ಕಡಲೆಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು:
- ಕಡಲೆಹಿಟ್ಟು
- ಅಕ್ಕಿಹಿಟ್ಟು
- ಅವಲಕ್ಕಿ
- ಹುರಿದ ಕಡಲೆ ಬೀಜ(ಪುಟಾಣಿ )
- ಬಿಳಿ ಎಳ್ಳು
- ಈರುಳ್ಳಿ
- ಜೀರಿಗೆ
- ಸೋಡಾ
- ರುಚಿಗೆ ಉಪ್ಪು
- ಹಿಡಿ ಕೊತಂಬರಿ ಸೊಪ್ಪು
- ಅಚ್ಚ ಖಾರದಪುಡಿ
.ಮೊದಲು ಒಣ ಅವಲಕ್ಕಿಯನ್ನು ಹಾಗೂ ಹುರಿದ ಪುಟಾಣಿಯನ್ನು ಮಿಕ್ಷಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಪಾತ್ರೆಯಲ್ಲಿ ಅಕ್ಕಿಹಿಟ್ಟು,ಕಡಲೆಹಿಟ್ಟು,ಪುಡಿ ಮಾಡಿದ ಪುಟಾಣಿ,ಅವಲಕ್ಕಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ,ಜೀರಿಗೆ,ಖಾರದ ಪುಡಿ ,ಉಪ್ಪು ಸೋಡಾ,ಹಿಡಿ ಕೊತಂಬರಿ ಸೊಪ್ಪು ಹಾಕಿ ಸ್ವಲ್ಪ ನಿರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸುವದು ೫ ನಿಮಿಷ ಬಿಟ್ಟು ೨ ಪ್ಲಾಸ್ಟಿಕ್ ಹಾಳೆ ತೆಗೆದುಕೊಂಡು ಹಿಟ್ಟಿನ ಉಂಡೆಯನ್ನುಅದರಲ್ಲಿ ಹಾಕಿ ಚಪಾತಿ ಮಣೆಯ ಮೇಲೆ ಲಟ್ಟಿಸಿ ಬೇಕಾದ ಆಕಾರಕ್ಕೆ ಮಾಡಿಕೊಂಡು ಎಣ್ಣೆಯಲ್ಲಿ ಕರಿಯುವದು ನಿಪ್ಪಟ್ಟು ತಿಂದರೆ ರುಚಿಯಾಗಿರತ್ತೆ ನಿಪ್ಪಟ್ಟನ್ನು ಸಂಜೆಯ ತಿಂಡಿಗೆ ಮಾಡಿದರೆ ಇನ್ನು ಚನ್ನಾಗಿರುತ್ತೆ,ಹಾಗೆ ರುಚಿ ರುಚಿಯಾದ ನಿಪ್ಪಟ್ಟು ಮಾಡಿ ಮನೆಯವರ ಮನಸನ್ನು ಅಹಲ್ಲಾದಕರವಾಗಿಸಿ.ರುಚಿಯಾದ ಆಹಾರ ಆರೋಗ್ಯಕ್ಕೆ ಉತ್ತಮವಾದುದು ,
0 comments:
Post a Comment