22 Dec 2011

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.ಸದಾನಂದಗೌಡರಿಗೆ 123 ಮತಗಳು ಕಾಂಗ್ರೆಸ್ ನ ಗಡ್ಡದೇವರ ಮಠ ಅವರಿಗೆ 69 ಮತಗಳು ಬಂದಿವೆ.225 ಶಾಸಕರರಲ್ಲಿ 119 ಮತದಾನ 7 ಮತಗಳು ಅಸಿಂಧುವಾಗಿದ್ದು ಚುನಾವಣೆ ನಂತರ ಸಿ ಎಂ ಸುದ್ದಿಗೊಸ್ಟಿಯೊಂದಿಗೆ ಮಾತನಾಡಿ ಶಾಸಕರು ವಿವೇಚನೆಯಿಂದ ಮತ ಚಲಾಯಿಸಬೇಕ್ಕಿತ್ತು ಎಂದು ಬೇಸರವ್ಯಕ್ತಪಡಿಸಿದರು ನಂತರ ಒಂದು ವಾರದೊಳಗೆ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತನಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವದಾಗಿ ಹೇಳದ್ದಾರೆ .ಅಲ್ಲದೇ ಶಾಸಕರು,ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ ನಂತರ ನನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೆನೆಂದು ಹೇಳಿದರು. ಸದಾನಂದಗೌಡರು ಮೇಲ್ಮನೆ ಸದಸ್ಯತ್ವ ಪಡೆದ ಮೊದಲ ಸಿಎಂ ಇವರಾಗಿದ್ದಾರೆ.ನಂತರ ಎಲ್ಲ ಬಿಜೆಪಿ ಶಾಸಕರು ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಏನೇ ಅಗಲಿ ಮೊದಲೇ ನಗು ಮುಖದವರಾದ ಸದಾನಂದಗೌಡರು ಮತ್ತಷ್ಟು ಹಸನ್ಮುಖರಾಗಿ ನಗೆ ಬಿರಿ ಸದಾ ಅರಳಲಿ ಎಂದು ಶುಭ ಹಾರೈಸೋಣ ...!!

0 comments:

Post a Comment

Share

Twitter Delicious Facebook Digg Stumbleupon Favorites More