ಬೆಂಗಳೂರು, ಡಿ.18: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಮೂಲಕ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 'ಭಾರತೀಯ ರಾಜಕಾರಣಿ' ಎಂಬ ಹೆಗ್ಗಳಿಕೆಗೆ ಮತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಗೂಗಲ್ ಬಿಡುಗಡೆ ಮಾಡಿದ Zietgeist 2013ರ ವರದಿಯಲ್ಲಿ ನರೇಂದ್ರ ಮೋದಿ ಅವರ ಬಗ್ಗೆಯೇ ಹೆಚ್ಚು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ ಎಂಬ ಅಂಶವನ್ನು ಹೇಳಲಾಗಿದೆ.
ರಾಜಕಾರಣಿಗಳ ವಿಭಾಗದಲ್ಲಿ ಮೋದಿ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ. ಜತೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಟಾಪ್ 5 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಂ.6ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇದ್ದು, ಇವರ ನಂತರದ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ಸುಷ್ಮಾ ಸ್ವರಾಜ್ ನಂತರದ ಸ್ಥಾನಗಳಲ್ಲಿದ್ದಾರೆ.
'ಸುದ್ದಿ (News Events' ವಿಭಾಗದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟಿದೆ. ಈ ವಿಭಾಗದಲ್ಲಿ ಬ್ಲಾಕ್ ಬರಿ ಮಾರಾಟ 2ನೇ ಸ್ಥಾನಗಳಿಸಿದ್ದು, ರಾಹುಲ್ ದ್ರಾವಿಡ್ ನಿವೃತ್ತಿ ಸುದ್ದಿ 3 ನೇ ಸ್ಥಾನಗಳಿಸಿದೆ. ಟಾಪ್ ಟೆನ್ ಸದ್ದು ಮಾಡಿದ ಸುದ್ದಿಗಳು
* ಬ್ಲಾಕ್ ಬೆರಿ ಸೇಲ್
* ರಾಹುಲ್ ದ್ರಾವಿಡ್ ನಿವೃತ್ತಿ
* ಸೈನಾ ನೆಹ್ವಾಲ್
* ವಿಜಯ್ ಮಲ್ಯ ಕಿಂಗ್ ಫಿಷರ್ ಏರ್ ಲೈನ್ಸ್
* ಕರ್ನಾಟಕ ಎಲೆಕ್ಷನ್ ಫಲಿತಾಂಶ
* ಆರುಷಿ ತಲ್ವಾರ್ ಕೇಸ್
* ಏರ್ ಇಂಡಿಯಾ ಸುದ್ದಿ
* ಇಂಡಿಯನ್ ಎಕಾನಮಿ
ಅತೀ ಸುದ್ದಿ ಮಾಡಿರುವ ನರೇಂದ್ರ ಮೋದಿ ಒಬ್ಬ ಪ್ರತಿಭಾವಂತ ರಾಜಕಾರಣಿ ಎಂಬುದು ಸಾಬಿತಾಗಿದೆ ಅವರ ಪ್ರಧಾನಿ ಯಾಗುವ ಕನಸು ನನಸಾಗಲಿ ಜೈ ನಮೋ ... !!