3 Aug 2012

2012 ವಿಶ್ವದ ಟಾಪ್ 10 ಪ್ರಭಾವಿ ಮಹಿಳೆ ಉದ್ಯಮಿಗಳು ಅದರಲ್ಲಿ ಭಾರತದ ಮಹಿಳೆಗೂ ಸ್ಥಾನ ...!!!!


ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂಮಹಿಳೆಯರು ತಮ್ಮ ಛಾಪು ಮೂಡಿಸಿದ್ದು ತಾವು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಪ್ರಮುಖ ಪತ್ರಿಕೆಗಳಾದ ದಿ ಫೈನಾನ್ಷಿಯಲ್ ಟೈಮ್ಸ್ ಹಾಗೂ ಫಾರ್ಚೂನ್ ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು ವಿವರ ಇಂತಿದೆ.ಅದರಲ್ಲಿ ಭಾರತದ  ಮಹಿಳೆ   ಸ್ಥಾನ  ಸಿಕ್ಕಿದ್ದು ಹೆಮ್ಮೆಯ ವಿಷಯ. 

1. ಐರೀನ್ ರೊಸೆನ್ಫೆಲ್ಡ್: ಅಮೇರಿಕಾದ ಉದ್ಯಮಿ ಐರೀನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಇವರು ಕಳೆದ 30 ವರ್ಷಗಳಿಂದ ಆಹಾರ ಹಾಗೂ ಪಾನೀಯ ಉದ್ಯಮದಲ್ಲಿದ್ದಾರೆ. ಅಮೇರಿಕಾದ ಕ್ರಾಫ್ಟ್ ಫುಡ್ಸ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಯಾಗಿರುವ ಇವರು, ಮೊದಲು ಪೆಪ್ಸಿಕೋ ಕಂಪೆನಿಯಲ್ಲಿ ಕೆಲಸ ಮಾಡುತಿದ್ದು 2006ರಲ್ಲಿ ಕ್ರಾಫ್ಟ್ ಕಂಪೆನಿ ಸೇರಿದರು. ಫೋರ್ಬ್ಸ್ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಇವರು ವಿಶ್ವದ 100 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿಯೂ ಇದ್ದರು.
2. ಇಂದ್ರಾ ನೂಯಿ: ವಿಶ್ವದ ಎರಡನೇ ಅತೀ ದೊಡ್ಡ ಆಹಾರ ಮತ್ತು ಪಾನೀಯ ತಯಾರಿಕಾ ಕಂಪೆನಿ ಪೆಪ್ಸಿಕೋ ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆಯಾಗಿರುವ ಭಾರತೀಯ ಇಂದ್ರಾ ನೂಯಿ ಅವರಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದ್ದು , ಇವರು 1994 ರಲ್ಲಿ ಕಂಪೆನಿ ಸೇರಿ 2001 ರಲ್ಲಿ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಆದರು. ಇವರು 2007 ರಲ್ಲಿ 44 ವರ್ಷಗಳ ಇತಿಹಾಸ ಹೊಂದಿರುವ ಪೆಪ್ಸಿ ಕಂಪೆನಿಯ 5 ನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರು. ಫೋಬ್ಸ್ ಪತ್ರಿಕೆ ಇವರನ್ನು 2008 ರಲ್ಲಿ ವಿಶ್ವದ ಮೂರನೇ ಪ್ರಭಾವೀ ಮಹಿಳೆ ಎಂದು ಗುರುತಿಸಿದ್ದು, ವಾಲ್ ಸ್ಟ್ರೀಟ್ ಜರ್ನಲ್ ಕೂಡ 50 ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.
3.ಮಾರಿಸ್ಸ ಮೇಯರ್: ಅಮೇರಿಕಾ ಸಂಜಾತೆ ಯಾಹೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಮಾರಿಸ್ಸ ಮೇಯರ್ ಅವರು ಮೂರನೇ ಸ್ಥಾನದಲ್ಲಿದ್ದು ಫಾರ್ಚೂನ್ 500 ಕಂಪೆನಿಗಳ ಅತ್ಯಂತ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. 1999 ರಲ್ಲಿ ಗೂಗಲ್ ಸೇರಿದ ಇವರು ಕಂಪೆನಿಯ ಮೊದಲ ಮಹಿಳಾ ಇಂಜಿನಿಯರ್ ಕೂಡ ಆಗಿದ್ದು ಗೂಗಲ್ ನ ವಿವಿಧ ಹುದ್ದೆಗಳಲ್ಲಿ ೧೫ ವರ್ಷ ಕಾರ್ಯನಿರ್ವಹಿಸಿದ್ದಾರೆ. ಕಳೆದ ಜುಲೈ 2012ರಲ್ಲಿ ಇವರು ಯಾಹೂ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.
4 ಎಲ್ಲೆನ್ ಕುಲ್ಮಾನ್: ಅಮೇರಿಕಾದ ಎಲ್ಲೆನ್ ಕುಲ್ಮಾನ್ ಅವರು ಈ ಐ ಡು ಪಾಂಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಯಾಗಿದ್ದು ಜನರಲ್ ಮೋಟಾರ್‍ಸ್ ನ ಮಾಜಿ ನಿರ್ದೇಶಕಿಯೂ ಆಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ಫೋಬ್ಸ್ ಮ್ಯಾಗಜೀನ್ ಇವರಿಗೆ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ನೀಡಿತ್ತು. 206 ವರ್ಷಗಳ ಇತಿಹಾಸವಿರುವ ಡು ಪಾಂಟ್ ಕಂಪೆನಿಯ ಮೊದಲ ಮಾಹಿಳಾ ಮುಖ್ಯಸ್ಥೆಯೂ ಇವರಾಗಿದ್ದಾರೆ.
5. ಏಂಜೆಲಾ ಬ್ರಾಲೇ : ಅಮೇರಿಕಾದ ದೊಡ್ಡ ಆರೋಗ್ಯ ರಕ್ಷಾ ಕಂಪೆನಿ ವೆಲ್ ಪಾಯಿಂಟ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎಂಜೆಲಾ ಕಂಪೆನಿಯ ವಿವಿದ ಹುದೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ.
6. ಆಂಡ್ರಿಯಾ ಜಂಗ್ : ಅಮೇರಿಕಾದ ಏವನ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 1999 ರಲ್ಲಿ ನೇಮಕಗೊಂಡ ಜಂಗ್ ಅವರು ವಿವಿದ ಹುದೆಗಳಲ್ಲಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 2011 ರಲ್ಲಿ ಕಂಪೆನಿಯ ನೂತನ ಮುಖ್ಯಸ್ಥರ ಆಯ್ಕೆಯ ಜವಾಬ್ದಾರಿಯನ್ನೂ ಇವರಿಗೆ ನೀಡಲಾಗಿದ್ದು ಸೇವಾವಧಿಯನ್ನು ಕೂಡ ಎರಡು ವರ್ಷ ಮುಂದುವರೆಸಲಾಗಿದೆ.
7. ವಜೀನಿಯಾ ರೊಮೆಟ್ಟಿ: ವಿಶ್ವದ ಖ್ಯಾತ ಐಬಿಎಮ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಇವರು ಐಬಿಎಮ್ ನ ಮೊದಲ ಮಹಿಳಾ ಮುಖ್ಯಸ್ಥೆ ಆಗಿದ್ದಾರೆ. ಇವರಿಗೆ ಪಟ್ಟಿಯಲ್ಲಿ 7 ನೇ ಸ್ಥಾನ ನೀಡಲಾಗಿದ್ದು ಫಾರ್ಚೂನ್ ಮ್ಯಾಗಜೀನ್ ನಲ್ಲಿ ವಿಶ್ವದ 50 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ಸತತ 7 ನೇ ವರ್ಷ 7 ನೇ ಸ್ಥಾನದಲ್ಲಿದ್ದಾರೆ. 2011 ರ ಡಿಸೆಂಬರ್ ನಲ್ಲಿ ಇವರನ್ನು ಕಂಪೆನಿಯ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು.
8 ಉರ್ಸುಲ ಬರ್ನ್ಸ್: ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ಬರ್ನ್ಸ್ ಅವರು ಜೆರಾಕ್ಸ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿದ್ದಾರೆ. ಆಫ್ರಿಕನ್ ಅಮೇರಿಕನ್ನರಾದ ಇವರು 1980 ರಲ್ಲಿ ಜೆರಾಕ್ಸ್ ಕಂಪೆನಿಗೆ ಸೇರ್ಪಡೆಗೊಂಡರು.
9. ಮೆಗ್ ವಿಟ್ಮಾನ್ : ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪೆನಿ ಹ್ಯೂಲೆಟ್ ಪ್ಯಾಕರ್ಡ್(ಹೆಚ್‌ಪಿ) ಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ವಿಟ್ಮಾನ್ ಅವರು ೯ ನೇ ಸ್ಥಾನದಲ್ಲಿದ್ದು ಮೊದಲು ವಾಲ್ಟ್ ಡಿಸ್ನೆ ಕಂಪೆನಿಯಲ್ಲಿ ಉಪಾದ್ಯಕ್ಷೆಯೂ ಆಗಿದ್ದರು. 2011ರ ಡಿಸೆಂಬರ್ ನಲ್ಲಿ ಕಂಪೆನಿಯ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಅವರು ಕಂಪೆನಿಯ ವಿವಿಧ ಸ್ಥರಗಳಲ್ಲಿ ಮೂರು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
10. ಶೆರಿಲ್ ಸಾಂಡ್‌ಬರ್ಗ್ : ವಿಶ್ವದ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ನ ನಿರ್ದೇಶಕ ಮಂಡಳಿಯಲ್ಲಿದ್ದು ಮುಖ್ಯ ಆಪರೇಟಿಂಗ್ ಆಫೀಸರ್ ಅಗಿ ಕಾರ್ಯ ನಿರ್ವಹಿಸುತ್ತಿರುವ ಶೆರಿಲ್ ಅವರು ಮೊದಲು ಗೂಗಲ್ ನಲ್ಲಿ ಸೇವೆ ಸಲ್ಲಿಸುತಿದ್ದರು. ಟೈಮ್ ಮ್ಯಾಗಜೀನ್ ನ ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲೂ ಇವರಿಗೆ ಸ್ಥಾನ ನೀಡಲಾಗಿದೆ.

    ತೊಟ್ಟಿಲನ್ನು ತೂಗುವ ಕೈ ಇಡೀ ಜಗತ್ತನ್ನೇ ಆಳಬಹುದು ಎನ್ನುವಂತೆ  ಭಾರತದ  ಮಹಿಳೆ  ಮಹಿಳಾಮಣಿಗಳ ಸಾಧನೆ ಅಪ್ರತಿಮವಾದುದು ಹಾಗೇ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯು ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗುತ್ತಿದ್ದಾಳೆ. ಇನ್ನು ಹೆಚ್ಚು  ಹೆಚ್ಚು ಮಹಿಳೆಯರು  ಬೆಳಕಿಗೆ ಬರುವಂತಾಗಲಿ....!!!!!! 

0 comments:

Post a Comment

Share

Twitter Delicious Facebook Digg Stumbleupon Favorites More