ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

30 Nov 2011

ಅಂತು ಇಂತೂ ಶಾಂತವಾದ ಬಳ್ಳಾರಿ ...!!!


ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ  ಮತದಾನವಾಗಿದೆ. 
ಕಣದಲ್ಲಿರುವ  ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸದ್ದಾರೆ.
ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳಿವೆ. ಬಹುತೇಕ ಕಡೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೂ ಅತಿ ಸೂಕ್ಷ್ಮ ಮತೆಗಟ್ಟೆಗಳಿಗೆ ಒದಗಿಸುವ ಭದ್ರತೆಯನ್ನೇ ಒದಗಿಸಲಾಗಿತ್ತು

ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.

ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿತ್ತು . ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.

28 Nov 2011

ಕಾರವಾರದ ನಾನ್ ವೆಜ್ ದೇವತೆ ..!



ಕಾರವಾರದ  ತಾಲೂಕಿನ ಮಾಚಾಳಿ ಗ್ರಾಮದಲ್ಲಿ   taaluki ಊರಿನಲ್ಲಿ ನಿನ್ನೆ ಮಾರಿಕಾಂಬಾ ದೇವಸ್ತಾನದಲ್ಲಿ ಜಾತ್ರೆ ಜಾತ್ರೆ ನೆರವೇರಿತು ಅನೇಕ ಭಕ್ತರು ಆಗಮಿಸಿದ್ದರು .ಅಲ್ಲಿಯ ಜನ ವಿಬಿನ್ನವಾದ ನೈವ್ಯದ್ಯವನ್ನು ದೇವಿಗೆ ಅರ್ಪಿಸುತ್ತಾರೆ.ಭಕ್ತಿಯಿಂದ ದೇವರಿಗೆ ಹರಕೆ ತಿರಿಸಲೆಂದು ಬಂದ ಭಕ್ತರು ಮೀನಿನ ಅಡಿಗೆ ಮಾಡಿ ಮತ್ತು ಮದ್ಯವನ್ನು ಭಕ್ತಿಯಿಂದ ದೇವಿ ವರ ಕೊಡುತ್ತಾಳೆಂದೂ ನೈವೇದ್ಯವನ್ನು ಅರ್ಪಿಸುತ್ತಾರಲ್ಲದೆ ಮೊದಲೇ ಮೀನು ಭಕ್ಷಕರಾದ ಜನರು ತಾವು ಕೂಡಾ ಎಲ್ಲ ಭಕ್ತರು ದೇವರ ಪ್ರಸಾದವೆಂದು ಭರ್ಜರಿಯಾಗಿ ಮಸ್ತ್ ಮೀನಿನ ಊಟ ಮಾಡಿ ನೀರಿನಂತೆ ಮದ್ಯವನ್ನು ಕುಡಿಯುತ್ತಾರೆ.ಅಲ್ಲಿಯ ಭಕ್ತರು ಮದ್ಯ ಕುಡಿಯುವದರಿಂದ ಜೋಶ ಬರುವದಲ್ಲದೆ ದೇವತೆ ಆಶಿರ್ವಾದ ಮಾಡಿ ವರ ಕೊಡುತ್ತಾಳೆ ಹಾಗು ಯಾವದೇ ತೊಂದರೆಗಳು ಬರುವದಿಲ್ಲ ಎಂದು ಹೇಳುತ್ತಾರೆ. ಮುಧನಂಬಿಕೆಯಿಂದ,ಭಾರತದಲ್ಲಿಯ ಪ್ರಾಚಿನ ಕಾಲದಿಂದಲೂ ನಡೆದು ಬಂದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳು ತಲೆಕೆಳಗಾಗುತ್ತಿವೆ. ಆದರೆ ಪ್ರತಿಯೊಂದು ಕಡೆಯಲ್ಲಾ ವಿಭಿನ್ನ ರೀತಿಯ ಹೂ,ಹಣ್ಣು ಕಾಯಿಯನ್ನು ನೀಡಿ ಉರುಳುಸೇವೆ ಮಾಡಿ ಹರಕೆ ತಿರಿಸಿ ಆಚರಣೆ ಮಾಡುತ್ತಾರೆ.ಆದರೆ ಇಲ್ಲಿ ದೇವತೆಗೆ ಅರ್ಪಿಸುತ್ತಿರುವದು ನಾನ್ ವೆಜ್ ನೈವೇದ್ಯ ಇದು ದೇವಿಯ ಇಷ್ಟಾರ್ಥವೋ ಜನರ ಇಷ್ಟಾರ್ಥವೋ...

27 Nov 2011

ಕ್ರಿಕೆಟಿಗ ಯುವರಾಜ ಸಿಂಗ್ ಗೆ ಕ್ಯಾನ್ಸೆರ್ ...!!!

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿಶ್ವಕಪ್ ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಗೆ ಎಡಬದಿಯ ಎದೆಯಲ್ಲಿ ಕ್ಯಾನ್ಸೆರ್ (ಟ್ಯೂಮೆರ) ಇದೆ ಎಂದು ಯುವರಾಜನ ತಾಯಿಯೇ ಮಾದ್ಯಮಗಳ ಮುಂದೆ ಸ್ಪಸ್ಟಪಡಿಸಿದ್ದಾರೆ ಹಾಗೆಯೇ ಅಸ್ತಮಾ ಕೂಡ ಇದೆ ಎಂದು ಹೇಳಿದ್ದಾರೆ.ಅವರ ತಾಯಿ ಹೇಳುವ ಪ್ರಕಾರ ಅವನಿಗೆ ವಿಶ್ವಕಪಗಿಂತಲೂ ಮುಂಚೆಯೇ ಈ ತೊಂದರೆ ಇತ್ತು ಆದರೆ ಈ ವಿಷಯ ನಾವು ಯಾರಿಗೂ ತಿಳಿಸಿರಲಿಲ್ಲ ಅವನುತುಂಬಾ ದೈರ್ಯವಂತ,ಶಕ್ತಿವಂತ ಹಾಗಾಗಿ ವಿಶ್ವಕಪ್ ಸರಣಿ ಪೂರ್ತಿ ಆಡಿ ಸರಣಿಶ್ರೇಸ್ಟನಾಗಿ ಬಂದಿದ್ದ ಎಂದು ತಿಳಿಸಿದ್ದಾರೆ.ಆದರೆ ರೋಗ ಅಸ್ಟೊಂದು ಗಂಭಿರವಾಗಿ ಬೆಳೆದಿಲ್ಲಾ ಅವನಿಗೆ ಬೇಗನೆ ಚಿಕಿತ್ಸೆ ನೀಡಿದ್ದೇವೆ ಇಲ್ಲದಿದ್ದರೆ ಅದು ಬಹಳ ಗಂಭಿರವಾಗಿ ಹರಡುತಿತ್ತು ಮತ್ತು ಪ್ರಾಣಕ್ಕೆ ಅಪಾಯ ಕೂಡ ಇತ್ತು ಆದರೆ ಈಗೇನೂ ಭಯವೇನೂ ಇಲ್ಲ
ಮತ್ತು ಅವನು ವೆಸ್ಟ್ಇಂಡಿಸ್ ಏಕದಿನ ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅವನ ತರೆಬೇತುದಾರ ತಿಳಿಸಿದ್ದಾರಂತೆ ಅವರ ತಾಯಿ ಮಾದ್ಯಮಗಳಿಗೆ ತಿಳಿಸಿದ್ದಾರೆ

ಯುವರಾಜ ಸಿಂಗ್ ಬೇಗ ಗುಣಮುಖರಾಗಿ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಆಡುವಂತಾಗಲಿ ಎಂದು ನಮ್ಮೆಲ್ಲರ ಆಶಯ ಹಾಗೆಯೇ ಯುವರಾಜಗೆ ಒಳ್ಳೆಯದಾಗಲಿ.

26 Nov 2011

ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ  ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..ನಾವು ಅತ್ತುತ್ತಮ ಸಾಹಿತ್ಯವನ್ನು ಬರೆದು 8 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೇವೆ.ವಿನಹ !ಗುಂಡಾಗಿರಿ ಮಾಡಿ ಪಡೆದಿಲ್ಲಾ..ಹಾ.. ನಾವು ಇಲ್ಲಿ ಮಾತಾಡ್ತಿರೋದು ಶಿವಸೇನಾ ಮುಖ್ಯಸ್ತ ಬಾಳಾಠಾಕ್ರೆ ಬಗ್ಗೆ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯದ ದಿಗ್ಗಜರಾದ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಪಡೆಯಲು ಅಹ್ರರಲ್ಲ ಅವರ ಪ್ರಶಶ್ತಿ ವಾಪಸ್ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತಾಯಿದ್ದು  ಕಟೋರ ಮಾತಿನಿಂದ ನಿಂದಿಸಿ ಅವಹೇಳನ ಮಾಡಿದ್ದು  ಸರಿಯೇ? ಇದು ಕನ್ನಡಿಗರಿಗೆ ಅವಮಾನ ...ಈ ಹಿನ್ನೆಲೆಯಲ್ಲಿ  ಬಾಳಾ ಠಾಕ್ರೆ ವಿರುದ್ಧ ಕರ್ನಾಟಕದಾದ್ಯಂತ ಭುಗಿಲೆದ್ದ ಆಕ್ರೋಶ. ಬಾಳಾ ಠಾಕ್ರೆ ಅಜ್ಜ ...ಯಾಕ್ ಸುಮ್ನೆ  'ಸಾಮ್ನಾ' ಪತ್ರಿಕೆಲಿ ಏನೇನೋ ಬರ್ದು ಉಗಿಸ್ಕೊತ್ತಿಯಾ...  ತಪ್ಪಲ್ವಾ ಇದೆಲ್ಲಾ. ಇನ್ಮುಂದೆ ಆದ್ರು ಒಳ್ಳೆಯವನಾಗು . ವಯಸ್ಸಾದ್ಮೇಲೆ ಇವೆಲ್ಲಾ ಸರಿಅಲ್ಲಾ...ಗೊತ್ತಾಯತಾ ಅಜ್ಜಾ.

24 Nov 2011

ಬಾಳೆಕಾಯಿ ಪ್ರೈಡ್ ರೈಸ್

ಬಾಳೆಕಾಯಿ ಪ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿಗಳು
  • ಅನ್ನ
  • ಎಣ್ಣೆ
  • ಸಾಸಿವೆ
  • ಜೀರಿಗೆ
  • ಗರಂಮಸಾಲೆ
  • ಉದ್ದ ಸಿಳಿದ ಕ್ಯಾಪ್ಸಿಕಂ
  • ಉದ್ದ ಸಿಳಿದ ಹಸಿಮೆಣಸಿನಕಾಯಿ
  • ಶುಂಟಿ,ಬೆಳ್ಳುಳ್ಳಿ ಪೇಸ್ಟ್
  • ಸೋಯಾಸಾಸ್
  • ರುಚಿಗೆ ಉಪ್ಪು
  • ಧನಿಯಾ
  • ಸಿಪ್ಪೆ ತೆಗೆದು ಗಾಲಿಯಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದ ಬಾಳೆಕಾಯಿ 
  • ಕುದಿಸಿದ ಬಟಾಣಿ ಕಾಳು
  • ಉದ್ದಿನಬೇಳೆ
  • ಅರಸಿಣ ಪುಡಿ
  • ಕೊತ್ತಂಬರಿ ಸೊಪ್ಪು                               
 ಮಾಡುವ ವಿಧಾನ :ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿದ ನಂತರ ಜೀರಿಗೆ ,ಸಾಸಿವೆ ,ಬೆಳ್ಳುಳ್ಳಿ,ಶುಂಟಿ,ಗರಂಮಸಾಲೆ.ಉದ್ದೀನಬೆಳೆ ಮೆಣಸಿನಕಾಯಿ ,ಕ್ಯಾಪ್ಸಿಕಂ,ಹುರಿದುರೆಡಿ ಮಾಡಿದ ಬಾಳೆಕಾಯಿ,ಬೇಕಾಗುವಸ್ಟು ಅನ್ನ,ಉಪ್ಪು ಅರಸಿಣಪುಡಿ,ಬೆಂದ ಬಟಾಣಿ ಕಾಳುಮೇಲೆ ಸೋಯಾಸಾಸ್ ಕೊತಂಬರಿ ಸೊಪ್ಪ  ಹಾಕಿ ತಿಂದರೆ ರುಚಿಯಾಗಿರತ್ತೆ .ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು ತಿಂಗಲ್ಲಿ ಎರಡು ಬಾರಿ ತಿನ್ನುವದರಿಂದ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ ಹೊಟ್ಟೆಯ ತೊಂದರೆಗಳು ಮಾಯವಾಗುತ್ತವೆ ಹಾಗಾದರೆ ಮಾಡಿ  ತಿಂದು ನೋಡಿ ತಡ ಏಕೆ ?ರುಚಿಯಾಗಿ ಮಾಡಿ ತಿನ್ನತಾಯಿರಿ ಯಾವಾಗಲೂ ಆರೋಗ್ಯವಾಗಿರಿ !!!  

22 Nov 2011

ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು..

ಇಂದು ಅರೋಗ್ಯವಂತರಾಗಿರಲು ಹೆಚ್ಚಾಗಿ ತಾಜಾ ಹಣ್ಣು ಹಂಪಲುಗಳನ್ನೂ ತಿನ್ನಬೇಕೆಂದು ವೈದರು ಹೇಳುತ್ತಾರೆ ಅದರಲ್ಲೂ ಹಣ್ಣುಗಳ ಮಹಾರಾಣಿ ಎಂದೇ ಪ್ರಸಿದ್ದಿಯಾಗಿರುವ ತಾಜಾ ಸೇಬು ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ದಿವ್ಯೌಶದವಾಗಿದೆ.An Apple a day keep doctors away ಎಂಬ ಮಾತಿನಂತೆ ಸೇಬುಹಣ್ಣು ಪ್ರತಿದಿನ ತಿನ್ನುವದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಇತ್ತೀಚಿನ ಹಾಂಕಾಂಗ್ ನ ಚೀನಿ ವಿಸ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸೇಬುಹಣ್ಣನ್ನು ತಿನ್ನುವದರಿಂದ ವ್ಯಕ್ತಿಯ ಜೀವಿತಾವದಿ ಶೇ.10 ರಷ್ಟು ಹೆಚುತ್ತದೆ.ಸದಾ ಚಟುವಟಿಕೆಯಿಂದ ಇರಲೂ,ದೇಹದ ದೌರ್ಬಲ್ಯಗಳನ್ನು ಕಡಿಮೆ ಮಾಡುವದರೊಂದಿಗೆ ಆಯುಷ್ಯವನ್ನು ಹೆಚ್ಚಿಸುತ್ತದೆ .ಇದರಲ್ಲಿ ಆಂಟಿ ಆಕ್ಷಿಡೆಂಟ್ ಅಂಶ ಇರುವದರಿಂದ ಕಣ್ಣಿಗೆ ಉತ್ತಮವಲ್ಲದೆ ಹ್ರದ್ರೋಗ,ಕಾನ್ಸೆರ್,ಸಕ್ಕರೆ ಕಾಯಿಲೆಯಂತಹ ರೋಗಗಳು ಹತ್ತಿರ ಸುಳಿಯುವ ಸಾದ್ಯತೆ ಕಡಿಮೆ. ಮಾರುಕಟ್ಟೆಯಲ್ಲಿ ಇಂದು 3 ತರಹದ ಸೇಬು ಹಣ್ಣುಗಳು ಸಿಗುತ್ತವೆ

1.ಹಸಿರು ಸೇಬು : ಎಲುಬು ಮತ್ತು ಹಲ್ಲುಗಳಿಗೆ ಉತ್ತಮ ಹಾಗೂ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ
2.ಹಳದಿ ಸೇಬು :ಕಣ್ಣಿಗೆ,ಹೃದಯ ರೋಗಕ್ಕೆ ಉತ್ತಮವಾದುದು
3.ಕೆಂಪು ಸೇಬು : ಹೃದಯ,ಮೆದುಳಿನ ನೆನಪಿನಶಕ್ತಿಗೆ ಹಾಗು ಗರ್ಭಿಣಿಯಾರಿಗೆ,ಮಕ್ಕಳ ಆರೋಗ್ಯಕ್ಕೆಒಳ್ಳೆಯದು.

ಸೇಬು ಹಣ್ಣಿನ ಸೇವನೆಯಿಂದಾಗುವ ಉಪಯುಕ್ತತೆಗಳು

  • ಸೇಬು ತಿನ್ನುವದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಮಾಡಬಹುದು.
  • ಹೆಚ್ಚು ವಿಟಮಿನ್,ಪೌಷ್ಟಿಕಾಂಶ ಇರುವದರಿಂದ ಕಿಡ್ನಿ,ಹಾಗೂ ಲಿವರನ ತೊಂದರೆ ನಿವಾರಣೆಯಾಗುವದು.
  • ದಿನನಿತ್ಯ ಸೇಬು ರಸವನ್ನು ಕುಡಿಯುವದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಹಾಗೂ ಚರ್ಮದ ಕಾಂತಿಯು ಹೆಚ್ಚುವದು.
  • ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವದು
  • ವಯಸ್ಸಾದವರಿಗೆ ರೋಗಿಗಳಿಗೆ ಸೇಬು ರಸ ಕೊಡುವದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.
  • ಕ್ಯಾಲ್ಸಿಯಂಮ್ಯಗ್ನೆಷಿಯಂ,ಅಂಶ ಇರುವದರಿಂದ ಆರೋಗ್ಯಕ್ಕೆ ಉತ್ತಮವಾದುದು.

ಹೆಚ್ಚು ಹೆಚ್ಹು ಸೇಬು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.!!!

21 Nov 2011

ಮಗಧೀರ್ ಅದ್ದೂರಿ ಎಂಗೇಜ್ಮೆಂಟ್ .!!!!

ಟಾಲಿವುಡನ(ತೆಲಗು) ಮೆಗಾಸ್ಟಾರ್ ಚಿರಂಜೀವಿಯ ಪುತ್ರ ಮಗಧೀರ್ ಚಿತ್ರದ ನಟ ರಾಮಚರಣ ತೇಜ್ ಮೊದಲೇ ಪರಿಚಯವಿದ್ದ ಹುಡುಗಿ ಉಪಾಸನಾ ಅವಳೊಂದಿಗೆ ಡಿಸೆಂಬರ್ 1 ರಂದು ಅದ್ದೂರಿ ವೆಚ್ಚದ  ಎಂಗೇಜ್ಮೆಂಟ್ ನ್ನು ಐತಿಹಾಸಿಕ ಸ್ಥಳವಾದ ನಿಜಾಮಾಬಾದ್ ಜಿಲ್ಲೆಯ ದೊಮಕೊಂಡದ ಕೋಟೆಯಲ್ಲಿ ಮಾಡಿಕೊಳ್ಳಲಿದ್ದಾರೆ.ಈ ಕೋಟೆಯೂ ಹಿಂದಿನ ರಾಜ್ಯಮನೆತನದವರದಾಗ್ಗಿದ್ದು ಈಗ ಇದನ್ನು 4 ಕೋಟಿ ವೆಚ್ಚ ಮಾಡಿ ಸಂಪೂರ್ಣ ಹೊಸದಾಗಿ ನವಿಕರಿಸಲಾಗುತ್ತಿದೆ.ಇಲ್ಲಿಯೇ ಮಗಧಿರನ ಎಂಗೇಜ್ಮೆಂಟ್ ಸಮಾರಂಭ ಡಿಸೆಂಬರ್ 1 ರಂದು ನಡೆಯಲಿದೆ. ಉಪಾಸನ ಕೂಡ ಎಂಗೇಜ್ಮೆಂಟ್ ಗೆ ತಯಾರಿನಡೆಸುತ್ತಿದ್ದಾರೆ. ಮಗನ ಸಮಾರಂಭಕ್ಕೆ  ಚಿರಂಜೀವಿಯು  ಅಲ್ಲಿನ  ರಾಜ್ಯಪಾಲರಾದ ನರಸಿಂಹನ್ ರವರನ್ನು ಆಮಂತ್ರಿಸಿದ್ದಾರೆ ಅಲ್ಲದೇ ಸಮಾರಂಭದಲ್ಲಿ ಅನೆಕರೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಮಚರಣಗೆ ಮಾವ ಅದ್ದೂರಿ ಉಡುಗೊರೆಯೊಂದನ್ನುಅಂದ್ರೆ ಅತ್ಯಾದುನಿಕ ವಿನ್ಯಾಸದ 120 ಕೋಟಿ ವೆಚ್ಚದ ವಿಮಾನವೊಂದನ್ನು ಉಡುಗೊರೆಯಾಗಿ  ಕೊಡಲಿದ್ದಾರೆ ಈಗಾಗಲೇ ಇದನ್ನು ಜರ್ಮನಿ ಯಲ್ಲಿ ತಯಾರಿಸಲಾಗುತ್ತಿದೆ ಇದು 8 ಆಸನಗಳನ್ನು ಮಾತ್ರ ಹೊಂದಿದ್ದು ಐಶಾರಾಮಿಯ ಎಲ್ಲಾ ಸೌಲಭ್ಯಗಳು ಇದರಲ್ಲಿವೆ ಇದನ್ನು ರಾಮಚರನ್ ತಾವೇ ಹೇಳಿ ಬೇಕಾದ ಮಾಡೆಲ್ ಗೆ  ಮಾಡಿಸಿಕೊಳ್ಳುತಿದ್ದಾರೆ.ಒಟ್ಟಿನಲ್ಲಿ  ಭಾರಿ ವೆಚ್ಚದ ಎಂಗೇಜ್ಮೆಂಟ್ ಎನ್ನಬಹುದು. ಅಂತು ಈಗ ಮಗಧೀರ್ ಮಾವನಿಂದ ಭಾರಿ ಗಿಫ್ಟ್ ನ್ನೇ ಪಡೆಯತ್ತಿದ್ದಾರೆ  .ಗ್ರೇಟ್ ಅಳಿಯ ಮಗಧೀರ್..!!!! .    

19 Nov 2011

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ .

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು ಪಿಲ್ದಿಂಗ್ ಆಯ್ಕೆ ಮಾಡಿಕೊಂಡಿದ್ದು ಅನುಮಮಾನಕ್ಕೆ ಎಡೆಮಾಡಿಕೊಟ್ಟಿದೆ.ಟಾಸ್ ಗೆದ್ದರು ಯಾಕೆ ಬ್ಯಾಟಿಂಗ್ ತೆಗೆದುಕೊಳ್ಳಲಿಲ್ಲ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ.ಆಗ ಪಂದ್ಯ ನಡೆಯುತಿದ್ದಾಗ ಪಟಪಟನೆ ವಿಕೆಟಗಳು ಉರಿಳಿದವು ಅದಕ್ಕೆ ಸೆಮಿಫೈನಲ್ ಮ್ಯಾಚ್ ಸೋಲಿಗೆ ಮ್ಯಾಚ್ ಪಿಕ್ಸಿಂಗ್ ಆಗಿದ್ದು ಕಾರಣವೆಂದಿದ್ದಾರೆ ಅಂದು ಸೋತಾಗ್ ವಿನೋದ್ ಡ್ರೆಸ್ಸಿಂಗ್ ರೂಮನಲ್ಲಿ ಆಟಗಾರರನ್ನು ಅಪ್ಪಿಕೊಂಡು ಕಣ್ಣಿರಿತ್ತಿದ್ದರು ಈಗ ಇದೇ ಈಡ್ದನ್ ಗಾರ್ಡನ್ ನಲ್ಲಿ ಟೆಸ್ಟ್ ಮ್ಯಾಚನಲ್ಲಿ ವೆಸ್ಟ್ ವಿಂಡಿಸ್ ವಿರುದ್ದ ಭಾರತ ಗೆದ್ದಿತು ಆಗ ವಿನೋದ್ 1996 ಸೆಮಿಪೈನಲ್ ನೆನಪಿಸಿಕೊಂಡು ಮತ್ತೆ ಕಣ್ಣಿರಿತ್ತರು .ಅಂದಿನ ಆಟ ಮೊಸದಾಟವಾಗಿತ್ತು ಅಂದು ಪಂದ್ಯದ ವೇಳೆ ಏನೇನು ನಡೆದಿತ್ತು ಅದಕ್ಕೆ ನಾನೆ ಪ್ರತ್ಯಕ್ಷ ಸಾಕ್ಷಿ ಎಂದು ಗಂಭಿರವಾಗಿ ಆರೋಪಿಸಿದ್ದಾರೆ ಅಲ್ಲದೆ ನಂತರ ನನ್ನನ್ನು ಪಂದ್ಯದಿಂದಲೇ ಕೈಬಿಡಲಾಯಿತು ಎಂದದಕ್ಕೆ ಇವರ ಮಾತಿಗೆ ಪ್ರತಿಕ್ರಿಯಿಸಿದ ಮಾಜಿ ನಾಯಕ ಅಜರುದ್ದೀನ್ 15 ವರ್ಷದ ನಂತರ ಈಗ ಈ ಬಗ್ಗೆ ಪ್ರಸ್ತಾಪಿಸುವ ಅಗತ್ಯವೇನಿದೆ. ಆಗ ಕಳಪೆ ಪ್ರದರ್ಶನದಿಂದಾಗಿ ಫಾರ್ಮ್ ನಲ್ಲಿ ಇರಲಿಲ್ಲ ಅದಕ್ಕಾಗಿ ವಿನೋದ್ ನನ್ನು ಕೈಬಿಡಲಾಗಿತ್ತು ಮ್ಯಾಚ್ ಪಿಕ್ಸಿಂಗ್ ಆಗಿರಲಿಲ್ಲ ಎಲ್ಲವು ತಂಡದ ನಿರ್ಧಾರ ದಿಂದಲೇ ನಡೆದಿತ್ತು ಎಂದು ತಿರುಗೇಟು ನೀಡಿದ್ದಾರೆ ಆದರೆ ಕಾಂಬಳೆ ಆಗಲೇ ಬಹಿರಂಗಪದಿಸಬಹುದಿತ್ತು ಈಗ ಬಾಯಿಮುಚ್ಚಿಕೊಂಡು ಸುಮ್ಮನಿರಲಿ ಎಂದು ಪ್ರತಿಕ್ರಿಯಿಸಿದ್ದಾರೆ ಜೊತೆ ಆಟಗಾರರೂ ಯಾವದೇ ರೀತಿಯ ಮ್ಯಾಚ್ ಪಿಕ್ಷಿಂಗ್ ನಡೆದಿಲ್ಲ ವಿನೋದ್ ಕಾಂಬಳೆ ಹೀಗೆ ಹೇಳುವದು ಸರಿಯಲ್ಲವೆಂದಿದ್ದಾರೆ.

16 Nov 2011

ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ

ಇಂದು ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಏರ್ಪಡಿಸಿ ಸನ್ಮಾನ್ಮ ಮಾಡಲಾಯಿತು  ಖ್ಯಾತ ಕಾದಂಬರಿಕಾರ,ಸಾಹಿತಿಯಾಗಿ ಕನ್ನಡದ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಕೊಡುಗೆ ಸಾಧನೆಗಾಗಿ ಎಸ .ಎಲ್ ಬೈರಪ್ಪ ನವರಿಗೆ  2010 ರ ''ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದ್ದು ಕನ್ನಡಿಗರಿಗೆ ಸಂತಸ ತಂದಿದೆ.ಇವರು ಕೆಲವು ದಿನಗಳ ಹಿಂದೆಯೇ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಇವರು ಮಾಡಿದ ಸಾದನೆ ಯಸಸ್ಸನ್ನು ಗುರ್ತಿಸಿ ಭಾರತ ಸರ್ಕಾರ ಇಂದು  ನವದೆಹಲಿಯಲ್ಲಿ ಅದ್ದೂರಿ ಪ್ರಶಸ್ತಿ ಸಮಾರಂಭವನ್ನುಏರ್ಪಡಿಸಿ ಸನ್ಮಾನ ಮಾಡಿದೆ.''ಸರಸ್ವತಿ ಸಮ್ಮಾನ್''ಪ್ರಸಸ್ತಿಯು ಕನ್ನಡಿಗರಿಗೆ ಸಿಕ್ಕದ್ದು  ಮೊದಲ ಬಾರಿಯಾಗಿದ್ದು ಅದನ್ನು ಪಡೆದ ಪ್ರಥಮ  ಕನ್ನಡಿಗರು ಬೈರಪ್ಪ ನವರು ಎಂದು ಹೇಳಲು ಹೆಮ್ಮೆಯೆನಿಸುತ್ತೆ  ಈ ಪ್ರಸಸ್ತಿಯು 7.5 ಲಕ್ಸ್ಯ ನಗದು,ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ .ಈ ಪ್ರಶಸ್ತಿಯನ್ನು ಈಗಾಗಲೇ 19 ಮಂದಿ ಪಡೆದಿದ್ದರೆ ಈಗ ಇವರಿಗೆ ''ಮಂದ''ಕಾದಂಬರಿಗೆ ಪ್ರಶಸ್ತಿ ಲಭಿಸಿದೆ ಅಷ್ಟೇ ಅಲ್ಲ ಇವರು ಸುಮಾರು 23 ಕ್ಕೂಹೆಚ್ಹು ಕೃತಿ ಗಳನ್ನೂ ಬರೆದಿದ್ದಾರೆ ಬೈರಪ್ಪನವರು ಹುಟ್ಟಿದ್ದು 26 -07 -1934 ರಂದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಸಂಕೇಶ್ವರ್ ಗ್ರಾಮದಲ್ಲಿ ಬಡತನದಲ್ಲಿ ಬೆಳೆದು ಮೇಲೆ ಬಂದವರು ಇದು ಇವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.ಇಂದು ದೆಹಲಿಯಲ್ಲಿ ಪ್ರಶಸ್ತಿ ಸ್ವಿಕರಿಸಿ ತಾವು ನಡೆದು ಬಂದ ರೀತಿಯನ್ನು ವಿವರಿಸಿ ಮಾತನಾಡಿದರು.ಇವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳೂ.  

2011 ರ ನೊಬೆಲ್ ಶಾಂತಿ ಪ್ರಶಸ್ತಿ ಮೂವರು ಮಹಿಳೆಯರ ಪಾಲಿಗೆ..

 ಮಹಿಳೆಯರ ಪಾಲಿಗೆ  2011 ರ  ನೊಬೆಲ್ ಶಾಂತಿ  ಪ್ರಶಸ್ತಿಯನ್ನು ಸ್ತ್ರಿಯರ್ ಪರವಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಮೂವರು ಮಹಿಳೆಯರಿಗೆ ನೀಡಲಾಗಿದೆ ಅವರುಗಳೆಂದರೆ ಲೈಬಿರಿಯಾದ ಅದ್ಯಕ್ಷ್ಯೇ ಎಲೆನ್ ಜಾನ್ಸನ್ ಸರಲಿಫ್,ಅದೇ ದೇಶದ ಇನ್ನೂರ್ವ ಮಹಿಳಾ ಹಕ್ಕು ಹೋರಾಟಗಾರ್ತಿ ಲೆಮಾ ಬೋವಿ ಮತ್ತು ಯೆಮೆನ್ ನ ಪ್ರಶಿದ್ದ  ಪತ್ರಕರ್ತೆ ತವಕ್ಕಲ್ ಕರ್ಮನ್  ಮಹಿಳೆಯರ ಹಕ್ಕು ರಕ್ಷಣೆಗಾಗಿ ಶ್ರಮಿಸಿದ್ದಕ್ಕಾಗಿ 1.5 ದಶಲಕ್ಷ ಡಾಲರ್ ಮೊತ್ತದ ಪ್ರಶ್ಶಸ್ತಿಯನ್ನು ಹಂಚಿಕೊಂಡಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅದ್ಯಯನ   ಮಾಡಿದ್ದಾರೆ. ನಂತರ 2005 ರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ ಆಫ್ರಿಕಾದ ಅದ್ಯಕ್ಷೆಯಾಗಿ ಶಾಂತಿ ಸ್ಥಾಪನೆಗೆ ಶ್ರಮಿಸಿ ಪ್ರಶಸ್ತಿಗೆ ಭಾಜನರಾದರು  ಅದಲ್ಲದೆ ಲೆಮಾ ಬೋವಿ ಲೈಬಿರಿಯದಲ್ಲಿ ಆಂತರಿಕ  ಯುದ್ದ  ನಡೆಯುತಿದ್ದಾಗ  ಕ್ರೈಸ್ತ ಹಾಗೂ ಮುಸ್ಲಿಂ ಮಹಿಳೆಯರನ್ನು ಸಂಘಟಿಸಿ ಹೋರಾಡಿದರು ಇನ್ನು ಯೆಮೆನ್ನವರಾದ ತವಕ್ಕಲ್ ಕರ್ಮಾನ್ ಪತ್ರಕರ್ತ ಮಾನವ ಹಕ್ಕು ರಕ್ಷಣೆಗಾಗಿ ಹೊರಟ ನಡೆಸಿದ್ದಾರೆ .ಈ ಪ್ರಶಸ್ತಿ ಪಡೆದ ಯೆಮೆನ್ ನ ಮೊದಲ ಮಹಿಳೆ ಅಲ್ಲಿನ ಅದ್ಯಕ್ಷ ನ ದುರಾಡಳಿತದ ವಿರುದ್ದ ಪ್ರತಿಭಟಿಸಿ ಈ ಪ್ರಶಸ್ತಿ ಪಡೆಯುವಲ್ಲಿ ಯಸಸ್ವಿಯಾಗಿದ್ದಾರೆ.ಒಟ್ಟಾರೆ ಈ ವರ್ಷದ ನೋಬೆಲ್  ಶಾಂತಿ ಪ್ರಶ್ಶಸ್ತಿ ಮಹಿಳೆಯರ ಪಾಲಿಗಿದು  ಸಂತಸ ತಂದಿದೆ.    

3 Nov 2011

ಇಂದು ಯೆಡಿಯುರಪ್ಪಗೆ ಮದ್ಯಂತರ ಜಾಮೀನು

ಭೂಕಬಳಿಕೆ ವಿವಾದದಲ್ಲಿ ಸಿಲುಕಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಇಂದು ಲೋಕಾಯುಕ್ತ ಹೈಕೋರ್ಟ್ ಮದ್ಯಂತರ ಜಾಮಿನನನ್ನು ಮಂಜೂರು ಮಾಡಿದೆ ೧೮ ದಿನಗಳ ನಂತರ ಸೆರೆವಾಸದಿಂದ ಹೊರಬರಲಿದ್ದಾರೆ .ಯಡಿಯೂರಪ್ಪ ಸಿರಾಜುದ್ದೀನ್ ಭಾಷಾ ಬ್ರಷ್ಟಾಚಾರ ನಿಯಂತ್ರಣದಡಿಯಲ್ಲಿ ಸಲ್ಲಿಸಿದ್ದ ದೂರಿನಿಂದಾಗಿ ಬೆಂಗಳೊರಿನ ಪರಪ್ಪನ ಅಗ್ರಹಾರ್ ಜೈಲಿಗೆ ಸೇರಿದ್ದರು.ಇದರಿಂದ ಆರೋಗ್ಯದ ಮೇಲೆಯೂ ಪರಿಣಾಮ ಬೀರಿತ್ತು ವಿಚಾರಣಾ ಹಂತದಲ್ಲಿರುವಾಗ ಜೈಲಿಗೆ ಕಳಿಸುವದು ಸರಿಯಲ್ಲವೆಂದು ನ್ಯಾಯಮುರ್ತಿಯವರು ಸ್ಪಸ್ಟಪಡಿಸಿದರು ಒಟ್ಟು ೫ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು ೩ ಪ್ರಕರಣಗಳು ಪೂರ್ಣಗೊಂಡು ೪ ನೆ ಕೇಸನ ವಿಚಾರಣೆ ಹೈಕೋರ್ಟನಲ್ಲಿ ನಡೆಯಲಿದೆ ಸುದ್ದಿ ತಿಳಿಯುತಿದ್ದಂತೆ ಬಿಜೆಪಿ ಕಚೇರಿ ಎದುರು ಶಾಸಕರು ,ಕಾರ್ಯಕರ್ತರು ಪಟಾಕಿ ಹಾರಿಸಿ ಸಂಬ್ರಮಿಸಿದರು ಹೈಕೋರ್ಟ್ ಷರತ್ತುಬದ್ದ ಜಮೀನು ನಿಡಿದಲ್ಲದೆ ೫ ಲಕ್ಷ ರೂ.ಬಾಂಡ್ ಹಾಗು ೨ ಶುರಿಟಿ ಸಲ್ಲಿಸುವಂತೆ ಅದೇಶಿಸಿದೆ ಒಟ್ಟಿನಲ್ಲಿ ಇಂದು ಯಡಿಯೂರಪ್ಪಗೆ ಬಿಡುಗಡೆ ಆಗುವ ಸಾದ್ಯತೆ ಇದೆ ಇನ್ನು ೪ನೆ ಪ್ರಕರಣ ತೀರ್ಪು ಇತ್ಯರ್ತವಾಗಬೇಕು ನಂತರ ಯಡಿಯೂರಪ್ಪ ಹೊರಬರಬಹುದು.ಏನೆ ಅಗಲಿ ಯಾರೇ ತಪ್ಪು ಮಾಡಿದ್ರ ನ್ಯಾಯಾದೇವತೆ ಮುಂದೆ ತಲೆಬಾಗಲೇಬೇಕು ಅಲ್ಲದೇ ಯಡಿಯೂರಪ್ಪ ನಿರಿಕ್ಷ್ಸಣಾ ಜಾಮಿನನ್ನು ಕೋರಿ ಅರ್ಜಿ ಸಲ್ಲಿಸಿದರು ಅದರ ಅರ್ಜಿ ವಿಚಾರಣೆಯನ್ನು ನವೆಂಬರ .೮ ಕ್ಕೆ ಮುಂದುಡಲಾಗಿದೆ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರು ಶಾಸಕರು ಸೆಂಟ್ರಲ್ ಜೈಲಗೆ ಭೇಟಿ ನಿಡುತ್ತಿದ್ದಾರೆ.ಏನೆ ಆಗಲಿ ಪ್ರಕರಣ ದಿಂದ ಪೂರ್ಣ ಮುಕ್ತರಾಗಿಲ್ಲ ಎಂದೇ ಹೇಳಬಹುದು.

Share

Twitter Delicious Facebook Digg Stumbleupon Favorites More