7 Dec 2011

ವಿರಾಟ್ ಕೊಹ್ಲಿಗೆ ಐಸಿಸಿ ಛೀಮಾರಿ..!

ಅಹಮದಾಬಾದನಲ್ಲಿ ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವೆ ಸೋಮವಾರ ನಡೆದ ODI ಪಂದ್ಯದಲ್ಲಿ ವಿರಾಟ್ ಹಾಗೂ ರೋಹಿತ ಶರ್ಮಾ ಬ್ಯಾಟಿಂಗ್ ಮಾಡುವಾಗ lbw ಆಗಿದ್ದು ಅಂಪಾಯರ್ ಔಟ್ ಕೊಟ್ಟಾಗ ಕೊಹ್ಲಿ ಕೋಪದಿಂದ ಅಂಪಾಯರಗೆ ಬಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರೋಶ ವ್ಯಕ್ತಪಡಿಸಿದ್ದನ್ನು ಖಂಡಿಸಿದ ಭಾರತದವರೇ ಆದ ಅಂಪಾಯರ ಸುದೀರ ಅಸನಾನಿ ಹಾಗೂ ಅವರ ಕುಟುಂಬದವರು, ಅವರ ಸ್ನೇಹಿತರಿಗೂ ಕೊಹಿಲಿಯ ಅಸಭ್ಯ ವರ್ತನೆಯಿಂದ ಮನನೊಂದು ಕೊಹಿಲಿ ಮಾಡಿದ್ದೂ ಸರಿಯಲ್ಲವೆಂದು ಬೇಸರವ್ಯಕ್ತಪ್ದಿಸಿದ್ದಾರೆ . ೨೩ ವರ್ಷದ ಕಿರಿಯ ಆಟಗಾರನಾದ ಕೊಹಿಲಿ ವರ್ತನೆ ಅಭಿಮಾನಿಗಳಿಗೂ ಬೇಸರ ತಂದಿದೆ.ಅಷ್ಟೇ ಅಲ್ಲ ಸಿಸಿ ಕ್ರಿಕೆಟ್ ಸಮಿತಿಯು ವಿರಾಟನನ್ನು ತರಾಟೆಗೆ ತೆಗೆದುಕೊಂಡಿದೆ 'ನೀನು ಮಾಡಿದ್ದು ಸರಿಯಲ್ಲವೆಂದು ಮತ್ತೆ ಇಂಥ ತಪ್ಪು ನಡೆಯಬಾರದೆಂದು ಎಚ್ಚರಿಕೆ ನೀಡಿದೆ.ವಿರಾಟ್ ತನ್ನ ತಪ್ಪಿನ ಅರಿವಾಗಿ ಸಿಸಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಅದರೂ ಉತ್ತಮ ಸ್ತಾನದಲ್ಲಿರುವ ಕ್ರಿಕೆಟಿಗ ಹೀಗೆ ಮಾಡಿದ್ದೂ ಸರಿಯೇ.. ಇಲ್ಲಿಯವರೆಗೂ ಭಾರತದ ಹಿರಿಯ ಆಟಗಾರರಾದ ಅನಿಲ್ ಕುಂಬ್ಳೆ ,ಧೋನಿ,ಸಚಿನ,ದ್ರಾವಿಡರಂತಹ ಪ್ರಭಾವಿ ಆಟಗಾರರು ಇಂಥಹ ಅಸಭ್ಯ ವರ್ತನೆಯನ್ನು ತೋರಿಸಿರಲಿಲ್ಲ ಏನೆ ಆಗಲಿ ವಿರಾಟ್ ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯ ಉತ್ತಮ ಆಟಗಾರ ಎಂದೆನಿಸಿಕೊಳ್ಳಬಹುದು.

0 comments:

Post a Comment

Share

Twitter Delicious Facebook Digg Stumbleupon Favorites More