ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

5 Jul 2016


ಬ್ರೆಡ್ ನಿಂದ ಜಾಮೂನ್ ಮಾಡಲು ಬೇಕಾಗುವ ಪದಾರ್ಥಗಳು

೧. ೧೦ ಬ್ರೆಡ್  ಪಿಸ್ಸ್
೨. ತುಪ್ಪ ೧ ೧/೨ಬಟ್ಟಲು
೩.ಹಾಲು ೧ ಬಟ್ಟಲು
೩.೫ಗೋಡಂಬಿ,೫ ಬದಾಮ್
೪. ಸಕ್ಕರೆ
೫.ಏಲಕ್ಕಿ

ಬ್ರೆಡ್  ಗುಲಾಬ್  ಜಾಮೂನ್  ಮಾಡುವ ವಿಧಾನ :

ಮೊದಲು ಜಾಮೂನ್  ಮಾಡಲು ಸಕ್ಕರೆ ಪಾಕ ತಯಾರಿಸಿಕೊಳ್ಳಬೇಕು.  ನಂತರ ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪೌಡರ್  ಮಾಡಿಕೊಳ್ಳಬೇಕು ಆಮೇಲೆ ಪೌಡರನ್ನು ಒಂದು  ಪಾತ್ರೆಗೆ  ಹಾಕಿ ಸ್ವಲ್ಪತುಪ್ಪ,ಏಲಕ್ಕಿ
ಹಾಕಿ ಒಂದು ಗ್ಲಾಸ್ ಹಾಲಿನೊಂದಿಗೆ ಜಾಮೂನಿನ  ಹದಕ್ಕೆ ಕಲಸಿಕೊಳ್ಳಬೇಕು ೧೦ ನಿಮಿಷ ನೆನೆಯಲು ಬಿಡಬೇಕು .
               ಗೋಡಂಬಿ,ಬಾದಾಮಿಯನ್ನು  ಚಿಕ್ಕದಾಗಿ ಕತ್ತರಿಸಿಕೊಂಡು ರೆಡಿ ಮಾಡಿಕೊಳ್ಳುವದು . ೧೦ ನಿಮಿಷದ ನಂತರ ಕಲಸಿದ ಬ್ರೆಡ್ ನ್ನು  ಚಿಕ್ಕ  ಚಿಕ್ಕ ಉಂಡೆಯನ್ನು ಮಾಡಿಕೊಳ್ಳಿ ಅದರ ಒಳಗಡೆ ಕತ್ತರಿಸಿ ಕೊಂಡ  ಗೋಡಂಬಿ ,ಬಾದಾಮಿಯನ್ನು ತುಂಬಿಸಿಕೊಳ್ಳಿ ನಂತರ ಬಿಸಿಯಾದ ತುಪ್ಪದಲ್ಲಿ ಉಂಡೆಯನ್ನು  ಹಾಕಿ ಕರಿದುಕೊಳ್ಳಿ ಆಮೇಲೆ ಮಾಡಿಟ್ಟುಕೊಂಡ ಸಕ್ಕರೆ ಪಾಕ್ ನಲ್ಲಿ ಹಾಕಿ ೨ಗಂಟೆ ಮುಚ್ಚಿಡಿ . ಈಗ ರುಚಿ  ರುಚಿಯಾದ ಬ್ರೆಡ್  ಗುಲಾಂ ಜಾಮೂನು  ಸವಿಯಲು ರೆಡಿ . ನಿಮಗೇನಾದ್ರು  ಇಷ್ಟ ಆದ್ರೆ ಮನೆಯಲ್ಲೇ ಬ್ರೆಡ್ ಜಾಮೂನ್ ಮಾಡಿ ಸವಿಯಿರಿ

  

25 Apr 2016

ಮತ್ತೆ  ಅನುರಾಗ ಅರಳಿತು -ಅನುಪ್ರಭಾಕರ  ೨ನೆ ವಿವಾಹ..!! 
ಬೆಂಗಳೂರು(ಏ. 25): ಕನ್ನಡದ  ಖ್ಯಾತ  ನಟಿ  ಅನುಪ್ರಭಾಕರ ಬಾಳಲ್ಲಿ  ಮತ್ತೇ  ಅನುರಾಗ  ಅರಳುತ್ತಿದೆ.  ಬೆಂಗಳೂರಿನಲ್ಲಿ  ಸ್ಯಾಂಡಲ್'​ವುಡ್ ನಟ ರಘು ಮುಖರ್ಜಿ ಹಾಗೂ ನಟಿ ಅನುಪ್ರಭಾಕರ್​ ವಿವಾಹವಾಗಲಿದ್ದಾರೆ. ಯಲಹಂಕದ ಖಾಸಗಿ ಹೋಟೆಲ್'ನಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ತೀರಾ ಖಾಸಗಿಯಾಗಿ ನಡೆಯುತ್ತಿರುವ ವಿವಾಹ ಸಮಾರಂಭದಲ್ಲಿ ಆತ್ಮೀಯರು  ಕುಟುಂಬಸ್ಥರು ಮಾತ್ರ ಹಾಜರಾಗಲಿದ್ದಾರೆ. ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಇಬ್ಬರಿಗೂ ಇದು ಮರುಮದುವೆಯಾಗಿದೆ. ಅನುಪ್ರಭಾಕರ್'ಗೆ ಇದು ಎರಡನೇ ಮದುವೆಯಾದರೆ, ರಘು ಮುಖರ್ಜಿ ಮೂರನೇ ಬಾರಿ ಮದುಮಗ ಎನಿಸಿದ್ದಾರೆ.
                 ಇತ್ತೀಚೆಗೆ  ಸಿನಿಮಾದಲ್ಲಿ  ಅಷ್ಟೊಂದು ಕಾಣದೆ ಮರೆಯಾಗಿದ್ದ  ತಾರೆ ಸ್ಯಾಂಡಲ್ ವುಡ್ ನ ಹಿರಿಯ  ನಟಿಯಾದ ಜಯಂತಿಯವರ  ಮಗ ಕೃಷ್ಣಕುಮಾರ ಅವರನ್ನು  ೨೦೦೨ರಲ್ಲಿ ವಿವಾಹವಾಗಿದ್ದರು.  ಕೌಟುಂಬಿಕ  ಕಲಹದಿಂದಾಗಿ ಪರಸ್ಪರ  ಇಬ್ಬರು ೨೦೧೪ಅಲ್ಲಿ  ವಿಚ್ಛೇದನ  ಪಡೆದುಕೊಂಡಿದ್ದರು.  ಈಗ ಅನುಪ್ರಭಾಕರ್ ಬಾಳಲ್ಲಿ  ಮತ್ತೊಬ್ಬ  ನಟನ  ಅಗಮನವಾಗಿದ್ದು ಕುಟುಂಬದವರ ಒಪ್ಪಿಗೆ  ಮೇರೆಗೆ ಇಬ್ಬರೂ ಇಂದು ವಿವಾಹವಾಗುತಿದ್ದಾರೆ. ಒಟ್ಟಿನಲ್ಲಿ  ಅನು  ಮತ್ತು ರಘು ಅಭಿಮಾನಿಗಳಿಗೆ ಸಂತಸ   ತಂದಿದೆ. ಶುಭವಾಗಲಿ..!!
 
    

14 Apr 2016


Image result for marriage ಅಂತರ್ಜಾತಿ ವಿವಾಹವಾಗುವವವರಿಗೆ  ಚೆನ್ನೈನಲ್ಲಿ ಬರಲಿದೆ ಹೆಲ್ಪ್’ಲೈನ್!!ಚೆನ್ನೈ: ಭಾರತದಲ್ಲಿ ಹೆಚ್ಚುತ್ತಿರುವ ಅಂತರ್ಜಾತಿ ಪ್ರೇಮ ಪ್ರಕರಣಗಳು  ಹದಿಹರೆಯದ ಯುವಕ ಯುವತಿಯರ ಸಾವಿನ ಪ್ರಕರಣಗಳು ಹೆಚ್ಚುತಿದ್ದು ಅದಕ್ಕಾಗಿ ಅಂತರ್ಜಾತಿ ಜೋಡಿಗಳಿಂದ ಬರುವ ದೂರುಗಳನ್ನು ವಿಚಾರಣೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕವನ್ನು ಸ್ಥಾಪಿಸಬೇಕು ಹಾಗೂ ಅವರಿಗಾಗಿ 24 ಗಂಟೆ ಹೆಲ್ಪ್ ಲೈನ್ ತೆರೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.  ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದೆ.





ಅಂತರ್ಜಾತಿ ಜೋಡಿಗಳಿಗೆ ರಕ್ಷಣೆ ಒದಗಿಸಬೇಕು ಮತ್ತು ತಾತ್ಕಾಲಿಕವಾಗಿ ಉಳಿಯಲು ಮನೆ ವ್ಯವಸ್ಥೆ ಮಾಡಬೇಕು ಎಂದು ಕೋರ್ಟ್ ಸರಕಾರಕ್ಕೆ ಮಾರ್ಗದರ್ಶನ ನೀಡಿದೆ. ಅಂತರ್ಜಾತಿ ಮದುವೆಯನ್ನು ವಿರೋಧಿಸುವ ಪೋಷಕರಿಂದ ಸರಕಾರ ಸಮ್ಮತಿ ಪಡೆಯಬೇಕು .
ಅಧ್ಯಯನದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ  81 ಕ್ಕೂ ಹೆಚ್ಚು ಮರ್ಯಾದಾ ಹತ್ಯೆಗಳು ನಡೆದಿದೆ. ಸರಕಾರಗಳು ರಾಜಕೀಯ ಲಾಭಕ್ಕಾಗಿ  ಹತ್ಯೆಗೈದ ದುಷ್ಕರ್ಮಿಗಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೇ ಮೃದು ನಿಲುವು ತಾಳಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
2014 ರಲ್ಲಿ ದಿಲೀಪ್ ಕುಮಾರ್ ಎಂಬ ಯುವಕನನ್ನು ವಿಮಲಾ ದೇವಿ ಎಂಬಾಕೆ ವಿವಾಹವಾಗಿದ್ದಳು. ಇವರಿಬ್ಬರದೂ ಅಂತರ್ಜಾತಿ ವಿವಾಹವಾದ್ದರಿಂದ ಆಕೆಯ ಪೋಷಕರು ಅವಳನ್ನು ಮರ್ಯಾದಾ ಹತ್ಯೆ ಗೈದಿದ್ದರು. ಈ ಸಾವಿನ ಬಗ್ಗೆ ಕಳಪೆ ತನಿಖೆ ನಡೆಸಿದ ಐವರು ಪೋಲಿಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಮರ್ಯಾದೆ ಹತ್ಯೆ ಎಂದರೆ ಬೇರೆ ಬೇರೆ ಜಾತಿಯ ಯುವಕ ಯುವತಿ ಪ್ರೀತಿಸಿದರೆ ಮರ್ಯಾದೆಗೆ  ಹೆದರಿ ಮನೆಯ ಕುಟುಂಬದವರು ತಮ್ಮ ಮಕ್ಕಳನ್ನೇ ಹತ್ಯೆ ಮಾಡುತಿದ್ದಾರೆ ಒಟ್ಟಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ತಗ್ಗಿಸಲು ಸಹಾಯಕವಾಗಬಹುದು. 




5 Apr 2016

Image result for rbiಸಿಹಿ ಸುದ್ದಿ  RBI ಬಡ್ಡಿ ದರ  ಕಡಿತ ;  ವಾಹನ, ಗೃಹ ಸಾಲಗಳು  ಅಗ್ಗ 
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದ್ದು, ಪರಿಣಾಮ ವಾಹನ, ಗೃಹಸಾಲ ಇನ್ನಷ್ಟು ಅಗ್ಗವಾಗಲಿದೆ.
ಮಾಸಿಕ ಹಣಕಾಸು ನೀತಿ ಪ್ರಕಟಿಸಿದ RBI ಮುಖ್ಯಸ್ಥ ರಘುರಾಮ್  ರಾಜನ್ ಇದರ  ಸಂಪೂರ್ಣ ಲಾಭವನ್ನು ಗ್ರಾಹಕರು  ಪಡೆದುಕೊಳ್ಳಲಿದ್ದಾರೆ. ಬ್ಯಾಂಕುಗಳಿಂದ ಗ್ರಾಹಕರಿಗೆ 
ಲಾಭಪಡೆದುಕೊಳ್ಳುವಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
  ಬಡವರ ಮನೆ ಮಾಡಿಕೊಳ್ಳುವ  ಆಶೆ ಈಡೇರಲಿದೆ ವಾಹನ ಖರೀದಿಗೂ ಅನುಕೂಲವಾಗಲಿದೆ   
 ಹೂಡಿಕೆ ದೃಷ್ಟಿಯಿಂದ ಆರ್​ಬಿಐ ಕಳೆದ ಜನವರಿ, ಫೆಬ್ರವರಿಯಲ್ಲಿಯೂ ರೆಪೋ ದರವನ್ನು ಕಡಿತಗೊಳಿಸಿತ್ತು. ಈಗ ರೆಪೋ ದರ ಶೇಕಡಾ 6.50ಕ್ಕೆ ನಿಗಧಿಯಗಿದ್ದು, ಐದು ವರ್ಷಗಳಿಂದೀಚೆಗಿನ ಕನಿಷ್ಠ ಎನಿಸಿಕೊಂಡಿದೆ.
ರೆಪೋ ದರವನ್ನು ಕಳೆದ ವರ್ಷ ಸಾಕಷ್ಟು ಇಳಿಕೆ ಮಾಡಿದ್ದರೂ ಬ್ಯಾಂಕ್​ಗಳು ಇದರ ಲಾಭವನ್ನು ತನ್ನ ಗ್ರಹಕರಿಗೆ ಸಿಗುವಂತೆ ಮಾಡಿರಲಿಲ್ಲ. ಇದರಿಂದ ರಘುರಾಮ್ ರಾಜನ್ ಸಹಜವಾಗಿ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಇನ್ನಷ್ಟು ಕಡಿಮೆ ಮಾಡಿರುವ ಅವರು ಬ್ಯಾಂಕ್​ಗಳ ಹತೋಟಿಯನ್ನು  ಹೇಗೆ ಹಿಡಿಯುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಏನೇ  ಆಗಲಿ ಸದಾ ಕನಸಿನಲ್ಲೇ ತೇಲಾಡುವ ಮಧ್ಯಮ ವರ್ಗದವರಿಗೆ ಪ್ರಯೋಜನಕರಿಯಾಗಲಿದ್ದು  ಚಂದೊಂದು  ಮನೆಕಟ್ಟಿ ಚಿಕ್ಕದೊಂದು ವಾಹನ  ಖರೀದಿಸಲು ಅನುಕೂಲವಾಗಲಿದೆ 

18 Mar 2016

ಹೆರಿಗೆ ಸಮಯದಲ್ಲಿ ಕೋಣೆಯಲ್ಲೇ  ಮೇಕಪ್...!!
 Alaha Karimi  in labor room (PC: Instagram)

ನ್ಯೂಯಾರ್ಕ್: ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿನ ಭಯ ಹೋಗಲಾಡಿಸುವುದಕ್ಕೆ  ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕಾಗಿ ಕೆಲವು ಗರ್ಭಿಣಿಯರು ಹಾಡು ಕೇಳುವುದುಂಟು. ಇನ್ನು ಕೆಲವರು ಪುಸ್ತಕ ಓದುವುದು, ಪ್ರಾರ್ಥನೆ ಮಾಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ಮಾಡುತ್ತಾರೆ.
ಆದರೆ ನ್ಯೂಯಾರ್ಕ್‌ನ ಮೇಕಪ್ ಕಲಾವಿದೆಯಾದ ಅಲಾಹಾ ಕರೀಮಿ ಎಂಬ ಗರ್ಭಿಣಿ, ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಂಡು ಸಮಯ ಕಳೆದಿದ್ದಾರೆ.ಅವರೇ  ಹೇಳುವಂತೆ  ಹೆರಿಗೆ ಕೋಣೆಗೆ ಹೋದ ಕೂಡಲೇ ಸ್ವಲ್ಪ ಹೊತ್ತು ಪುಸ್ತಕ ಓದಿದೆ. ಆಮೇಲೆ ತಲೆ ನೋವು ಬಂತು.  ಪುಸ್ತಕವನ್ನು ತೆಗೆದಿಟ್ಟು ನಾನು ಮೇಕಪ್ ಮಾಡುತ್ತಾ ಕುಳಿತೆ ಎಂದು ಮೇಕಪ್ ಮಾಡುತ್ತಿರುವ ಫೋಟೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಗರ್ಭಿಣಿ  ಮಹಿಳೆಯರಿಗೆ ಪ್ರಸವ ಸಮಯದಲ್ಲಿ ಆಗುವ ನೋವು, ಆತಂಕ, ಭಯ
ಬದುಕಿದರೆ ಮತ್ತೆಪುನರ್ಜನ್ಮ ಪಡೆದಂತೆ  
    ಗರ್ಭಿಣಿ ಮಹಿಳೆಯರು ಮಾನಸಿಕ ಒತ್ತಡ ನಿಭಾಯಿಸುವುದಕ್ಕಾಗಿ ತಮಗಿಷ್ಟವಾದ ಕಾರ್ಯಗಳನ್ನು ಮಾಡಲು ಪ್ರೇರೇಪಿಸಬೇಕೆಂದು ಅಲಹಾ ಹೇಳಿದ್ದಾರೆ.
ಹೆರಿಗೆ ಕೋಣೆಯ ಮಂಚದ ಮೇಲೆ ಎಲ್ಲ ಮೇಕಪ್ ವಸ್ತುಗಳನ್ನಿರಿಸಿ ಮೇಕಪ್ ಮಾಡಿಕೊಂಡಾಗ ನನಗೆ ಆತ್ಮವಿಶ್ವಾಸ ಸಿಕ್ಕಿತು ಎಂದು ಹೇಳಿ ಅಲಹಾ ಫೋಟೋ ಶೇರ್ ಮಾಡಿದ್ದರು.
ಗರ್ಭಿಣಿಯೊಬ್ಬಳು ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡುತ್ತಿರುವ ಈ ಫೋಟೋ ಸಾಮಾಜಿಕ ತಾಣದಲ್ಲೀಗ ವೈರಲ್ ಆಗಿದೆ.

23 Aug 2014

ಅನಂತನಲ್ಲಿ ಲೀನವಾದ ಸಾಹಿತ್ಯ ಲೋಕದ ತಾರೆ ಯು. ಆರ್. ಅನಂತಮೂರ್ತಿ..!!

       
 ಬೆಂಗಳೂರು : ಅನಂತನಲ್ಲಿ ಲೀನವಾದ ಸಾಹಿತ್ಯ ಲೋಕದ ತಾರೆ ಯು.  ಆರ್.  ಅನಂತಮೂರ್ತಿಯವರು  
ಕನ್ನಡ  ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ.ಕನ್ನಡ ಸಾಹಿತ್ಯ ಲೋಕದಲ್ಲಿ ಮಾಡಿದ ಸೇವೆ ವರ್ಣಿಸಲಸಾದ್ಯವಾದುದು ಅಪ್ರತಿಮ ಸಾಹಿತಿ ಎಂದೂ ಮರೆಯದ ಮಾಣಿಕ್ಯ ನಿನ್ನೆ ಆಸ್ಪತ್ರೆಯಲ್ಲಿ ನಿಧನರಾದರು. 
    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ನಿನ್ನೆ ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
   ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

   1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

   ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತಹ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.
ಯು ಆರ್ ಅನಂತಮೂರ್ತಿಯವರಿಗೆ ಗಣ್ಯರಿಂದ ಸಂತಾಪ
  ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ. ಕನ್ನಡ ಸಾಹಿತ್ಯವನ್ನು ಹೆಚ್ಚು ಶ್ರೀಮಂತಗೊಳಿಸಿದವರು. ಹಳೆಯ ಕಂದಾಚಾರ, ಅನಿಷ್ಟ ಪದ್ದತಿಗಳ ವಿರುದ್ಧ ದನಿ ಎತ್ತಿದ ಧೀಮಂತ ಸಾಹಿತಿ
-ಸಿದ್ದರಾಮಯ್ಯ ಮುಖ್ಯಮಂತ್ರಿ
ನಂತಮೂರ್ತಿ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯಾ ಬರೆದ ಸಾಹಿತಿ. ತಮ್ಮ ನಿಲುವನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಸಾಹಿತಿಯಾಗಿದ್ದರು
-ಜಯಂತ್ ಕಾಯ್ಕಿಣಿ, ಸಾಹಿತಿ
ಅನಂತಮೂರ್ತಿ ದಿಟ್ಟ ಹೋರಾಟಗಾರ ತಮ್ಮ ಸಾಹಿತ್ಯದ ಮೂಲಕವೇ ಕೆಲವೊಂದು ಬದಲಾವಣೆಗಳನ್ನು ತಂದರು
-ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ.
ಅನಂತಮೂರ್ತಿಯವರು ವಿಶ್ವ ವಿಖ್ಯಾತ ಬರಹಗಾರರು, ಅವರ ಬಗ್ಗೆ ವಿದೇಶದಲ್ಲಿನ ಕೆಲ ಸಾಹಿತಿಗಳು ಮಾತನಾಡುತ್ತಿದ್ದರು. ಅನಂತಮೂರ್ತಿ ಪರಿಸರ ಬಗೆಗಿನ ವೈಚಾರಿಕ ಸಾಹಿತಿ
-ಪ್ರೋ. ದೊಡ್ಡರಂಗೇಗೌಡ, ಸಾಹಿತಿ
ಪ್ರಶಸ್ತಿಗಳು 
  • ಬಷೀರ್ ಪುರಸ್ಕಾರಂ, ಕೇರಳ, 2012
  • ಗೌರವ ಡಾಕ್ಟರೇಟ್, ಕೇಂದ್ರೀಯ ವಿವಿ, ಗುಲ್ಬರ್ಗ, 2012
  • ಗೌರವ ಡಾಕ್ಟರೇಟ್, ಕಲ್ಕತ್ತಾ ವಿವಿ, 2012
  • ರವೀಂದ್ರನಾಥ್ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿವಿ, 2012
  • ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
  • ದಿ ಹಿಂದೂ ಲಿಟರೆರಿ ಪ್ರಶಸ್ತಿ, 2011
  • ಗಣಕ್‌ಸೃಷ್ಟಿ ಪ್ರಶಸ್ತಿ, ಕೊಲ್ಕತ್ತ, 2002
  • ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' 2008
  • ಪದ್ಮಭೂಷಣ, 1998
  • ಮಾಸ್ತಿ, 1995
  • ಜ್ಞಾನಪೀಠ ಪ್ರಶಸ್ತಿ, 1994
  • ರಾಜ್ಯೋತ್ಸವ ಪ್ರಶಸ್ತಿ, 1984
ಸಣ್ಣಕಥೆಗಳು 
  • ಎಂದೆಂದಿಗೂ ಮುಗಿಯದ ಕಥೆ
  • ಮೌನಿ
  • ಪ್ರಶ್ನೆ
  • ಕ್ಲಿಫ್ ಜಾಯಿಂಟ್
  • ಆಕಾಶ ಮತ್ತು ಬೆಕ್ಕು
  • ಎರಡು ದಶಕದ ಕಥೆಗಳು
  • ಐದು ದಶಕದ ಕಥೆಗಳು
ಕಾದಂಬರಿಗಳು
  • ಸಂಸ್ಕಾರ
  • ಭಾರತೀಪುರ
  • ಅವಸ್ಥೆ
  • ಭವ
  • ದಿವ್ಯ 
ವಿಮರ್ಶೆ ಮತ್ತು ಪ್ರಭಂದ 
  • ಪ್ರಜ್ಞೆ ಮತ್ತು ಪರಿಸರ
  • ಸನ್ನಿವೇಶ
  • ಸಮಕ್ಷಮ
  • ಪೂರ್ವಾಪರ
  • ಯುಗಪಲ್ಲಟ
  • ವಾಲ್ಮಿಕಿಯ ನೆವದಲ್ಲಿ
  • ಮಾತು ಸೋತ ಭಾರತ
  • ಸದ್ಯ ಮತ್ತು ಶಾಶ್ವತ
ಚಲನಚಿತ್ರವಾಗಿ ಮೂಡಿಬಂದ ಕಾದಂಬರಿ/ಸಣ್ಣಕಥೆ
  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ (ಸಣ್ಣಕಥೆ)
  • ದೀಕ್ಷಾ (ಹಿಂದಿ ಚಿತ್ರ)
  • ಪ್ರಕೃತಿ (ಸಣ್ಣಕಥೆ)

19 Jul 2014

ಸಾರ್ವಜನಿಕರೇ ಕಾಮುಕರನ್ನು ಬದುಕಲು ಬಿಡಬೇಡಿ..!!

     
ಇಂದು ದೇಶಯಾದಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಜನರನ್ನು ಭಯಭೀತರನ್ನಾಗಿಸಿದೆ ಹೆಣ್ಣು ಹೆತ್ತವರು ಹೆದರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಯೋಚಿಸುವಂತಾಗಿದೆ ಶಾಲೆಗೆ ಹೋದರೆ ಶಿಕ್ಷಕರ ಕಾಮುಕ ವರ್ತನೆಯಿಂದ  ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತಿದೆ  ಅದರಲ್ಲೂ ಕರ್ನಾಟಕದಲ್ಲಿ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಪೋಲಿಸರ ನಿರ್ಲಕ್ಷವೇ ಇದಕ್ಕೆಲ್ಲಾ ಕಾರಣ ದಕ್ಷ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. 

     ಅವರಷ್ಟೇ ಅಲ್ಲ ಹೆತ್ತ ತಂದೆ ತಾಯಿ ಯೂ  ಇದ್ದಕ್ಕೆ ಹೊಣೆಗಾರರು ತಮ್ಮ ಮಕ್ಕಳ ವರ್ತನೆ ಹೇಗಿದೆ ಏನಾಗುತಿದ್ದೆ ಎಂದು ನೋಡದೆ ನಿರ್ಲಕ್ಷ ವಹಿಸುತಿದ್ದಾರೆ ಗಂಡು ಮಕ್ಕಳೆಂದು ಬೇಕಾಬಿಟ್ಟಿಯಾಗಿ ಬಿಟ್ಟು ತಮ್ಮ ಮಕ್ಕಳು ತಪ್ಪು ಮಾಡಿದರು ಸುಮ್ಮನಿದ್ದು ಕಾಮುಕರನ್ನಾಗಿ ಮಾಡುತಿದ್ದಾರೆ ಅಲ್ಲದೆ ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ ಸರಿಯಿಲ್ಲದೆ ಕಾಮುಕರ ಕೈಗೆ ಕೊಡುತಿದ್ದಾರೆ ಹೆಣ್ಣು ಮಕ್ಕಳು ಧರಿಸುವ  ತುಂಡು ತುಂಡು ಬಟ್ಟೆ ಇಂದಾಗಿ ಕಾಮುಕರನ್ನು     ಆಕರ್ಷಿತರಾಗಿ ಕೆರಳಿ ಅತ್ಯಾಚಾರ, ಬಲಾತ್ಕಾರ ಕೊಲೆ ಸುಲಿಗೆ ಯಂತಹ  ಕೃತ್ಯಗಳಿಗೆ ಕೈಹಾಕುತಿದ್ದಾರೆ  ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದೇ ಇಂದು ಪೋಷಕರು ನೋವನ್ನು ಅನುಭವಿಸುತ್ತಿದ್ದಾರೆ. 
    ಅಷ್ಟೇ ಅಲ್ಲ ಈ ಪ್ರಕರಣಗಳು ಸರಕಾರದ ನಿದ್ದೆಗೆಡಿಸುವಂತಾಗಿದೆ ಇದರಲ್ಲಿ ಸರಕಾರದ ನಿರ್ಲಕ್ಷವೇ ಹೆಚ್ಚಾಗಿದೆ ಬೇಕಾಬಿಟ್ಟಿಯಾಗಿ ಬಾರು,ಕ್ಲಬ್ ಗಳಿಗೆ ಲೈಸೆನ್ಸ್ ಕೊಟ್ಟು ಕುಡುಕರ ಸಂಖೆಯನ್ನು ಹೆಚ್ಚು ಮಾಡಿದ್ದಾರೆ ಇದರಿಂದ ಕುಡಿತದ ಅಮಲಿನಲ್ಲಿ ಕೈಗೆ ಸಿಕ್ಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯವೇಸಗುತಿದ್ದಾರೆ. 

    ಇಂದು ಟಿವಿ ಮಾದ್ಯಮಗಳು ತೋರಿಸುವ ಅಸ್ಲಿಲ ಹಸಿಬಿಸಿ ಸಿನಿಮಾ ದೃಶ್ಯಗಳು ಪುರುಷರನ್ನು ಕೆಟ್ಟ ಕೃತ್ಯವೇಸಾಗಲು ಪ್ರೇರೇಪಿಸುತ್ತಿವೆ  ಸೆನ್ಸಾರ್ ಮಂಡಳಿಯವರು ಹಾಗೇ ಉತ್ತಮ ಸಿನಿಮ ಎಂದು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡುತಿದ್ದರೂ ಸಾರ್ವಜನಿಕರು ಸುಮ್ಮನಿರುವದು ವಿಷಾದನೀಯ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸಾಗದೆ ನಮ್ಮ ದೇಶ  ಈಗ ರಾವಣ ರಾಜ್ಯವಗುತ್ತಿದೆ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಇದಕ್ಕೆಲ್ಲಾ ಯಾರು ಹೊಣೆಗಾರರು ಪ್ರಜೆಗಳಾದ ಸಾರ್ವಜನಿಕರೇ ಇಲ್ಲವೇ ಸರ್ಕಾರವೇ ಅಥವಾ ಕಾನೂನುನಿನ ಸುವ್ಯವಸ್ಥೆ ಕಾರಣವೇ ,ಇಂತಹ ಕಾಮುಕರನ್ನೇಕೆ ಗಲ್ಲಿಗೆರಿಸುತಿಲ್ಲ. ಇದಕೆಲ್ಲಾ ರಾಜಕಾರಣಿಗಳ ಕೈವಾಡವೇ ಒಂದೂ ಅರ್ಥವಾಗದ ಸ್ಥಿತಿಯಲ್ಲಿದೆ ನಮ್ಮ ಪ್ರಜಾರಾಜ್ಯ. 

   ಬೆಂಗಳೂರಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಆಟ ಆಡಿಕೊಂಡು ಅಂಗಳದಲ್ಲಿ ಇರಬೇಕಾದ ಮಗು ನಾಲ್ಕು ಗೋಡೆಗಳ ಮದ್ಯೆ ಬದುಕಬೇಕೇ ಕಾಮುಕರೇ ,ವ್ಯಭಿಚಾರಿಗಳೇ ನಿಮಗೆ ಕರುಣೆಯೇ ಇಲ್ಲವೇ ಹೆಣ್ಣಿನ ಬಗ್ಗೆ ಯಾಕೆ ಇಂತಹ ಭಾವನೆ ಇದು ನಾಯವೇ... ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ .. ಇದಕೆಲ್ಲಾ ಸಾರ್ವಜನಿಕರು ಪ್ರತಿಭಟಿಸಿ ನೀವೇ ಅತ್ಯಾಚಾರಿ ಕಾಮುಕರನ್ನು ಸಾಯಿಸಿ... !! ನೆನಪಿರಲಿ ನಿಮ್ಮ  ಮನೆಯ ಹೆಣ್ಣು ಮಕ್ಕಳು ಇಂತಹ ಕಾಮುಕರಿಗೆ ಬಲಿಯಾಗದಿರಲಿ... !! ನಿರ್ಲಕ್ಷಿಸಬೇಡಿ ನಿಮ್ಮ ಮಕ್ಕಳ ಹೊಣೆ ನಿಮ್ಮದು .     

3 Apr 2014

Cricketer Sachin Tendulkar to act in Ashutosh Gowarikar-film based on his life..!!!


     
     Famous cricketer Cricketing legend, Sachin Tendulkar, for the first time, is making a move from real to reel life as he will be starring in a film based on his life. Directed by the famous Bollywood director Ashutosh Gowrikar, the film will also have big names like Rajnikant,  Nana Patekar,Madhuri Dixit in the star cast. Surdlock Holmes has got some inside information on the Tendulkar-Gowarikar association that has got the cricketing community in India super-exited!

    Sachin Tendulkar is arguably as big, or even bigger, than the biggest actor in the Indian film industry Ever since his retirement from Test cricket, the iconic name has been pursued by several noted film makers to star in a movie that encapsulates his mindboggling  Among those who wanted Tendulkar act in such a film are names like Karan Johar, Madhur Bhandarkar, Sanjay Leela Bhansali.

   Tendulkar has always been an Indian first and then a Maharashtrian or a Mumbaikar. But when it came to starring in a film, he gave his mother tongue. There were many reasons for Tendulkar acting in a Marathi film based on his life. A Tendulkar family member, who prefers to be anonymous, revealed: “Sachin feels whatever he is today is because of the role the many Maharashtrians who played an important role early in his life… his family, his brother Ajit in particular, his coach, his schoolmates, his best friend, his Mumbai team and the early fan following he got from the city of Mumbai while he was still in school. He is a staunch believer in acknowledging gratitude and which is why he chose the Marathi film ahead of the many hindi films offers with greater mass appeal.”

  The honour of directing Tendulkar’s film — titled “Aapla Sachin” [Marathi for “Our Sachin”] — has gone to Ashutosh Gowarikar, a famed name in Bollywood whose film “Lagaan” — an epic revolving around a  circket match between a group of Indian villagers and the British — was nominated for the Oscars. The matter was kept under wraps but disclosed only on Gudhi Padwa day — Monday, March 31, 2014. Both Tendulkar and Gowarikar are Maharashtrians and wanted the official start of the film on an auspicious day.

   The Tendulkar-Gowarikar charisma then got some very big Maharashtrian names in the film industry. Sagarika Ghatge, of Chak De fame, will act as Anjali Tendulkar in the film, while playing Sachin’s mother-in-law would be played by Madhuri Dixit. The role of Ramakant Achrekar in the movie will be played by Nana Patekar. It’s learnt that the director wants Vinod Kambli to play Vinod Kambli and efforts are on to reach the left-hander, who was unreachable. An ace makeup man from Los Angeles has been roped in to make Tendulkar look close to what he was in his youth. Getting Kambli and putting the clock back through make-up will give the film a very realistic feel, told a confidant from the Gowarikar camp.

The icing on the cake is, of course, Marathi manoos Shivajirao Gaekwad — the only and the only Rajnikant — acting in a guest role.

The film is likely to hit the theatres just before the 2015 World Cup. So, after the Bharat Ratna, can we hope Sachin Tendulkar — the man with the Midas touch — to come up with an Oscar-winning performance?Good luck sachin...!!


Share

Twitter Delicious Facebook Digg Stumbleupon Favorites More