ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು
ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..
ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!
ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.
ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ
ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.
1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು
ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ
ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.
18 Mar 2016
23 Aug 2014
ಅನಂತನಲ್ಲಿ ಲೀನವಾದ ಸಾಹಿತ್ಯ ಲೋಕದ ತಾರೆ ಯು. ಆರ್. ಅನಂತಮೂರ್ತಿ..!!
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ನಿನ್ನೆ ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತಹ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.
ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ. ಕನ್ನಡ ಸಾಹಿತ್ಯವನ್ನು ಹೆಚ್ಚು ಶ್ರೀಮಂತಗೊಳಿಸಿದವರು. ಹಳೆಯ ಕಂದಾಚಾರ, ಅನಿಷ್ಟ ಪದ್ದತಿಗಳ ವಿರುದ್ಧ ದನಿ ಎತ್ತಿದ ಧೀಮಂತ ಸಾಹಿತಿ
-ಸಿದ್ದರಾಮಯ್ಯ ಮುಖ್ಯಮಂತ್ರಿ
ನಂತಮೂರ್ತಿ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯಾ ಬರೆದ ಸಾಹಿತಿ. ತಮ್ಮ ನಿಲುವನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಸಾಹಿತಿಯಾಗಿದ್ದರು
-ಜಯಂತ್ ಕಾಯ್ಕಿಣಿ, ಸಾಹಿತಿ
ಅನಂತಮೂರ್ತಿ ದಿಟ್ಟ ಹೋರಾಟಗಾರ ತಮ್ಮ ಸಾಹಿತ್ಯದ ಮೂಲಕವೇ ಕೆಲವೊಂದು ಬದಲಾವಣೆಗಳನ್ನು ತಂದರು
-ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ.
ಅನಂತಮೂರ್ತಿಯವರು ವಿಶ್ವ ವಿಖ್ಯಾತ ಬರಹಗಾರರು, ಅವರ ಬಗ್ಗೆ ವಿದೇಶದಲ್ಲಿನ ಕೆಲ ಸಾಹಿತಿಗಳು ಮಾತನಾಡುತ್ತಿದ್ದರು. ಅನಂತಮೂರ್ತಿ ಪರಿಸರ ಬಗೆಗಿನ ವೈಚಾರಿಕ ಸಾಹಿತಿ
-ಪ್ರೋ. ದೊಡ್ಡರಂಗೇಗೌಡ, ಸಾಹಿತಿ
- ಬಷೀರ್ ಪುರಸ್ಕಾರಂ, ಕೇರಳ, 2012
- ಗೌರವ ಡಾಕ್ಟರೇಟ್, ಕೇಂದ್ರೀಯ ವಿವಿ, ಗುಲ್ಬರ್ಗ, 2012
- ಗೌರವ ಡಾಕ್ಟರೇಟ್, ಕಲ್ಕತ್ತಾ ವಿವಿ, 2012
- ರವೀಂದ್ರನಾಥ್ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿವಿ, 2012
- ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
- ದಿ ಹಿಂದೂ ಲಿಟರೆರಿ ಪ್ರಶಸ್ತಿ, 2011
- ಗಣಕ್‌ಸೃಷ್ಟಿ ಪ್ರಶಸ್ತಿ, ಕೊಲ್ಕತ್ತ, 2002
- ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' 2008
- ಪದ್ಮಭೂಷಣ, 1998
- ಮಾಸ್ತಿ, 1995
- ಜ್ಞಾನಪೀಠ ಪ್ರಶಸ್ತಿ, 1994
- ರಾಜ್ಯೋತ್ಸವ ಪ್ರಶಸ್ತಿ, 1984
- ಎಂದೆಂದಿಗೂ ಮುಗಿಯದ ಕಥೆ
- ಮೌನಿ
- ಪ್ರಶ್ನೆ
- ಕ್ಲಿಫ್ ಜಾಯಿಂಟ್
- ಆಕಾಶ ಮತ್ತು ಬೆಕ್ಕು
- ಎರಡು ದಶಕದ ಕಥೆಗಳು
- ಐದು ದಶಕದ ಕಥೆಗಳು
ಕಾದಂಬರಿಗಳು
- ಸಂಸ್ಕಾರ
- ಭಾರತೀಪುರ
- ಅವಸ್ಥೆ
- ಭವ
- ದಿವ್ಯ
ವಿಮರ್ಶೆ ಮತ್ತು ಪ್ರಭಂದ
- ಪ್ರಜ್ಞೆ ಮತ್ತು ಪರಿಸರ
- ಸನ್ನಿವೇಶ
- ಸಮಕ್ಷಮ
- ಪೂರ್ವಾಪರ
- ಯುಗಪಲ್ಲಟ
- ವಾಲ್ಮಿಕಿಯ ನೆವದಲ್ಲಿ
- ಮಾತು ಸೋತ ಭಾರತ
- ಸದ್ಯ ಮತ್ತು ಶಾಶ್ವತ
ಚಲನಚಿತ್ರವಾಗಿ ಮೂಡಿಬಂದ ಕಾದಂಬರಿ/ಸಣ್ಣಕಥೆ
- ಸಂಸ್ಕಾರ
- ಬರ
- ಅವಸ್ಥೆ
- ಮೌನಿ (ಸಣ್ಣಕಥೆ)
- ದೀಕ್ಷಾ (ಹಿಂದಿ ಚಿತ್ರ)
- ಪ್ರಕೃತಿ (ಸಣ್ಣಕಥೆ)
19 Jul 2014
ಸಾರ್ವಜನಿಕರೇ ಕಾಮುಕರನ್ನು ಬದುಕಲು ಬಿಡಬೇಡಿ..!!
ಇಂದು ದೇಶಯಾದಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಜನರನ್ನು ಭಯಭೀತರನ್ನಾಗಿಸಿದೆ ಹೆಣ್ಣು ಹೆತ್ತವರು ಹೆದರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಯೋಚಿಸುವಂತಾಗಿದೆ ಶಾಲೆಗೆ ಹೋದರೆ ಶಿಕ್ಷಕರ ಕಾಮುಕ ವರ್ತನೆಯಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತಿದೆ ಅದರಲ್ಲೂ ಕರ್ನಾಟಕದಲ್ಲಿ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಪೋಲಿಸರ ನಿರ್ಲಕ್ಷವೇ ಇದಕ್ಕೆಲ್ಲಾ ಕಾರಣ ದಕ್ಷ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ.
ಅವರಷ್ಟೇ ಅಲ್ಲ ಹೆತ್ತ ತಂದೆ ತಾಯಿ ಯೂ ಇದ್ದಕ್ಕೆ ಹೊಣೆಗಾರರು ತಮ್ಮ ಮಕ್ಕಳ ವರ್ತನೆ ಹೇಗಿದೆ ಏನಾಗುತಿದ್ದೆ ಎಂದು ನೋಡದೆ ನಿರ್ಲಕ್ಷ ವಹಿಸುತಿದ್ದಾರೆ ಗಂಡು ಮಕ್ಕಳೆಂದು ಬೇಕಾಬಿಟ್ಟಿಯಾಗಿ ಬಿಟ್ಟು ತಮ್ಮ ಮಕ್ಕಳು ತಪ್ಪು ಮಾಡಿದರು ಸುಮ್ಮನಿದ್ದು ಕಾಮುಕರನ್ನಾಗಿ ಮಾಡುತಿದ್ದಾರೆ ಅಲ್ಲದೆ ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ ಸರಿಯಿಲ್ಲದೆ ಕಾಮುಕರ ಕೈಗೆ ಕೊಡುತಿದ್ದಾರೆ ಹೆಣ್ಣು ಮಕ್ಕಳು ಧರಿಸುವ ತುಂಡು ತುಂಡು ಬಟ್ಟೆ ಇಂದಾಗಿ ಕಾಮುಕರನ್ನು ಆಕರ್ಷಿತರಾಗಿ ಕೆರಳಿ ಅತ್ಯಾಚಾರ, ಬಲಾತ್ಕಾರ ಕೊಲೆ ಸುಲಿಗೆ ಯಂತಹ ಕೃತ್ಯಗಳಿಗೆ ಕೈಹಾಕುತಿದ್ದಾರೆ ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದೇ ಇಂದು ಪೋಷಕರು ನೋವನ್ನು ಅನುಭವಿಸುತ್ತಿದ್ದಾರೆ.
ಅಷ್ಟೇ ಅಲ್ಲ ಈ ಪ್ರಕರಣಗಳು ಸರಕಾರದ ನಿದ್ದೆಗೆಡಿಸುವಂತಾಗಿದೆ ಇದರಲ್ಲಿ ಸರಕಾರದ ನಿರ್ಲಕ್ಷವೇ ಹೆಚ್ಚಾಗಿದೆ ಬೇಕಾಬಿಟ್ಟಿಯಾಗಿ ಬಾರು,ಕ್ಲಬ್ ಗಳಿಗೆ ಲೈಸೆನ್ಸ್ ಕೊಟ್ಟು ಕುಡುಕರ ಸಂಖೆಯನ್ನು ಹೆಚ್ಚು ಮಾಡಿದ್ದಾರೆ ಇದರಿಂದ ಕುಡಿತದ ಅಮಲಿನಲ್ಲಿ ಕೈಗೆ ಸಿಕ್ಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯವೇಸಗುತಿದ್ದಾರೆ.
ಇಂದು ಟಿವಿ ಮಾದ್ಯಮಗಳು ತೋರಿಸುವ ಅಸ್ಲಿಲ ಹಸಿಬಿಸಿ ಸಿನಿಮಾ ದೃಶ್ಯಗಳು ಪುರುಷರನ್ನು ಕೆಟ್ಟ ಕೃತ್ಯವೇಸಾಗಲು ಪ್ರೇರೇಪಿಸುತ್ತಿವೆ ಸೆನ್ಸಾರ್ ಮಂಡಳಿಯವರು ಹಾಗೇ ಉತ್ತಮ ಸಿನಿಮ ಎಂದು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಡುತಿದ್ದರೂ ಸಾರ್ವಜನಿಕರು ಸುಮ್ಮನಿರುವದು ವಿಷಾದನೀಯ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸಾಗದೆ ನಮ್ಮ ದೇಶ ಈಗ ರಾವಣ ರಾಜ್ಯವಗುತ್ತಿದೆ ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ ಇದಕ್ಕೆಲ್ಲಾ ಯಾರು ಹೊಣೆಗಾರರು ಪ್ರಜೆಗಳಾದ ಸಾರ್ವಜನಿಕರೇ ಇಲ್ಲವೇ ಸರ್ಕಾರವೇ ಅಥವಾ ಕಾನೂನುನಿನ ಸುವ್ಯವಸ್ಥೆ ಕಾರಣವೇ ,ಇಂತಹ ಕಾಮುಕರನ್ನೇಕೆ ಗಲ್ಲಿಗೆರಿಸುತಿಲ್ಲ. ಇದಕೆಲ್ಲಾ ರಾಜಕಾರಣಿಗಳ ಕೈವಾಡವೇ ಒಂದೂ ಅರ್ಥವಾಗದ ಸ್ಥಿತಿಯಲ್ಲಿದೆ ನಮ್ಮ ಪ್ರಜಾರಾಜ್ಯ.
ಬೆಂಗಳೂರಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಆಟ ಆಡಿಕೊಂಡು ಅಂಗಳದಲ್ಲಿ ಇರಬೇಕಾದ ಮಗು ನಾಲ್ಕು ಗೋಡೆಗಳ ಮದ್ಯೆ ಬದುಕಬೇಕೇ ಕಾಮುಕರೇ ,ವ್ಯಭಿಚಾರಿಗಳೇ ನಿಮಗೆ ಕರುಣೆಯೇ ಇಲ್ಲವೇ ಹೆಣ್ಣಿನ ಬಗ್ಗೆ ಯಾಕೆ ಇಂತಹ ಭಾವನೆ ಇದು ನಾಯವೇ... ರಾಜ್ಯ ಸರ್ಕಾರ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ, 'ಕಾಮುಕರ ರಾಜ್ಯ'ವಾಗಲು ಕಾರಣವಾಗಿದೆ. 24 ಗಂಟೆಯಲ್ಲಿ ಏಳು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ .. ಇದಕೆಲ್ಲಾ ಸಾರ್ವಜನಿಕರು ಪ್ರತಿಭಟಿಸಿ ನೀವೇ ಅತ್ಯಾಚಾರಿ ಕಾಮುಕರನ್ನು ಸಾಯಿಸಿ... !! ನೆನಪಿರಲಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಇಂತಹ ಕಾಮುಕರಿಗೆ ಬಲಿಯಾಗದಿರಲಿ... !! ನಿರ್ಲಕ್ಷಿಸಬೇಡಿ ನಿಮ್ಮ ಮಕ್ಕಳ ಹೊಣೆ ನಿಮ್ಮದು .
3 Apr 2014
Cricketer Sachin Tendulkar to act in Ashutosh Gowarikar-film based on his life..!!!
26 Mar 2014
ವಾರಾಣಸಿಯಲ್ಲಿ ಆಪ್ ಪಕ್ಷದ ಕೇಜ್ರಿವಾಲ್‌ಗೆ ಮೊಟ್ಟೆ, ಮಸಿ ಹಾಕಿ ಭರ್ಜರಿ ಸ್ವಾಗತ.. !!
ವಾರಾಣಸಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೆಜ್ರಿವಾಲ್ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಫರ್ಧಿಸುವದಾಗಿ ಪ್ರಚಾರ ಮಾಡಲು ಮಂಗಳವಾರ ವಾರಾಣಸಿಗೆ ಹೋಗಿದ್ದ ಕೇಜ್ರಿವಾಲ್ ಅವರ ಮೇಲೆ ಮೊಟ್ಟೆ ಹಾಗೂ ಮಸಿ ಎಸೆತದ ಸ್ವಾಗತ ದೊರೆಯಿತು.
ಗಂಗಾನದಿಯಲ್ಲಿ ಸ್ನಾನ ಮಾಡಿ ಅವರು ಕಾಶಿ ವಿಶ್ವನಾಥನ ದೇಗುಲದ ಹೊರಗೆ ನಿಲ್ಲಿಸಿದ್ದ ಕೇಜ್ರಿವಾಲ್ ಕಾರಿನತ್ತ ಮೊಟ್ಟೆ ತೂರಿದ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಹಿಂದೂಗಳ ಪವಿತ್ರ ನಗರದಿಂದ ಹೊರ ನಡೆಯುವಂತೆ ಆಗ್ರಹಿಸಿದರು.
ತಮ್ಮ ಪಕ್ಷ್ದದವರೊಂದಿಗೆ ಬೀದಿಯಲ್ಲಿ ಮೆರವಣಿಗೆ ಹೊರಟಾಗ ಕೇಜ್ರಿವಾಲ್, ಮೋದಿ ಬೆಂಬಲಿಗರಿಂದ ಹೆಜ್ಜೆಗೂ ತೊಂದರೆ ಅನುಭವಿಸಿದರು.
ದೇಶದ್ರೋಹಿ ಎಂದ ಕೂಗಿದ ಪ್ರತಿಭಟನೆ ಕಾರರು 'ಮೋದಿ' ಮೋದಿ ಎಂದು ಘೋಷಣೆ ಕೂಗಿದರು. ಜತೆಗೆ ಕೇಜ್ರಿವಾಲ್ ಜತೆ ಸಾಗಿದ ವಾಹನಗಳನ್ನು ಅಡ್ಡಗಟ್ಟಿದರು. ವಾರಾಣಸಿಯಿಂದ ಮೋದಿ ಮಾತ್ರ ಸ್ಪರ್ಧಿಸಬೇಕು ಎಂದು ಕೂಗಿದರು. ಮುನ್ನುಗ್ಗುತ್ತಿದ್ದ ಕೇಜ್ರಿ ವಿರೋಧಿಗಳನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿದರು. ಇದೇ ಸಂದರ್ಭದಲ್ಲಿ ಗುಂಪಿನಿಂದ ಅವರತ್ತ ಕಪ್ಪು ಮಸಿಯೂ ಬಿತ್ತು. ಇದರಿಂದ ಕೇಜ್ರಿವಾಲ್ ಅಲ್ಲದೆ ಆಪ್ ನಾಯಕರಾದ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರ ಮುಖ ಮತ್ತು ಬಟ್ಟೆಗೂ ಮಸಿ ಮೆತ್ತಿಕೊಂಡಿತು. ಮಸಿ ಎರಚಿದ ವ್ಯಕ್ತಿಯನ್ನು ಹಿಂದೂ ವಾಣಿ ಸೇನೆ ಸದಸ್ಯ ಅಂಬರೀಶ್ ಎಂದು ಗುರುತಿಸಲಾಗಿದೆ.ನಂತರ ಪೊಲೀಸರನ್ನು ಆತನನ್ನು ವಶಕ್ಕೆ ತೆಗೆದುಕೊಂಡರು.
ಇಂತಹ ಎಡರು ಅಡ ತಡೆಗಳ ನಡುವೆಯೂ ಕೇಜ್ರಿವಾಲ್, ಮೋದಿಯನ್ನು ಸೋಲಿಸುವುದಾಗಿ ಶಪಥ ಮಾಡಿದರು. ''ಬನಾರಸ್‌ನಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುತ್ತೇನೆ. ಮೋದಿ ವಿರುದ್ಧ ಸ್ಪರ್ಧಿಸುವುದು ಸಣ್ಣ ವಿಷಯ. ದೇಶವನ್ನು ಭ್ರಷ್ಟಾಚಾರದಿಂದ ಪಾರುಮಾಡುವುದು ದೊಡ್ಡ ವಿಷಯ,'' ಎಂದರು.
ಮೋದಿ ವಿರುದ್ಧ ಜಯ ಸಾಧಿಸಲು ತಮ್ಮನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದರು.
ಈ ಮಧ್ಯೆ, ಎಎಪಿ ಕಾರ್ಯಕರ್ತರು ಹಲವು ದಿನಗಳಿಂದ ತಮ್ಮ ನಾಯಕನ ಪರ ವಾರಾಣಾಸಿಯಲ್ಲಿ ಪ್ರಚಾರ ನಡೆಸಿದ್ದಾರೆ. ''ಕೇಜ್ರಿವಾಲ್ -ಮೋದಿ ನಡುವಿನ ಹಣಾಹಣಿ ಸಾಂಕೇತಿವಲ್ಲ. ಅಚ್ಚರಿಯ ಫಲಿತಾಂಶ ಹೊರಬೀಳಲಿದೆ,''ಎಂದು ಉತ್ತರ ಪ್ರದೇಶದದಲ್ಲಿ ಎಎಪಿಯ ವಕ್ತಾರರಾದ ವೈಭವ್ ಮಹೇಶ್ವರಿ ಹೇಳಿದರು.
ವಾರಾಣಸಿಗೆ ಬಂದ ಕೇಜ್ರಿವಾಲ್, ಈ ಪ್ರದೇಶದಲ್ಲಿ ನಾವು ನಡೆಸಿದ ಜನಮತ ಗಣನೆಯಲ್ಲಿ ಬಹುತೇಕ ಜನ ಮೋದಿ ವಿರುದ್ಧ ಸ್ಪರ್ಧಿಸಿ ಎಂದು ಹೇಳಿದರು. ಹೀಗಾಗಿ ಬಹುಜನ ಮತವನ್ನು ಪರಿಗಣಿಸಿ ಇಲ್ಲಿ ಅಖಾಡಕ್ಕಿಳಿಯುತ್ತಿರುವೆ ಎಂದು ಮಂಗಳವಾರ ಸಂಜೆ ಘೋಷಿಸಿದರು. ಇದೇ ವೇಳೆ ಅವರು ಗುಜರಾತ್ ಅಭಿವೃದ್ಧಿ ಮಾದರಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಘೋಷಿಸಿದರು.
ತಮ್ಮ ಮೇಲೆ ಇಂಕ್ ದಾಳಿ ನಡೆಸಿರುವುದು ನರೇಂದ್ರ ಮೋದಿ ಅವರ ಕುತಂತ್ರ. ಇದಕ್ಕೆ ಬೆದರುವುದಿಲ್ಲ. ಮೋದಿ ವಿರುದ್ಧ ಸೆಣಸುವುದು ಘನವಾದ ಸಂಗತಿಯೇನೂ ಅಲ್ಲ. ಅವರ ವಿರುದ್ಧ ಜಯ ಸಾಧಿಸುವೆ.ಎಂದು ಅರವಿಂದ್ ಕೆಜ್ರಿವಾಲ್ ಸ್ಪಸ್ಟ ಪಡಿಸಿದರು
ಜನರ ನಿರ್ಧಾರ ಯಾರಿಗೋ ಭ್ರಷ್ಥರಿಗೋ ಭ್ರಷ್ಟಾಚಾರ ನಿರ್ಮೂಲನ ಮಾಡಲು ಹೊರಟವರಿಗೋ ಗೊತ್ತಿಲ್ಲ.. !!ಯಾರಿಗೆಂದು ನೀವೇ ನಿರ್ಧರಿಸಿ...
ದೇಶದ ಅಭಿವೃದ್ದಿಗಾಗಿ ಪ್ರತಿಯೊಬ್ಬರು ಕೈಜೋಡಿಸಿ.ನಿಮ್ಮ ಅಮೂಲ್ಯ ವಾದ ಮತವನ್ನು ಹಾಕುವದನ್ನು ಮರೆಯದಿರಿ ಮತದಾನ ಪ್ರತಿಯೊಬ್ಬರ ಹಕ್ಕು..
19 Dec 2013
ಭಾರತದಲ್ಲಿ ಗೂಗಲ್ ಸರ್ಚ್ 2013: ಮೋದಿ ನಂ.1 ರಾಜಕಾರಣಿ.....!!
ಬೆಂಗಳೂರು, ಡಿ.18: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಮೂಲಕ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 'ಭಾರತೀಯ ರಾಜಕಾರಣಿ' ಎಂಬ ಹೆಗ್ಗಳಿಕೆಗೆ ಮತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಗೂಗಲ್ ಬಿಡುಗಡೆ ಮಾಡಿದ Zietgeist 2013ರ ವರದಿಯಲ್ಲಿ ನರೇಂದ್ರ ಮೋದಿ ಅವರ ಬಗ್ಗೆಯೇ ಹೆಚ್ಚು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ ಎಂಬ ಅಂಶವನ್ನು ಹೇಳಲಾಗಿದೆ.
ರಾಜಕಾರಣಿಗಳ ವಿಭಾಗದಲ್ಲಿ ಮೋದಿ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ. ಜತೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಟಾಪ್ 5 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಂ.6ರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇದ್ದು, ಇವರ ನಂತರದ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ಸುಷ್ಮಾ ಸ್ವರಾಜ್ ನಂತರದ ಸ್ಥಾನಗಳಲ್ಲಿದ್ದಾರೆ.
'ಸುದ್ದಿ (News Events' ವಿಭಾಗದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಸುದ್ದಿ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟಿದೆ. ಈ ವಿಭಾಗದಲ್ಲಿ ಬ್ಲಾಕ್ ಬರಿ ಮಾರಾಟ 2ನೇ ಸ್ಥಾನಗಳಿಸಿದ್ದು, ರಾಹುಲ್ ದ್ರಾವಿಡ್ ನಿವೃತ್ತಿ ಸುದ್ದಿ 3 ನೇ ಸ್ಥಾನಗಳಿಸಿದೆ. ಟಾಪ್ ಟೆನ್ ಸದ್ದು ಮಾಡಿದ ಸುದ್ದಿಗಳು
* ಬ್ಲಾಕ್ ಬೆರಿ ಸೇಲ್
* ರಾಹುಲ್ ದ್ರಾವಿಡ್ ನಿವೃತ್ತಿ
* ಸೈನಾ ನೆಹ್ವಾಲ್
* ವಿಜಯ್ ಮಲ್ಯ ಕಿಂಗ್ ಫಿಷರ್ ಏರ್ ಲೈನ್ಸ್
* ಕರ್ನಾಟಕ ಎಲೆಕ್ಷನ್ ಫಲಿತಾಂಶ
* ಆರುಷಿ ತಲ್ವಾರ್ ಕೇಸ್
* ಏರ್ ಇಂಡಿಯಾ ಸುದ್ದಿ
* ಇಂಡಿಯನ್ ಎಕಾನಮಿ
ಅತೀ ಸುದ್ದಿ ಮಾಡಿರುವ ನರೇಂದ್ರ ಮೋದಿ ಒಬ್ಬ ಪ್ರತಿಭಾವಂತ ರಾಜಕಾರಣಿ ಎಂಬುದು ಸಾಬಿತಾಗಿದೆ ಅವರ ಪ್ರಧಾನಿ ಯಾಗುವ ಕನಸು ನನಸಾಗಲಿ ಜೈ ನಮೋ ... !!
30 Sept 2013
ಮಶ್ರುಂ (ಅಣಬೆ )ಚಿತ್ರಾನ್ನ .....!!!!
- ಬೇಯಿಸಿದ ಅನ್ನ ೧/೨
- ಮಸ್ರುಮ್ ಬೇಕಾಗುವಷ್ಟು
- ಎಣ್ಣೆ
- ಜೀರಿಗೆ
- ಸಾಸಿವೆ
- ಕರಿಬೇವು
- ಹಸಿ ಮೆಣಸಿನಕಾಯಿ ೪
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
3 Sept 2013
ಅಂಜನಾ ಪದ್ಮನಾಭನ್ ಈ ವರ್ಷದ Indian Ideal junior singer award Winner...!!!!
ಆರಂಭದಿಂದಲೂ ಅಂಜನಾ ಹೆಚ್ಚು ಜನಪ್ರಿಯತೆ ಪಡೆದಿದ್ದಳು. ಆಕೆ ಹಾಡಿದ ಕಿನಾರಾ ಚಿತ್ರದ ಮೆರಿ ಆವಾಜ್ ಹಿ ಪೆಹೆಚಾನಾ ಹೈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರೇಕ್ಷಕರೂ ಸೇರಿದಂತೆ ತೀರ್ಪುಗಾರರು ಆಕೆಯನ್ನು ಹೊಗಳಿ ಕೊಂಡಾಡಿದ್ದರು. ಅಂಜನಾಗೆ ನಿರರ್ಗಳವಾಗಿ ಹಿಂದಿ ಮಾತನಾಡಲು ಬರುವುದಿಲ್ಲ, ಹೀಗಿದ್ದೂ ಆಕೆ ಹಿಂದಿ ಹಾಡುಗಳನ್ನು ಕಲಿತು, ಕಾರ್ಯಕ್ರಮದಲ್ಲಿ ಹಾಡಿದ್ದು ಪ್ರಶಂಸೆಗೆ ಪಾತ್ರವಾಗಿತ್ತು. ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ, ಈ ಗೆಲುವು ಖುಷಿ ನೀಡಿದೆ ಎಂದು ಅಂಜನಾ ಹೇಳಿದ್ದಾರೆ. ಆಕೆಗೆ ಪ್ರಶಸ್ತಿ ಟ್ರೋಫಿಯೊಂದಿಗೆ 25 ಲಕ್ಷ ಬಹುಮಾನ, ನಿಸ್ಸಾನ್ ಮೈಕ್ರಾ ಕಾರು, ಕೋಟಕ್ ಮಹೀಂದ್ರಾ ಸಂಸ್ಥೆಯಿಂದ ಐದು ಲಕ್ಷ ಹಾಗೂ ಹಾರ್ಲೆಕ್ಸ್ನಿಂದ ಎರಡು ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಂತಿಮ ಸುತ್ತಿನಲ್ಲಿ ಶಹೀದ್ ಕಪೂರ್, ರಾಮ್ಚರಣ್, ಪ್ರಿಯಾಂಕಾ ಛೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು.ಬೆಂಗಳೊರಿನ ೫ ನೇ ತರಗತಿಯಲ್ಲಿ ಓದುತ್ತಿರುವ ಅಂಜನಾಳ ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿ ಸ್ವಾಗತಿಸಿದ್ದಾರೆ
















