ಗುರಗಾಂವ್: ಹರಿಯಾಣದ ಮನೆಸರ್ ಪ್ರದೇಶದ ಕೊಳವೆ ಬಾವಿಯೊಂದರ ರಲ್ಲಿ 70 ಅಡಿ ಆಳದಲ್ಲಿ ಸಿಲುಕಿ, ಸಾವು ಬದುಕಿನ ಮದ್ಯ ಹೋರಾಟ ನಡೆಸಿದ್ದ ನಾಲ್ಕು ವರ್ಷದ ಪುಟ್ಟ ಮಗು ಮಹಿ ಸತತ ನಾಲ್ಕು ದಿನಗಳ ಹರಸಾಹಸದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಭಾನುವಾರ ಶವವಾಗಿ ಸಿಕ್ಕಿದ್ದಾಳೆ.ಮಹಿ ತನ್ನ ಮನೆಯ ಹತ್ತಿರದಲ್ಲ್ಲಿಯೇ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅಲ್ಲಿಯೇ ಇದ್ದ ತೆರೆದ ಕೊಳವೆ ಬಾವಿಯಲ್ಲಿ ಅಕಸ್ಮಾತಾಗಿ ಆಯತಪ್ಪಿ ಬುಧವಾರ 20, ರಂದು ಬಿದ್ದಿದ್ದಳು.ಕೂಡಲೇ ವಿಷಯ ತಿಳಿದ ರಕ್ಷಣಾ ಕಾರ್ಯಕರ್ತರು ಬಂದು ನೆಲ ಅಗೆದು ಬದುಕಿಸಲು ಪ್ರಯತ್ನಪಟ್ಟರು ಯಶಸ್ವಿಯಾಗದೆ ಮಗು ಸತ್ತು ಶವವಾಗಿ ಸಿಕ್ಕಿ ದುರಂತವಾಗಿದೆ.ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಯತ್ನಪಟ್ಟು ಮಹಿಯನ್ನು ಕೊಳವೆಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಕೆ ಬದುಕಿ ಉಳಿದಿರಲಿಲ್ಲ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿ.ಸಿ.ಮೀನಾ ಹೇಳಿದರು.86 ಗಂಟೆಗಳ ಸತತ ಹಗಲಿರುಳು ಎನ್ನದೆ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗಳ ಕಾರ್ಯ ವ್ಯರ್ತವಾಗಿದೆ.
ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದ ತಂಡಕ್ಕೆ ಮಧ್ಯದಲ್ಲಿ ದೊಡ್ಡ ಕಲ್ಲು ಬಂಡೆಯೊಂದು ಎದುರಾಗಿ ಶೀಘ್ರ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟುಮಾಡಿತ್ತು. ಆದರೆ ಆ ಬಂಡೆ ಕೊರೆಯುವ ಕಾರ್ಯ ಕಳೆದ ರಾತ್ರಿಯಷ್ಟೇ ಮುಗಿಸಿದ ತಂಡ ನಿರೀಕ್ಷಿತ ಗುರಿ ತಲುಪಿದ್ದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹಿ ಕೊನೆಉಸಿರೆಳೆದಿದ್ದಳು. ಓ ದೇವರೇ ಆ ಪುಟ್ಟ ಮಗುವಿನ ಮೇಲೆ ನಿನಗೆ ಕರುಣೆ ಬರಲಿಲ್ಲವೇ...ಹೆತ್ತ ತಾಯಿಯ ನೋವ ನಿನಗೆ ಕೇಳಿಸಲಿಲ್ಲವೇ..ಮಹಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ ಓ ಮುದ್ದು ಕಂದಾ ಎಲ್ಲೆಗೆ ಹೋದೆ...ಮತ್ತೆ ಹುಟ್ಟಿ ನಿನ್ನ ತಾಯಿಯ ಮಡಿಲು ಸೇರು.....!!!
0 comments:
Post a Comment