ತಂಪಾದ ಗಾಳಿಯಲ್ಲಿ ಹಸಿರು ಸಿರಿಯಲಿ!!
ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!
ಕೇಳಲು ನೋಡಲು ಮನಸ್ಸಿಗೆ ಆನಂದ!
ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !!
ಇಂಪಾದ ಹಕ್ಕಿಗಳ ಕಲರವ ಸಿರಿ ಕಂಠದಲಿ!
ಕೇಳಲು ನೋಡಲು ಮನಸ್ಸಿಗೆ ಆನಂದ!
ಬಲು ಚಂದವೋ ಚಂದ ಗುಬ್ಬಚ್ಚಿ ಗಳ ಚಿಲಿಪಿಲಿ !!
ಇಂದಿನ ಅಧುನಿಕ ಅಭಿವೃದ್ದಿಯ ಭರಾಟೆಯಲ್ಲಿ ಚಿಲಿಪಿಲಿ ಹಕ್ಕಿಗಳ ಮಧುರ ದ್ವನಿ ಮಾಯವಾಗುತ್ತಿದೆ ಮಾನವ ಸಾಧನೆಯಾ ಮುಗಿಲು ಮುಟ್ಟಲು ಗುಬ್ಬಿಗಳ ವಿನಾಶಕ್ಕೆ ಕಾರಣನಾಗುತ್ತಿದ್ದು ವಿಶಾದನಿಯ ಸಂಗತಿ.ಅಳಿವಿನಂಚಿನಲ್ಲಿ ರುವ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ನೋಡುವ ಪುಟ್ಟ ಗುಬ್ಬಿಗಳ ನೋವಿನ ಕಥೆ ಕೇಳುವವರಿಲ್ಲ.ಗುಬ್ಬಿಗಳ ಪಾಡು ಹೇಳತೀರದು.ಹೆಚ್ಚುತ್ತಿರುವ ಮಾನವರ ವಿಚಾರಧಾರೆ ತಾಂತ್ರಿಕ ತರಂಗಾಂತರ ಅಲೆಗಳ ಹೊಡೆತಕ್ಕೆ ಸಿಲುಕಿ ಗುಬ್ಬಿಗಳು ಅಸುನೀಗಿ ಅವುಗಳ ಸಂತತಿ ಅಳುವಿನಂಚಿಗೆ ತಲುಪಿದೆ.ಹಿಂದೆಲ್ಲ ತಾಯಂದಿರು ಅಳುವ ಪುಟ್ಟ ಮಕ್ಕಳಿಗೆ ಚಿಲಿಪಿಲಿ ಸದ್ದು ಮಾಡುವ ಗುಬ್ಬಚಿಗಳನ್ನು ತೋರಿಸಿ ಸಮಾಧಾನಪಡಿಸುತ್ತಿದ್ದರು.ಆದರೆ ಮುಂದಿನ ಯುವ ಪೀಳಿಗೆಗೆ ಗುಬ್ಬಿಗಳು ನೋಡಲು ಸಿಗುವದು ಸಂಶಯಾಸ್ಪದ. ಚಿತ್ರ ಬಿಡಿಸಿ ತೋರಿಸುವ ಪರಿಸ್ಥಿತಿ ಬರಬಹುದು.ಮರ ಗಿಡ ಬಳ್ಳಿ ಗಳಲ್ಲಿ ವಾಸವಾಗಿ ಅಡಗಿ ಕುಳಿತು ಇಂಪಾದ ಸ್ವರದಿಂದ ಹೊರಡಿಸುವ ಚಿಲಿಪಿಲಿ ನಿನಾದ ಎಂತವರಿಗೂ ಮನಸ್ಸಿಗೋ ಮುದನೀಡುವದು ಈಗ ಈ ಹಕ್ಕಿಗಳಿಗೆ ನೆಲೆಯಿಲ್ಲದಂತಾಗಿದೆ ಇದಕ್ಕೆಲ್ಲ ಮನುಷ್ಯನ ಅಟ್ಟಹಾಸವೇ ಕಾರಣವಾಗಿದೆ.ಅಂದರೆ ಮುಗಿಲೆತ್ತರಕ್ಕೆ ಬೆಳೆದುನಿಂತಿರುವ ಗಿಡ ಮರ ಬಳ್ಳಿ ಗಳನ್ನೂ ಕಡಿದುರಿಳಿಸಿ ಆ ಜಾಗಗಳಲ್ಲಿ ಐಶಾರಾಮಿ ಜೀವನಕ್ಕಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಗುಬ್ಬಚಿಗಳಿಗೆ ಸೂರು ಇಲ್ಲದಂತೆ ಮಾಡುತ್ತಿದ್ದಾರೆ.ಆದರೆ ಅವುಗಳ ಸಂತತಿಯಾ ನೆನಪಿಗಾಗಿ ಉಳಿವಿಗಾಗಿ ಇಡೀ ಜಗತ್ತಿನಾದ್ಯಂತ ಪಕ್ಷಿ ಪ್ರೇಮಿಗಳು ಮೇ 21 2004 ರಿಂದ ಪ್ರತಿ ವರ್ಷ ಗುಬ್ಬಿಗಳ ದಿನವನ್ನಾಗಿ ಆಚರಿಸುತ್ತಿದ್ದಾರೆ ನೀವುಗಳು ಪಕ್ಷಿ ಪ್ರೆಮಿಗಳಿದ್ದರೆ ದಯತೋರಿ ಗುಬ್ಬಿಗಳ ಉಳಿವಿಗೆ ಸಹಕರಿಸಿ ಅವುಗಳಿಗಾಗಿ ಗಿಡಗಳನ್ನು ಬೆಳೆಸಿ ಮನೆಯ ಮುಂದೆ ಅವುಗಳ ಆಹಾರಕ್ಕಾಗಿ ಕಾಳು ಹಾಕಿ ನೀರು ತುಂಬಿಡಿ ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಪಕ್ಷಿಪ್ರೇಮಿ ಸಲಿಂ ಅಲಿಯಂತೆ ಕರುಣೆ ತೋರಿಸಿ.ಅವರಂತೆ ನೀವು ಸಹೃದಯಿಗಾಳಾಗಿ ...ಆಗ ಗುಬ್ಬಿಗಳ ಉಳುವಿಗೆ ಬೆಳಕು ನೀಡಿದಂತಾಗುತ್ತದೆ ಹಾಗೆ ಮಾಡಿದಲ್ಲಿ ನಮ್ಮ ಜೀವನವು ಸಾರ್ಥಕವಾದಂತೆ ಪುಟ್ಟ ಗುಬ್ಬಚ್ಚಿಗಳಿಗೆ ಜೀವ ಕೊಟ್ಟ ಕೈ ನಮ್ಮದಾಗುವದು.ನೀವು ಮಾಡುತ್ತಿರಲ್ಲವೇ...!!
ನೋವುಪಡುತ್ತಿರುವ ಗುಬ್ಬಿಗಳೇ ನಿವಾಗದಿರಿ ಗಲಿಬಿಲಿ
ನಿಮಗೂ ಒಂದು ಯುಗವಿದೆ ನಿಮಗೂ ಖಂಡಿತಾ!
ಬರುವದು ಒಂದು ಶುಭದಿನ ಅಳುಕದಿರಿ,ಕುಗ್ಗದಿರಿ !!
ಗುಬ್ಬಚ್ಚಿಗಳಿರಾ ಗುಬ್ಬಚ್ಚಿ ಗೂಡಿನಲ್ಲಿ ನೋಡುತಿರಿ
ಸದಾ ಕದ್ದು ಮುಚ್ಚಿ ಹರುಷದಿ ಸದಾ ಆನಂದದಿ!!
ಸ್ವಚ್ಚಂದದಾ ಹಕ್ಕಿಗಳೇ ಅಳುಕದಿರಿ ಸದಾಸಂತಸದ
ಕ್ಷಣ ನಿಮ್ಮದಾಗಿರಲಿ ನಿಮ್ಮಗಳ ಉಳಿವಿಗೆ
ಇದೋ ನನ್ನ ಪುಟ್ಟ ಅರ್ಪಣೆ ..!!
0 comments:
Post a Comment