ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

4 Dec 2011

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.ಬಾರಿ ಅಬ್ಬರದ ಪ್ರಚಾರದಿಂದ ಆಡಳಿತದ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ಹ್ವಿಯಗಿದ್ದಾರೆ.ಈ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಮತ್ತು ಕಾಂಗ್ರೆಸ್ಸ್ ಗೆ ಬಾರಿ ಮುಖಭಂಗವಾಗಿದೆ.ಶ್ರೀರಾಮುಲುಗೆ ಬಂದ ಒಟ್ಟು ಮತಗಳು 74,527 ಬಿಜೆಪಿಗೆ 17366 ಕಾಂಗ್ರೆಸ್ಸ್ ಗೆ 27,737 ಮತಗಳು ಶ್ರೀರಾಮುಲು ಒಟ್ಟು 46790 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ ಹಾಗೆ ಬಿಜೆಪಿ ಅಭ್ಯರ್ತಿ ಕಡಿಮೇ ಮತದಿಂದಾಗಿ ಡಿಫ್ಯಾಜಿಟ್ಟನ್ನು ಕಳೆದುಕೊಂಡಿದ್ದಾರೆ.ಸಂಭ್ರಮದ ನಡುವೆ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು "ಇದು ನನ್ನ ಗೆಲುವಲ್ಲ ನನ್ನ ಅಭಿಮಾನಿ ಜನರ ಗೆಲುವು " ಎಂದರು.ಒಟ್ಟಾರೆ ಗಡಿನಾಡಲ್ಲಿ ಸ್ವಾಭಿಮಾನಿ ಶ್ರೀರಮುಲೂ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದೆ.ಶ್ರೀರಮುಲೂಗೆ ಜಯವಾಗಲಿ..

2 Dec 2011

ಮಗಧಿರನ "ಮೆಗಾ'ಎಂಗೇಜ್ಮೆಂಟ್

ಹೈದ್ರಬಾದ:ನಿನ್ನೆಮುತ್ತಿನನಗರಿ ಹೈದ್ರಬಾದನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಪುತ್ರ ರಾಮಚರಣ್ ತೇಜಅವರಎಂಗೇಜ್ಮೆಂಟ್
ಬಹಳ ವಿಜೃಂಭಣೆಯಿಂದ ನೆರವೇರಿತು.ರಾಮಚರಣ್ ರ ಬಾಲ್ಯದ ಗೆಳತಿ ಉಪಾಸನಾಳೊಂದಿಗೆ ಗಾಂಧೀಪೆಟ್ ಬಳಿ ಇರುವ ಫ್ಹಾರ್ಮ್ ಹೌಸನಲ್ಲಿ ಅದ್ದೂರಿಎಂಗೇಜ್ಮೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತರವಾಗಿ ನೆರವೇರಿತು ಎಲ್ಲ ಕಡೆ ಮಂತ್ರಗೋಷಗಳು ಮೊಳಗಿದವು. ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ನ ನಟ-ನಟಿಯರು ಆಗಮಿಸಿದ್ದರು.ಅಲ್ಲದೆ ಮಗಧಿರ್ ಚಿತ್ರ ನಿರ್ದೇಶಕ ರಾಜಮೌಳಿ,ನಟಿ ಜಯಪ್ರದಾ ಹಾಗೂ ರಾಜಕೀಯದ ಎಲ್ಲ ಗಣ್ಯರು,ಆಂದ್ರಪ್ರದೇಶದ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಕೂಡ ಸಮಾರಂಭಕ್ಕೆ ಉಪಸ್ತಿತರಿದ್ದರು.ಸಮಾರಂಭಕ್ಕೆದೇಶ-ವಿದೇಶದ ಹೂಗಳನ್ನು ತಂದು ಸ್ಟೆಜನ್ನುಅಲಂಕರಿಸಲಾಗಿತ್ತು.ನಟ ನಾಗಾರ್ಜುನ ಹಾಗೂ ನಿರ್ದೇಶಕರು,ಜು,ಏನ್ ಟಿ ಆರ್ ಶ್ರೇಯಾ,ದ್ಯಾನರು ಆಗಮಿಸಿ ಶುಭಕೋರಿದರು ರಾಮಚರಣ್ ತೇಜ್1.5 ಲಕ್ಷದ ಶೇರ್ವಾನಿ ತೊಟ್ಟು ಕಂಗೋಗೋಳಿಸಿದರು.ಎಲ್ಲರ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡು ಗುರು ಹಿರಿಯರಿಂದ ಆಶಿರ್ವಾದ ಪಡೆದುಕೊಂಡರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನ್ರತ್ಯಪ್ರದರ್ಶನಗಳು ನೆರವೇರಿದವು.ಅಲ್ಲದೆ 200 ಬಗೆಯ ಸಸ್ಯಾಹಾರಿಯ ಹಾಗೂ ಮಾಂಸಾಹಾರಿಯಾ ತಿಂಡಿಗಳನ್ನೂ ಭೋಜನಕ್ಕೆ ತಯಾರಿಸಲಾಗಿತ್ತು ಬಂದಂತಹ ಗಣ್ಯರು ಉಡುಗೊರೆ ಕೊಟ್ಟುಶುಭಕೋರಿದರು.ಒಟ್ಟು ಕಾರ್ಯಕ್ರಮಕ್ಕೆ10 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಮಗಧಿರನಿಗೆ ಶುಭವಾಗಲಿ..

1 Dec 2011

ಕನಿಮೋಳಿಗೆ ಜಾಮೀನು ..!



ನವದೆಹಲಿ :ಇಲ್ಲಿಯವರೆಗೆ 193 ದಿನದ ನಂತರ ದೇಶದ ಅತೀ ದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ದ ಆರೋಪಿ ಕನಿಮೋಳಿ ಜಾಮೀನು ಪಡೆದು ತಿಹಾರ ಜೈಲಿನಿಂದ ಬಹಳ ಶಾಂತ ರೀತಿಯಿಂದ ಹೊರಬಂದು ಮಾದ್ಯಮಗಳಿಗೆ ಮುಖ ತೋರಿಸಿದೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.ಕರುಣಾನಿಧಿಯ ಕಡೆಯ ಜನ ಕನಿಮೋಳಿಯ ಮನೆಯಲ್ಲಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡು ಸ್ವಾಗತಕ್ಕಾಗಿ ತರಾತುರಿಯಲ್ಲಿದ್ದರು.ಡಿಎಂಕೆ ಸಂಸದೆ ಕನಿಮೋಳಿ ೨ಜಿ ಬಹುಕೋಟಿ ಹಗರಣದಿಂದ ಮೇ 20 ರಂದು ತಿಹಾರ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು.ಈಗ ದಿಲ್ಲಿಯ ಹೈಕೋರ್ಟ ಸೋಮವಾರದಂದು ಜಾಮೀನು ನೀಡಿತು ಕನಿಮೋಳಿಯೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದ ನಾಲ್ಕು ಜನರಿಗೂ ಜಾಮೀನು ಸಿಕ್ಕಿತು.ಅವರುಗಳೆಂದರೆ ಶರದ್ ಕುಮಾರ,ಆಸಿಪ ಬಲವಾ,ಕರಿಮ ಮೊರಾನಿ(ಬಾಲಿವುಡ್ ನಿರ್ಮಾಪಕ),ರಾಜೀವ್ ಅಗರವಾಲ ಇವರುಗಳಿಗೆ ೫ ಲಕ್ಷ ರೂ.ದಂಡದೊಂದಿಗೆ ದೇಶದಿಂದ ಹೊರ ಹೋಗದಂತೆ ಆದೇಶ ನೀಡಿ ಶರತ್ತುಬದ್ದ ಜಾಮೀನು ನೀಡಿದೆ.ಈಗ ಕನಿಮೋಳಿ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.

30 Nov 2011

ಅಂತು ಇಂತೂ ಶಾಂತವಾದ ಬಳ್ಳಾರಿ ...!!!


ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ  ಮತದಾನವಾಗಿದೆ. 
ಕಣದಲ್ಲಿರುವ  ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸದ್ದಾರೆ.
ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳಿವೆ. ಬಹುತೇಕ ಕಡೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೂ ಅತಿ ಸೂಕ್ಷ್ಮ ಮತೆಗಟ್ಟೆಗಳಿಗೆ ಒದಗಿಸುವ ಭದ್ರತೆಯನ್ನೇ ಒದಗಿಸಲಾಗಿತ್ತು

ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.

ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿತ್ತು . ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.

28 Nov 2011

ಕಾರವಾರದ ನಾನ್ ವೆಜ್ ದೇವತೆ ..!



ಕಾರವಾರದ  ತಾಲೂಕಿನ ಮಾಚಾಳಿ ಗ್ರಾಮದಲ್ಲಿ   taaluki ಊರಿನಲ್ಲಿ ನಿನ್ನೆ ಮಾರಿಕಾಂಬಾ ದೇವಸ್ತಾನದಲ್ಲಿ ಜಾತ್ರೆ ಜಾತ್ರೆ ನೆರವೇರಿತು ಅನೇಕ ಭಕ್ತರು ಆಗಮಿಸಿದ್ದರು .ಅಲ್ಲಿಯ ಜನ ವಿಬಿನ್ನವಾದ ನೈವ್ಯದ್ಯವನ್ನು ದೇವಿಗೆ ಅರ್ಪಿಸುತ್ತಾರೆ.ಭಕ್ತಿಯಿಂದ ದೇವರಿಗೆ ಹರಕೆ ತಿರಿಸಲೆಂದು ಬಂದ ಭಕ್ತರು ಮೀನಿನ ಅಡಿಗೆ ಮಾಡಿ ಮತ್ತು ಮದ್ಯವನ್ನು ಭಕ್ತಿಯಿಂದ ದೇವಿ ವರ ಕೊಡುತ್ತಾಳೆಂದೂ ನೈವೇದ್ಯವನ್ನು ಅರ್ಪಿಸುತ್ತಾರಲ್ಲದೆ ಮೊದಲೇ ಮೀನು ಭಕ್ಷಕರಾದ ಜನರು ತಾವು ಕೂಡಾ ಎಲ್ಲ ಭಕ್ತರು ದೇವರ ಪ್ರಸಾದವೆಂದು ಭರ್ಜರಿಯಾಗಿ ಮಸ್ತ್ ಮೀನಿನ ಊಟ ಮಾಡಿ ನೀರಿನಂತೆ ಮದ್ಯವನ್ನು ಕುಡಿಯುತ್ತಾರೆ.ಅಲ್ಲಿಯ ಭಕ್ತರು ಮದ್ಯ ಕುಡಿಯುವದರಿಂದ ಜೋಶ ಬರುವದಲ್ಲದೆ ದೇವತೆ ಆಶಿರ್ವಾದ ಮಾಡಿ ವರ ಕೊಡುತ್ತಾಳೆ ಹಾಗು ಯಾವದೇ ತೊಂದರೆಗಳು ಬರುವದಿಲ್ಲ ಎಂದು ಹೇಳುತ್ತಾರೆ. ಮುಧನಂಬಿಕೆಯಿಂದ,ಭಾರತದಲ್ಲಿಯ ಪ್ರಾಚಿನ ಕಾಲದಿಂದಲೂ ನಡೆದು ಬಂದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳು ತಲೆಕೆಳಗಾಗುತ್ತಿವೆ. ಆದರೆ ಪ್ರತಿಯೊಂದು ಕಡೆಯಲ್ಲಾ ವಿಭಿನ್ನ ರೀತಿಯ ಹೂ,ಹಣ್ಣು ಕಾಯಿಯನ್ನು ನೀಡಿ ಉರುಳುಸೇವೆ ಮಾಡಿ ಹರಕೆ ತಿರಿಸಿ ಆಚರಣೆ ಮಾಡುತ್ತಾರೆ.ಆದರೆ ಇಲ್ಲಿ ದೇವತೆಗೆ ಅರ್ಪಿಸುತ್ತಿರುವದು ನಾನ್ ವೆಜ್ ನೈವೇದ್ಯ ಇದು ದೇವಿಯ ಇಷ್ಟಾರ್ಥವೋ ಜನರ ಇಷ್ಟಾರ್ಥವೋ...

27 Nov 2011

ಕ್ರಿಕೆಟಿಗ ಯುವರಾಜ ಸಿಂಗ್ ಗೆ ಕ್ಯಾನ್ಸೆರ್ ...!!!

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿಶ್ವಕಪ್ ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಗೆ ಎಡಬದಿಯ ಎದೆಯಲ್ಲಿ ಕ್ಯಾನ್ಸೆರ್ (ಟ್ಯೂಮೆರ) ಇದೆ ಎಂದು ಯುವರಾಜನ ತಾಯಿಯೇ ಮಾದ್ಯಮಗಳ ಮುಂದೆ ಸ್ಪಸ್ಟಪಡಿಸಿದ್ದಾರೆ ಹಾಗೆಯೇ ಅಸ್ತಮಾ ಕೂಡ ಇದೆ ಎಂದು ಹೇಳಿದ್ದಾರೆ.ಅವರ ತಾಯಿ ಹೇಳುವ ಪ್ರಕಾರ ಅವನಿಗೆ ವಿಶ್ವಕಪಗಿಂತಲೂ ಮುಂಚೆಯೇ ಈ ತೊಂದರೆ ಇತ್ತು ಆದರೆ ಈ ವಿಷಯ ನಾವು ಯಾರಿಗೂ ತಿಳಿಸಿರಲಿಲ್ಲ ಅವನುತುಂಬಾ ದೈರ್ಯವಂತ,ಶಕ್ತಿವಂತ ಹಾಗಾಗಿ ವಿಶ್ವಕಪ್ ಸರಣಿ ಪೂರ್ತಿ ಆಡಿ ಸರಣಿಶ್ರೇಸ್ಟನಾಗಿ ಬಂದಿದ್ದ ಎಂದು ತಿಳಿಸಿದ್ದಾರೆ.ಆದರೆ ರೋಗ ಅಸ್ಟೊಂದು ಗಂಭಿರವಾಗಿ ಬೆಳೆದಿಲ್ಲಾ ಅವನಿಗೆ ಬೇಗನೆ ಚಿಕಿತ್ಸೆ ನೀಡಿದ್ದೇವೆ ಇಲ್ಲದಿದ್ದರೆ ಅದು ಬಹಳ ಗಂಭಿರವಾಗಿ ಹರಡುತಿತ್ತು ಮತ್ತು ಪ್ರಾಣಕ್ಕೆ ಅಪಾಯ ಕೂಡ ಇತ್ತು ಆದರೆ ಈಗೇನೂ ಭಯವೇನೂ ಇಲ್ಲ
ಮತ್ತು ಅವನು ವೆಸ್ಟ್ಇಂಡಿಸ್ ಏಕದಿನ ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅವನ ತರೆಬೇತುದಾರ ತಿಳಿಸಿದ್ದಾರಂತೆ ಅವರ ತಾಯಿ ಮಾದ್ಯಮಗಳಿಗೆ ತಿಳಿಸಿದ್ದಾರೆ

ಯುವರಾಜ ಸಿಂಗ್ ಬೇಗ ಗುಣಮುಖರಾಗಿ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಆಡುವಂತಾಗಲಿ ಎಂದು ನಮ್ಮೆಲ್ಲರ ಆಶಯ ಹಾಗೆಯೇ ಯುವರಾಜಗೆ ಒಳ್ಳೆಯದಾಗಲಿ.

26 Nov 2011

ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ  ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..ನಾವು ಅತ್ತುತ್ತಮ ಸಾಹಿತ್ಯವನ್ನು ಬರೆದು 8 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೇವೆ.ವಿನಹ !ಗುಂಡಾಗಿರಿ ಮಾಡಿ ಪಡೆದಿಲ್ಲಾ..ಹಾ.. ನಾವು ಇಲ್ಲಿ ಮಾತಾಡ್ತಿರೋದು ಶಿವಸೇನಾ ಮುಖ್ಯಸ್ತ ಬಾಳಾಠಾಕ್ರೆ ಬಗ್ಗೆ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯದ ದಿಗ್ಗಜರಾದ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಪಡೆಯಲು ಅಹ್ರರಲ್ಲ ಅವರ ಪ್ರಶಶ್ತಿ ವಾಪಸ್ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತಾಯಿದ್ದು  ಕಟೋರ ಮಾತಿನಿಂದ ನಿಂದಿಸಿ ಅವಹೇಳನ ಮಾಡಿದ್ದು  ಸರಿಯೇ? ಇದು ಕನ್ನಡಿಗರಿಗೆ ಅವಮಾನ ...ಈ ಹಿನ್ನೆಲೆಯಲ್ಲಿ  ಬಾಳಾ ಠಾಕ್ರೆ ವಿರುದ್ಧ ಕರ್ನಾಟಕದಾದ್ಯಂತ ಭುಗಿಲೆದ್ದ ಆಕ್ರೋಶ. ಬಾಳಾ ಠಾಕ್ರೆ ಅಜ್ಜ ...ಯಾಕ್ ಸುಮ್ನೆ  'ಸಾಮ್ನಾ' ಪತ್ರಿಕೆಲಿ ಏನೇನೋ ಬರ್ದು ಉಗಿಸ್ಕೊತ್ತಿಯಾ...  ತಪ್ಪಲ್ವಾ ಇದೆಲ್ಲಾ. ಇನ್ಮುಂದೆ ಆದ್ರು ಒಳ್ಳೆಯವನಾಗು . ವಯಸ್ಸಾದ್ಮೇಲೆ ಇವೆಲ್ಲಾ ಸರಿಅಲ್ಲಾ...ಗೊತ್ತಾಯತಾ ಅಜ್ಜಾ.

24 Nov 2011

ಬಾಳೆಕಾಯಿ ಪ್ರೈಡ್ ರೈಸ್

ಬಾಳೆಕಾಯಿ ಪ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿಗಳು
  • ಅನ್ನ
  • ಎಣ್ಣೆ
  • ಸಾಸಿವೆ
  • ಜೀರಿಗೆ
  • ಗರಂಮಸಾಲೆ
  • ಉದ್ದ ಸಿಳಿದ ಕ್ಯಾಪ್ಸಿಕಂ
  • ಉದ್ದ ಸಿಳಿದ ಹಸಿಮೆಣಸಿನಕಾಯಿ
  • ಶುಂಟಿ,ಬೆಳ್ಳುಳ್ಳಿ ಪೇಸ್ಟ್
  • ಸೋಯಾಸಾಸ್
  • ರುಚಿಗೆ ಉಪ್ಪು
  • ಧನಿಯಾ
  • ಸಿಪ್ಪೆ ತೆಗೆದು ಗಾಲಿಯಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದ ಬಾಳೆಕಾಯಿ 
  • ಕುದಿಸಿದ ಬಟಾಣಿ ಕಾಳು
  • ಉದ್ದಿನಬೇಳೆ
  • ಅರಸಿಣ ಪುಡಿ
  • ಕೊತ್ತಂಬರಿ ಸೊಪ್ಪು                               
 ಮಾಡುವ ವಿಧಾನ :ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿದ ನಂತರ ಜೀರಿಗೆ ,ಸಾಸಿವೆ ,ಬೆಳ್ಳುಳ್ಳಿ,ಶುಂಟಿ,ಗರಂಮಸಾಲೆ.ಉದ್ದೀನಬೆಳೆ ಮೆಣಸಿನಕಾಯಿ ,ಕ್ಯಾಪ್ಸಿಕಂ,ಹುರಿದುರೆಡಿ ಮಾಡಿದ ಬಾಳೆಕಾಯಿ,ಬೇಕಾಗುವಸ್ಟು ಅನ್ನ,ಉಪ್ಪು ಅರಸಿಣಪುಡಿ,ಬೆಂದ ಬಟಾಣಿ ಕಾಳುಮೇಲೆ ಸೋಯಾಸಾಸ್ ಕೊತಂಬರಿ ಸೊಪ್ಪ  ಹಾಕಿ ತಿಂದರೆ ರುಚಿಯಾಗಿರತ್ತೆ .ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು ತಿಂಗಲ್ಲಿ ಎರಡು ಬಾರಿ ತಿನ್ನುವದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಹೊಟ್ಟೆಯ ತೊಂದರೆಗಳು ಮಾಯವಾಗುತ್ತವೆ ಹಾಗಾದರೆ ಮಾಡಿ  ತಿಂದು ನೋಡಿ ತಡ ಏಕೆ ?ರುಚಿಯಾಗಿ ಮಾಡಿ ತಿನ್ನತಾಯಿರಿ ಯಾವಾಗಲೂ ಆರೋಗ್ಯವಾಗಿರಿ !!!  

Share

Twitter Delicious Facebook Digg Stumbleupon Favorites More