22 Nov 2011

ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು..

ಇಂದು ಅರೋಗ್ಯವಂತರಾಗಿರಲು ಹೆಚ್ಚಾಗಿ ತಾಜಾ ಹಣ್ಣು ಹಂಪಲುಗಳನ್ನೂ ತಿನ್ನಬೇಕೆಂದು ವೈದರು ಹೇಳುತ್ತಾರೆ ಅದರಲ್ಲೂ ಹಣ್ಣುಗಳ ಮಹಾರಾಣಿ ಎಂದೇ ಪ್ರಸಿದ್ದಿಯಾಗಿರುವ ತಾಜಾ ಸೇಬು ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ದಿವ್ಯೌಶದವಾಗಿದೆ.An Apple a day keep doctors away ಎಂಬ ಮಾತಿನಂತೆ ಸೇಬುಹಣ್ಣು ಪ್ರತಿದಿನ ತಿನ್ನುವದರಿಂದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಇತ್ತೀಚಿನ ಹಾಂಕಾಂಗ್ ನ ಚೀನಿ ವಿಸ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸೇಬುಹಣ್ಣನ್ನು ತಿನ್ನುವದರಿಂದ ವ್ಯಕ್ತಿಯ ಜೀವಿತಾವದಿ ಶೇ.10 ರಷ್ಟು ಹೆಚುತ್ತದೆ.ಸದಾ ಚಟುವಟಿಕೆಯಿಂದ ಇರಲೂ,ದೇಹದ ದೌರ್ಬಲ್ಯಗಳನ್ನು ಕಡಿಮೆ ಮಾಡುವದರೊಂದಿಗೆ ಆಯುಷ್ಯವನ್ನು ಹೆಚ್ಚಿಸುತ್ತದೆ .ಇದರಲ್ಲಿ ಆಂಟಿ ಆಕ್ಷಿಡೆಂಟ್ ಅಂಶ ಇರುವದರಿಂದ ಕಣ್ಣಿಗೆ ಉತ್ತಮವಲ್ಲದೆ ಹ್ರದ್ರೋಗ,ಕಾನ್ಸೆರ್,ಸಕ್ಕರೆ ಕಾಯಿಲೆಯಂತಹ ರೋಗಗಳು ಹತ್ತಿರ ಸುಳಿಯುವ ಸಾದ್ಯತೆ ಕಡಿಮೆ. ಮಾರುಕಟ್ಟೆಯಲ್ಲಿ ಇಂದು 3 ತರಹದ ಸೇಬು ಹಣ್ಣುಗಳು ಸಿಗುತ್ತವೆ

1.ಹಸಿರು ಸೇಬು : ಎಲುಬು ಮತ್ತು ಹಲ್ಲುಗಳಿಗೆ ಉತ್ತಮ ಹಾಗೂ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ
2.ಹಳದಿ ಸೇಬು :ಕಣ್ಣಿಗೆ,ಹೃದಯ ರೋಗಕ್ಕೆ ಉತ್ತಮವಾದುದು
3.ಕೆಂಪು ಸೇಬು : ಹೃದಯ,ಮೆದುಳಿನ ನೆನಪಿನಶಕ್ತಿಗೆ ಹಾಗು ಗರ್ಭಿಣಿಯಾರಿಗೆ,ಮಕ್ಕಳ ಆರೋಗ್ಯಕ್ಕೆಒಳ್ಳೆಯದು.

ಸೇಬು ಹಣ್ಣಿನ ಸೇವನೆಯಿಂದಾಗುವ ಉಪಯುಕ್ತತೆಗಳು

  • ಸೇಬು ತಿನ್ನುವದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಮಾಡಬಹುದು.
  • ಹೆಚ್ಚು ವಿಟಮಿನ್,ಪೌಷ್ಟಿಕಾಂಶ ಇರುವದರಿಂದ ಕಿಡ್ನಿ,ಹಾಗೂ ಲಿವರನ ತೊಂದರೆ ನಿವಾರಣೆಯಾಗುವದು.
  • ದಿನನಿತ್ಯ ಸೇಬು ರಸವನ್ನು ಕುಡಿಯುವದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಹಾಗೂ ಚರ್ಮದ ಕಾಂತಿಯು ಹೆಚ್ಚುವದು.
  • ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸುವದು
  • ವಯಸ್ಸಾದವರಿಗೆ ರೋಗಿಗಳಿಗೆ ಸೇಬು ರಸ ಕೊಡುವದರಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.
  • ಕ್ಯಾಲ್ಸಿಯಂಮ್ಯಗ್ನೆಷಿಯಂ,ಅಂಶ ಇರುವದರಿಂದ ಆರೋಗ್ಯಕ್ಕೆ ಉತ್ತಮವಾದುದು.

ಹೆಚ್ಚು ಹೆಚ್ಹು ಸೇಬು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.!!!

0 comments:

Post a Comment

Share

Twitter Delicious Facebook Digg Stumbleupon Favorites More