ಬೆಂಗಳೂರಿನ ಮುದ್ದಾದ ಕನ್ನಡದ ಹುಡುಗಿ ಅಂಜನಾ ಪದ್ಮನಾಭನ್ ಈ ವರ್ಷದ ಇಂಡಿಯನ್ ಐಡಲ್ ಜ್ಯೂನಿಯರ್ ಆಗಿ ಹೊರಹೊಮ್ಮಿದ್ದಾರೆ. ಸರಾಗವಾಗಿ ಹಿಂದಿ ಮಾತನಾಡಲು ಬಾರದಿದ್ದರೂ ಸ್ಪಷ್ಟವಾಗಿ ಶೃತಿಬದ್ದವಾಗಿ ಕೋಗಿಲೆಯಂತೆ ಹಾಡಿ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ ದೇಶದ ಎಲ್ಲಾ ಭಾಗಗಳಿಂದ ೮೦ ಸ್ಪರ್ಧಿಗಳು ಭಾಗವಹಿಸಿದ್ದರು .ಕೊನಗೆ ನಾಲ್ವರು ಮಾತ್ರ ಪೈನಲ್ ಸುತ್ತು ಪ್ರವೇಶಿಸಿದ್ದರು ಉತ್ತರ ವಲಯದಿಂದ ಜಮ್ಮು ಮತ್ತು ಕಾಶ್ಮೀರದಿಂದ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನಿಂದ ಅಂಜನಾ, ಪೂರ್ವ ವಲಯದಿಂದ ಪಶ್ಚಿಮ ಬಂಗಾಳದ ದೇಬಾಂಜನಾ ಕರ್ಮಾಕರ್ ಹಾಗೂ ಪಶ್ಚಿಮ ವಲಯದಿಂದ ಅಹಮದಾಬಾದಿನ ನಿರ್ವೇಶ್ ಡೇವ್ ಸ್ಪರ್ದೇಯಲ್ಲಿದ್ದರು. ಅಂತಿಮವಾಗಿ ರೋಚಕ ಸ್ಪರ್ದೆಯಲ್ಲಿ ಪ್ರೇಕ್ಷಕರು ಹಾಗೂ ತೀರ್ಪುಗಾರರ ಒಮ್ಮತದ ಅಭಿಪ್ರಾಯದಂತೆ ಅಂಜನಾ ಮನಗೆದ್ದ ಶ್ರೇಷ್ಠ ಗಾಯಕಿಯಾಗಿ ಹೊರಬಂದಳು.
ಆರಂಭದಿಂದಲೂ ಅಂಜನಾ ಹೆಚ್ಚು ಜನಪ್ರಿಯತೆ ಪಡೆದಿದ್ದಳು. ಆಕೆ ಹಾಡಿದ ಕಿನಾರಾ ಚಿತ್ರದ ಮೆರಿ ಆವಾಜ್ ಹಿ ಪೆಹೆಚಾನಾ ಹೈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರೇಕ್ಷಕರೂ ಸೇರಿದಂತೆ ತೀರ್ಪುಗಾರರು ಆಕೆಯನ್ನು ಹೊಗಳಿ ಕೊಂಡಾಡಿದ್ದರು. ಅಂಜನಾಗೆ ನಿರರ್ಗಳವಾಗಿ ಹಿಂದಿ ಮಾತನಾಡಲು ಬರುವುದಿಲ್ಲ, ಹೀಗಿದ್ದೂ ಆಕೆ ಹಿಂದಿ ಹಾಡುಗಳನ್ನು ಕಲಿತು, ಕಾರ್ಯಕ್ರಮದಲ್ಲಿ ಹಾಡಿದ್ದು ಪ್ರಶಂಸೆಗೆ ಪಾತ್ರವಾಗಿತ್ತು. ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ, ಈ ಗೆಲುವು ಖುಷಿ ನೀಡಿದೆ ಎಂದು ಅಂಜನಾ ಹೇಳಿದ್ದಾರೆ. ಆಕೆಗೆ ಪ್ರಶಸ್ತಿ ಟ್ರೋಫಿಯೊಂದಿಗೆ 25 ಲಕ್ಷ ಬಹುಮಾನ, ನಿಸ್ಸಾನ್ ಮೈಕ್ರಾ ಕಾರು, ಕೋಟಕ್ ಮಹೀಂದ್ರಾ ಸಂಸ್ಥೆಯಿಂದ ಐದು ಲಕ್ಷ ಹಾಗೂ ಹಾರ್ಲೆಕ್ಸ್ನಿಂದ ಎರಡು ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಂತಿಮ ಸುತ್ತಿನಲ್ಲಿ ಶಹೀದ್ ಕಪೂರ್, ರಾಮ್ಚರಣ್, ಪ್ರಿಯಾಂಕಾ ಛೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು.ಬೆಂಗಳೊರಿನ ೫ ನೇ ತರಗತಿಯಲ್ಲಿ ಓದುತ್ತಿರುವ ಅಂಜನಾಳ ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿ ಸ್ವಾಗತಿಸಿದ್ದಾರೆ

0 comments:
Post a Comment