ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು
ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..
ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!
ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.
ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ
ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.
1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು
ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ
ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.
19 Jul 2014
ಸಾರ್ವಜನಿಕರೇ ಕಾಮುಕರನ್ನು ಬದುಕಲು ಬಿಡಬೇಡಿ..!!
ಬೆಂಗಳೂರಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಆಟ ಆಡಿಕೊಂಡು ಅಂಗಳದಲ್ಲಿ ಇರಬೇಕಾದ ಮಗು ನಾಲ್ಕು ಗೋಡೆಗಳ ಮದ್ಯೆ ಬದುಕಬೇಕೇ ಕಾಮುಕರೇ ,ವ್ಯಭಿಚಾರಿಗಳೇ ನಿಮಗೆ ಕರುಣೆಯೇ ಇಲ್ಲವೇ ಹೆಣ್ಣಿನ ಬಗ್ಗೆ ಯಾಕೆ ಇಂತಹ ಭಾವನೆ ಇದು ನಾಯವೇ... ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ .. ಇದಕೆಲ್ಲಾ ಸಾರ್ವಜನಿಕರು ಪ್ರತಿಭಟಿಸಿ ನೀವೇ ಅತ್ಯಾಚಾರಿ ಕಾಮುಕರನ್ನು ಸಾಯಿಸಿ... !! ನೆನಪಿರಲಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಇಂತಹ ಕಾಮುಕರಿಗೆ ಬಲಿಯಾಗದಿರಲಿ... !! ನಿರ್ಲಕ್ಷಿಸಬೇಡಿ ನಿಮ್ಮ ಮಕ್ಕಳ ಹೊಣೆ ನಿಮ್ಮದು .
3 Apr 2014
Cricketer Sachin Tendulkar to act in Ashutosh Gowarikar-film based on his life..!!!
26 Mar 2014
ವಾರಾಣಸಿಯಲ್ಲಿ ಆಪ್ ಪಕ್ಷದ ಕೇಜ್ರಿವಾಲ್ಗೆ ಮೊಟ್ಟೆ, ಮಸಿ ಹಾಕಿ ಭರ್ಜರಿ ಸ್ವಾಗತ.. !!
ವಾರಾಣಸಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೆಜ್ರಿವಾಲ್ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಫರ್ಧಿಸುವದಾಗಿ ಪ್ರಚಾರ ಮಾಡಲು ಮಂಗಳವಾರ ವಾರಾಣಸಿಗೆ ಹೋಗಿದ್ದ ಕೇಜ್ರಿವಾಲ್ ಅವರ ಮೇಲೆ ಮೊಟ್ಟೆ ಹಾಗೂ ಮಸಿ ಎಸೆತದ ಸ್ವಾಗತ ದೊರೆಯಿತು.
ಗಂಗಾನದಿಯಲ್ಲಿ ಸ್ನಾನ ಮಾಡಿ ಅವರು ಕಾಶಿ ವಿಶ್ವನಾಥನ ದೇಗುಲದ ಹೊರಗೆ ನಿಲ್ಲಿಸಿದ್ದ ಕೇಜ್ರಿವಾಲ್ ಕಾರಿನತ್ತ ಮೊಟ್ಟೆ ತೂರಿದ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಹಿಂದೂಗಳ ಪವಿತ್ರ ನಗರದಿಂದ ಹೊರ ನಡೆಯುವಂತೆ ಆಗ್ರಹಿಸಿದರು.
ತಮ್ಮ ಪಕ್ಷ್ದದವರೊಂದಿಗೆ ಬೀದಿಯಲ್ಲಿ ಮೆರವಣಿಗೆ ಹೊರಟಾಗ ಕೇಜ್ರಿವಾಲ್, ಮೋದಿ ಬೆಂಬಲಿಗರಿಂದ ಹೆಜ್ಜೆಗೂ ತೊಂದರೆ ಅನುಭವಿಸಿದರು.
ದೇಶದ್ರೋಹಿ ಎಂದ ಕೂಗಿದ ಪ್ರತಿಭಟನೆ ಕಾರರು 'ಮೋದಿ' ಮೋದಿ ಎಂದು ಘೋಷಣೆ ಕೂಗಿದರು. ಜತೆಗೆ ಕೇಜ್ರಿವಾಲ್ ಜತೆ ಸಾಗಿದ ವಾಹನಗಳನ್ನು ಅಡ್ಡಗಟ್ಟಿದರು. ವಾರಾಣಸಿಯಿಂದ ಮೋದಿ ಮಾತ್ರ ಸ್ಪರ್ಧಿಸಬೇಕು ಎಂದು ಕೂಗಿದರು. ಮುನ್ನುಗ್ಗುತ್ತಿದ್ದ ಕೇಜ್ರಿ ವಿರೋಧಿಗಳನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿದರು. ಇದೇ ಸಂದರ್ಭದಲ್ಲಿ ಗುಂಪಿನಿಂದ ಅವರತ್ತ ಕಪ್ಪು ಮಸಿಯೂ ಬಿತ್ತು. ಇದರಿಂದ ಕೇಜ್ರಿವಾಲ್ ಅಲ್ಲದೆ ಆಪ್ ನಾಯಕರಾದ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರ ಮುಖ ಮತ್ತು ಬಟ್ಟೆಗೂ ಮಸಿ ಮೆತ್ತಿಕೊಂಡಿತು. ಮಸಿ ಎರಚಿದ ವ್ಯಕ್ತಿಯನ್ನು ಹಿಂದೂ ವಾಣಿ ಸೇನೆ ಸದಸ್ಯ ಅಂಬರೀಶ್ ಎಂದು ಗುರುತಿಸಲಾಗಿದೆ.ನಂತರ ಪೊಲೀಸರನ್ನು ಆತನನ್ನು ವಶಕ್ಕೆ ತೆಗೆದುಕೊಂಡರು.
ಇಂತಹ ಎಡರು ಅಡ ತಡೆಗಳ ನಡುವೆಯೂ ಕೇಜ್ರಿವಾಲ್, ಮೋದಿಯನ್ನು ಸೋಲಿಸುವುದಾಗಿ ಶಪಥ ಮಾಡಿದರು. ''ಬನಾರಸ್ನಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುತ್ತೇನೆ. ಮೋದಿ ವಿರುದ್ಧ ಸ್ಪರ್ಧಿಸುವುದು ಸಣ್ಣ ವಿಷಯ. ದೇಶವನ್ನು ಭ್ರಷ್ಟಾಚಾರದಿಂದ ಪಾರುಮಾಡುವುದು ದೊಡ್ಡ ವಿಷಯ,'' ಎಂದರು.
ಮೋದಿ ವಿರುದ್ಧ ಜಯ ಸಾಧಿಸಲು ತಮ್ಮನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದರು.
ಈ ಮಧ್ಯೆ, ಎಎಪಿ ಕಾರ್ಯಕರ್ತರು ಹಲವು ದಿನಗಳಿಂದ ತಮ್ಮ ನಾಯಕನ ಪರ ವಾರಾಣಾಸಿಯಲ್ಲಿ ಪ್ರಚಾರ ನಡೆಸಿದ್ದಾರೆ. ''ಕೇಜ್ರಿವಾಲ್ -ಮೋದಿ ನಡುವಿನ ಹಣಾಹಣಿ ಸಾಂಕೇತಿವಲ್ಲ. ಅಚ್ಚರಿಯ ಫಲಿತಾಂಶ ಹೊರಬೀಳಲಿದೆ,''ಎಂದು ಉತ್ತರ ಪ್ರದೇಶದದಲ್ಲಿ ಎಎಪಿಯ ವಕ್ತಾರರಾದ ವೈಭವ್ ಮಹೇಶ್ವರಿ ಹೇಳಿದರು.
ವಾರಾಣಸಿಗೆ ಬಂದ ಕೇಜ್ರಿವಾಲ್, ಈ ಪ್ರದೇಶದಲ್ಲಿ ನಾವು ನಡೆಸಿದ ಜನಮತ ಗಣನೆಯಲ್ಲಿ ಬಹುತೇಕ ಜನ ಮೋದಿ ವಿರುದ್ಧ ಸ್ಪರ್ಧಿಸಿ ಎಂದು ಹೇಳಿದರು. ಹೀಗಾಗಿ ಬಹುಜನ ಮತವನ್ನು ಪರಿಗಣಿಸಿ ಇಲ್ಲಿ ಅಖಾಡಕ್ಕಿಳಿಯುತ್ತಿರುವೆ ಎಂದು ಮಂಗಳವಾರ ಸಂಜೆ ಘೋಷಿಸಿದರು. ಇದೇ ವೇಳೆ ಅವರು ಗುಜರಾತ್ ಅಭಿವೃದ್ಧಿ ಮಾದರಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಘೋಷಿಸಿದರು.
ತಮ್ಮ ಮೇಲೆ ಇಂಕ್ ದಾಳಿ ನಡೆಸಿರುವುದು ನರೇಂದ್ರ ಮೋದಿ ಅವರ ಕುತಂತ್ರ. ಇದಕ್ಕೆ ಬೆದರುವುದಿಲ್ಲ. ಮೋದಿ ವಿರುದ್ಧ ಸೆಣಸುವುದು ಘನವಾದ ಸಂಗತಿಯೇನೂ ಅಲ್ಲ. ಅವರ ವಿರುದ್ಧ ಜಯ ಸಾಧಿಸುವೆ.ಎಂದು ಅರವಿಂದ್ ಕೆಜ್ರಿವಾಲ್ ಸ್ಪಸ್ಟ ಪಡಿಸಿದರು
ಜನರ ನಿರ್ಧಾರ ಯಾರಿಗೋ ಭ್ರಷ್ಥರಿಗೋ ಭ್ರಷ್ಟಾಚಾರ ನಿರ್ಮೂಲನ ಮಾಡಲು ಹೊರಟವರಿಗೋ ಗೊತ್ತಿಲ್ಲ.. !!ಯಾರಿಗೆಂದು ನೀವೇ ನಿರ್ಧರಿಸಿ...
ದೇಶದ ಅಭಿವೃದ್ದಿಗಾಗಿ ಪ್ರತಿಯೊಬ್ಬರು ಕೈಜೋಡಿಸಿ.ನಿಮ್ಮ ಅಮೂಲ್ಯ ವಾದ ಮತವನ್ನು ಹಾಕುವದನ್ನು ಮರೆಯದಿರಿ ಮತದಾನ ಪ್ರತಿಯೊಬ್ಬರ ಹಕ್ಕು..
19 Dec 2013
ಭಾರತದಲ್ಲಿ ಗೂಗಲ್ ಸರ್ಚ್ 2013: ಮೋದಿ ನಂ.1 ರಾಜಕಾರಣಿ.....!!
ಬೆಂಗಳೂರು, ಡಿ.18: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಮೂಲಕ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 'ಭಾರತೀಯ ರಾಜಕಾರಣಿ' ಎಂಬ ಹೆಗ್ಗಳಿಕೆಗೆ ಮತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಗೂಗಲ್ ಬಿಡುಗಡೆ ಮಾಡಿದ Zietgeist 2013ರ ವರದಿಯಲ್ಲಿ ನರೇಂದ್ರ ಮೋದಿ ಅವರ ಬಗ್ಗೆಯೇ ಹೆಚ್ಚು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ ಎಂಬ ಅಂಶವನ್ನು ಹೇಳಲಾಗಿದೆ.
ರಾಜಕಾರಣಿಗಳ ವಿಭಾಗದಲ್ಲಿ ಮೋದಿ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ. ಜತೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಟಾಪ್ 5 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಂ.6ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇದ್ದು, ಇವರ ನಂತರದ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ಸುಷ್ಮಾ ಸ್ವರಾಜ್ ನಂತರದ ಸ್ಥಾನಗಳಲ್ಲಿದ್ದಾರೆ.
'ಸುದ್ದಿ (News Events' ವಿಭಾಗದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟಿದೆ. ಈ ವಿಭಾಗದಲ್ಲಿ ಬ್ಲಾಕ್ ಬರಿ ಮಾರಾಟ 2ನೇ ಸ್ಥಾನಗಳಿಸಿದ್ದು, ರಾಹುಲ್ ದ್ರಾವಿಡ್ ನಿವೃತ್ತಿ ಸುದ್ದಿ 3 ನೇ ಸ್ಥಾನಗಳಿಸಿದೆ. ಟಾಪ್ ಟೆನ್ ಸದ್ದು ಮಾಡಿದ ಸುದ್ದಿಗಳು
* ಬ್ಲಾಕ್ ಬೆರಿ ಸೇಲ್
* ರಾಹುಲ್ ದ್ರಾವಿಡ್ ನಿವೃತ್ತಿ
* ಸೈನಾ ನೆಹ್ವಾಲ್
* ವಿಜಯ್ ಮಲ್ಯ ಕಿಂಗ್ ಫಿಷರ್ ಏರ್ ಲೈನ್ಸ್
* ಕರ್ನಾಟಕ ಎಲೆಕ್ಷನ್ ಫಲಿತಾಂಶ
* ಆರುಷಿ ತಲ್ವಾರ್ ಕೇಸ್
* ಏರ್ ಇಂಡಿಯಾ ಸುದ್ದಿ
* ಇಂಡಿಯನ್ ಎಕಾನಮಿ
ಅತೀ ಸುದ್ದಿ ಮಾಡಿರುವ ನರೇಂದ್ರ ಮೋದಿ ಒಬ್ಬ ಪ್ರತಿಭಾವಂತ ರಾಜಕಾರಣಿ ಎಂಬುದು ಸಾಬಿತಾಗಿದೆ ಅವರ ಪ್ರಧಾನಿ ಯಾಗುವ ಕನಸು ನನಸಾಗಲಿ ಜೈ ನಮೋ ... !!
30 Sept 2013
ಮಶ್ರುಂ (ಅಣಬೆ )ಚಿತ್ರಾನ್ನ .....!!!!
- ಬೇಯಿಸಿದ ಅನ್ನ ೧/೨
- ಮಸ್ರುಮ್ ಬೇಕಾಗುವಷ್ಟು
- ಎಣ್ಣೆ
- ಜೀರಿಗೆ
- ಸಾಸಿವೆ
- ಕರಿಬೇವು
- ಹಸಿ ಮೆಣಸಿನಕಾಯಿ ೪
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
3 Sept 2013
ಅಂಜನಾ ಪದ್ಮನಾಭನ್ ಈ ವರ್ಷದ Indian Ideal junior singer award Winner...!!!!
ಆರಂಭದಿಂದಲೂ ಅಂಜನಾ ಹೆಚ್ಚು ಜನಪ್ರಿಯತೆ ಪಡೆದಿದ್ದಳು. ಆಕೆ ಹಾಡಿದ ಕಿನಾರಾ ಚಿತ್ರದ ಮೆರಿ ಆವಾಜ್ ಹಿ ಪೆಹೆಚಾನಾ ಹೈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರೇಕ್ಷಕರೂ ಸೇರಿದಂತೆ ತೀರ್ಪುಗಾರರು ಆಕೆಯನ್ನು ಹೊಗಳಿ ಕೊಂಡಾಡಿದ್ದರು. ಅಂಜನಾಗೆ ನಿರರ್ಗಳವಾಗಿ ಹಿಂದಿ ಮಾತನಾಡಲು ಬರುವುದಿಲ್ಲ, ಹೀಗಿದ್ದೂ ಆಕೆ ಹಿಂದಿ ಹಾಡುಗಳನ್ನು ಕಲಿತು, ಕಾರ್ಯಕ್ರಮದಲ್ಲಿ ಹಾಡಿದ್ದು ಪ್ರಶಂಸೆಗೆ ಪಾತ್ರವಾಗಿತ್ತು. ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ, ಈ ಗೆಲುವು ಖುಷಿ ನೀಡಿದೆ ಎಂದು ಅಂಜನಾ ಹೇಳಿದ್ದಾರೆ. ಆಕೆಗೆ ಪ್ರಶಸ್ತಿ ಟ್ರೋಫಿಯೊಂದಿಗೆ 25 ಲಕ್ಷ ಬಹುಮಾನ, ನಿಸ್ಸಾನ್ ಮೈಕ್ರಾ ಕಾರು, ಕೋಟಕ್ ಮಹೀಂದ್ರಾ ಸಂಸ್ಥೆಯಿಂದ ಐದು ಲಕ್ಷ ಹಾಗೂ ಹಾರ್ಲೆಕ್ಸ್ನಿಂದ ಎರಡು ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಂತಿಮ ಸುತ್ತಿನಲ್ಲಿ ಶಹೀದ್ ಕಪೂರ್, ರಾಮ್ಚರಣ್, ಪ್ರಿಯಾಂಕಾ ಛೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು.ಬೆಂಗಳೊರಿನ ೫ ನೇ ತರಗತಿಯಲ್ಲಿ ಓದುತ್ತಿರುವ ಅಂಜನಾಳ ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿ ಸ್ವಾಗತಿಸಿದ್ದಾರೆ
12 May 2013
ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ...
ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ...
20 Jan 2013
ಲಂಕಾದ ಖ್ಯಾತ ಕ್ರಿಕೆಟಿಗ ದಿಲ್ಶಾನ್ ವಿರುದ್ಧ ಪ್ರಕರಣ ದಾಖಲು..!!
ದಿಲ್ಶನ್ ವಾಸವಾಗಿರುವ ಪಕ್ಕದ ಮನೆಯಲ್ಲಿ ರೇಣುಕಾ ಡಿ ಕೋಸ್ಟಾ ಎಂಬುವವರು ವಾಸವಾಗಿದ್ದು, ಅವರು ಮಿರಿಹಾನ ಪೊಲೀಸ್ ಸ್ಟೇಸನ್ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ಕ್ಯಾಮರಾ ಈಜುಕೊಳ ಮುಖವಾಗಿ ಅಳವಡಿಸಲಾಗಿರುವುದು ಸತ್ಯ ಎಂಬ ಸುದ್ದಿ ಹರಿದಾಡುತ್ತಿದ್ದೆ.
ಮತ್ತೊಂದು ವರದಿಯ ಪ್ರಕಾರ ಪೊಲೀಸರು ದಿಲ್ಶನ್ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಅದು ಈಜುಕೊಳದ ಮುಖವಾಗಿ ಅಳವಡಿಸಿಲ್ಲ ಎಂದು ತಿಳಿಸಲಾಗಿದೆ. ರೇಣುಕಾ ಪತಿ ಇರಾಕ್ನಲ್ಲಿ ಉದ್ಯೋದಲ್ಲಿದ್ದು, ತನ್ನ ಎರಡು ಶಾಲಾ ಮಕ್ಕಳ ಜತೆ ವಾಸವಾಗಿದ್ದಾರೆ. ದಿಲ್ಶನ್ ಮತ್ನಿ ಮಂಜುಳಾ ಮತ್ತು ರೇಣುಕಾ ಉತ್ತಮ ಸ್ನೇಹಿತರಾಗಿದ್ದು, ದಿಲ್ಶನ್ ಕೂಡ ಹಲವು ಬಾರಿ ರೇಣುಕಾ ಮನೆಗೆ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2010ರಲ್ಲಿ ರೇಣುಕಾ ಮತ್ತು ಅವರ ಪತಿ ಹೆಸರಲ್ಲಿ ಮನೆಯನ್ನು ಖರೀದಿಸಿದ್ದರು.ಇದು ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ರವರ ವರಿಗೆ ತಿಳಿಯದೇ ನಡೆದಿರುವ ಅಚಾತುರ್ಯವಾಗಿರಬಹುದು ತಪ್ಪಿದ್ದರೆ ಸರಿಪಡಿಸಿಕೊಳ್ಳುವದು ಸೂಕ್ತ ನಿವೇನಂತಿರಾ?
















