16 Nov 2011

ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ

ಇಂದು ಎಸ .ಎಲ್ .ಬೈರಪ್ಪ ನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಏರ್ಪಡಿಸಿ ಸನ್ಮಾನ್ಮ ಮಾಡಲಾಯಿತು  ಖ್ಯಾತ ಕಾದಂಬರಿಕಾರ,ಸಾಹಿತಿಯಾಗಿ ಕನ್ನಡದ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಕೊಡುಗೆ ಸಾಧನೆಗಾಗಿ ಎಸ .ಎಲ್ ಬೈರಪ್ಪ ನವರಿಗೆ  2010 ರ ''ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದ್ದು ಕನ್ನಡಿಗರಿಗೆ ಸಂತಸ ತಂದಿದೆ.ಇವರು ಕೆಲವು ದಿನಗಳ ಹಿಂದೆಯೇ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಇವರು ಮಾಡಿದ ಸಾದನೆ ಯಸಸ್ಸನ್ನು ಗುರ್ತಿಸಿ ಭಾರತ ಸರ್ಕಾರ ಇಂದು  ನವದೆಹಲಿಯಲ್ಲಿ ಅದ್ದೂರಿ ಪ್ರಶಸ್ತಿ ಸಮಾರಂಭವನ್ನುಏರ್ಪಡಿಸಿ ಸನ್ಮಾನ ಮಾಡಿದೆ.''ಸರಸ್ವತಿ ಸಮ್ಮಾನ್''ಪ್ರಸಸ್ತಿಯು ಕನ್ನಡಿಗರಿಗೆ ಸಿಕ್ಕದ್ದು  ಮೊದಲ ಬಾರಿಯಾಗಿದ್ದು ಅದನ್ನು ಪಡೆದ ಪ್ರಥಮ  ಕನ್ನಡಿಗರು ಬೈರಪ್ಪ ನವರು ಎಂದು ಹೇಳಲು ಹೆಮ್ಮೆಯೆನಿಸುತ್ತೆ  ಈ ಪ್ರಸಸ್ತಿಯು 7.5 ಲಕ್ಸ್ಯ ನಗದು,ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ .ಈ ಪ್ರಶಸ್ತಿಯನ್ನು ಈಗಾಗಲೇ 19 ಮಂದಿ ಪಡೆದಿದ್ದರೆ ಈಗ ಇವರಿಗೆ ''ಮಂದ''ಕಾದಂಬರಿಗೆ ಪ್ರಶಸ್ತಿ ಲಭಿಸಿದೆ ಅಷ್ಟೇ ಅಲ್ಲ ಇವರು ಸುಮಾರು 23 ಕ್ಕೂಹೆಚ್ಹು ಕೃತಿ ಗಳನ್ನೂ ಬರೆದಿದ್ದಾರೆ ಬೈರಪ್ಪನವರು ಹುಟ್ಟಿದ್ದು 26 -07 -1934 ರಂದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಸಂಕೇಶ್ವರ್ ಗ್ರಾಮದಲ್ಲಿ ಬಡತನದಲ್ಲಿ ಬೆಳೆದು ಮೇಲೆ ಬಂದವರು ಇದು ಇವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.ಇಂದು ದೆಹಲಿಯಲ್ಲಿ ಪ್ರಶಸ್ತಿ ಸ್ವಿಕರಿಸಿ ತಾವು ನಡೆದು ಬಂದ ರೀತಿಯನ್ನು ವಿವರಿಸಿ ಮಾತನಾಡಿದರು.ಇವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳೂ.  

0 comments:

Post a Comment

Share

Twitter Delicious Facebook Digg Stumbleupon Favorites More