆ ನಿಯಮದ ಪ್ರಕಾರ ಆಹಾರ ನೀಡಲಾಗುತ್ತಿದೆ.ಜನಾರ್ದನ ರೆಡ್ಡಿ ಅವರು ಜೈಲಿನಲ್ಲಿ ವಿಶೇಷ ಸೌಲಭ್ಯಗಳಿಗೆ ಮನವಿ ಸಲ್ಲಿಸಿಲ್ಲ.

6 Sept 2011

ವಜ್ರಖಚಿತ ಕಿರೀಟ ವಾಪಸಗೆ ಆಗ್ರಹ

ತಿರುಮಲ ಸೆ.6: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಹಾಗೂ ಸೋದರರು ತಿರುಪತಿ ತಿಮ್ಮಪ್ಪನಿಗೆ ನೀಡಿದ ವಜ್ರಖಚಿತ ಕಿರೀಟವನ್ನು ದೇವರಿಗೆ ತೊಡಿಸಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ. ರೆಡ್ಡಿ ಬಂಧನವಾಗಿ ಚಂಚಲಗುಡ ಜೈಲಿಗೆ ಸೇರಿದ ಮೇಲೆ ಈ ರೀತಿ ಆಗ್ರಹಿಸಿದ್ದಾರೆ. ಜನಾರ್ದನ ರೆಡ್ದಿ ಅವರು ನೀಡಿದ 30 ಕೆ.ಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ 2009ರ ಜೂನ್ 11ರಂದು ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು.

5 Sept 2011

ಜನಾರ್ದನ ರೆಡ್ಡಿ ಬಂಧನ: ಪ್ರತಿಭಟನೆ

ಬೆಳಿಗ್ಗೆ ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿ 30 ಕೆ.ಜಿ. ಚಿನ್ನ ಹಾಗೂ 4.50 ಕೋಟಿ ನಗದು ವಶಪಡಿಸಿ ಕೊಂಡಿದ್ದಾರೆ. ಅವರನ್ನು ಬಂಧಿಸಿ ಹೈದರಾಬಾದ ಸಿಬಿಐ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 4 ಕ್ಕೆ ಕೋಟ್೯ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

4 Sept 2011

ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

ಕ್ರಿಕೆಟ್:ನಿನ್ನೆ ನಡೆದ ಇಂಗ್ಲೆ೦ಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 275 ರನ್ನಗಳ ಗುರಿ ನೀಡಿತ್ತು. ನಂತರ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆ೦ಡ್ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದಾಗ ಮಳೆಯಿಂದ ಪ೦ಧ್ಯ ರದ್ದಾಯಿತು. 5 ರನ್ ಗಳಿಂದ ಪಾಥೀ೯ವ ಪಟೇಲ ಶತಕ ವಂಚಿತರಾದರು. ಅವರು 107 ಬಾಲ್ ಗಳಿಂದ 95 ರನ್ ಗಳಿಸಿ ಔಟಾದರು.ಎರಡನೇ ಎಕದಿನ ಸೆ. 6 ರಂದು ನಡೆಯಲಿದೆ.

ಸ್ವಾಭಿಮಾನಕ್ಕೆ ದಕ್ಕೆ : ಬಿ. ಶ್ರೀರಾಮುಲು ರಾಜೀನಾಮೆ

ಬೆಂಗಳೂರು ಸೆ.04: ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿರುವ ಕಾರಣ ಮಾಜಿ ಸಚಿವ ಬಿ. ಶ್ರೀರಾಮುಲು ಇಂದು ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪ್ಪಯ್ಯ ಅವರಿಗೆ ಪತ್ರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಮಡಿಕೇರಿ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಲೋಕಾಯುಕ್ತರ ಬಗ್ಗೆ ನನಗೆ ಅಪಾರ ಗೌರವವಿದೆ. 20 ವರ್ಷಗಳಿಂದ ರಾಜಕೀಯ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಾಮಾಣಿಕ, ಯಾವುದೇ ಕಳಂಕ ಇಲ್ಲದವನು. ಅಕ್ರಮ ಗಣಿಗಾರಿಕೆಯಲ್ಲಿ ಖಂಡಿತ ಭಾಗಿಯಾಗಿಲ್ಲ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನಗೆ ಸಾಕಷ್ಟು ನೋವನ್ನು ತಂದಿದೆ. ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು. ನನ್ನ ಜತೆ ಬಳ್ಳಾರಿ ಅನೇಕ ಶಾಸಕರು ನನ್ನೊಂದಿಗೆ ಇದ್ದಾರೆ. ಆದರೆ ನಾನೊಬ್ಬ ಮಾತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.

Share

Twitter Delicious Facebook Digg Stumbleupon Favorites More