ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು
ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..
ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!
ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.
ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ
ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.
1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು
ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ
ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.
7 Nov 2012
ಎರಡನೇ ಬಾರಿ ಅಮೆರಿಕಾ ದ ಅದ್ಯಕ್ಷ್ಯರಾಗಿ ಬರಾಕ್ ಒಬಾಮ ಆಯ್ಕೆ ...!!!
10 Oct 2012
ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು ......!!!!!!
ಅವರ ಪತಿ ಮಾರ್ಗ ಮಧ್ಯೆ ಅಸ್ವಸ್ಥ ಗೊಂಡ ಕಾರಣ, ಬೆಂಗಳೂರಿಗೆ ಕರೆತಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರು.
ಆದರೆ, 8 ಗಂಟೆಗೆ ಮುಂಚೆಯೇ ಹೇಮಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು` ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿದ್ದ ಹೇಮಶ್ರೀ ಅವರು, ಸಿರಿವಂತ, ಮರ್ಮ, ವೀರಪರಂಪರೆ, ಉಗ್ರಗಾಮಿ ಸೇರಿದಂತೆ ಹಲವು ಕನ್ನಡ ಚಲನಚಿತ್ರಗಳಲ್ಲೂ ನಟಿಸಿದ್ದರು. 2008ರ ವಿಧಾನಸಭೆ ಚುನಾವಣೆಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರು, ಜೆಡಿಎಸ್ ಮುಖಂಡರೂ ಆಗಿದ್ದ ಸುಧೀಂದ್ರ ಬಾಬು ಅವರನ್ನು 2011ರ ಜೂನ್ 22ರಂದು ವಿವಾಹವಾಗಿದ್ದರು.
`ಪತಿ ಈಗಾಗಲೇ ಮದುವೆಯಾಗಿದ್ದು, ನನ್ನನ್ನು ವಂಚಿಸಿದ್ದಾರೆ`ಅವರಿಗೆ ಆಗಲೇ 48 ವರ್ಷ ವಯಸ್ಸಾಗಿತ್ತು ಎಂದು ಮದುವೆಯಾದ ಮರುದಿನವೇ ಹೇಮಶ್ರೀ ಪೊಲೀಸರಿಗೆ ದೂರು ನೀಡಿದ್ದರು.ಅಲ್ಲದೆ ಸಂದರ್ಶನವೊಂದರಲ್ಲಿ "ಹೆತ್ತವರಿಗೆ ದುಡ್ಡಿನ ಆಸೆ ತೋರಿಸಿ ನನಗೆ ಇಷ್ಟವಿಲ್ಲದ ಒತ್ತಾಯದ ಮದುವೆ ಮಾಡಿದ್ದಾರೆ ನಾನು ವಿಚ್ಛೇದನ ತೆಗೆದುಕೊಳ್ಳುತೇನೆ" ಎಂದು ಬೇಸರಗೊಂಡು ಕಣ್ಣಿರು ಇಟ್ಟಿದ್ದರು. ಇದರಿಂದ ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.ಆದರೆ ನಂತರ ದೂರನ್ನು ಹಿಂಪಡೆದು ಪತಿಯೊಂದಿಗೆ ನಗರದಲ್ಲಿ ವಾಸವಾಗಿದ್ದರು.
`ಘಟನೆ ಸಂಬಂಧ ಅವರ ಪತಿ ಸುರೇಂದ್ರ ಬಾಬು ಅವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾಸ್ತವಾಂಶ ತಿಳಿಯಲಿದೆ` ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು ಇಂದು ಮದ್ಯಾಹ್ನ ಪರೀಕ್ಷೆಯ ವರದಿ ಬಂದಿದ್ದು ನಟಿ ಹೇಮಶ್ರೀ ತಲೆ ,ಮೈಮೇಲೆ ಮತ್ತು ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದ್ದು,ಹೊಟ್ಟೆಯಲ್ಲಿ ಕಪ್ಪು ಬಣ್ಣದ ದ್ರಾವಣ ಕಂಡು ಬಂದಿದ್ದು ವಿಷಪ್ರಾಶನ ವಾಗಿರಬಹುದು ಎಂದು ಶಂಕಿಸಲಾಗಿದೆ ವಿಜ್ಞಾನ ಪ್ರಯೋಗಲಕ್ಕೆ ಕಳುಹಿಸಲಾಗಿದೆ.
ಇದು ಅನುಮಾನಸ್ಪದ ಸಾವು ಎಂದು ವೈದ್ಯರು ದ್ರುಡಿಕರಿಸಿದ್ದಾರೆ ಅವರ ಪತಿ 8 ಗಂಟೆಗಳ ಕಾಲ ಕಾರಿನಲ್ಲಿಯೇ ಇಟ್ಟುಕೊಂಡು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ವರದಿಯಿಂದ ಸಾವಿನ ಹಿಂದಿನ ರಹಸ್ಯ ಬಹಿರಂಗವಾಗುವದು.ಶವವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಸಿಲುಕೊಂಡಿರುವ ಪತಿ ಸುರೇಂದ್ರ ಬಾಬು ಅವರನ್ನು ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಂತಹ ಒಬ್ಬ ಒಳ್ಳೆಯ ನಟಿಯನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದು ನೋವಿನ ಸಂಗತಿ ಒಟ್ಟಿನಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ....!!!! ಕನ್ನಡದ ಕಿರುತೆರೆಯ ನಟಿ ಹೆಮಶ್ರೀ ನಿಗೂಢ ಸಾವು
28 Sept 2012
ಕರ್ನಾಟಕಕ್ಕೆ ನೀರು ಕುಡಿಸಿ ತ.ನಾಡಿಗೆ ಕಾವೇರಿ ಹರಿಸಲು ಸುಪ್ರಿಂಕೋರ್ಟ್ ಆದೇಶ....!!!!!
11 Sept 2012
ಭಾರತದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ವಿಧಿವಶ....!!!!
ಭಾರತದ ಕ್ಷೀರ ಕ್ರಾಂತಿಯ ಹರಿಕಾರ,ಪಿತಾಮಹ ‘ಹಾಲಿನ ಮನುಷ್ಯ’ ಎಂದು ಖ್ಯಾತಿ ಪಡೆದಿದ್ದ ಡಾ.ವರ್ಗೀಸ್ ಕುರಿಯನ್ ರವಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಗುಜರಾತನ ಪಟೇಲ್ ಯುರೋಲಾಜಿಕಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ರ ವಾರ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
1921ರ ನವೆಂಬರ್ 26ರಂದು ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಅವರು, ಗುಜರಾತ್ ಸಹಕಾರಿ ಹಾಲು ಒಕ್ಕೂಟ(ಜಿಸಿಎಂಎಂಎಫ್) ಹುಟ್ಟು ಹಾಕಿದರಲ್ಲದೆ, ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಹೈನುಗಾರಿಕೆ ಮಾಡುವ ರೈತರಿಗೆ ಆಶಾದಾಯಕರಾದ ಕುರಿಯನ್
ಜೀವಮಾನದಲ್ಲೆಂದೂ ಒಂದು ತೊಟ್ಟು ಹಾಲನ್ನು ಕುಡಿಯದ ಡಾ. ವರ್ಗಿಸ್ ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನೇ ಈ ಅಮೂಲ್ ಬೇಬಿಯ ಅಪ್ಪ-ಅಮ್ಮ. ಡಾ. ಕುರಿಯನ್ ಅವರ ಅಮೂಲ್ ಹಾಲು ಇಂದು ಭಾರತದಾದ್ಯಂತ ಅತೀ ಹೆಚ್ಚು ಬಳಕೆಯಾಗುತ್ತಿದೆ.
ಜಸಿಎಂಎಂಎಫ್ ದೇಶದ ಅತೀ ದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವೆಂಬ ಖ್ಯಾತಿ ಪಡೆದಿದೆ. ‘ಆಮುಲ್’ ಬ್ರಾಂಡ್‌ನಲ್ಲಿ ಇದರ ಉತ್ಪನ್ನಗಳು ಇಂದು ದೇಶಾದ್ಯಂತ ಖ್ಯಾತಿ ಪಡೆದಿವೆ.
ವಿಶ್ವ ಆಹಾರ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಇವರಿಗೆ ಪದ್ಮಶ್ರೀ (1965), ಪದ್ಮಭೂಷಣ (1966), ಪದ್ಮವಿಭೂಷಣ (1999) ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ ಕುರಿಯನ್ ಅವರ ಚರಿತ್ರೆಯ ಪುಟಗಳನ್ನು ಓದುತ್ತಾ ಹೋದರೆ ಗ್ರಾಮಾಂತರ ಭಾರತ ಹೈನೋದ್ಯಮದ ಮೂಲಕ ಹೇಗೆಲ್ಲ ಪ್ರಗತಿಯನ್ನು ಕಂಡಿತು ಎಂಬುದನ್ನು ತಿಳಿಯಬಹುದು.ಇಂತಹ ಮಹಾನ ಪ್ರಸಿದ್ದ ವ್ಯಕ್ತಿಯನ್ನು ಭಾರತ ಇಂದು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.....!!!!!!!!
3 Aug 2012
ಲಂಡನ್ ಒಲಿಂಪಿಕ್: ಚಿನ್ನದ ಪದಕ ಮಿಸ್ ಮಾಡಿಕೊಂಡ ಸೈನಾ ನೆಹ್ವಾಲ್ ....!!
ಶುಕ್ರವಾರ ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ವಿರುದ್ಧ 21-13, 21-13ರ ನೇರ ಅಂತರದಲ್ಲಿ ಶರಣಾಗಿರುವ ಸೈನಾ, ಚಿನ್ನದ ಕನಸು ಭಗ್ನಗೊಂಡಿತು. ಇಂದಿನ ಪಂದ್ಯದಲ್ಲಿ ಸೋತರೂ
ಸೈನಾ ಪದಕ ನಿರೀಕ್ಷೆ ಇನ್ನೂ ಅಂತ್ಯಗೊಂಡಿಲ್ಲ. ಇದೀಗ ನಾಳೆ ಶನಿವಾರ ನಡೆಯಲಿರುವ ಕಂಚಿಗಾಗಿನ ಹೋರಾಟದಲ್ಲಿ ಎರಡನೇ ಸೆಮಿಫೈನಲ್ ಪಂದ್ಯದ ಸೋತ ಆಟಗಾರ್ತಿಯೊಂದಿಗೆ ಕಂಚಿನ ಪದಕಕ್ಕಾಗಿ ಸವಾಲು ಎದುರಿಸಲಿದ್ದಾರೆ.
ಕಳೆದ ದಿನವಷ್ಟೇ ಸೆಮಿಫೈನಲ್ ಪ್ರವೇಶ ಮಾಡಿದ್ದ ವಿಶ್ವ ನಂ. 5 ರ‌್ಯಾಂಕ್‌ನ ಸೈನಾ, ಈ ಸಾಧನೆ ಮಾಡಿದ ದೇಶದ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದರು. ಆದರೆ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿಯ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸುವಲ್ಲಿ ವಿಫಲವಾಗಿದ್ದಾರೆ.ಆದರೆ ಇನ್ನು ಗೆಲ್ಲುವ ತವಕದಲ್ಲಿ ಸೈನಾ ಇದ್ದಾರೆ.ಭಾರತೀಯರು ಗೆಲ್ಲಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ.ಕನಸು ನನಸಾಗಲಿ...!!!
2012 ವಿಶ್ವದ ಟಾಪ್ 10 ಪ್ರಭಾವಿ ಮಹಿಳೆ ಉದ್ಯಮಿಗಳು ಅದರಲ್ಲಿ ಭಾರತದ ಮಹಿಳೆಗೂ ಸ್ಥಾನ ...!!!!
ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂಮಹಿಳೆಯರು ತಮ್ಮ ಛಾಪು ಮೂಡಿಸಿದ್ದು ತಾವು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಪ್ರಮುಖ ಪತ್ರಿಕೆಗಳಾದ ದಿ ಫೈನಾನ್ಷಿಯಲ್ ಟೈಮ್ಸ್ ಹಾಗೂ ಫಾರ್ಚೂನ್ ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು ವಿವರ ಇಂತಿದೆ.ಅದರಲ್ಲಿ ಭಾರತದ ಮಹಿಳೆ ಸ್ಥಾನ ಸಿಕ್ಕಿದ್ದು ಹೆಮ್ಮೆಯ ವಿಷಯ.
1. ಐರೀನ್ ರೊಸೆನ್ಫೆಲ್ಡ್: ಅಮೇರಿಕಾದ ಉದ್ಯಮಿ ಐರೀನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಇವರು ಕಳೆದ 30 ವರ್ಷಗಳಿಂದ ಆಹಾರ ಹಾಗೂ ಪಾನೀಯ ಉದ್ಯಮದಲ್ಲಿದ್ದಾರೆ. ಅಮೇರಿಕಾದ ಕ್ರಾಫ್ಟ್ ಫುಡ್ಸ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಯಾಗಿರುವ ಇವರು, ಮೊದಲು ಪೆಪ್ಸಿಕೋ ಕಂಪೆನಿಯಲ್ಲಿ ಕೆಲಸ ಮಾಡುತಿದ್ದು 2006ರಲ್ಲಿ ಕ್ರಾಫ್ಟ್ ಕಂಪೆನಿ ಸೇರಿದರು. ಫೋರ್ಬ್ಸ್ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಇವರು ವಿಶ್ವದ 100 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿಯೂ ಇದ್ದರು.2. ಇಂದ್ರಾ ನೂಯಿ: ವಿಶ್ವದ ಎರಡನೇ ಅತೀ ದೊಡ್ಡ ಆಹಾರ ಮತ್ತು ಪಾನೀಯ ತಯಾರಿಕಾ ಕಂಪೆನಿ ಪೆಪ್ಸಿಕೋ ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆಯಾಗಿರುವ ಭಾರತೀಯ ಇಂದ್ರಾ ನೂಯಿ ಅವರಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದ್ದು , ಇವರು 1994 ರಲ್ಲಿ ಕಂಪೆನಿ ಸೇರಿ 2001 ರಲ್ಲಿ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಆದರು. ಇವರು 2007 ರಲ್ಲಿ 44 ವರ್ಷಗಳ ಇತಿಹಾಸ ಹೊಂದಿರುವ ಪೆಪ್ಸಿ ಕಂಪೆನಿಯ 5 ನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರು. ಫೋಬ್ಸ್ ಪತ್ರಿಕೆ ಇವರನ್ನು 2008 ರಲ್ಲಿ ವಿಶ್ವದ ಮೂರನೇ ಪ್ರಭಾವೀ ಮಹಿಳೆ ಎಂದು ಗುರುತಿಸಿದ್ದು, ವಾಲ್ ಸ್ಟ್ರೀಟ್ ಜರ್ನಲ್ ಕೂಡ 50 ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.
3.ಮಾರಿಸ್ಸ ಮೇಯರ್: ಅಮೇರಿಕಾ ಸಂಜಾತೆ ಯಾಹೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಮಾರಿಸ್ಸ ಮೇಯರ್ ಅವರು ಮೂರನೇ ಸ್ಥಾನದಲ್ಲಿದ್ದು ಫಾರ್ಚೂನ್ 500 ಕಂಪೆನಿಗಳ ಅತ್ಯಂತ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. 1999 ರಲ್ಲಿ ಗೂಗಲ್ ಸೇರಿದ ಇವರು ಕಂಪೆನಿಯ ಮೊದಲ ಮಹಿಳಾ ಇಂಜಿನಿಯರ್ ಕೂಡ ಆಗಿದ್ದು ಗೂಗಲ್ ನ ವಿವಿಧ ಹುದ್ದೆಗಳಲ್ಲಿ ೧೫ ವರ್ಷ ಕಾರ್ಯನಿರ್ವಹಿಸಿದ್ದಾರೆ. ಕಳೆದ ಜುಲೈ 2012ರಲ್ಲಿ ಇವರು ಯಾಹೂ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.
4 ಎಲ್ಲೆನ್ ಕುಲ್ಮಾನ್: ಅಮೇರಿಕಾದ ಎಲ್ಲೆನ್ ಕುಲ್ಮಾನ್ ಅವರು ಈ ಐ ಡು ಪಾಂಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅದ್ಯಕ್ಷೆ ಯಾಗಿದ್ದು ಜನರಲ್ ಮೋಟಾರ್‍ಸ್ ನ ಮಾಜಿ ನಿರ್ದೇಶಕಿಯೂ ಆಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ಫೋಬ್ಸ್ ಮ್ಯಾಗಜೀನ್ ಇವರಿಗೆ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ನೀಡಿತ್ತು. 206 ವರ್ಷಗಳ ಇತಿಹಾಸವಿರುವ ಡು ಪಾಂಟ್ ಕಂಪೆನಿಯ ಮೊದಲ ಮಾಹಿಳಾ ಮುಖ್ಯಸ್ಥೆಯೂ ಇವರಾಗಿದ್ದಾರೆ.
5. ಏಂಜೆಲಾ ಬ್ರಾಲೇ : ಅಮೇರಿಕಾದ ದೊಡ್ಡ ಆರೋಗ್ಯ ರಕ್ಷಾ ಕಂಪೆನಿ ವೆಲ್ ಪಾಯಿಂಟ್ ನ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎಂಜೆಲಾ ಕಂಪೆನಿಯ ವಿವಿದ ಹುದೆಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ.
6. ಆಂಡ್ರಿಯಾ ಜಂಗ್ : ಅಮೇರಿಕಾದ ಏವನ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 1999 ರಲ್ಲಿ ನೇಮಕಗೊಂಡ ಜಂಗ್ ಅವರು ವಿವಿದ ಹುದೆಗಳಲ್ಲಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. 2011 ರಲ್ಲಿ ಕಂಪೆನಿಯ ನೂತನ ಮುಖ್ಯಸ್ಥರ ಆಯ್ಕೆಯ ಜವಾಬ್ದಾರಿಯನ್ನೂ ಇವರಿಗೆ ನೀಡಲಾಗಿದ್ದು ಸೇವಾವಧಿಯನ್ನು ಕೂಡ ಎರಡು ವರ್ಷ ಮುಂದುವರೆಸಲಾಗಿದೆ.
7. ವಜೀನಿಯಾ ರೊಮೆಟ್ಟಿ: ವಿಶ್ವದ ಖ್ಯಾತ ಐಬಿಎಮ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಇವರು ಐಬಿಎಮ್ ನ ಮೊದಲ ಮಹಿಳಾ ಮುಖ್ಯಸ್ಥೆ ಆಗಿದ್ದಾರೆ. ಇವರಿಗೆ ಪಟ್ಟಿಯಲ್ಲಿ 7 ನೇ ಸ್ಥಾನ ನೀಡಲಾಗಿದ್ದು ಫಾರ್ಚೂನ್ ಮ್ಯಾಗಜೀನ್ ನಲ್ಲಿ ವಿಶ್ವದ 50 ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ಸತತ 7 ನೇ ವರ್ಷ 7 ನೇ ಸ್ಥಾನದಲ್ಲಿದ್ದಾರೆ. 2011 ರ ಡಿಸೆಂಬರ್ ನಲ್ಲಿ ಇವರನ್ನು ಕಂಪೆನಿಯ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು.
8 ಉರ್ಸುಲ ಬರ್ನ್ಸ್: ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ಬರ್ನ್ಸ್ ಅವರು ಜೆರಾಕ್ಸ್ ಕಂಪೆನಿಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿದ್ದಾರೆ. ಆಫ್ರಿಕನ್ ಅಮೇರಿಕನ್ನರಾದ ಇವರು 1980 ರಲ್ಲಿ ಜೆರಾಕ್ಸ್ ಕಂಪೆನಿಗೆ ಸೇರ್ಪಡೆಗೊಂಡರು.
9. ಮೆಗ್ ವಿಟ್ಮಾನ್ : ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪೆನಿ ಹ್ಯೂಲೆಟ್ ಪ್ಯಾಕರ್ಡ್(ಹೆಚ್‌ಪಿ) ಯ ಅದ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ವಿಟ್ಮಾನ್ ಅವರು ೯ ನೇ ಸ್ಥಾನದಲ್ಲಿದ್ದು ಮೊದಲು ವಾಲ್ಟ್ ಡಿಸ್ನೆ ಕಂಪೆನಿಯಲ್ಲಿ ಉಪಾದ್ಯಕ್ಷೆಯೂ ಆಗಿದ್ದರು. 2011ರ ಡಿಸೆಂಬರ್ ನಲ್ಲಿ ಕಂಪೆನಿಯ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಅವರು ಕಂಪೆನಿಯ ವಿವಿಧ ಸ್ಥರಗಳಲ್ಲಿ ಮೂರು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
10. ಶೆರಿಲ್ ಸಾಂಡ್‌ಬರ್ಗ್ : ವಿಶ್ವದ ಜನಪ್ರಿಯ ಹಾಗೂ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ನ ನಿರ್ದೇಶಕ ಮಂಡಳಿಯಲ್ಲಿದ್ದು ಮುಖ್ಯ ಆಪರೇಟಿಂಗ್ ಆಫೀಸರ್ ಅಗಿ ಕಾರ್ಯ ನಿರ್ವಹಿಸುತ್ತಿರುವ ಶೆರಿಲ್ ಅವರು ಮೊದಲು ಗೂಗಲ್ ನಲ್ಲಿ ಸೇವೆ ಸಲ್ಲಿಸುತಿದ್ದರು. ಟೈಮ್ ಮ್ಯಾಗಜೀನ್ ನ ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲೂ ಇವರಿಗೆ ಸ್ಥಾನ ನೀಡಲಾಗಿದೆ.
ತೊಟ್ಟಿಲನ್ನು ತೂಗುವ ಕೈ ಇಡೀ ಜಗತ್ತನ್ನೇ ಆಳಬಹುದು ಎನ್ನುವಂತೆ ಭಾರತದ ಮಹಿಳೆ ಮಹಿಳಾಮಣಿಗಳ ಸಾಧನೆ ಅಪ್ರತಿಮವಾದುದು ಹಾಗೇ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯು ತನ್ನನ್ನು ತಾನು ತೊಡಗಿಸಿಕೊಂಡು ಸ್ವಾವಲಂಬಿಯಾಗುತ್ತಿದ್ದಾಳೆ. ಇನ್ನು ಹೆಚ್ಚು ಹೆಚ್ಚು ಮಹಿಳೆಯರು ಬೆಳಕಿಗೆ ಬರುವಂತಾಗಲಿ....!!!!!!
25 Jun 2012
ಕೊಳವೆ ಬಾವಿ ದುರಂತ: ಕೊನೆಗೂ ಅಸುನೀಗಿದ ಪುಟಾಣಿ ಮಾಹಿ..!!
19 Jun 2012
ಪಾಪಿ..!! ತಾನೆ ಹೆತ್ತ 3ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿದ ನೀಚ ಪ್ರೆಂಚನ ಪಾಸ್ಕಲ್ ಬಂಧನ
4 Jun 2012
ಲಾಗೊಸ್ ನಲ್ಲಿ ವಿಮಾನ ದುರಂತ ಪ್ರಯಾಣಿಕರ ಸಜೀವ ದಹನ..!!
30 May 2012
ಮಾವಿನ ಹಣ್ಣು ಆಹಾ!!
ಮಾವಿನ ಹಣ್ಣಿನ ವಿಧಗಳು :ರಸಪುರಿ,ಮಲಗೋಬ,ತೋತಾಪುರಿ,ನೀಲಂ ,ಅಲ್ಫನ್ಸೋ
ಮಾವಿನ ಹಣ್ಣನ್ನು ತಿನ್ನುವದರಿಂದಾಗುವ ಉಪಯೋಗಗಳು :
5 Apr 2012
ಅಬ್ಬಾ!!ಬೆಂಗಳೂರಿಗಿಗ ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಹಣೆಪಟ್ಟಿ !!
ಬೆಂಗಳೂರಿನ ಬೆಲೆ ಗರಿಗೆದರುತಿದೆ !
ಯಾರು ಬಲ್ಲರು? ಈ ಬೆಂಗಳೂರಿನ
ಬೆಲೆಯ ಮಹಿಮೆಯ ಗಗನಕೆರುತಿದೆ!
ದುಬಾರಿ ಸಿಟಯ ಜನಸಾಮಾನ್ಯರ
ಪಾಡೇನು ಆ ಪರಮಾತ್ಮನೇ ಬಲ್ಲನು!!
ಭಾರತದಲ್ಲಿಯೇ ಸಿಲಿಕಾನ ಸಿಟಿ ಬೆಂಗಳೂರು ಅತೀ ಮುಂದುವರೆದ ನಗರವೆಂದು ಹೆಸರುವಾಸಿಯಾಗಿದೆ ಹಾಗೆಯೇ ಈಗ ಭಾರತದ ನಗರಗಳಲ್ಲಿಯೇ ಅತೀ ದುಬಾರಿ ನಗರ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ.
ಇತ್ತೀಚಿಗೆ ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ ಯಾವ ಯಾವ ನಗರಗಳಲ್ಲಿ ದಿನನಿತ್ಯದ ಪದಾರ್ಥಗಳು ದುಬಾರಿಯಾಗಿವೆ ಯಾವ ಯಾವ ನಗರಗಳು ಅಗ್ಗ ಎಂದು ಪರಿಶೀಲಿಸಿದಾಗ ಈ ವರದಿ ಬೆಳಕಿಗೆ
ಬಂದಿದೆ.ಈ ವರದಿಯಿಂದ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ದುಬಾರಿ ನಗರವೆಂಬ ಬಿರುದಿಗೆ ವಿರಾಜಮಾನವಾಗಿದೆ.ಹಾಗೆಯೇ ಕೆಂಪುಕೋಟೆ ದೆಹಲಿ ಕಡೆಯ ಸ್ಥಾನದಲ್ಲಿದೆ.ಇದಕ್ಕೆಮುಖ್ಯ ಕಾರಣ ಬೆಂಗಳೂರಿನಲ್ಲಿ ಐ ಟಿ ಕಂಪನಿಗಳ ಉದ್ಯೋಗಿಗಳ ಹಚ್ಚಿನ ವೇತನ ಐಶಾರಾಮಿ ಜೀವನ.ಹಾಗೂ ಜನರು ವಿನೂತನ ಶೈಲಿಯ ಉಡುಗೆ ತೊಡುಗೆಗಳಿಗೆ ಮಾರುಹೊಗುತ್ತಿರುವದು ಅದರಲ್ಲೂ ಕಾಯಿಪಲ್ಯ,ಉಡುಪಗಳು,ದಿನನಿತ್ಯದ ಸಾಮಾನುಗಳು ಬೆಲೆ ಗಗನಕ್ಕೆರಿದರೆ ಮನೆ ಬಾಡಿಗೆಗಳು ಬೆಂಗಳೂರಿನಲ್ಲಿ ಮುಗಿಲುಮುಟ್ಟಿವೆ ಇಲ್ಲಿಯ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಭರ್ಜರಿ ಹಣ ಗಳಿಸಿ ಲಕ್ಷದಿಪತಿಗಳಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು .ಅಷ್ಟೇ ಅಲ್ಲ ಇಲ್ಲಿಯ ಶಿಕ್ಷಣ,ಹೈಟೆಕ್ ಹೋಟೆಲ್ , ಆಸ್ಪತ್ರೆ ಖರ್ಚುಗಳು ಕರೆಂಟಬಿಲ್ ಎಲ್ ಪಿ ಜಿ ಗ್ಯಾಸ್ ಎಲ್ಲವು ಕೈಗೆಟುಕದಂತೆ ತುಟ್ಟಿಯಾಗುತ್ತುತ್ತಿದೆ ಇಷ್ಟೆಲ್ಲಾ ದುಬಾರಿಯಾಗಿರುವಾಗ ಬೆಂಗಳೂರು ದುಬಾರಿ ನಗರ ವೆಂಬ ಹಣೆಪಟ್ಟಿ ಅಂಟಿಸಿ ಕೊಳ್ಳದಿದ್ದರೆ ಹೇಗೆ ? ಹೀಗೆ ಮುಂದುವರಿದಲ್ಲಿ ಬಡಜನರ,ಸಾಮಾನ್ಯರ ಪರಿಸ್ತಿತಿ ಕಷ್ಟವಾಗುವದು. ದುಡ್ಡಿದ್ದವರಿಗೆ ಮಾತ್ರ ಬೆಂಗಳೂರು ಎಂಬಂತಾಗಿದೆ ಒಟ್ಟಿನಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅಧೋಗತಿಯಗುವದು ಬಡವರ ಉದ್ಧಾರ ಹೇಗೆ ತಾನೆ ಆದೀತು? ಕೊಳೆಗೇರಿ ನಿವಾಸಿಗಳು ,ಹಿಂದುಳಿದ ಅನಕ್ಷರಸ್ತರ ಪಾಡೇನು?ಹೊಟ್ಟೆಗಿಲ್ಲದೆ ಸಾಯಬೇಕೆ?ಇಂತಹ ವಾತಾವರಣದಲ್ಲಿ ಬದುಕು ಕಷ್ಟಕರ...ದುಬಾರಿ ಲೋಕದಲ್ಲಿ ಬಾಳು ಬದುಕೆಂಬ ದೋಣಿಯಲ್ಲಿ ಸಾಗುವದು ಬಲು ಕಷ್ಟ....!!
- ಬೆಂಗಳೂರು -415
- ಕೋಲ್ಕತ್ತಾ -405
- ಮುಂಬೈ -402
- ದೆಹಲಿ - 399
- ಚೆನೈ - 393
21 Mar 2012
ಅಳುವಿನಂಚಿ ನಲ್ಲಿರುವ ಗುಬ್ಬಚ್ಚಿಗಳನ್ನೂ ಕಾಪಾಡಿ !!
ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!
ಕೇಳಲು ನೋಡಲು ಮನಸ್ಸಿಗೆ ಆನಂದ!
ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !!
27 Feb 2012
ಇಂದು ಯೆಡಿಯುರಪ್ಪ ಗೆ 70 ನೆ ಹುಟ್ಟು ಹಬ್ಬದ ಸಂಭ್ರಮ..!!
16 Feb 2012
ಚಾಲೆಂಜಿಂಗ್ ಸ್ಟಾರ್ ದರ್ಶನ ಗೆ 35 ನೇ ಹುಟ್ಟು ಹಬ್ಬದ ಸಂಭ್ರಮ..!!
14 Feb 2012
ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್ ಆಚಾರ್ಯ ವಿಧಿವಶ..!!
10 Feb 2012
ಪಾಲಾಕ ಪಕೋಡ..!!
- ಕಡಲೆಹಿಟ್ಟು
- ಮೈದಾಹಿಟ್ಟು
- ಚಿರೋಟಿ ರವೆ
- ಕತ್ತರಿಸಿದ ಈರುಳ್ಳಿ
- ಹಿಡಿ ಪಾಲಾಕ ಸೊಪ್ಪು
- ಪುದಿನಾ ಸೊಪ್ಪು
- ಸ್ವಲ್ಪ ತುಪ್ಪ
- ಅಚ್ಚಖಾರದಪುಡಿ
- ಗರಂ ಮಸಾಲೆ
- ರುಚಿಗೆ ಉಪ್ಪು
- ಕರಿಯಲು ಎಣ್ಣೆ
- ಸೋಡಾ
- ಕೊತಂಬರಿ ಸೊಪ್ಪು
- ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಟಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!