1 Dec 2011

ಕನಿಮೋಳಿಗೆ ಜಾಮೀನು ..!



ನವದೆಹಲಿ :ಇಲ್ಲಿಯವರೆಗೆ 193 ದಿನದ ನಂತರ ದೇಶದ ಅತೀ ದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ದ ಆರೋಪಿ ಕನಿಮೋಳಿ ಜಾಮೀನು ಪಡೆದು ತಿಹಾರ ಜೈಲಿನಿಂದ ಬಹಳ ಶಾಂತ ರೀತಿಯಿಂದ ಹೊರಬಂದು ಮಾದ್ಯಮಗಳಿಗೆ ಮುಖ ತೋರಿಸಿದೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.ಕರುಣಾನಿಧಿಯ ಕಡೆಯ ಜನ ಕನಿಮೋಳಿಯ ಮನೆಯಲ್ಲಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡು ಸ್ವಾಗತಕ್ಕಾಗಿ ತರಾತುರಿಯಲ್ಲಿದ್ದರು.ಡಿಎಂಕೆ ಸಂಸದೆ ಕನಿಮೋಳಿ ೨ಜಿ ಬಹುಕೋಟಿ ಹಗರಣದಿಂದ ಮೇ 20 ರಂದು ತಿಹಾರ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು.ಈಗ ದಿಲ್ಲಿಯ ಹೈಕೋರ್ಟ ಸೋಮವಾರದಂದು ಜಾಮೀನು ನೀಡಿತು ಕನಿಮೋಳಿಯೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದ ನಾಲ್ಕು ಜನರಿಗೂ ಜಾಮೀನು ಸಿಕ್ಕಿತು.ಅವರುಗಳೆಂದರೆ ಶರದ್ ಕುಮಾರ,ಆಸಿಪ ಬಲವಾ,ಕರಿಮ ಮೊರಾನಿ(ಬಾಲಿವುಡ್ ನಿರ್ಮಾಪಕ),ರಾಜೀವ್ ಅಗರವಾಲ ಇವರುಗಳಿಗೆ ೫ ಲಕ್ಷ ರೂ.ದಂಡದೊಂದಿಗೆ ದೇಶದಿಂದ ಹೊರ ಹೋಗದಂತೆ ಆದೇಶ ನೀಡಿ ಶರತ್ತುಬದ್ದ ಜಾಮೀನು ನೀಡಿದೆ.ಈಗ ಕನಿಮೋಳಿ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.

0 comments:

Post a Comment

Share

Twitter Delicious Facebook Digg Stumbleupon Favorites More