4 Jun 2012

ಲಾಗೊಸ್ ನಲ್ಲಿ ವಿಮಾನ ದುರಂತ ಪ್ರಯಾಣಿಕರ ಸಜೀವ ದಹನ..!!


ಲಾಗೋಸ್: ನೈಜೀರಿಯಾದ ರಾಜಧಾನಿ ಲಾಗೋಸ್ ನಗರದಿಂದ ಅಬುಜಾಗೆ ಹೊರಟಿದ್ದ ಪ್ರಯಾಣಿಕರ ವಿಮಾನವು ಭಾನುವಾರ ಮದ್ಯಾಹ್ನ 2 ಅಂತಸ್ತಿನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 153 ಪ್ರಯಾಣಿಕರು,ಕಟ್ಟಡದಲ್ಲಿರುವ ಜನರು  ಸಾವನ್ನಪ್ಪಿರಬಹುದು    ಎಂದು ಶಂಕಿಸಲಾಗಿದೆ.
`ಡಾನಾ` ಸಂಸ್ಥೆಗೆ ಸೇರಿದ ವಿಮಾನವು ಲಾಗೋಸ್ ನಗರದ ಜನವಸತಿ ಪ್ರದೇಶದ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಇದರಿಂದ ತಕ್ಷಣ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಆಗ ಅಲ್ಲಿ ಜನಸಂದಣಿ ದಟ್ಟವಾಗಿತ್ತು ಎಂದು ತಿಳಿದುಬಂದಿದೆ.   
ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ನೈಜೀರಿಯಾದ ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಇದರ ಹೊರತಾಗಿ ವಿಮಾನ ಡಿಕ್ಕಿ ಹೊಡೆದ ಕಟ್ಟಡದಲ್ಲಿದ್ದ ಜನರೂ ಘಟನೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ.ದುರಂತದಲ್ಲಿ ವಿಮಾನದಲ್ಲಿಯಾ ಪ್ರಯಾಣಿಕರ ದೇಹಗಳು ಸುಟ್ಟು ಕರಕಲಾಗಿದ್ದು ಗುರುತು ಪತ್ತೆಯಾಗುತ್ತಿಲ್ಲ ಆದ್ದರಿಂದ ಶವಗಳನ್ನು ಗುರುತಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಮೃತರ ಸಂಖ್ಯೆ 153ನ್ನು ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೂ ಘಟನೆಯಲ್ಲಿ ಮೃತಪಟ್ಟವರ ನಿಖರವಾದ ಸಂಖ್ಯೆ ಲಭ್ಯವಾಗಿಲ್ಲ. ಬದುಕುಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ನೈಜೀರಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಲಾಗೋಸ್‌ನಿಂದ ವಿಮಾನ ಹೊರಟಿದ್ದ ವೇಳೆ ಆಗಸ ಸ್ವಚ್ಛಂದವಾಗಿತ್ತು. ಹೀಗಾಗಿ ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಆದರೆ ವಿಮಾನ ಹಠಾತ್ತನೆ ಪತನಕ್ಕೀಡಾದುದಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನ ತಂಡೋಪ ತಂಡವಾಗಿ ತಂಡವಾಗಿ ಜನರು ಬರುತ್ತಿದ್ದು ಯಮರಾಯನ ಅಟ್ಟಹಾಸಕ್ಕೆ ಮರುಕಪಡುತ್ತಿದ್ದಾರೆ.ಇದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ.ಘಟನೆ ನಡೆದಾಗ ಅಲ್ಲಿಯೇ ಇದ್ದ ಪ್ರತ್ಯಕ್ಹ್ಸದರ್ಸಿ ಗಿಫ್ಟ್ ಒನಿಬೋ :ನಾನು ಅಲ್ಲಿ ವಿಮಾನ ಹಾರಡುತ್ತಿದುದನ್ನ ನೋಡುತ್ತಿದ್ದೆ ಆಗೆ ಒಮ್ಮಿಂದೊಮ್ಮೆಲೆ ವಿಮಾನ ಕೆಳಗೆ ಬಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿತ್ತು"ಎಂದಿದ್ದಾರೆ.ಲಾಗೊಸ್   ನಗರದಲ್ಲಿ  ಸುಮಾರು 15 ಮಿಲಿಯನ್  ಜನಸಂಖ್ಯೆ ವಾಸಿಸುತ್ತಿದ್ದಾರೆ. 

0 comments:

Post a Comment

Share

Twitter Delicious Facebook Digg Stumbleupon Favorites More