ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

4 Jun 2012

ಲಾಗೊಸ್ ನಲ್ಲಿ ವಿಮಾನ ದುರಂತ ಪ್ರಯಾಣಿಕರ ಸಜೀವ ದಹನ..!!


ಲಾಗೋಸ್: ನೈಜೀರಿಯಾದ ರಾಜಧಾನಿ ಲಾಗೋಸ್ ನಗರದಿಂದ ಅಬುಜಾಗೆ ಹೊರಟಿದ್ದ ಪ್ರಯಾಣಿಕರ ವಿಮಾನವು ಭಾನುವಾರ ಮದ್ಯಾಹ್ನ 2 ಅಂತಸ್ತಿನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 153 ಪ್ರಯಾಣಿಕರು,ಕಟ್ಟಡದಲ್ಲಿರುವ ಜನರು  ಸಾವನ್ನಪ್ಪಿರಬಹುದು    ಎಂದು ಶಂಕಿಸಲಾಗಿದೆ.
`ಡಾನಾ` ಸಂಸ್ಥೆಗೆ ಸೇರಿದ ವಿಮಾನವು ಲಾಗೋಸ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಇದರಿಂದ ತಕ್ಷಣ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಆಗ ಅಲ್ಲಿ ಜನಸಂದಣಿ ದಟ್ಟವಾಗಿತ್ತು ಎಂದು ತಿಳಿದುಬಂದಿದೆ.   
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನೈಜೀರಿಯಾದ ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಇದರ ಹೊರತಾಗಿ ವಿಮಾನ ಡಿಕ್ಕಿ ಹೊಡೆದ ಕಟ್ಟಡದಲ್ಲಿದ್ದ ಜನರೂ ಘಟನೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ.ದುರಂತದಲ್ಲಿ ವಿಮಾನದಲ್ಲಿಯಾ ಪ್ರಯಾಣಿಕರ ದೇಹಗಳು ಸುಟ್ಟು ಕರಕಲಾಗಿದ್ದು ಗುರುತು ಪತ್ತೆಯಾಗುತ್ತಿಲ್ಲ ಆದ್ದರಿಂದ ಶವಗಳನ್ನು ಗುರುತಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಮೃತರ ಸಂಖ್ಯೆ 153ನ್ನು ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೂ ಘಟನೆಯಲ್ಲಿ ಮೃತಪಟ್ಟವರ ನಿಖರವಾದ ಸಂಖ್ಯೆ ಲಭ್ಯವಾಗಿಲ್ಲ. ಬದುಕುಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ನೈಜೀರಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಲಾಗೋಸ್‌ನಿಂದ ವಿಮಾನ ಹೊರಟಿದ್ದ ವೇಳೆ ಆಗಸ ಸ್ವಚ್ಛಂದವಾಗಿತ್ತು. ಹೀಗಾಗಿ ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಆದರೆ ವಿಮಾನ ಹಠಾತ್ತನೆ ಪತನಕ್ಕೀಡಾದುದಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನ ತಂಡೋಪ ತಂಡವಾಗಿ ತಂಡವಾಗಿ ಜನರು ಬರುತ್ತಿದ್ದು ಯಮರಾಯನ ಅಟ್ಟಹಾಸಕ್ಕೆ ಮರುಕಪಡುತ್ತಿದ್ದಾರೆ.ಇದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ.ಘಟನೆ ನಡೆದಾಗ ಅಲ್ಲಿಯೇ ಇದ್ದ ಪ್ರತ್ಯಕ್ಹ್ಸದರ್ಸಿ ಗಿಫ್ಟ್ ಒನಿಬೋ :ನಾನು ಅಲ್ಲಿ ವಿಮಾನ ಹಾರಡುತ್ತಿದುದನ್ನ ನೋಡುತ್ತಿದ್ದೆ ಆಗೆ ಒಮ್ಮಿಂದೊಮ್ಮೆಲೆ ವಿಮಾನ ಕೆಳಗೆ ಬಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿತ್ತು"ಎಂದಿದ್ದಾರೆ.ಲಾಗೊಸ್   ನಗರದಲ್ಲಿ  ಸುಮಾರು 15 ಮಿಲಿಯನ್  ಜನಸಂಖ್ಯೆ ವಾಸಿಸುತ್ತಿದ್ದಾರೆ. 

30 May 2012

ಮಾವಿನ ಹಣ್ಣು ಆಹಾ!!

ಮಾವು "ಹಣ್ಣುಗಳ ರಾಜ" ನೆಂದೇ ಹೆಸರುವಾಸಿಯಾದ  ಮಾವು ಅಂದ್ರೆ ಯಾರಿಗೆ ಇಷ್ಟವಾಗೋಲ್ಲ ?ನಿಮಗೂ ಬಾಯಿಯಲ್ಲಿ ನೀರು ಬರತ್ತೆ ಅಲ್ವ! ಹಾಗಿದ್ರೆ ಮೊದ್ಲು ಮಾರ್ಕೆಟಿಗೆ ಹೋಗಿ ಮಾವಿನಹಣ್ಣ ಖರೀದಿ ಮಾಡಿ ತಡವಾದರೆ ಸಿಗೋಲ್ಲ ಸಿಸನ ಮುಗದು ಹೋಗತ್ತೆ ಬೇಗ ಬೇಗ !! ಬರಿ ಹಣ್ಣ ತಂದು ತಿಂದರೆ ಹೇಗೆ ಅದ್ರ ಬಗ್ಗೆ ತಿಳ್ದಕೋಳೋದ ಬೇಡವಾ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಹೇಗೆಲ್ಲ ಎಷ್ತೆಷ್ಟ ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ತಿಳ್ಕೊಳ್ಳಬೇಕಾ?ಹಾಗಿದ್ರೆ ಮುಂದೆ ನೋಡಿ  ಮಾವಿನಹಣ್ಣು ಮಕ್ಕಳು ,ವಯ್ಯಸ್ಸಾದವರು,ಗರ್ಭಿಣಿಯರು ,ಬಾಣಂತಿಯರು ಎಲ್ಲರೂ ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ ಸಿಹಿಯಾಗಿ ರುಚಿಕರವಾಗಿದೆ ಎಂದು ಅತಿಯಾಗಿ ತಿಂದರೆ  ವಾಂತಿ ಬೇಧಿ ಅತಿಸಾರ ಆಗುವ ಸಂಭವ ಹೆಚ್ಚು ಏಕೆಂದರೆ ಈ ಮಾವಿನ ಹಣ್ಣಲ್ಲಿ ಪೈಬರ ಅಂಶ ಹೆಚ್ಚಿರುತ್ತೆ,ಅಲ್ಲದೇ ಇದರಲ್ಲಿ ಕಾರ್ಬೋಹೈಡರೆಟ,ಕ್ಯಾಲ್ಸಿಯಂ ,ವಿಟಮಿನ ಹೇರಳ ಪ್ರಮಾಣದಲ್ಲಿರುವದರಿಂದ ಆರೋಗ್ಯಕ್ಕೆ ಅತೀ ಉತ್ತಮವಾದದ್ದು  ದಿನ ನಿತ್ಯದ ಒತ್ತಡ ಕೆಲಸದಿಂದ ಅತಿಯಾಯದ ಆಯಾಸ  ನಿವಾರಿಸಲು ದಿನನಿತ್ಯ 1 ಮಾವಿನ ಹಣ್ಣನ್ನು ತಿನ್ನಬೇಕು ಇದರಿಂದ ಯಾವಾಗಲು ದೇಹ ಹಾಗೂ ಮನಸು ಉಲ್ಲಾಸದಿಂದ ಇರುವದು ಹಣ್ಣು ಇರದಿದ್ದರೆ ಮಾವಿನ ರಸವನ್ನಾದರೂ ಕುಡಿದರೆ ದೇಹ ಚೈತನ್ಯದಾಯಕವಾಗುವದು .ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದು ಹೆಚ್ಚು ಉಷ್ಣಾಂಶವಿರುತ್ತದೆ. ಈ ಹಸಿ ಮಾವಿನಕಾ ಯಿಂದ ಗುಳಂ ತಯಾರಿಸಿ ಚಪಾತಿಯೊಂದಿಗೆ ತಿಂದರೆ ರುಚಿಕರವಾಗಿರುತ್ತದೆ  ಅಲ್ಲದೇ ವಿವಿಧ ರೀತಿಯ ಉಪ್ಪಿನ ಕಾಯಿಯನ್ನು ಮಾಡಬಹುದು ಗರ್ಬಿಣಿಯಾರಿಗೆ ಬಯಕೆಗೆ  ಹುಳಿಮಾವು ಹೆಚ್ಚು ರಾಮಬಾಣವಿದ್ದಂತೆ.ಹೀಗೆ ತಿನ್ನಲು ಬೇಕಾಗುವ ಮಾವು ಉಪಯುಕ್ತವಾಗಿದೆ.
ಮಾವಿನ ಹಣ್ಣಿನ ವಿಧಗಳು :ರಸಪುರಿ,ಮಲಗೋಬ,ತೋತಾಪುರಿ,ನೀಲಂ ,ಅಲ್ಫನ್ಸೋ 
                      ಮಾವಿನ ಹಣ್ಣನ್ನು ತಿನ್ನುವದರಿಂದಾಗುವ ಉಪಯೋಗಗಳು :
ಒಣಗಿದ ಮಾವಿನಕಾಯಿಯೊಂದಿಗೆ ಜೇನು ತುಪ್ಪ ಬೆರೆಸಿ ತಿನ್ನುವದರಿಂದ ಮಧುಮೇಹ,ಪಿತ್ತಕೋಶದ ತೊಂದರೆ ನಿವಾರಣೆಯಾಗುವದು 
ಮಕ್ಕಳ  ತೂಕಹೆಚ್ಹಿ ಲವಲವಿಕೆಯಿಂದರಬಹುದು.
ದಿನನಿತ್ಯ  ತಿನ್ನುವದರಿಂದ ದೇಹ ಶಕ್ತಿಯುತವಾಗಿ ಉಲ್ಲಾಸದಿಂದ ಇರಬಹುದು.
ವಿಟಮಿನ  ಸಿ,ಕೆ,ಇ,ಬಿ6 ಹೇರಳ ಪ್ರಮಾಣದಲ್ಲಿ ದೊರೆಯುತ್ತದೆ.
ಕಾರ್ಬೋಹೈಡರೆಟ ಅಂಶ ಹೆಚ್ಚಿರುವದರಿಂದ ಸ್ತನ ಕ್ಯಾನ್ಸೆರ,ಹೃದಯದ ತೊಂದೆರೆ ನಿವಾರಣೆಯಾಗುವದು.
           ಮಾವಿನ  ಹಣ್ಣನ್ನು ಅತೀ ಹೆಚ್ಚು ತಿನ್ನುವದರಿದಾಗುವ ತೊಂದರೆಗಳು :
ಅತಿಯಾದರೆ  ಬೇಧಿ ಹೊಟ್ಟೆ ನೋವು ಬರುವ ಸಾದ್ಯತೆ ಹೆಚ್ಚು.
ಚಿಕ್ಕ ಮಕ್ಕಳಿಗೆ ಅತಿಯಾಗಿ ತಿನ್ನಿಸುವದು ಸೂಕ್ತವಲ್ಲ.
ಗರ್ಭಿಣಿಯರು ಹೆಚ್ಚಾಗಿ ತಿಂದರೆ ತೊಂದರೆಯಗುವದು 
ಅಜಿರ್ಣವಾದಾಗ ತಿನ್ನಕೂಡದು ಅಪಾಯ.ಮಿತವಿದ್ದರೆ ಸೂಕ್ತ.
ಕಿಡ್ನಿ   ತೊಂದರೆ ಇದ್ದವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಸಕ್ಕರೆ ಕಾಯಿಲೆಗೆ ಕಡಿಮೆ ಉಪಯೋಗಿಸಬೇಕು. 
 ಅಷ್ಟೇ ಅಲ್ಲ  ಮಾವು  ಆಯುರ್ವೇದ ಔಷಧಿಯಲ್ಲಿಯೂ ಉಪಯುಕ್ತವಾಗಿದೆ ಇದು ಸರ್ವರೋಗಕ್ಕು ಸಂಜೀವಿನಿ ವಿಟಮಿನ್,ಹಾಗೂ ಕಣ್ಣಿನ ತೊಂದರೆ ಇರುವವರಿಗೆ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ ,ಅಂಧತ್ವ ನಿವಾರಣೆಗೆ ಉಪಯುಕ್ತ ಓದುವ ಮಕ್ಕಳಿಗೆ ದಿವ್ಯೊಷಧ.ಆದರೆ ಮಿತವಾಗಿ ತಿಂದರೆ ಉತ್ತಮ.ಹಾಗೆ ತಿಂದು ಆರೋಗ್ಯವಂತರಾಗಿರಿ. 

5 Apr 2012

ಅಬ್ಬಾ!!ಬೆಂಗಳೂರಿಗಿಗ ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಹಣೆಪಟ್ಟಿ !!

ಏರುತಿದೆ ಏರುತಿದೆ ಉದ್ಯಾನ ನಗರಿ!! 
ಬೆಂಗಳೂರಿನ ಬೆಲೆ ಗರಿಗೆದರುತಿದೆ !
ಯಾರು ಬಲ್ಲರು? ಈ ಬೆಂಗಳೂರಿನ 
ಬೆಲೆಯ ಮಹಿಮೆಯ ಗಗನಕೆರುತಿದೆ!
ದುಬಾರಿ ಸಿಟಯ ಜನಸಾಮಾನ್ಯರ 
ಪಾಡೇನು ಆ ಪರಮಾತ್ಮನೇ ಬಲ್ಲನು!! 

ಭಾರತದಲ್ಲಿಯೇ ಸಿಲಿಕಾನ ಸಿಟಿ ಬೆಂಗಳೂರು ಅತೀ ಮುಂದುವರೆದ ನಗರವೆಂದು ಹೆಸರುವಾಸಿಯಾಗಿದೆ ಹಾಗೆಯೇ ಈಗ ಭಾರತದ ನಗರಗಳಲ್ಲಿಯೇ ಅತೀ ದುಬಾರಿ ನಗರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡು  ಅಗ್ರಸ್ಥಾನದಲ್ಲಿದೆ.
   
ಇತ್ತೀಚಿಗೆ ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ  ಯಾವ ಯಾವ ನಗರಗಳಲ್ಲಿ ದಿನನಿತ್ಯದ ಪದಾರ್ಥಗಳು ದುಬಾರಿಯಾಗಿವೆ ಯಾವ ಯಾವ ನಗರಗಳು ಅಗ್ಗ ಎಂದು ಪರಿಶೀಲಿಸಿದಾಗ  ಈ ವರದಿ ಬೆಳಕಿಗೆ
 ಬಂದಿದೆ.ಈ ವರದಿಯಿಂದ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಬಿರುದಿಗೆ ವಿರಾಜಮಾನವಾಗಿದೆ.ಹಾಗೆಯೇ ಕೆಂಪುಕೋಟೆ ದೆಹಲಿ ಕಡೆಯ ಸ್ಥಾನದಲ್ಲಿದೆ.ಇದಕ್ಕೆಮುಖ್ಯ ಕಾರಣ ಬೆಂಗಳೂರಿನಲ್ಲಿ  ಐ ಟಿ ಕಂಪನಿಗಳ ಉದ್ಯೋಗಿಗಳ ಹಚ್ಚಿನ ವೇತನ ಐಶಾರಾಮಿ ಜೀವನ.ಹಾಗೂ ಜನರು ವಿನೂತನ ಶೈಲಿಯ ಉಡುಗೆ ತೊಡುಗೆಗಳಿಗೆ ಮಾರುಹೊಗುತ್ತಿರುವದು ಅದರಲ್ಲೂ ಕಾಯಿಪಲ್ಯ,ಉಡುಪಗಳು,ದಿನನಿತ್ಯದ ಸಾಮಾನುಗಳು ಬೆಲೆ ಗಗನಕ್ಕೆರಿದರೆ ಮನೆ ಬಾಡಿಗೆಗಳು ಬೆಂಗಳೂರಿನಲ್ಲಿ ಮುಗಿಲುಮುಟ್ಟಿವೆ ಇಲ್ಲಿಯ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಭರ್ಜರಿ ಹಣ ಗಳಿಸಿ ಲಕ್ಷದಿಪತಿಗಳಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು .ಅಷ್ಟೇ ಅಲ್ಲ ಇಲ್ಲಿಯ ಶಿಕ್ಷಣ,ಹೈಟೆಕ್ ಹೋಟೆಲ್ , ಆಸ್ಪತ್ರೆ ಖರ್ಚುಗಳು ಕರೆಂಟಬಿಲ್ ಎಲ್ ಪಿ ಜಿ ಗ್ಯಾಸ್ ಎಲ್ಲವು ಕೈಗೆಟುಕದಂತೆ ತುಟ್ಟಿಯಾಗುತ್ತುತ್ತಿದೆ ಇಷ್ಟೆಲ್ಲಾ ದುಬಾರಿಯಾಗಿರುವಾಗ ಬೆಂಗಳೂರು ದುಬಾರಿ ನಗರ ವೆಂಬ ಹಣೆಪಟ್ಟಿ ಅಂಟಿಸಿ  ಕೊಳ್ಳದಿದ್ದರೆ ಹೇಗೆ ? ಹೀಗೆ ಮುಂದುವರಿದಲ್ಲಿ ಬಡಜನರ,ಸಾಮಾನ್ಯರ ಪರಿಸ್ತಿತಿ ಕಷ್ಟವಾಗುವದು. ದುಡ್ಡಿದ್ದವರಿಗೆ ಮಾತ್ರ ಬೆಂಗಳೂರು ಎಂಬಂತಾಗಿದೆ ಒಟ್ಟಿನಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಯಗುವದು ಬಡವರ ಉದ್ಧಾರ ಹೇಗೆ ತಾನೆ ಆದೀತು? ಕೊಳೆಗೇರಿ ನಿವಾಸಿಗಳು ,ಹಿಂದುಳಿದ ಅನಕ್ಷರಸ್ತರ ಪಾಡೇನು?ಹೊಟ್ಟೆಗಿಲ್ಲದೆ ಸಾಯಬೇಕೆ?ಇಂತಹ ವಾತಾವರಣದಲ್ಲಿ ಬದುಕು ಕಷ್ಟಕರ...ದುಬಾರಿ ಲೋಕದಲ್ಲಿ ಬಾಳು ಬದುಕೆಂಬ ದೋಣಿಯಲ್ಲಿ  ಸಾಗುವದು ಬಲು ಕಷ್ಟ....!!  
  
 :  ಭಾರತದ ಪ್ರತಿ ನಗರಗಳಲ್ಲಿ ಎಲ್ ಪಿ ಜಿ 14.5 ಕೆ.ಜಿ ಸಿಲಿಂಡರ್ ನ ಬೆಲೆ ಈ ಕೆಳಗಿನಂತಿವೆ:
  • ಬೆಂಗಳೂರು -415
  • ಕೋಲ್ಕತ್ತಾ  -405
  • ಮುಂಬೈ   -402 
  • ದೆಹಲಿ    - 399 
  • ಚೆನೈ    - 393             

21 Mar 2012

ಅಳುವಿನಂಚಿ ನಲ್ಲಿರುವ ಗುಬ್ಬಚ್ಚಿಗಳನ್ನೂ ಕಾಪಾಡಿ !!

ತಂಪಾದ ಗಾಳಿಯಲ್ಲಿ ಹಸಿರು ಸಿರಿಯಲಿ!!
ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!          
ಕೇಳಲು  ನೋಡಲು ಮನಸ್ಸಿಗೆ ಆನಂದ!
ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !!

ಇಂದಿನ ಅಧುನಿಕ ಅಭಿವೃದ್ದಿಯ ಭರಾಟೆಯಲ್ಲಿ ಚಿಲಿಪಿಲಿ ಹಕ್ಕಿಗಳ ಮಧುರ ದ್ವನಿ ಮಾಯವಾಗುತ್ತಿದೆ ಮಾನವ ಸಾಧನೆಯಾ ಮುಗಿಲು ಮುಟ್ಟಲು ಗುಬ್ಬಿಗಳ ವಿನಾಶಕ್ಕೆ ಕಾರಣನಾಗುತ್ತಿದ್ದು ವಿಶಾದನಿಯ ಸಂಗತಿ.ಅಳಿವಿನಂಚಿನಲ್ಲಿ ರುವ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ನೋಡುವ ಪುಟ್ಟ ಗುಬ್ಬಿಗಳ ನೋವಿನ ಕಥೆ ಕೇಳುವವರಿಲ್ಲ.ಗುಬ್ಬಿಗಳ ಪಾಡು ಹೇಳತೀರದು.ಹೆಚ್ಚುತ್ತಿರುವ ಮಾನವರ ವಿಚಾರಧಾರೆ ತಾಂತ್ರಿಕ ತರಂಗಾಂತರ ಅಲೆಗಳ ಹೊಡೆತಕ್ಕೆ ಸಿಲುಕಿ ಗುಬ್ಬಿಗಳು ಅಸುನೀಗಿ ಅವುಗಳ ಸಂತತಿ ಅಳುವಿನಂಚಿಗೆ ತಲುಪಿದೆ.ಹಿಂದೆಲ್ಲ ತಾಯಂದಿರು  ಅಳುವ ಪುಟ್ಟ ಮಕ್ಕಳಿಗೆ ಚಿಲಿಪಿಲಿ ಸದ್ದು ಮಾಡುವ ಗುಬ್ಬಚಿಗಳನ್ನು ತೋರಿಸಿ ಸಮಾಧಾನಪಡಿಸುತ್ತಿದ್ದರು.ಆದರೆ ಮುಂದಿನ ಯುವ ಪೀಳಿಗೆಗೆ ಗುಬ್ಬಿಗಳು ನೋಡಲು ಸಿಗುವದು ಸಂಶಯಾಸ್ಪದ. ಚಿತ್ರ ಬಿಡಿಸಿ ತೋರಿಸುವ ಪರಿಸ್ಥಿತಿ ಬರಬಹುದು.ಮರ ಗಿಡ ಬಳ್ಳಿ ಗಳಲ್ಲಿ ವಾಸವಾಗಿ ಅಡಗಿ ಕುಳಿತು ಇಂಪಾದ ಸ್ವರದಿಂದ ಹೊರಡಿಸುವ ಚಿಲಿಪಿಲಿ ನಿನಾದ ಎಂತವರಿಗೂ ಮನಸ್ಸಿಗೋ ಮುದನೀಡುವದು ಈಗ ಈ ಹಕ್ಕಿಗಳಿಗೆ ನೆಲೆಯಿಲ್ಲದಂತಾಗಿದೆ ಇದಕ್ಕೆಲ್ಲ ಮನುಷ್ಯನ ಅಟ್ಟಹಾಸವೇ ಕಾರಣವಾಗಿದೆ.ಅಂದರೆ ಮುಗಿಲೆತ್ತರಕ್ಕೆ ಬೆಳೆದುನಿಂತಿರುವ ಗಿಡ ಮರ ಬಳ್ಳಿ ಗಳನ್ನೂ ಕಡಿದುರಿಳಿಸಿ ಆ ಜಾಗಗಳಲ್ಲಿ ಐಶಾರಾಮಿ ಜೀವನಕ್ಕಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಗುಬ್ಬಚಿಗಳಿಗೆ ಸೂರು ಇಲ್ಲದಂತೆ ಮಾಡುತ್ತಿದ್ದಾರೆ.ಆದರೆ ಅವುಗಳ ಸಂತತಿಯಾ ನೆನಪಿಗಾಗಿ ಉಳಿವಿಗಾಗಿ ಇಡೀ ಜಗತ್ತಿನಾದ್ಯಂತ ಪಕ್ಷಿ ಪ್ರೇಮಿಗಳು ಮೇ 21 2004 ರಿಂದ ಪ್ರತಿ ವರ್ಷ ಗುಬ್ಬಿಗಳ ದಿನವನ್ನಾಗಿ ಆಚರಿಸುತ್ತಿದ್ದಾರೆ ನೀವುಗಳು ಪಕ್ಷಿ ಪ್ರೆಮಿಗಳಿದ್ದರೆ ದಯತೋರಿ ಗುಬ್ಬಿಗಳ ಉಳಿವಿಗೆ ಸಹಕರಿಸಿ ಅವುಗಳಿಗಾಗಿ ಗಿಡಗಳನ್ನು ಬೆಳೆಸಿ ಮನೆಯ ಮುಂದೆ ಅವುಗಳ ಆಹಾರಕ್ಕಾಗಿ ಕಾಳು ಹಾಕಿ ನೀರು ತುಂಬಿಡಿ ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಪಕ್ಷಿಪ್ರೇಮಿ ಸಲಿಂ ಅಲಿಯಂತೆ ಕರುಣೆ ತೋರಿಸಿ.ಅವರಂತೆ ನೀವು ಸಹೃದಯಿಗಾಳಾಗಿ ...ಆಗ ಗುಬ್ಬಿಗಳ ಉಳುವಿಗೆ ಬೆಳಕು ನೀಡಿದಂತಾಗುತ್ತದೆ ಹಾಗೆ ಮಾಡಿದಲ್ಲಿ ನಮ್ಮ ಜೀವನವು ಸಾರ್ಥಕವಾದಂತೆ ಪುಟ್ಟ ಗುಬ್ಬಚ್ಚಿಗಳಿಗೆ ಜೀವ ಕೊಟ್ಟ ಕೈ ನಮ್ಮದಾಗುವದು.ನೀವು ಮಾಡುತ್ತಿರಲ್ಲವೇ...!!

        ನೋವುಪಡುತ್ತಿರುವ ಗುಬ್ಬಿಗಳೇ ನಿವಾಗದಿರಿ ಗಲಿಬಿಲಿ 
        ನಿಮಗೂ ಒಂದು ಯುಗವಿದೆ ನಿಮಗೂ ಖಂಡಿತಾ!
        ಬರುವದು ಒಂದು ಶುಭದಿನ ಅಳುಕದಿರಿ,ಕುಗ್ಗದಿರಿ !!
        ಗುಬ್ಬಚ್ಚಿಗಳಿರಾ ಗುಬ್ಬಚ್ಚಿ ಗೂಡಿನಲ್ಲಿ ನೋಡುತಿರಿ 
        ಸದಾ ಕದ್ದು ಮುಚ್ಚಿ ಹರುಷದಿ ಸದಾ ಆನಂದದಿ!!
        ಸ್ವಚ್ಚಂದದಾ ಹಕ್ಕಿಗಳೇ ಅಳುಕದಿರಿ ಸದಾಸಂತಸದ 
        ಕ್ಷಣ ನಿಮ್ಮದಾಗಿರಲಿ ನಿಮ್ಮಗಳ  ಉಳಿವಿಗೆ
        ಇದೋ ನನ್ನ ಪುಟ್ಟ ಅರ್ಪಣೆ ..!!         

27 Feb 2012

ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!

ಬೆಂಗಳೂರು : ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯೆಡಿಯುರಪ್ಪ ಗೆ  70  ನೆ ಹುಟ್ಟು ಹಬ್ಬದ ಸಂಭ್ರಮ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿ ಉನ್ನತ ಶಿಖರಕ್ಕೆರಿಸಿದ ಕೀರ್ತಿ ಶ್ರೀಮಾನ್  ಬಿ ಎಸ ಯೆಡಿಯುರಪ್ಪ ನವರಿಗೆ ಸಲ್ಲುತ್ತದೆ .ರಾಜಕೀಯದಲ್ಲಿ ಕಷ್ಟ ನೋವು ಗಳನ್ನೂ ಸಮನಾಗಿ ಅನುಭವಿಸಿದ ಧಿಮಂತ ರಾಜಕಾರಣಿಯಾಗಿ ಪಕ್ಷದ ,ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ ಇವರು 69 ವರ್ಷವನ್ನು ಪೂರೈಸಿ 70 ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.ಇಂದು ಹುಟ್ಟು ಹಬ್ಬವನ್ನು ಬೆಂಗಳೂರಿನ  ತೋಟದಪ್ಪ ಛತ್ರ ದಲ್ಲಿ ಬಿಜೆಪಿಯ ಸಚಿವರು,ಶಾಸಕರೂ ರಾಜಕೀಯದ ಗಣ್ಯರೊಂದಿಗೆ ಕುಟುಂಬದವರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಆಗ ಮಾತನಾಡಿದ ಯೆಡಿಯುರಪ್ಪ ಜೆಡಿಎಸ್ ನಾಯಕರು ರಾಜಕೀಯದಲ್ಲಿ ಅವರ ವಿರುದ್ದ  ಕುತಂತ್ರ ಮಾಡುತ್ತಿದ್ದಾರೆ ಆದರೆ ನಾನೇನು ಹೆದರುವದಿಲ್ಲ ನಾನು ಮತ್ತೆ ಮುಖ್ಯ ಮಂತ್ರಿಯಗುತ್ತೇನೆ ಎಂದು ಗುಡುಗಿದರು.ಈ ಸಂದರ್ಭದಲ್ಲಿ   ಕೇಕ್ ಹಿಡಿದುಕೊಂಡು  ಬಂದಿದ್ದ ಅಂಧ ಮಕ್ಕಳೊಂದಿಗೆ  ಕೇಕ್ ಕತ್ತರಿಸಿ ಅದೇ ಚಾಕುವಿನಿಂದ ಅಂಧ ಮಗುವಿಗೆ ತಿನ್ನಿಸಿದ್ದು  ಅಭಿಮಾನಿಗಳಿಗೆ ಬೇಸರತಂದಿದೆ.ಸಮಾರಂಭದಲ್ಲಿ ಸಚಿವೆ ಶೋಭಾ ಕರಂದ್ಲಂಜೆ ಮಾತನಾಡಿ ಯೆಡಿಯುರಪ್ಪನವರಿಂದ ಸಹಾಯ ಪಡೆದವರೇ ಈಗ
ವೈರಿಗಳಗಿದ್ದಾರೆ ಎಂದು ಯೆಡಿಯುರಪ್ಪ ನವರೇ ಹೇಳಿಕೊಂಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿ ಬರ್ತ್ ಡೇ ವಿಶ್ ಮಾಡಿದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದ ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಕೋರಿದರು. ಒಟ್ಟಿನಲ್ಲಿ ಸಂತಸದ ಸಂಭ್ರಮದಲ್ಲಿರುವ   'ಬರ್ತ್ ಡೇ ಬಾಯ್' ಗೆ ಹ್ಯಾಪಿ ಬರ್ತ್ ಡೇ ವಿಶಿಸ್...                           

16 Feb 2012

ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ 35 ನೇ ಹುಟ್ಟು ಹಬ್ಬದ ಸಂಭ್ರಮ..!!

ಸ್ಯಾಂಡಲ್ ವುಡನ ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ ಇಂದು 35 ನೇ ಹುಟ್ಟು ಹಬ್ಬದ ಸಂಭ್ರಮ ಎಲ್ಲೆಲ್ಲೂ ಕನ್ನಡದ  ಅಭಿಮಾನಿಗಳ ಹರ್ಷೋದ್ಗಾರ ಸಂತಸ ತುಂಬಿತುಳುಕುತ್ತಿದೆ. ಮುಂಜಾನೆಯಿಂದಲೇ ದರ್ಶನ್ ಮನೆ ಮುಂದೆ ಹುಟ್ಟು ಹಬ್ಬದ ಶುಭಾಷಯ ಕೋರಲು ಅಭಿಮಾನಿಗಳ ಮಹಾಪುರಾವೆ ಹರಿದು ಬಂದಿದ್ದು  ದರ್ಶನ್ ಗೂ ಸಂತಸ ತಂದಿದೆ  ಅದರೊಂದಿಗೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಕನ್ನಡ ಚಿತ್ರ ರಂಗದಲ್ಲಿ ಅವರ ಸಾರಥಿ ಚಿತ್ರ ನಿರೀಕ್ಷೆಗೂ ಮಿರಿ ಭಾರಿ ಹಣ ಗಳಿಸಿದ್ದು ಈಗ ಅವರ ಮತ್ತೊಂದು ಚಿತ್ರ 'ಚಿಂಗಾರಿ' ಬಿಡುಗಡೆಗೊಂಡಿದ್ದು ಯಶಸ್ವಿಯುತವಾಗಿ ಪ್ರದರ್ಶನಗೊಳ್ಳುತ್ತಿದೆ.ಅಲ್ಲದೆ  ಅವರು ಮಾದ್ಯಮದವರೊಂದಿಗೆ ಮಾತನಾಡಿ ಈಗ ನನ್ನ ಪತ್ನಿಯೊಂದಿಗೆ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ತಮ್ಮ ಯಶಸ್ಸಿಗೆ ತಾಯಿಯೇ ಪ್ರೇರಣೆ ಎಂದರು  ಅಷ್ಟೇ ಅಲ್ಲ ಅವರ ಪತ್ನಿ ವಿಜಯಲಕ್ಷ್ಮಿದರ್ಶನ್ ಅವರ ಬರ್ತ್ ಡೇ ಗೆ 'ಜಾಗ್ವಾರ್' ಕಾರ್ ನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.ಅವರ ತಾಯಿ  ಕೂಡ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಹಾಗೆ ಇನ್ನು ಅವರಿಗೇ ಚಿತ್ರ ರಂಗದಲ್ಲಿ ಹೆಚ್ಹು ಹೆಚ್ಹು ಅವಕಾಶಗಳು ದೊರೆಯಲಿ ಎಂಬುದು ಕನ್ನಡಿಗರ ಆಶಯ.ಏನೇ ಅಗಲಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿರುವ ದರ್ಶನಗೆ ಮತ್ತೊಮ್ಮೆ  ಹುಟ್ಟು ಹಬ್ಬದ ಶುಭಾಶಯಗಳು..!ಒಟ್ಟಿನಲ್ಲಿ ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ನೀಡಿ ಕಾಪಾಡಲಿ ಎಂಬುದು ಅಭಿಮಾನಿಗಳ ಶುಭ ಹಾರೈಕೆ..!              

14 Feb 2012

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್ ಆಚಾರ್ಯ ವಿಧಿವಶ..!!

ಬೆಂಗಳೂರ:ಕರ್ನಾಟಕದ ಉನ್ನತ ಶಿಕ್ಷಣ ಸಚಿವ ವಿ.ಎಸ್ ಆಚಾರ್ಯರವರು ಇಂದು ಮುಂಜಾನೆ ಬೆಂಗಳೂರಿನ ಸರ್ಕಾರಿ  ನೃಪತುಂಗಾ ಕಾಲೇಜಿನ ವಿಚಾರ ಸಂಕೀರ್ಣ ಕಾರ್ಯಕ್ರಮವೊಂದರಲ್ಲಿ ವೇದಿಕೆ ಏರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಪ್ರಜ್ಞಾಹಿನರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ ಹಾಗು 4 ಪುತ್ರರು 1 ಪುತ್ರಿಯನ್ನು ಅಗಲಿದ್ದಾರೆ.ಇವರು 1940 ರಲ್ಲಿ ಉಡುಪಿಯಲ್ಲಿ ಜನಿಸಿ 1968 ರಲ್ಲಿ ಮೊದಲು ರಾಜಕೀಯ ಪ್ರವೇಶಿಸಿದ್ದರು.ನಂತರ 1983 ರಲ್ಲಿ ಉಡುಪಿಯ ಶಾಸಕರಾಗಿದ್ದರು 1996 ರಲ್ಲಿ ವಿಧಾನ ಪರಿಷತ ಅದ್ಯಕ್ಷರಾಗಿ,2006 ರಲ್ಲಿ ಗ್ರಹಸಚಿವರಾಗಿ,2010 ರಿಂದ  ಉನ್ನತಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರು ಸಚಿವರಾಗಿ 6 ವರ್ಷ ಕಾರ್ಯ ನಿರ್ವಹಿಸಿದ್ದಾರೆ.ಎಂ ಬಿ ಬಿ ಎಸ್ ಪದವಿ ಪಡೆದು ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಪ್ರಾಮಾಣಿಕ,ನಿಷ್ಟಾವಂತ ಧಿಮಂತ ರಾಜಕಾರಣಿಯಾಗಿ ಕಾರ್ಯನಿರ್ವಹಿಸಿದ್ದರು.ಕರ್ನಾಟಕದ ಮುಖ್ಯ ಮಂತ್ರಿ ಸದಾನಂದಗೌಡ ಮಾತನಾಡಿ ಸದಾ ರಾಜ್ಯದ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಿದ್ದ ಅಪರೂಪದ ನಿಷ್ಟಾವಂತ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು ಹಾಗು ಬಿ ಜೆ ಪಿ ಯ ಎಲ್ಲ ಶಾಸಕರು ,ರಾಜಕೀಯ ಗಣ್ಯರು ಅಂತಿಮ ನಮನ  ಸಲ್ಲಿಸಿ ಸಂತಾಪ ಸೂಚಿಸಿದರು.ಇಂದು ಅವರ ಅಂತ್ಯ ಸಂಸ್ಕಾರ ಉಡುಪಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ   ನೆರವೇರಲಿದೆ.ನಮ್ಮನೆಲ್ಲ  ಅಗಲಿದ ಡಾ.ವಿ .ಎಸ್ .ಆಚರ್ಯರವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ..!!             

10 Feb 2012

ಪಾಲಾಕ ಪಕೋಡ..!!

ಪಾಲಾಕ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು :

  • ಕಡಲೆಹಿಟ್ಟು
  • ಮೈದಾಹಿಟ್ಟು
  • ಚಿರೋಟಿ ರವೆ
  • ಕತ್ತರಿಸಿದ ಈರುಳ್ಳಿ
  • ಹಿಡಿ ಪಾಲಾಕ ಸೊಪ್ಪು
  • ಪುದಿನಾ ಸೊಪ್ಪು
  • ಸ್ವಲ್ಪ ತುಪ್ಪ
  • ಅಚ್ಚಖಾರದಪುಡಿ
  • ಗರಂ ಮಸಾಲೆ
  • ರುಚಿಗೆ ಉಪ್ಪು
  • ಕರಿಯಲು ಎಣ್ಣೆ
  • ಸೋಡಾ
  • ಕೊತಂಬರಿ ಸೊಪ್ಪು
  • ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಟಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!

Share

Twitter Delicious Facebook Digg Stumbleupon Favorites More