ಮಾವು "ಹಣ್ಣುಗಳ ರಾಜ" ನೆಂದೇ ಹೆಸರುವಾಸಿಯಾದ ಮಾವು ಅಂದ್ರೆ ಯಾರಿಗೆ ಇಷ್ಟವಾಗೋಲ್ಲ ?ನಿಮಗೂ ಬಾಯಿಯಲ್ಲಿ ನೀರು ಬರತ್ತೆ ಅಲ್ವ! ಹಾಗಿದ್ರೆ ಮೊದ್ಲು ಮಾರ್ಕೆಟಿಗೆ ಹೋಗಿ ಮಾವಿನಹಣ್ಣ ಖರೀದಿ ಮಾಡಿ ತಡವಾದರೆ ಸಿಗೋಲ್ಲ ಸಿಸನ ಮುಗದು ಹೋಗತ್ತೆ ಬೇಗ ಬೇಗ !! ಬರಿ ಹಣ್ಣ ತಂದು ತಿಂದರೆ ಹೇಗೆ ಅದ್ರ ಬಗ್ಗೆ ತಿಳ್ದಕೋಳೋದ ಬೇಡವಾ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಹೇಗೆಲ್ಲ ಎಷ್ತೆಷ್ಟ ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ತಿಳ್ಕೊಳ್ಳಬೇಕಾ?ಹಾಗಿದ್ರೆ ಮುಂದೆ ನೋಡಿ ಮಾವಿನಹಣ್ಣು ಮಕ್ಕಳು ,ವಯ್ಯಸ್ಸಾದವರು,ಗರ್ಭಿಣಿಯರು ,ಬಾಣಂತಿಯರು ಎಲ್ಲರೂ ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ ಸಿಹಿಯಾಗಿ ರುಚಿಕರವಾಗಿದೆ ಎಂದು ಅತಿಯಾಗಿ ತಿಂದರೆ ವಾಂತಿ ಬೇಧಿ ಅತಿಸಾರ ಆಗುವ ಸಂಭವ ಹೆಚ್ಚು ಏಕೆಂದರೆ ಈ ಮಾವಿನ ಹಣ್ಣಲ್ಲಿ ಪೈಬರ ಅಂಶ ಹೆಚ್ಚಿರುತ್ತೆ,ಅಲ್ಲದೇ ಇದರಲ್ಲಿ ಕಾರ್ಬೋಹೈಡರೆಟ,ಕ್ಯಾಲ್ಸಿಯಂ ,ವಿಟಮಿನ ಹೇರಳ ಪ್ರಮಾಣದಲ್ಲಿರುವದರಿಂದ ಆರೋಗ್ಯಕ್ಕೆ ಅತೀ ಉತ್ತಮವಾದದ್ದು ದಿನ ನಿತ್ಯದ ಒತ್ತಡ ಕೆಲಸದಿಂದ ಅತಿಯಾಯದ ಆಯಾಸ ನಿವಾರಿಸಲು ದಿನನಿತ್ಯ 1 ಮಾವಿನ ಹಣ್ಣನ್ನು ತಿನ್ನಬೇಕು ಇದರಿಂದ ಯಾವಾಗಲು ದೇಹ ಹಾಗೂ ಮನಸು ಉಲ್ಲಾಸದಿಂದ ಇರುವದು ಹಣ್ಣು ಇರದಿದ್ದರೆ ಮಾವಿನ ರಸವನ್ನಾದರೂ ಕುಡಿದರೆ ದೇಹ ಚೈತನ್ಯದಾಯಕವಾಗುವದು .ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದು ಹೆಚ್ಚು ಉಷ್ಣಾಂಶವಿರುತ್ತದೆ. ಈ ಹಸಿ ಮಾವಿನಕಾ ಯಿಂದ ಗುಳಂ ತಯಾರಿಸಿ ಚಪಾತಿಯೊಂದಿಗೆ ತಿಂದರೆ ರುಚಿಕರವಾಗಿರುತ್ತದೆ ಅಲ್ಲದೇ ವಿವಿಧ ರೀತಿಯ ಉಪ್ಪಿನ ಕಾಯಿಯನ್ನು ಮಾಡಬಹುದು ಗರ್ಬಿಣಿಯಾರಿಗೆ ಬಯಕೆಗೆ ಹುಳಿಮಾವು ಹೆಚ್ಚು ರಾಮಬಾಣವಿದ್ದಂತೆ.ಹೀಗೆ ತಿನ್ನಲು ಬೇಕಾಗುವ ಮಾವು ಉಪಯುಕ್ತವಾಗಿದೆ.
ಮಾವಿನ ಹಣ್ಣಿನ ವಿಧಗಳು :ರಸಪುರಿ,ಮಲಗೋಬ,ತೋತಾಪುರಿ,ನೀಲಂ ,ಅಲ್ಫನ್ಸೋ
ಮಾವಿನ ಹಣ್ಣನ್ನು ತಿನ್ನುವದರಿಂದಾಗುವ ಉಪಯೋಗಗಳು :
ಒಣಗಿದ ಮಾವಿನಕಾಯಿಯೊಂದಿಗೆ ಜೇನು ತುಪ್ಪ ಬೆರೆಸಿ ತಿನ್ನುವದರಿಂದ ಮಧುಮೇಹ,ಪಿತ್ತಕೋಶದ ತೊಂದರೆ ನಿವಾರಣೆಯಾಗುವದು
ಮಕ್ಕಳ ತೂಕಹೆಚ್ಹಿ ಲವಲವಿಕೆಯಿಂದರಬಹುದು.
ದಿನನಿತ್ಯ ತಿನ್ನುವದರಿಂದ ದೇಹ ಶಕ್ತಿಯುತವಾಗಿ ಉಲ್ಲಾಸದಿಂದ ಇರಬಹುದು.
ವಿಟಮಿನ ಸಿ,ಕೆ,ಇ,ಬಿ6 ಹೇರಳ ಪ್ರಮಾಣದಲ್ಲಿ ದೊರೆಯುತ್ತದೆ.
ಕಾರ್ಬೋಹೈಡರೆಟ ಅಂಶ ಹೆಚ್ಚಿರುವದರಿಂದ ಸ್ತನ ಕ್ಯಾನ್ಸೆರ,ಹೃದಯದ ತೊಂದೆರೆ ನಿವಾರಣೆಯಾಗುವದು.
ಮಾವಿನ ಹಣ್ಣನ್ನು ಅತೀ ಹೆಚ್ಚು ತಿನ್ನುವದರಿದಾಗುವ ತೊಂದರೆಗಳು :
ಅತಿಯಾದರೆ ಬೇಧಿ ಹೊಟ್ಟೆ ನೋವು ಬರುವ ಸಾದ್ಯತೆ ಹೆಚ್ಚು.
ಚಿಕ್ಕ ಮಕ್ಕಳಿಗೆ ಅತಿಯಾಗಿ ತಿನ್ನಿಸುವದು ಸೂಕ್ತವಲ್ಲ.
ಗರ್ಭಿಣಿಯರು ಹೆಚ್ಚಾಗಿ ತಿಂದರೆ ತೊಂದರೆಯಗುವದು
ಅಜಿರ್ಣವಾದಾಗ ತಿನ್ನಕೂಡದು ಅಪಾಯ.ಮಿತವಿದ್ದರೆ ಸೂಕ್ತ.
ಕಿಡ್ನಿ ತೊಂದರೆ ಇದ್ದವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಸಕ್ಕರೆ ಕಾಯಿಲೆಗೆ ಕಡಿಮೆ ಉಪಯೋಗಿಸಬೇಕು.
ಅಷ್ಟೇ ಅಲ್ಲ ಮಾವು ಆಯುರ್ವೇದ ಔಷಧಿಯಲ್ಲಿಯೂ ಉಪಯುಕ್ತವಾಗಿದೆ ಇದು ಸರ್ವರೋಗಕ್ಕು ಸಂಜೀವಿನಿ ವಿಟಮಿನ್,ಹಾಗೂ ಕಣ್ಣಿನ ತೊಂದರೆ ಇರುವವರಿಗೆ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ ,ಅಂಧತ್ವ ನಿವಾರಣೆಗೆ ಉಪಯುಕ್ತ ಓದುವ ಮಕ್ಕಳಿಗೆ ದಿವ್ಯೊಷಧ.ಆದರೆ ಮಿತವಾಗಿ ತಿಂದರೆ ಉತ್ತಮ.ಹಾಗೆ ತಿಂದು ಆರೋಗ್ಯವಂತರಾಗಿರಿ.