ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ...
ಬೆಂಗಳೂರು :ಕರ್ನಾಟಕದ ನಿಯೋಜಿತ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುಂಜಾನೆ ೧೧ ಗಂಟೆಗೆ ರಾಜ್ಯಪಾಲರ ಹಾಗು ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ ನಾಳೆ ಅಕ್ಷಯ ತೃತೀಯ ದಿನ ರಾಜ್ಯದ ೨ ೮ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಇಲಾಖೆಯ ಎಲ್ಲ ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ ಸಿದ್ದತೆ ಮಾಡಿದ್ದಾರೆ . ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ನೆರವೇರಿಸಿ ನಂತರ ಸಾಹಿತಿ ದೇವನೂರು ಮಾದೇವರ ಮನೆಗೆ ತೆರಳಿ ಮಾತುಕತೆ ನಡೆಸಿದರು.
ಕಂಟೀರವ ಕ್ರೀಡಾಂಗಣದಲ್ಲಿ ಏಕ ವ್ಯಕ್ತಿಯಾಗಿ ಪ್ರಮಾಣವಚನ ಸ್ವಿಕರಿಸಿ ನಂತರ ವಿಧಾನಸೌಧಕ್ಕೆ ತೆರಳಿ ಎಲ್ಲಾ ಅಧಿಕಾರಿಗಳ ಮುಂದೆ ಅಧಿಕರವಹಿಸಿಕೊಳ್ಳಲಿದ್ದಾರೆ ಸಾಮಾನ್ಯವಾಗಿ ನಿಯಮದ ಪ್ರಕಾರ ಸಂಪುಟ ಸಭೆ ನಡೆಯಲಿದೆ
ನಂತರ ದೇಶದ ಅಭಿವೃದ್ದಿ ಬಗ್ಗೆ ಆಳವಾಗಿ ಚರ್ಚಿಸಲಿದ್ದಾರೆ. ೧ ಗಂಟೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತುಕತೆ ನಡೆಸಲಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಗಣ್ಯಧಿಗಣ್ಯರು ಆಗಮಿಸಲಿದ್ದಾರೆ. ಪ್ರೇಕ್ಷಕರಿಗಾಗಿ ೩ ೦ ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಾಜಿಸಚಿವರು, ಮಾಜಿ ಶಾಸಕರು ,ಗಣ್ಯರಿಗಾಗಿ ೨ ಸಾವಿರ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.ನಂತರ ಸಿದ್ದರಾಮಯ್ಯನವರು ದೆಹಲಿಗೆ ತೆರಳಿ ಸಚಿವ ಸಂಪುಟ ಸಭೆಯ ರಚನೆಯನ್ನು ಕುರಿತು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಅವರೊಂದಿಗೆ ೧೦ ಮಂದಿ ಪ್ರಮಾಣವಚನ ಸ್ವಿಕರಿಸಲಿದ್ದಾರೆ. ಒಟ್ಟಿನಲ್ಲಿ ಜನರ ಒಳಿತಿಗಾಗಿ ಶ್ರಮಿಸಲಿ ಅಭಿವೃದ್ದಿಯ ಕಡೆಗೆ ಗಮನಹರಿಸಿ ಸ್ಪಂದಿಸಲಿ ಎಂದು ನೂತನ ಮುಖ್ಯಮಂತ್ರಿಗೆ ಶುಭ ಹಾರೈಸೋಣ ....
0 comments:
Post a Comment