ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು.ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ ಮತದಾನವಾಗಿದೆ.
ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.
ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿತ್ತು . ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.












ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿಶ್ವಕಪ್ ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಗೆ ಎಡಬದಿಯ ಎದೆಯಲ್ಲಿ ಕ್ಯಾನ್ಸೆರ್ (ಟ್ಯೂಮೆರ) ಇದೆ ಎಂದು ಯುವರಾಜನ ತಾಯಿಯೇ ಮಾದ್ಯಮಗಳ ಮುಂದೆ ಸ್ಪಸ್ಟಪಡಿಸಿದ್ದಾರೆ ಹಾಗೆಯೇ ಅಸ್ತಮಾ ಕೂಡ ಇದೆ ಎಂದು ಹೇಳಿದ್ದಾರೆ.ಅವರ ತಾಯಿ ಹೇಳುವ ಪ್ರಕಾರ ಅವನಿಗೆ ವಿಶ್ವಕಪಗಿಂತಲೂ ಮುಂಚೆಯೇ ಈ ತೊಂದರೆ ಇತ್ತು ಆದರೆ ಈ ವಿಷಯ ನಾವು ಯಾರಿಗೂ ತಿಳಿಸಿರಲಿಲ್ಲ ಅವನುತುಂಬಾ ದೈರ್ಯವಂತ,ಶಕ್ತಿವಂತ ಹಾಗಾಗಿ ವಿಶ್ವಕಪ್ ಸರಣಿ ಪೂರ್ತಿ ಆಡಿ ಸರಣಿಶ್ರೇಸ್ಟನಾಗಿ ಬಂದಿದ್ದ ಎಂದು ತಿಳಿಸಿದ್ದಾರೆ.ಆದರೆ ರೋಗ ಅಸ್ಟೊಂದು ಗಂಭಿರವಾಗಿ ಬೆಳೆದಿಲ್ಲಾ ಅವನಿಗೆ ಬೇಗನೆ ಚಿಕಿತ್ಸೆ ನೀಡಿದ್ದೇವೆ ಇಲ್ಲದಿದ್ದರೆ ಅದು ಬಹಳ ಗಂಭಿರವಾಗಿ ಹರಡುತಿತ್ತು ಮತ್ತು ಪ್ರಾಣಕ್ಕೆ ಅಪಾಯ ಕೂಡ ಇತ್ತು ಆದರೆ ಈಗೇನೂ ಭಯವೇನೂ ಇಲ್ಲ






