ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

19 Dec 2013

ಭಾರತದಲ್ಲಿ ಗೂಗಲ್ ಸರ್ಚ್ 2013: ಮೋದಿ ನಂ.1 ರಾಜಕಾರಣಿ.....!!

ಭಾರತದಲ್ಲಿ ಗೂಗಲ್ ಸರ್ಚ್ 2013: ಮೋದಿ ನಂ.1 ರಾಜಕಾರಣಿ

ಬೆಂಗಳೂರು, ಡಿ.18: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಮೂಲಕ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 'ಭಾರತೀಯ ರಾಜಕಾರಣಿ' ಎಂಬ ಹೆಗ್ಗಳಿಕೆಗೆ ಮತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಗೂಗಲ್ ಬಿಡುಗಡೆ ಮಾಡಿದ Zietgeist 2013ರ ವರದಿಯಲ್ಲಿ ನರೇಂದ್ರ ಮೋದಿ ಅವರ ಬಗ್ಗೆಯೇ ಹೆಚ್ಚು ಜನರು ಗೂಗಲ್ ‌ನಲ್ಲಿ ಸರ್ಚ್ ಮಾಡಿದ್ದಾರೆ ಎಂಬ ಅಂಶವನ್ನು ಹೇಳಲಾಗಿದೆ. 
     ರಾಜಕಾರಣಿಗಳ ವಿಭಾಗದಲ್ಲಿ ಮೋದಿ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ. ಜತೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಟಾಪ್ 5 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಂ.6ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇದ್ದು, ಇವರ ನಂತರದ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದ್ದಾರೆ.
    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ಸುಷ್ಮಾ ಸ್ವರಾಜ್ ನಂತರದ ಸ್ಥಾನಗಳಲ್ಲಿದ್ದಾರೆ.
'ಸುದ್ದಿ (News Events' ವಿಭಾಗದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟಿದೆ. ಈ ವಿಭಾಗದಲ್ಲಿ ಬ್ಲಾಕ್ ಬರಿ ಮಾರಾಟ 2ನೇ ಸ್ಥಾನಗಳಿಸಿದ್ದು, ರಾಹುಲ್ ದ್ರಾವಿಡ್ ನಿವೃತ್ತಿ ಸುದ್ದಿ 3 ನೇ ಸ್ಥಾನಗಳಿಸಿದೆ. ಟಾಪ್ ಟೆನ್ ಸದ್ದು ಮಾಡಿದ ಸುದ್ದಿಗಳು

 * PM Candidature of Narendra Modi
 * ಬ್ಲಾಕ್ ಬೆರಿ ಸೇಲ್
 * ರಾಹುಲ್ ದ್ರಾವಿಡ್ ನಿವೃತ್ತಿ
 * ಸೈನಾ ನೆಹ್ವಾಲ್
 * ವಿಜಯ್ ಮಲ್ಯ ಕಿಂಗ್ ಫಿಷರ್ ಏರ್ ಲೈನ್ಸ್
 * ಕರ್ನಾಟಕ ಎಲೆಕ್ಷನ್ ಫಲಿತಾಂಶ
 * ಆರುಷಿ ತಲ್ವಾರ್ ಕೇಸ್
 * ಏರ್ ಇಂಡಿಯಾ ಸುದ್ದಿ
 * ಇಂಡಿಯನ್ ಎಕಾನಮಿ
      ಅತೀ ಸುದ್ದಿ ಮಾಡಿರುವ ನರೇಂದ್ರ ಮೋದಿ ಒಬ್ಬ ಪ್ರತಿಭಾವಂತ ರಾಜಕಾರಣಿ ಎಂಬುದು ಸಾಬಿತಾಗಿದೆ ಅವರ ಪ್ರಧಾನಿ ಯಾಗುವ ಕನಸು ನನಸಾಗಲಿ  ಜೈ ನಮೋ ... !!

30 Sept 2013

ಮಶ್ರುಂ (ಅಣಬೆ )ಚಿತ್ರಾನ್ನ .....!!!!

        ಭಾರತದಲ್ಲಿ ಅತೀ ಹೆಚ್ಚು ವಿವಿಧ ರೀತಿಯ ಅನ್ನ ಹೆಚ್ಚಾಗಿ ತಿನ್ನುವದರಿಂದ ವಿವಿಧ ತರಹದ ಚಿತ್ರಾನ್ನ ,ಪುಳಿಯೋಗರೆ
ಖಾರಬಾತ್ ,ಟೋಮೋಟೋ ಬಾತ್ ಹೀಗೆ ಬೇರೆ ಬೇರೆ ರೀತಿಯಾಗಿ ಮಾಡುತ್ತಾರೆ ಅದರಲ್ಲೂ ಬೆಂಗಳುರಿನಲ್ಲಿ ಜನರು  ತಮಗಿಷ್ಟವಾದ ಅನ್ನವನ್ನು ಮಾಡಿಕೊಳ್ಳುತ್ತಾರೆ ಮಕ್ಕಳ ಟಿಫ್ನಗೆ ,ಆಫೀಸಿಗೆ ತೆಗೆದುಕೊಂಡು ಹೋಗಲು ಅವಸರದ ಸಮಯದಲ್ಲಿ ಮಾಡಿಕೊಳ್ಳುತ್ತಾರೆ ಅದರಲ್ಲೂ ಭಾರತದಲ್ಲಿ ಮೊದಲಿನಿಂದಲೂ ಅನ್ನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ.
    



  • ಬೇಯಿಸಿದ ಅನ್ನ ೧/೨
  • ಮಸ್ರುಮ್ ಬೇಕಾಗುವಷ್ಟು 

  • ಎಣ್ಣೆ 

  • ಜೀರಿಗೆ 
  • ಸಾಸಿವೆ 
  • ಕರಿಬೇವು 
  • ಹಸಿ ಮೆಣಸಿನಕಾಯಿ ೪ 
  • ರುಚಿಗೆ ಉಪ್ಪು 
  • ಕೊತ್ತಂಬರಿ ಸೊಪ್ಪು 
ಮಾಡುವ ವಿಧಾನ :
ಮೊದಲು ಎಣ್ಣೆ ಹಾಕಿ ಸಾಸಿವೆ ,ಜೀರಿಗೆ,ಕರಿಬೇವು  ಹಾಕಿ ಒಗ್ಗರಣೆ ಹಾಕಿ ಆಮೇಲೆ ಕತ್ತರಿಸಿದ ಮಶ್ರುಂ ಹಾಕಿ ಫ್ರೈ ಮಾಡಿ ನಂತರ ಮೆಣಸಿನಕಾಯಿ,ಉಪ್ಪು  ಹಾಕಿ ತದನಂತರ ರೆಡಿ ಮಾಡಿದ ರೈಸ್ ಹಾಕಿ ಸ್ವಲ್ಪ ಬೇಯಿಸಿ   ಮೇಲೆ ಕೊತಂಬರಿ ಹಾಕಿ  ನಂತರ ರುಚಿ ನೋಡಿ ತಿನ್ನಲು ಸೂಪರ್ ಆಗಿರುತ್ತೆ ಮರೆಯದೆ ಮಾಡಿ ನೋಡೇ ಬಿಡಿ....  

3 Sept 2013

ಅಂಜನಾ ಪದ್ಮನಾಭನ್ ಈ ವರ್ಷದ Indian Ideal junior singer award Winner...!!!!

ಬೆಂಗಳೂರಿನ ಮುದ್ದಾದ ಕನ್ನಡದ   ಹುಡುಗಿ ಅಂಜನಾ ಪದ್ಮನಾಭನ್ ಈ ವರ್ಷದ ಇಂಡಿಯನ್ ಐಡಲ್  ಜ್ಯೂನಿಯರ್  ಆಗಿ ಹೊರಹೊಮ್ಮಿದ್ದಾರೆ. ಸರಾಗವಾಗಿ ಹಿಂದಿ ಮಾತನಾಡಲು ಬಾರದಿದ್ದರೂ ಸ್ಪಷ್ಟವಾಗಿ ಶೃತಿಬದ್ದವಾಗಿ ಕೋಗಿಲೆಯಂತೆ  ಹಾಡಿ  ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ  ದೇಶದ ಎಲ್ಲಾ ಭಾಗಗಳಿಂದ ೮೦  ಸ್ಪರ್ಧಿಗಳು ಭಾಗವಹಿಸಿದ್ದರು .ಕೊನಗೆ  ನಾಲ್ವರು ಮಾತ್ರ ಪೈನಲ್  ಸುತ್ತು  ಪ್ರವೇಶಿಸಿದ್ದರು  ಉತ್ತರ ವಲಯದಿಂದ ಜಮ್ಮು ಮತ್ತು ಕಾಶ್ಮೀರದಿಂದ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನಿಂದ ಅಂಜನಾ, ಪೂರ್ವ ವಲಯದಿಂದ ಪಶ್ಚಿಮ ಬಂಗಾಳದ ದೇಬಾಂಜನಾ ಕರ್ಮಾಕರ್ ಹಾಗೂ ಪಶ್ಚಿಮ ವಲಯದಿಂದ ಅಹಮದಾಬಾದಿನ ನಿರ್ವೇಶ್ ಡೇವ್ ಸ್ಪರ್ದೇಯಲ್ಲಿದ್ದರು. ಅಂತಿಮವಾಗಿ ರೋಚಕ ಸ್ಪರ್ದೆಯಲ್ಲಿ  ಪ್ರೇಕ್ಷಕರು ಹಾಗೂ ತೀರ್ಪುಗಾರರ ಒಮ್ಮತದ ಅಭಿಪ್ರಾಯದಂತೆ ಅಂಜನಾ ಮನಗೆದ್ದ  ಶ್ರೇಷ್ಠ ಗಾಯಕಿಯಾಗಿ ಹೊರಬಂದಳು.

ಆರಂಭದಿಂದಲೂ ಅಂಜನಾ ಹೆಚ್ಚು ಜನಪ್ರಿಯತೆ ಪಡೆದಿದ್ದಳು. ಆಕೆ ಹಾಡಿದ ಕಿನಾರಾ ಚಿತ್ರದ ಮೆರಿ ಆವಾಜ್ ಹಿ ಪೆಹೆಚಾನಾ ಹೈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರೇಕ್ಷಕರೂ ಸೇರಿದಂತೆ ತೀರ್ಪುಗಾರರು ಆಕೆಯನ್ನು ಹೊಗಳಿ ಕೊಂಡಾಡಿದ್ದರು. ಅಂಜನಾಗೆ ನಿರರ್ಗಳವಾಗಿ ಹಿಂದಿ ಮಾತನಾಡಲು ಬರುವುದಿಲ್ಲ, ಹೀಗಿದ್ದೂ ಆಕೆ ಹಿಂದಿ ಹಾಡುಗಳನ್ನು ಕಲಿತು, ಕಾರ್ಯಕ್ರಮದಲ್ಲಿ ಹಾಡಿದ್ದು ಪ್ರಶಂಸೆಗೆ ಪಾತ್ರವಾಗಿತ್ತು. ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ, ಈ ಗೆಲುವು ಖುಷಿ ನೀಡಿದೆ ಎಂದು ಅಂಜನಾ ಹೇಳಿದ್ದಾರೆ. ಆಕೆಗೆ ಪ್ರಶಸ್ತಿ ಟ್ರೋಫಿಯೊಂದಿಗೆ 25 ಲಕ್ಷ ಬಹುಮಾನ, ನಿಸ್ಸಾನ್ ಮೈಕ್ರಾ ಕಾರು, ಕೋಟಕ್ ಮಹೀಂದ್ರಾ ಸಂಸ್ಥೆಯಿಂದ ಐದು ಲಕ್ಷ ಹಾಗೂ ಹಾರ್ಲೆಕ್ಸ್ನಿಂದ ಎರಡು ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಂತಿಮ ಸುತ್ತಿನಲ್ಲಿ ಶಹೀದ್ ಕಪೂರ್, ರಾಮ್ಚರಣ್, ಪ್ರಿಯಾಂಕಾ ಛೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು.ಬೆಂಗಳೊರಿನ ೫ ನೇ ತರಗತಿಯಲ್ಲಿ ಓದುತ್ತಿರುವ ಅಂಜನಾಳ ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿ ಸ್ವಾಗತಿಸಿದ್ದಾರೆ 

12 May 2013

ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ...

 ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ 2000 ಗಣ್ಯರ ಆಗಮನ... 

ಬೆಂಗಳೂರು :ಕರ್ನಾಟಕದ  ನಿಯೋಜಿತ  ನೂತನ  ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ನಾಳೆ  ಮುಂಜಾನೆ  ೧೧  ಗಂಟೆಗೆ  ರಾಜ್ಯಪಾಲರ ಹಾಗು ಹಿರಿಯ ರಾಜಕಾರಣಿಗಳ  ಸಮ್ಮುಖದಲ್ಲಿ ನಾಳೆ ಅಕ್ಷಯ  ತೃತೀಯ ದಿನ  ರಾಜ್ಯದ  ೨ ೮ ನೆ ಮುಖ್ಯಮಂತ್ರಿಯಾಗಿ  ಪ್ರಮಾಣವಚನ  ಸ್ವೀಕರಿಸಲಿದ್ದಾರೆ. ಈಗಾಗಲೇ ಇಲಾಖೆಯ  ಎಲ್ಲ  ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ  ಸಿದ್ದತೆ ಮಾಡಿದ್ದಾರೆ . ಸಿದ್ದರಾಮಯ್ಯ  ಅವರು ಇಂದು  ಬೆಳಿಗ್ಗೆ  ಮೈಸೂರಿನ  ಚಾಮುಂಡಿ  ಬೆಟ್ಟಕ್ಕೆ ತೆರಳಿ  ಪೂಜೆ ನೆರವೇರಿಸಿ ನಂತರ ಸಾಹಿತಿ ದೇವನೂರು ಮಾದೇವರ ಮನೆಗೆ ತೆರಳಿ ಮಾತುಕತೆ ನಡೆಸಿದರು.    
     ಕಂಟೀರವ ಕ್ರೀಡಾಂಗಣದಲ್ಲಿ  ಏಕ ವ್ಯಕ್ತಿಯಾಗಿ  ಪ್ರಮಾಣವಚನ  ಸ್ವಿಕರಿಸಿ  ನಂತರ ವಿಧಾನಸೌಧಕ್ಕೆ ತೆರಳಿ ಎಲ್ಲಾ  ಅಧಿಕಾರಿಗಳ ಮುಂದೆ ಅಧಿಕರವಹಿಸಿಕೊಳ್ಳಲಿದ್ದಾರೆ  ಸಾಮಾನ್ಯವಾಗಿ ನಿಯಮದ ಪ್ರಕಾರ  ಸಂಪುಟ ಸಭೆ ನಡೆಯಲಿದೆ 
ನಂತರ  ದೇಶದ ಅಭಿವೃದ್ದಿ ಬಗ್ಗೆ ಆಳವಾಗಿ ಚರ್ಚಿಸಲಿದ್ದಾರೆ. ೧ ಗಂಟೆ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತುಕತೆ  ನಡೆಸಲಿದ್ದಾರೆ. ಪ್ರಮಾಣವಚನ  ಸಮಾರಂಭಕ್ಕೆ  ಗಣ್ಯಧಿಗಣ್ಯರು ಆಗಮಿಸಲಿದ್ದಾರೆ. ಪ್ರೇಕ್ಷಕರಿಗಾಗಿ  ೩ ೦ ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ  ಮಾಜಿಸಚಿವರು, ಮಾಜಿ ಶಾಸಕರು ,ಗಣ್ಯರಿಗಾಗಿ ೨ ಸಾವಿರ ವಿಶೇಷ ಆಸನಗಳ  ವ್ಯವಸ್ಥೆ  ಮಾಡಲಾಗಿದೆ.ನಂತರ  ಸಿದ್ದರಾಮಯ್ಯನವರು ದೆಹಲಿಗೆ ತೆರಳಿ ಸಚಿವ ಸಂಪುಟ ಸಭೆಯ ರಚನೆಯನ್ನು ಕುರಿತು ಹೈಕಮಾಂಡ್  ಜೊತೆ ಚರ್ಚಿಸಲಿದ್ದಾರೆ. ಅವರೊಂದಿಗೆ ೧೦ ಮಂದಿ ಪ್ರಮಾಣವಚನ  ಸ್ವಿಕರಿಸಲಿದ್ದಾರೆ. ಒಟ್ಟಿನಲ್ಲಿ ಜನರ  ಒಳಿತಿಗಾಗಿ  ಶ್ರಮಿಸಲಿ  ಅಭಿವೃದ್ದಿಯ ಕಡೆಗೆ  ಗಮನಹರಿಸಿ ಸ್ಪಂದಿಸಲಿ  ಎಂದು  ನೂತನ  ಮುಖ್ಯಮಂತ್ರಿಗೆ  ಶುಭ ಹಾರೈಸೋಣ ....                     

20 Jan 2013

ಲಂಕಾದ ಖ್ಯಾತ ಕ್ರಿಕೆಟಿಗ ದಿಲ್ಶಾನ್ ವಿರುದ್ಧ ಪ್ರಕರಣ ದಾಖಲು..!!



ಶ್ರೀಲಂಕಾ ತಂಡದ ಖ್ಯಾತ  ಬ್ಯಾಟ್ಸ್‌ಮನ್‌ ತಿಲಕರತ್ನೆ ದಿಲ್ಶನ್‌ ಮನೆಯಲ್ಲಿ ಅಳವಡಿಸಿಕೊಂಡಿರುವ ಸಿಸಿಟಿವಿ ಕ್ಯಾಮರಾ ತಮ್ಮ ಮನೆಯ ಈಜುಕೊಳದ ಮುಖವಾಗಿ ಅಳವಡಿಸಲಾಗಿದೆ ಎಂದು ಎದುರುಗಡೆ ಮನೆಯ  ಮಹಿಳೆಯೊಬ್ಬರು ಪೊಲೀಸ್‌ ದೂರು ಸಲ್ಲಿಸಿದ್ದಾರೆ.

ದಿಲ್ಶನ್‌ ವಾಸವಾಗಿರುವ ಪಕ್ಕದ ಮನೆಯಲ್ಲಿ ರೇಣುಕಾ ಡಿ ಕೋಸ್ಟಾ ಎಂಬುವವರು  ವಾಸವಾಗಿದ್ದು, ಅವರು ಮಿರಿಹಾನ ಪೊಲೀಸ್‌ ಸ್ಟೇಸನ್‌ನಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ಕ್ಯಾಮರಾ ಈಜುಕೊಳ ಮುಖವಾಗಿ ಅಳವಡಿಸಲಾಗಿರುವುದು ಸತ್ಯ ಎಂಬ ಸುದ್ದಿ ಹರಿದಾಡುತ್ತಿದ್ದೆ.

ಮತ್ತೊಂದು  ವರದಿಯ ಪ್ರಕಾರ ಪೊಲೀಸರು ದಿಲ್ಶನ್‌ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಅದು ಈಜುಕೊಳದ ಮುಖವಾಗಿ ಅಳವಡಿಸಿಲ್ಲ ಎಂದು ತಿಳಿಸಲಾಗಿದೆ. ರೇಣುಕಾ ಪತಿ ಇರಾಕ್‌ನಲ್ಲಿ ಉದ್ಯೋದಲ್ಲಿದ್ದು, ತನ್ನ ಎರಡು ಶಾಲಾ ಮಕ್ಕಳ ಜತೆ ವಾಸವಾಗಿದ್ದಾರೆ. ದಿಲ್ಶನ್‌ ಮತ್ನಿ ಮಂಜುಳಾ ಮತ್ತು ರೇಣುಕಾ ಉತ್ತಮ ಸ್ನೇಹಿತರಾಗಿದ್ದು, ದಿಲ್ಶನ್‌ ಕೂಡ ಹಲವು ಬಾರಿ ರೇಣುಕಾ ಮನೆಗೆ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2010ರಲ್ಲಿ ರೇಣುಕಾ ಮತ್ತು ಅವರ ಪತಿ ಹೆಸರಲ್ಲಿ ಮನೆಯನ್ನು ಖರೀದಿಸಿದ್ದರು.ಇದು  ಕ್ರಿಕೆಟಿಗ ತಿಲಕರತ್ನೆ ದಿಲ್ಶಾನ್ ರವರ ವರಿಗೆ ತಿಳಿಯದೇ  ನಡೆದಿರುವ ಅಚಾತುರ್ಯವಾಗಿರಬಹುದು ತಪ್ಪಿದ್ದರೆ ಸರಿಪಡಿಸಿಕೊಳ್ಳುವದು  ಸೂಕ್ತ ನಿವೇನಂತಿರಾ?   

Share

Twitter Delicious Facebook Digg Stumbleupon Favorites More