ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

31 Oct 2011

ನಮ್ಮ ಕನ್ನಡ ರಾಜ್ಯೋತ್ಸವ


ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬ.೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿತ್ಯಾಗ,ತಾಳ್ಮೆ ,ಪ್ರೀತಿ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಬ್ರಿಟಿಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನೂಹೊಂದಿದ್ದ ಕರ್ನಾಟಕ, ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್. ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ,ಬಾಗಲಕೋಟೆ, ಹಾವೇರಿ ಉಡುಪಿ, ಕೊಪ್ಪಳ, ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ, ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು. ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ.ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ
"ಜೈ ಕರ್ನಾಟಕ ಮಾತೇ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀನು ಕನ್ನಡಿಗನಾಗಿರು "

28 Oct 2011

ಕೆಂಪು ದಾಳಿಂಬೆ ಹಣ್ಣಿನ ಮಹತ್ವ ನಿಮಗೆ ಗೊತ್ತೇ ?


ಕೆಂಪು ದಾಳಿಂಬೆ ಹಣ್ಣು  ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ  ಹಣ್ಣನ್ನು  ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು ಇದರಲ್ಲಿ ಸಿ ವಿಟಮಿನ್,ಫಾಸ್ಫೆರಸ್  ಇರುವದರಿಂದ ಮಹಿಳೆಯರಿಗೂ ಹಾಗೂ ಮಕ್ಕಳಿಗೂ ಹೆಚ್ಹು ಉಪಯುಕ್ತವಾದುದು .ಇತ್ತಿಚಿಗೆ  ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು  ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .ಅದಕ್ಕಾಗಿ ದಾಳಿಂಬೆಹಣ್ಣು  ತಿಂದು ಸದಾ ಅರೋಗ್ಯವಂತರಾಗಿರಿ.

    ದಾಳಿಂಬೆ ಹಣ್ಣಿನಿಂದಾಗುವ  ಪ್ರಯೋಜನಗಳು
  • ರಕ್ತದೊತ್ತಡ  ಕಡಿಮೆ ಆಗುವದು.
  • ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.
  • ಕೊಲೆಸ್ಟ್ರಾಲ್  ಕಡಿಮೆಯಾಗುವದು. 
  • ಮಹಿಳೆಯರು ದಾಳಿಂಬೆಹಣ್ಣಿನ  ರಸ ಕುಡಿಯುವದರಿಂದ ಮುಟ್ಟಿನ ತೊಂದರೆ ನಿವಾರಣೆಯಾಗುವದು.
  • ನಿಶ್ಯಕ್ತತೆ ಯನ್ನು ಕಡಿಮೆ ಮಾಡುವದು .
  • ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು  ಕಾಂತಿಯುತವಾಗುವದು.
  • ಲೈಂಗಿಕ  ತೊಂದರೆಯೂ ನಿವಾರಣೆಯಗುವದು
  • ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು.
  • ದಾಳಂಬಿ ಬೀಜವನ್ನು  ತಿನ್ನುವದರಿಂದ ಹಲ್ಲುಗಳ ಹೊಳಪು  ಹೆಚ್ಹುವದು
  • ಮನಸ್ಸು ಉಲ್ಲಾಸದಿಂದ ಇರುವದು 
  • ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚಿಸುವದು.     
         ಅದಕ್ಕಾಗಿ ದಾಳಿಂಬೆ ತಿನ್ನುವದು ಅವಶ್ಯಕವಾದುದು ಇದರಿಂದ ಮಕ್ಕಳು ಮಹಿಳೆಯರಿಗೆ ನೆನಪಿನ ಶಕ್ತ್ತಿ ಹೆಚ್ಹಿ ಅರೋಗವಂತರಾಗಿರಲು ಸಹಾಯಕವಾಗಿದೆ.                     

26 Oct 2011

ಪಟಾಕಿಯ ಅನಾಹುತಕ್ಕೆ ಐದು ಪರಿಹಾರಗಳು

ದೀಪಾವಳಿ ಸಂಭ್ರಮ ಮೂರು ದಿನ ಮನೆಮನಗಳಲ್ಲಿ ತುಂಬಿರುತ್ತೆ. ಜೊತೆಗೆ ಎಲ್ಲೆಲ್ಲೂ ಪಟಾಕಿಗಳ ಅಬ್ಬರ ಜೋರಿರುತ್ತೆ. ಆದರೆ ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಅರಿವಾಗುತ್ತದೆ.

ಉಸಿರಾಟದ ತೊಂದರೆ, ಹೃದ್ರೋಗಿಗಳು, ಹಸುಗೂಸು, ಪುಟ್ಟ ಮಕ್ಕಳು ಈ ಸಮಯದಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಇಲ್ಲದಿದ್ದರೆ ಈ 3 ದಿನಗಳ ಅವಧಿ ಉಂಟಾಗುವ ಪ್ರದೂಷಣೆ ಪರಿಣಾಮ ಜೀವನವಿಡೀ ಉಳಿದುಕೊಳ್ಳಬಹುದು.

ಪಟಾಕಿ ಹೊಗೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

1. ಪಟಾಕಿ ಹೊಗೆಯಿಂದ ಮಕ್ಕಳ ಮೂಗು ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ ಆರೋಗ್ಯವುಳ್ಳ ಮಕ್ಕಳಲ್ಲಿ ಊತವೂ ಕಾಣಿಸಿಕೊಳ್ಳುತ್ತೆ. ಕೆಮ್ಮು ಆರಂಭವಾಗಿ ಎದೆ ಉರಿಯಾಗುತ್ತದೆ.

2. ಪಟಾಕಿ ಹೊಗೆಯಿಂದ ಕಣ್ಣಿನಲ್ಲಿ ಉರಿ ಉಂಟಾಗಿ ಕಣ್ಣು ಕೆಂಪಗಾಗುವಂತೆ ಮಾಡುತ್ತದೆ. ಎಲ್ಲಾ ವಯೋಮಾನದವರಲ್ಲೂ ಈ ಪರಿಣಾಮ ಗೋಚರಿಸುತ್ತದೆ. ಇದರ ಶಬ್ದ ಕಿವಿಯ ತಮಟೆಯ ಶಕ್ತಿಯನ್ನೂ ಕುಂದಿಸುತ್ತದೆ.

3. ಪಟಾಕಿಗಳನ್ನು ಸಿಡಿಸುವುದರಿಂದ ಬಿಪಿಯಿಂದ ಬಳಲುತ್ತಿದ್ದವರಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ತಲೆಸುತ್ತು, ತಲೆ ನೋವು ಮತ್ತು ತಲೆ ತಿರುಗುವುದು ಈ ಪರಿಣಾಮಗಳು ನಂತರ ಗೋಚರಿಸಲು ಪ್ರಾರಂಭವಾಗುತ್ತದೆ.

4. ಪಟಾಕಿ ಹೊಗೆಯಿಂದ ಶ್ವಾಸಕೋಶದ ತೊಂದರೆ ಉಂಟಾಗಿ ಕೆಮ್ಮು, ಸೀನು ಹೆಚ್ಚಾಗುತ್ತದೆ. ಅಲ್ಲದೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಪಟಾಕಿ ವಾತಾವರಣದಿಂದ ದೂರವಿದ್ದರೆ ಉತ್ತಮ. ಇಲ್ಲದಿದ್ದರೆ ತೊಂದರೆ ಉಲ್ಬಣವಾಗುವ ಸಾಧ್ಯತೆಯೇ ಹೆಚ್ಚು.

5. ಈ ವಿಷಕಾರಿ ಅನಿಲವನ್ನು ಗರ್ಭಿಣಿಯರು ಸೇವಿಸಿದರೆ ತಾಯಿಗೆ ಮತ್ತು ಹುಟ್ಟಲಿರುವ ಮಗುವಿಗೆ, ಇಬ್ಬರಿಗೂ ತೊಂದರೆ, ಹುಟ್ಟುತ್ತಲೇ ಉಸಿರಾಟದ ತೊಂದರೆಗೆ ಮಗು ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ಜಾಗ್ರತೆ ವಹಿಸಲೇಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದು ತೊಂದರೆಗೀಡುಮಾಡಬಹುದು.

Share

Twitter Delicious Facebook Digg Stumbleupon Favorites More