ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

26 Mar 2014

ವಾರಾಣಸಿಯಲ್ಲಿ ಆಪ್ ಪಕ್ಷದ ಕೇಜ್ರಿವಾಲ್‌ಗೆ ಮೊಟ್ಟೆ, ಮಸಿ ಹಾಕಿ ಭರ್ಜರಿ ಸ್ವಾಗತ.. !!


ವಾರಾಣಸಿ: ಆಮ್ ಆದ್ಮಿ  ಪಕ್ಷದ ಅಭ್ಯರ್ಥಿ ಅರವಿಂದ್ ಕೆಜ್ರಿವಾಲ್ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಫರ್ಧಿಸುವದಾಗಿ ಪ್ರಚಾರ ಮಾಡಲು ಮಂಗಳವಾರ ವಾರಾಣಸಿಗೆ ಹೋಗಿದ್ದ ಕೇಜ್ರಿವಾಲ್ ಅವರ ಮೇಲೆ ಮೊಟ್ಟೆ ಹಾಗೂ ಮಸಿ ಎಸೆತದ ಸ್ವಾಗತ ದೊರೆಯಿತು.

ಗಂಗಾನದಿಯಲ್ಲಿ ಸ್ನಾನ ಮಾಡಿ ಅವರು ಕಾಶಿ ವಿಶ್ವನಾಥನ ದೇಗುಲದ ಹೊರಗೆ ನಿಲ್ಲಿಸಿದ್ದ ಕೇಜ್ರಿವಾಲ್ ಕಾರಿನತ್ತ ಮೊಟ್ಟೆ ತೂರಿದ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಹಿಂದೂಗಳ ಪವಿತ್ರ ನಗರದಿಂದ ಹೊರ ನಡೆಯುವಂತೆ ಆಗ್ರಹಿಸಿದರು.

ತಮ್ಮ ಪಕ್ಷ್ದದವರೊಂದಿಗೆ ಬೀದಿಯಲ್ಲಿ ಮೆರವಣಿಗೆ ಹೊರಟಾಗ ಕೇಜ್ರಿವಾಲ್, ಮೋದಿ ಬೆಂಬಲಿಗರಿಂದ ಹೆಜ್ಜೆಗೂ ತೊಂದರೆ ಅನುಭವಿಸಿದರು.

ದೇಶದ್ರೋಹಿ ಎಂದ ಕೂಗಿದ ಪ್ರತಿಭಟನೆ ಕಾರರು 'ಮೋದಿ' ಮೋದಿ ಎಂದು ಘೋಷಣೆ ಕೂಗಿದರು.  ಜತೆಗೆ ಕೇಜ್ರಿವಾಲ್  ಜತೆ ಸಾಗಿದ ವಾಹನಗಳನ್ನು ಅಡ್ಡಗಟ್ಟಿದರು. ವಾರಾಣಸಿಯಿಂದ ಮೋದಿ ಮಾತ್ರ ಸ್ಪರ್ಧಿಸಬೇಕು ಎಂದು ಕೂಗಿದರು. ಮುನ್ನುಗ್ಗುತ್ತಿದ್ದ ಕೇಜ್ರಿ ವಿರೋಧಿಗಳನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿದರು. ಇದೇ ಸಂದರ್ಭದಲ್ಲಿ ಗುಂಪಿನಿಂದ ಅವರತ್ತ ಕಪ್ಪು ಮಸಿಯೂ ಬಿತ್ತು. ಇದರಿಂದ ಕೇಜ್ರಿವಾಲ್ ಅಲ್ಲದೆ ಆಪ್ ನಾಯಕರಾದ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರ ಮುಖ ಮತ್ತು ಬಟ್ಟೆಗೂ ಮಸಿ ಮೆತ್ತಿಕೊಂಡಿತು. ಮಸಿ ಎರಚಿದ ವ್ಯಕ್ತಿಯನ್ನು ಹಿಂದೂ ವಾಣಿ ಸೇನೆ ಸದಸ್ಯ ಅಂಬರೀಶ್ ಎಂದು ಗುರುತಿಸಲಾಗಿದೆ.ನಂತರ ಪೊಲೀಸರನ್ನು ಆತನನ್ನು ವಶಕ್ಕೆ ತೆಗೆದುಕೊಂಡರು.

ಇಂತಹ ಎಡರು ಅಡ ತಡೆಗಳ ನಡುವೆಯೂ ಕೇಜ್ರಿವಾಲ್, ಮೋದಿಯನ್ನು ಸೋಲಿಸುವುದಾಗಿ ಶಪಥ ಮಾಡಿದರು. ''ಬನಾರಸ್‌ನಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುತ್ತೇನೆ. ಮೋದಿ ವಿರುದ್ಧ ಸ್ಪರ್ಧಿಸುವುದು ಸಣ್ಣ ವಿಷಯ. ದೇಶವನ್ನು ಭ್ರಷ್ಟಾಚಾರದಿಂದ ಪಾರುಮಾಡುವುದು ದೊಡ್ಡ ವಿಷಯ,'' ಎಂದರು.

ಮೋದಿ ವಿರುದ್ಧ ಜಯ ಸಾಧಿಸಲು ತಮ್ಮನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದರು.

ಈ ಮಧ್ಯೆ, ಎಎಪಿ ಕಾರ್ಯಕರ್ತರು ಹಲವು ದಿನಗಳಿಂದ ತಮ್ಮ ನಾಯಕನ ಪರ ವಾರಾಣಾಸಿಯಲ್ಲಿ ಪ್ರಚಾರ ನಡೆಸಿದ್ದಾರೆ. ''ಕೇಜ್ರಿವಾಲ್ -ಮೋದಿ ನಡುವಿನ ಹಣಾಹಣಿ ಸಾಂಕೇತಿವಲ್ಲ. ಅಚ್ಚರಿಯ ಫಲಿತಾಂಶ ಹೊರಬೀಳಲಿದೆ,''ಎಂದು ಉತ್ತರ ಪ್ರದೇಶದದಲ್ಲಿ ಎಎಪಿಯ ವಕ್ತಾರರಾದ ವೈಭವ್ ಮಹೇಶ್ವರಿ ಹೇಳಿದರು.

ವಾರಾಣಸಿಗೆ ಬಂದ ಕೇಜ್ರಿವಾಲ್, ಈ ಪ್ರದೇಶದಲ್ಲಿ ನಾವು ನಡೆಸಿದ ಜನಮತ ಗಣನೆಯಲ್ಲಿ ಬಹುತೇಕ ಜನ ಮೋದಿ ವಿರುದ್ಧ ಸ್ಪರ್ಧಿಸಿ ಎಂದು ಹೇಳಿದರು. ಹೀಗಾಗಿ ಬಹುಜನ ಮತವನ್ನು ಪರಿಗಣಿಸಿ ಇಲ್ಲಿ ಅಖಾಡಕ್ಕಿಳಿಯುತ್ತಿರುವೆ ಎಂದು ಮಂಗಳವಾರ ಸಂಜೆ ಘೋಷಿಸಿದರು. ಇದೇ ವೇಳೆ ಅವರು ಗುಜರಾತ್ ಅಭಿವೃದ್ಧಿ ಮಾದರಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಘೋಷಿಸಿದರು.

ತಮ್ಮ ಮೇಲೆ ಇಂಕ್ ದಾಳಿ ನಡೆಸಿರುವುದು ನರೇಂದ್ರ ಮೋದಿ ಅವರ ಕುತಂತ್ರ. ಇದಕ್ಕೆ ಬೆದರುವುದಿಲ್ಲ. ಮೋದಿ ವಿರುದ್ಧ ಸೆಣಸುವುದು ಘನವಾದ ಸಂಗತಿಯೇನೂ ಅಲ್ಲ. ಅವರ ವಿರುದ್ಧ ಜಯ ಸಾಧಿಸುವೆ.ಎಂದು ಅರವಿಂದ್ ಕೆಜ್ರಿವಾಲ್ ಸ್ಪಸ್ಟ ಪಡಿಸಿದರು
ಜನರ ನಿರ್ಧಾರ ಯಾರಿಗೋ ಭ್ರಷ್ಥರಿಗೋ ಭ್ರಷ್ಟಾಚಾರ ನಿರ್ಮೂಲನ ಮಾಡಲು ಹೊರಟವರಿಗೋ ಗೊತ್ತಿಲ್ಲ.. !!ಯಾರಿಗೆಂದು ನೀವೇ ನಿರ್ಧರಿಸಿ... 
ದೇಶದ ಅಭಿವೃದ್ದಿಗಾಗಿ ಪ್ರತಿಯೊಬ್ಬರು ಕೈಜೋಡಿಸಿ.ನಿಮ್ಮ ಅಮೂಲ್ಯ ವಾದ ಮತವನ್ನು ಹಾಕುವದನ್ನು ಮರೆಯದಿರಿ ಮತದಾನ ಪ್ರತಿಯೊಬ್ಬರ ಹಕ್ಕು..  

Share

Twitter Delicious Facebook Digg Stumbleupon Favorites More