ಬೆಂಗಳೂರು,ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಪೆಟ್ಟುಬಿದ್ದಿದೆ.ಕರ್ನಾಟಕದಲ್ಲಿ ತೀವ್ರ ಬರಗಾಲದ ಪರಿಸ್ಟಿತಿ ಎದುರಾಗಿದ್ದರೂ ಮೊದಲು ತಮಿಳುನಾಡಿಗೆ ದಿನಾ ಇಂತಿಷ್ಟು ಅಂತ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ಆದೇಶಿಸಿದೆ.
ಕಾವೇರಿ ನದಿ ಪ್ರಾಧಿಕಾರವು ಇತ್ತೀಚೆಗೆ ಸೂಚಿಸಿರುವಂತೆ ನೀರು ಬಿಡಿ ಎಂದು ಶುಕ್ರವಾರ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಇದರಿಂದ ದಿನಾ 9 ಸಾವಿರ ಕ್ಯುಸೆಕ್ಸ್ ನೀರನ್ನು ಅಕ್ಟೋಬರ್ 21ರವರೆಗೂ ತಮಿಳುನಾಡಿನತ್ತ ಹರಿಸಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ.
ಕರ್ನಾಟಕಕ್ಕೆ ನೀರು ಕುಡಿಸಿದ ಸು.ಕೋರ್ಟ್: ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪರಿಪಾಲಿಸದ ಕರ್ನಾಟಕವನ್ನು ಸು.ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವಕೀಲರು ಈ ಹಿಂದೆಯೇ ರಾಜ್ಯವನ್ನು ಎಚ್ಚರಿಸಿದ್ದರು.
ಸೆ. 19ರಂದು ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಕಾವೇರಿ ಪ್ರಾಧಿಕಾರ ಸಭೆಯ ಆದೇಶದಂತೆ ಕರ್ನಾಟಕ ದಿನಾ ನಮಗೆ 9 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು. ಆದರೆ ಅದು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ. ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿ ಎಂದು ತಮಿಳುನಾಡು ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರಿಂಕೋರ್ಟ್ ಆದೇಶ ನೀಡಿದೆ.ಕರ್ನಾಟಕ ಅನಿವಾರ್ಯವಾಗಿ ಕಾವೇರಿ ನೀರು ಬಿಡಲೇಬೆಕಾಗಿದೆ. ಸಕಾಲಕ್ಕೆ ಮಳೆ ಬೆಳೆ ಬಾರದೆ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ರೋಸಿ ಹೋಗಿರುವ ಕರ್ನಾಟಕದ ಜನತೆಗೆ ನುಂಗಲಾರದ ತುತ್ತಾಗಿದೆ.ಒಟ್ಟಿನಲ್ಲಿ ಸುಪ್ರಿಂಕೋರ್ಟ್ ಕರ್ನಾಟಕಕ್ಕೆ ನೀರು ಕುಡಿಸಿದೆ...!!!!
0 comments:
Post a Comment