ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿದರಿಂದ ಮತದಾನ ಶಾಂತಿಯುತವಾಗಿ ಮತದಾನವಾಗಿದೆ.

ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸದ್ದಾರೆ.
ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳಿವೆ. ಬಹುತೇಕ ಕಡೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೂ ಅತಿ ಸೂಕ್ಷ್ಮ ಮತೆಗಟ್ಟೆಗಳಿಗೆ ಒದಗಿಸುವ ಭದ್ರತೆಯನ್ನೇ ಒದಗಿಸಲಾಗಿತ್ತು
ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.
ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿತ್ತು . ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.

0 comments:
Post a Comment