ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

25 Apr 2016

ಮತ್ತೆ  ಅನುರಾಗ ಅರಳಿತು -ಅನುಪ್ರಭಾಕರ  ೨ನೆ ವಿವಾಹ..!! 
ಬೆಂಗಳೂರು(ಏ. 25): ಕನ್ನಡದ  ಖ್ಯಾತ  ನಟಿ  ಅನುಪ್ರಭಾಕರ ಬಾಳಲ್ಲಿ  ಮತ್ತೇ  ಅನುರಾಗ  ಅರಳುತ್ತಿದೆ.  ಬೆಂಗಳೂರಿನಲ್ಲಿ  ಸ್ಯಾಂಡಲ್'​ವುಡ್ ನಟ ರಘು ಮುಖರ್ಜಿ ಹಾಗೂ ನಟಿ ಅನುಪ್ರಭಾಕರ್​ ವಿವಾಹವಾಗಲಿದ್ದಾರೆ. ಯಲಹಂಕದ ಖಾಸಗಿ ಹೋಟೆಲ್'ನಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ತೀರಾ ಖಾಸಗಿಯಾಗಿ ನಡೆಯುತ್ತಿರುವ ವಿವಾಹ ಸಮಾರಂಭದಲ್ಲಿ ಆತ್ಮೀಯರು  ಕುಟುಂಬಸ್ಥರು ಮಾತ್ರ ಹಾಜರಾಗಲಿದ್ದಾರೆ. ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಇಬ್ಬರಿಗೂ ಇದು ಮರುಮದುವೆಯಾಗಿದೆ. ಅನುಪ್ರಭಾಕರ್'ಗೆ ಇದು ಎರಡನೇ ಮದುವೆಯಾದರೆ, ರಘು ಮುಖರ್ಜಿ ಮೂರನೇ ಬಾರಿ ಮದುಮಗ ಎನಿಸಿದ್ದಾರೆ.
                 ಇತ್ತೀಚೆಗೆ  ಸಿನಿಮಾದಲ್ಲಿ  ಅಷ್ಟೊಂದು ಕಾಣದೆ ಮರೆಯಾಗಿದ್ದ  ತಾರೆ ಸ್ಯಾಂಡಲ್ ವುಡ್ ನ ಹಿರಿಯ  ನಟಿಯಾದ ಜಯಂತಿಯವರ  ಮಗ ಕೃಷ್ಣಕುಮಾರ ಅವರನ್ನು  ೨೦೦೨ರಲ್ಲಿ ವಿವಾಹವಾಗಿದ್ದರು.  ಕೌಟುಂಬಿಕ  ಕಲಹದಿಂದಾಗಿ ಪರಸ್ಪರ  ಇಬ್ಬರು ೨೦೧೪ಅಲ್ಲಿ  ವಿಚ್ಛೇದನ  ಪಡೆದುಕೊಂಡಿದ್ದರು.  ಈಗ ಅನುಪ್ರಭಾಕರ್ ಬಾಳಲ್ಲಿ  ಮತ್ತೊಬ್ಬ  ನಟನ  ಅಗಮನವಾಗಿದ್ದು ಕುಟುಂಬದವರ ಒಪ್ಪಿಗೆ  ಮೇರೆಗೆ ಇಬ್ಬರೂ ಇಂದು ವಿವಾಹವಾಗುತಿದ್ದಾರೆ. ಒಟ್ಟಿನಲ್ಲಿ  ಅನು  ಮತ್ತು ರಘು ಅಭಿಮಾನಿಗಳಿಗೆ ಸಂತಸ   ತಂದಿದೆ. ಶುಭವಾಗಲಿ..!!
 
    

14 Apr 2016


Image result for marriage ಅಂತರ್ಜಾತಿ ವಿವಾಹವಾಗುವವವರಿಗೆ  ಚೆನ್ನೈನಲ್ಲಿ ಬರಲಿದೆ ಹೆಲ್ಪ್’ಲೈನ್!!ಚೆನ್ನೈ: ಭಾರತದಲ್ಲಿ ಹೆಚ್ಚುತ್ತಿರುವ ಅಂತರ್ಜಾತಿ ಪ್ರೇಮ ಪ್ರಕರಣಗಳು  ಹದಿಹರೆಯದ ಯುವಕ ಯುವತಿಯರ ಸಾವಿನ ಪ್ರಕರಣಗಳು ಹೆಚ್ಚುತಿದ್ದು ಅದಕ್ಕಾಗಿ ಅಂತರ್ಜಾತಿ ಜೋಡಿಗಳಿಂದ ಬರುವ ದೂರುಗಳನ್ನು ವಿಚಾರಣೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕವನ್ನು ಸ್ಥಾಪಿಸಬೇಕು ಹಾಗೂ ಅವರಿಗಾಗಿ 24 ಗಂಟೆ ಹೆಲ್ಪ್ ಲೈನ್ ತೆರೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.  ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದೆ.





ಅಂತರ್ಜಾತಿ ಜೋಡಿಗಳಿಗೆ ರಕ್ಷಣೆ ಒದಗಿಸಬೇಕು ಮತ್ತು ತಾತ್ಕಾಲಿಕವಾಗಿ ಉಳಿಯಲು ಮನೆ ವ್ಯವಸ್ಥೆ ಮಾಡಬೇಕು ಎಂದು ಕೋರ್ಟ್ ಸರಕಾರಕ್ಕೆ ಮಾರ್ಗದರ್ಶನ ನೀಡಿದೆ. ಅಂತರ್ಜಾತಿ ಮದುವೆಯನ್ನು ವಿರೋಧಿಸುವ ಪೋಷಕರಿಂದ ಸರಕಾರ ಸಮ್ಮತಿ ಪಡೆಯಬೇಕು .
ಅಧ್ಯಯನದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ  81 ಕ್ಕೂ ಹೆಚ್ಚು ಮರ್ಯಾದಾ ಹತ್ಯೆಗಳು ನಡೆದಿದೆ. ಸರಕಾರಗಳು ರಾಜಕೀಯ ಲಾಭಕ್ಕಾಗಿ  ಹತ್ಯೆಗೈದ ದುಷ್ಕರ್ಮಿಗಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೇ ಮೃದು ನಿಲುವು ತಾಳಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
2014 ರಲ್ಲಿ ದಿಲೀಪ್ ಕುಮಾರ್ ಎಂಬ ಯುವಕನನ್ನು ವಿಮಲಾ ದೇವಿ ಎಂಬಾಕೆ ವಿವಾಹವಾಗಿದ್ದಳು. ಇವರಿಬ್ಬರದೂ ಅಂತರ್ಜಾತಿ ವಿವಾಹವಾದ್ದರಿಂದ ಆಕೆಯ ಪೋಷಕರು ಅವಳನ್ನು ಮರ್ಯಾದಾ ಹತ್ಯೆ ಗೈದಿದ್ದರು. ಈ ಸಾವಿನ ಬಗ್ಗೆ ಕಳಪೆ ತನಿಖೆ ನಡೆಸಿದ ಐವರು ಪೋಲಿಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಮರ್ಯಾದೆ ಹತ್ಯೆ ಎಂದರೆ ಬೇರೆ ಬೇರೆ ಜಾತಿಯ ಯುವಕ ಯುವತಿ ಪ್ರೀತಿಸಿದರೆ ಮರ್ಯಾದೆಗೆ  ಹೆದರಿ ಮನೆಯ ಕುಟುಂಬದವರು ತಮ್ಮ ಮಕ್ಕಳನ್ನೇ ಹತ್ಯೆ ಮಾಡುತಿದ್ದಾರೆ ಒಟ್ಟಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ತಗ್ಗಿಸಲು ಸಹಾಯಕವಾಗಬಹುದು. 




5 Apr 2016

Image result for rbiಸಿಹಿ ಸುದ್ದಿ  RBI ಬಡ್ಡಿ ದರ  ಕಡಿತ ;  ವಾಹನ, ಗೃಹ ಸಾಲಗಳು  ಅಗ್ಗ 
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದ್ದು, ಪರಿಣಾಮ ವಾಹನ, ಗೃಹಸಾಲ ಇನ್ನಷ್ಟು ಅಗ್ಗವಾಗಲಿದೆ.
ಮಾಸಿಕ ಹಣಕಾಸು ನೀತಿ ಪ್ರಕಟಿಸಿದ RBI ಮುಖ್ಯಸ್ಥ ರಘುರಾಮ್  ರಾಜನ್ ಇದರ  ಸಂಪೂರ್ಣ ಲಾಭವನ್ನು ಗ್ರಾಹಕರು  ಪಡೆದುಕೊಳ್ಳಲಿದ್ದಾರೆ. ಬ್ಯಾಂಕುಗಳಿಂದ ಗ್ರಾಹಕರಿಗೆ 
ಲಾಭಪಡೆದುಕೊಳ್ಳುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
  ಬಡವರ ಮನೆ ಮಾಡಿಕೊಳ್ಳುವ  ಆಶೆ ಈಡೇರಲಿದೆ ವಾಹನ ಖರೀದಿಗೂ ಅನುಕೂಲವಾಗಲಿದೆ   
 ಹೂಡಿಕೆ ದೃಷ್ಟಿಯಿಂದ ಆರ್​ಬಿಐ ಕಳೆದ ಜನವರಿ, ಫೆಬ್ರವರಿಯಲ್ಲಿಯೂ ರೆಪೋ ದರವನ್ನು ಕಡಿತಗೊಳಿಸಿತ್ತು. ಈಗ ರೆಪೋ ದರ ಶೇಕಡಾ 6.50ಕ್ಕೆ ನಿಗಧಿಯಗಿದ್ದು, ಐದು ವರ್ಷಗಳಿಂದೀಚೆಗಿನ ಕನಿಷ್ಠ ಎನಿಸಿಕೊಂಡಿದೆ.
ರೆಪೋ ದರವನ್ನು ಕಳೆದ ವರ್ಷ ಸಾಕಷ್ಟು ಇಳಿಕೆ ಮಾಡಿದ್ದರೂ ಬ್ಯಾಂಕ್​ಗಳು ಇದರ ಲಾಭವನ್ನು ತನ್ನ ಗ್ರಹಕರಿಗೆ ಸಿಗುವಂತೆ ಮಾಡಿರಲಿಲ್ಲ. ಇದರಿಂದ ರಘುರಾಮ್ ರಾಜನ್ ಸಹಜವಾಗಿ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಇನ್ನಷ್ಟು ಕಡಿಮೆ ಮಾಡಿರುವ ಅವರು ಬ್ಯಾಂಕ್​ಗಳ ಹತೋಟಿಯನ್ನು  ಹೇಗೆ ಹಿಡಿಯುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಏನೇ  ಆಗಲಿ ಸದಾ ಕನಸಿನಲ್ಲೇ ತೇಲಾಡುವ ಮಧ್ಯಮ ವರ್ಗದವರಿಗೆ ಪ್ರಯೋಜನಕರಿಯಾಗಲಿದ್ದು  ಚಂದೊಂದು  ಮನೆಕಟ್ಟಿ ಚಿಕ್ಕದೊಂದು ವಾಹನ  ಖರೀದಿಸಲು ಅನುಕೂಲವಾಗಲಿದೆ 

Share

Twitter Delicious Facebook Digg Stumbleupon Favorites More