11 Sept 2012

ಭಾರತದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ವಿಧಿವಶ....!!!!


 ಭಾರತದ ಕ್ಷೀರ ಕ್ರಾಂತಿಯ ಹರಿಕಾರ,ಪಿತಾಮಹ  ‘ಹಾಲಿನ ಮನುಷ್ಯ’ ಎಂದು ಖ್ಯಾತಿ ಪಡೆದಿದ್ದ ಡಾ.ವರ್ಗೀಸ್ ಕುರಿಯನ್ ರವಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಗುಜರಾತನ ಪಟೇಲ್ ಯುರೋಲಾಜಿಕಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ರ ವಾರ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
1921ರ ನವೆಂಬರ್ 26ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಅವರು, ಗುಜರಾತ್ ಸಹಕಾರಿ ಹಾಲು ಒಕ್ಕೂಟ(ಜಿಸಿಎಂಎಂಎಫ್) ಹುಟ್ಟು ಹಾಕಿದರಲ್ಲದೆ, ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಹೈನುಗಾರಿಕೆ ಮಾಡುವ ರೈತರಿಗೆ ಆಶಾದಾಯಕರಾದ ಕುರಿಯನ್  
 ಜೀವಮಾನದಲ್ಲೆಂದೂ ಒಂದು ತೊಟ್ಟು ಹಾಲನ್ನು ಕುಡಿಯದ ಡಾ. ವರ್ಗಿಸ್ ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನೇ ಈ ಅಮೂಲ್ ಬೇಬಿಯ ಅಪ್ಪ-ಅಮ್ಮ.  ಡಾ. ಕುರಿಯನ್ ಅವರ ಅಮೂಲ್ ಹಾಲು ಇಂದು ಭಾರತದಾದ್ಯಂತ ಅತೀ ಹೆಚ್ಚು ಬಳಕೆಯಾಗುತ್ತಿದೆ. 
ಜಸಿಎಂಎಂಎಫ್ ದೇಶದ ಅತೀ ದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವೆಂಬ ಖ್ಯಾತಿ ಪಡೆದಿದೆ. ‘ಆಮುಲ್’ ಬ್ರಾಂಡ್‌ನಲ್ಲಿ ಇದರ ಉತ್ಪನ್ನಗಳು ಇಂದು ದೇಶಾದ್ಯಂತ ಖ್ಯಾತಿ ಪಡೆದಿವೆ.
ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಇವರಿಗೆ ಪದ್ಮಶ್ರೀ (1965), ಪದ್ಮಭೂಷಣ (1966), ಪದ್ಮವಿಭೂಷಣ (1999) ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ ಕುರಿಯನ್ ಅವರ ಚರಿತ್ರೆಯ ಪುಟಗಳನ್ನು ಓದುತ್ತಾ ಹೋದರೆ ಗ್ರಾಮಾಂತರ ಭಾರತ ಹೈನೋದ್ಯಮದ ಮೂಲಕ ಹೇಗೆಲ್ಲ ಪ್ರಗತಿಯನ್ನು ಕಂಡಿತು ಎಂಬುದನ್ನು ತಿಳಿಯಬಹುದು.ಇಂತಹ ಮಹಾನ ಪ್ರಸಿದ್ದ ವ್ಯಕ್ತಿಯನ್ನು ಭಾರತ ಇಂದು ಕಳೆದುಕೊಂಡಿದೆ.  ಅವರ ಆತ್ಮಕ್ಕೆ   ಚಿರಶಾಂತಿ  ಸಿಗಲಿ.....!!!!!!!!   

0 comments:

Post a Comment

Share

Twitter Delicious Facebook Digg Stumbleupon Favorites More