ಪಾಲಾಕ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು :
- ಕಡಲೆಹಿಟ್ಟು
- ಮೈದಾಹಿಟ್ಟು
- ಚಿರೋಟಿ ರವೆ
- ಕತ್ತರಿಸಿದ ಈರುಳ್ಳಿ
- ಹಿಡಿ ಪಾಲಾಕ ಸೊಪ್ಪು
- ಪುದಿನಾ ಸೊಪ್ಪು
- ಸ್ವಲ್ಪ ತುಪ್ಪ
- ಅಚ್ಚಖಾರದಪುಡಿ
- ಗರಂ ಮಸಾಲೆ
- ರುಚಿಗೆ ಉಪ್ಪು
- ಕರಿಯಲು ಎಣ್ಣೆ
- ಸೋಡಾ
- ಕೊತಂಬರಿ ಸೊಪ್ಪು
- ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಟಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!
0 comments:
Post a Comment