ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಶಾಸಕ ಪರಣ್ಣ ಮುನ್ನವಳ್ಳಿ ಯವರಿಂದ ಚಾಲನೆ ನೀಡಲಾಯಿತು.ಸಾಯಿಬಾಬ ಮಂದಿರದಿಂದ ಚಾಲನೆ ಮಾಡಿ ದ್ವಜಾರೋಹನವನ್ನು ಶಾಸಕ ಲಕ್ಷ್ಮನ್ ಸೌದಿಯವರು ನೆರವೇರಿಸಿದರು.ಹಾಗೇ ಕನ್ನಡ ದ್ವಜವನ್ನು ಸಾಹಿತಿ ನಲ್ಲೂರು ಪ್ರಸಾದರು ಹಾರಿಸಿದರು .ಸಮ್ಮೇಳನದಲ್ಲಿ ಎಲ್ಲೆಲ್ಲು ರಂಗೋಲಿ ರಾರಾಜಿಸುತ್ತಿದೆ.ಜನರು ಕೂಡ ಅದ್ದೂರಿ ಕನ್ನಡದ ಸಂಭ್ರಮದಲ್ಲಿದ್ದಾರೆ.ಸಮ್ಮೇಳನದ ಅದ್ಯಕ್ಷ್ಯರಾದ ಸಿ ಪಿ ಕೆ ಯವರನ್ನು ಮೆರವಣಿಗೆ ಮಾಡಲಾಯಿತು ಸಾವಿರಾರು ಕನ್ನಡಿಗರು ವಿವಿದೆಡೆಯಿಂದ ಬಂದು ಸಂಬ್ರಮದಲ್ಲಿ ಭಾಗವಹಿಸಿದ್ದಾರೆ.ಎಲ್ಲೆಲ್ಲು ಸಾಹಿತ್ಯದ ಕಂಪು ಹರಡಿದೆ.ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾಮೇಳಗಳು ಆಗಮಿಸಿವೆ.ಕಾವ್ಯಗಾಯನ ಕಾರ್ಯಕ್ರಮವು ನಡೆಯಲಿದೆ ಇಂದಿನಿಂದ ೩ ದಿನಗಳವರೆಗೂ ಕನ್ನಡ ಸಮ್ಮೇಳನ ನಡೆಯಲಿದೆ.ಹಾಗೆಯೆ ಆಗಮಿಸುತ್ತಿರುವ ಲಕ್ಷಾಂತರ ಕನ್ನಡಿಗರಿಗಾಗಿ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿದೆ.ರಾಜಸ್ತಾನದಿಂದ ವಿಶೇಷ ಅಡುಗೆಯವರು ಬಂದಿದ್ದಾರೆ. ರುಚಿ ರುಚಿಯಾದ ಉತ್ತರ ಕನ್ನಡದ ತಿಂಡಿಗಳು ಆಗಲೇ ತಯಾರಾಗಿವೆ.ಬನ್ನಿ ನಾವು ಕನ್ನಡ ಸಂಭ್ರಮದಲ್ಲಿ ಸೇರೋಣ ಕನ್ನಡದ ತೇರನ್ನು ಎಳೆಯೋಣ..ಜೈ ಕನ್ನಡಾಂಬೆ.
ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ ....!!!
-
ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಸಿನಿಮಾ ನಟಿಯರಂತೆ ಸ್ಲಿಮ್ ಆಗಿ
ದೇಹವನ್ನು ತಳಕು ಬಳಕಿನ ಬಳ್ಳಿಯಂತೆ ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ
ಜಿಮ್ ,ಯೋಗ ವ್ಯಾಯಾ...
12 years ago
0 comments:
Post a Comment