ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

27 Dec 2011

ಭಾರತದ ರಾಷ್ಟ್ರಗೀತೆಗೆ ಶತಮಾನೋತ್ಸವದ ಸಂಭ್ರಮ ..!!

ಭಾರತದ ರಾಷ್ಟ್ರಗೀತೆಯಾದ 'ಜನಗಣ ಮನ ಅಧಿನಾಯಕ ಜಯಹೇ' ಗೀತೆಯನ್ನು "ಗೀತಾಂಜಲಿ" ಕೃತಿಗೆಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಕವಿ ರವಿಂದ್ರನಾಥ್ ಟ್ಯಾಗೋರರವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ.ಈ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ಭಾರತದ ಸಂವಿಧಾನದಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು ಈ ಗೀತೆಯನ್ನು 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕಲ್ಕತ್ತಾ ದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಅದ್ದರಿಂದ ಅಂದಿನಿಂದ ಈ ರಾಷ್ಟ್ರ ಗೀತೆಯನ್ನು ಈಗ ಶಾಲೆ,ಕಾಲೇಜು,ಸರಕಾರಿ ಆಫೀಸ್ಗಳಲ್ಲಿ ಹಾಡಲಾಗುತ್ತಿದೆ.ಈ ಗೀತೆ ನಮ್ಮ ದೇಶದ ರಾಷ್ಟ್ರಭಿಮಾನವನ್ನು ಎತ್ತಿತೊರಿಸುವಲ್ಲಿ ಪ್ರೇರಣೆಯಾಗಿದೆ.ಇದರಲ್ಲಿ 5 ಪ್ಯಾರಗಳಿದ್ದು 52 ಸೆಕೆಂಡ್ ಗಳಲ್ಲಿ ಹಾಡಿ ಮುಗಿಸಲೇಬೇಕು.ಈ ಗೀತೆಯಲ್ಲಿ ಇಡೀ ಭಾರತದ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಂಬಿಸಲಾಗಿದೆ. ಇಂದಿಗೆ ಈ ಗೀತೆಯು 100 ವರ್ಷ ಪೂರೈಸಿ ಶತಮಾನೋತ್ಸವದ ಹೊಸ್ತಿಲಿಗೆ ಕಾಲಿಟ್ಟಿದೆ.ಇನ್ನು ಹೆಚ್ಹು ಹೆಚ್ಚು ನಮ್ಮ ರಾಷ್ಟ್ರದ ಸ್ವಾಭಿಮಾನದ ಕೀರ್ತಿ ಪತಾಕೆ ಎಲ್ಲೆಡೆ ಹಾರಿ ಭಾರತೀಯ ದೆಶಾಭಿಮಾನಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ತುಂಬಲು ರಾಷ್ಟ್ರಗೀತೆಯು ಉತ್ತಮವಾದ ಸಾಧನೆಗಳಲ್ಲೊಂದಾಗಿದೆ. ಹಾಗೆಯೇ ರಾಷ್ಟ್ರಾಭಿಮಾನದ ಸಂಭ್ರಮವನ್ನು ಹೆಚ್ಚಿಸಿ ಭಾರತವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸುಧಾರಣೆಯಾಗಿ ಅಭಿವೃದ್ದಿಯತ್ತ ಸಾಗಲಿ ಜೈ ಹಿಂದ ಭಾರತ ಮಾತಾಕಿ ಜೈ ...!!
ಭಾರತದ ರಾಷ್ಟ್ರಗೀತೆ
ಜನಗಣಮನ ಅಧಿನಾಯಕ ಜಯಹೇ !!
ಭಾರತ ಭಾಗ್ಯವಿದಾತ!!
ಪಂಜಾಬ ಸಿಂಧು ಗುಜರಾತ ಮರಾಠ !!
ದ್ರಾವಿಡ ಉತ್ಕಲ ವಂಗಾ !!
ವಿಂದ್ಯ ಹಿಮಾಚಲ ಯಮುನಾ ಗಂಗಾ !!
ಉಚ್ಛಲ ಜಲಧಿತ ರಂಗಾ !!
ತವಶುಭ ನಾಮೇ ಜಾಗೇ !!
ತವಶುಭ ಅಶಿಸ ಮಾಗೇ !!
ಗಾಹೇ ತವ ಜಯ ಗಾಥಾ !!
ಜನಗಣ ಮಂಗಳ ದಾಯಕ ಜಯಹೇ !!
ಭಾರತ ಭಾಗ್ಯವಿಧಾತಾ !!
ಜಯ ಹೇ, ಜಯ ಹೇ, ಜಯ ಹೇ !!
ಜಯ ಜಯ ಜಯ ಜಯಹೇ !!

26 Dec 2011

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ವಿಧಿವಶ...!!!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ 12 .45 ಕ್ಕೆಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದರು.ಬಂಗಾರಪ್ಪನವರು ಇತ್ತಿಚೆಯಿಂದ ಮಧುಮೇಹರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕ್ರಿಯಾಶೀಲ ಚತುರ ರಾಜಕಾರಣಿ ಬಡವರ,ರೈತರ,ದಿನದಲಿತರ ನಾಯಕರಾಗಿ ಸೇವೆಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಶಿವಮೊಗ್ಗ ಜಿಲ್ಲೆಯ ಸೊರಬ ತಾಲುಕಿನವರಾದ ಇವರು 1962 ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ನಂತರ 1979 -80 ರಲ್ಲಿ ಕೆಪಿಸಿಸಿ ಅದ್ಯಕ್ಷ್ಯರಾಗಿ 19 91 -92 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.ಇತ್ತೀಚಿಗೆ ಕಾಂಗ್ರೆಸ ಪಕ್ಷ ಬಿಟ್ಟು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು ಇವರು ಪತ್ನಿ ಹಾಗೂ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಅಗಲಿದ್ದಾರೆ.ಅಲ್ಲದೇ ಸುದ್ದಿ ತಿಳಿಯುತ್ತಿದ್ದಂತೆ ಅಳಿಯನಾದ ಚಿತ್ರನಟ ಶಿವರಾಜಕುಮಾರ,ಪಾರ್ವತಮ್ಮ ರಾಜಕುಮಾರ ಹಾಗೂ ಪ್ರತಿಷ್ಠಿತ ರಾಜಕಾರಣಿಗಳಾದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ,ವಿದೇಶಾಂಗ ಸಚಿವರಾದ ಎಸ್.ಎಂ .ಕೃಷ್ಣ ,ಎಚ್. ಡಿ ದೇವೇಗೌಡ,ಮಲ್ಲಿಕಾರ್ಜುನ್ ಕಾರ್ಗೆ,ಶೋಭಾ ಕರಂದ್ಲಾಂಜೆ,ಡಿ.ಕೆ.ಶಿವುಕುಮಾರ ಅಲ್ಲದೇ ಇನ್ನಿತರ ಗಣ್ಯನಾಯಕರು ರಾಜಕಾರಣಿಗಳು ಬೆಂಗಳುರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿನೀಡಿ ಕುಟುಂಬದವರಿಗೆ ಸಮಾಧಾನಹೇಳಿ ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದರು.ಅಲ್ಲದೇ ಅನೇಕ ಚಿತ್ರರಂಗದ ಹಿರಿಯ ಗಣ್ಯರು ಬಂದು ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು.ನಾಳೆ ಬಂಗರಪ್ಪನವರ್ ಹುಟ್ಟುರಾದ ಶಿವಮೊಗ್ಗದ ಸೊರಬನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಅಲ್ಲದೇ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆ ,ಕಾಲೇಜುಗಳಿಗೆ ರಜೆ ಘೋಸಿಸಲಾಗಿದ್ದು ರಾಜ್ಯಾಯಾದ್ಯಂತ 3 ದಿನ ಶೋಕಾಚರಣೆ ಆಚರಿಸುವದಾಗಿ ಸಿಎಂ ಸದಾನಂದಗೌಡರು ಹೇಳಿದ್ದಾರೆ. ಯಶಸ್ವಿ,ಧಿಮಂತ ರಾಜಕಾರಣಿಯ ನಿಧನದಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.ಗ್ರಾಮೀಣ ಜನರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ ವರ್ಣರಂಜಿತ ರಾಜಕೀಯ ಮುತ್ಸದಿ,ಬಡವರಬಂಧುಗೆ ಆತ್ಮಕ್ಕೆಚಿರಶಾಂತಿ ದೊರೆಯಲಿ ಅವರ ನೆನಪು ಸದಾ ಅವಿಸ್ಮರಣೀಯ ಅಜರಾಮರ..!!!

23 Dec 2011

ಅಥ್ಲಿಟ್ ಅಶ್ವೀನಿ ಅಕ್ಕುಂಜಿಗೆ 1 ವರ್ಷ ನಿಷೇಧ..!!

ಕರ್ನಾಟಕದ ಉಡುಪಿಯವರಾದ ಖ್ಯಾತ ಮಹಿಳಾ ಅಥ್ಲಿಟ್ ಅಶ್ವೀನಿ ಅಕ್ಕುಂಜಿಯವರು ಕೆಲವು ದಿನಗಳ ಹಿಂದಯೇ ಉದ್ದೀಪನ ಸೇವನೆಯ ಪ್ರಕರಣವನ್ನು ಎದುರಿಸುತ್ತಿದ್ದರು ಈಗ ಉದ್ದೀಪನ ಸೇವನೆ ಮಾಡಿದ್ದೂ ಸಾಬಿತಾಗಿದ್ದು ನಾಡಾ-ರಾಷ್ಟ್ರೀಯ ಮದ್ದು ನಿಗ್ರಹ ಸಂಸ್ಥೆ ಅಸ್ವೀನಿ ಅಕ್ಕುಂಜಿ ಸೇರಿ ೬ ಅಥ್ಲಿಟ್ ಗಳಿಗೆ ಮನದೀಪ್ ಕೌರ,ಪನವರ,ಮೇರಿ ಥಾಮಸ್ ,ಸಿನಿ ಜೋಸ್,ಮರ್ಮಾ ಸೇರಿ 1 ವರ್ಷ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.ಅಲ್ಲದೇ ಯಾರೋ ಮಾಡಿದ ತಪ್ಪಿಗೆ ಅಸ್ವೀನಿ ಬಲಿಯಾಗಿದ್ದಾಳೆಂದು ಅಸ್ವೀನಿ ತಂದೆಯವರು ಬೇಸರವ್ಯಕ್ತಸಿದ್ದಾರೆ.ಹಾಗೆಯೇ 2012 ರ ಓಲಂಪಿಕ್ ಒಳಗೆ ನಿಷೇಧದ ಅವಧಿಯು ಪೂರ್ಣಗೊಂಡು ಒಲಂಪಿಕ್ ಗೆ ಭಾಗವಹಿಸುವ ಅವಕಾಶವೂ ಅಸ್ವೀನಿಗೆ ಲಭಿಸಬಹುದು.ಏನೆ ಅಗಲಿ ಭಾರತದ ಸ್ಥಾನವನ್ನು ಮೇಲೆತ್ತರಕ್ಕೆ ತರಲು ಶ್ರಮಿಸುತ್ತಿರುವ ಅಸ್ವೀನಿಗೆ ಹಿಗಾಗಿರುವದು ವಿಷಾದಕರ ಸಂಗತಿ ಮತ್ತೆ ಅವರಿಗೆ ಒಳ್ಳೆಯ ಅವಕಾಶಗಳು ಕೈ ಬಿಸಿ ಕರೆಯಲಿ ಅವರ ಒಲಂಪಿಕ್ ಕನಸು ನನಸಾಗಲಿ..!!

22 Dec 2011

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.ಸದಾನಂದಗೌಡರಿಗೆ 123 ಮತಗಳು ಕಾಂಗ್ರೆಸ್ ನ ಗಡ್ಡದೇವರ ಮಠ ಅವರಿಗೆ 69 ಮತಗಳು ಬಂದಿವೆ.225 ಶಾಸಕರರಲ್ಲಿ 119 ಮತದಾನ 7 ಮತಗಳು ಅಸಿಂಧುವಾಗಿದ್ದು ಚುನಾವಣೆ ನಂತರ ಸಿ ಎಂ ಸುದ್ದಿಗೊಸ್ಟಿಯೊಂದಿಗೆ ಮಾತನಾಡಿ ಶಾಸಕರು ವಿವೇಚನೆಯಿಂದ ಮತ ಚಲಾಯಿಸಬೇಕ್ಕಿತ್ತು ಎಂದು ಬೇಸರವ್ಯಕ್ತಪಡಿಸಿದರು ನಂತರ ಒಂದು ವಾರದೊಳಗೆ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತನಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವದಾಗಿ ಹೇಳದ್ದಾರೆ .ಅಲ್ಲದೇ ಶಾಸಕರು,ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ ನಂತರ ನನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೆನೆಂದು ಹೇಳಿದರು. ಸದಾನಂದಗೌಡರು ಮೇಲ್ಮನೆ ಸದಸ್ಯತ್ವ ಪಡೆದ ಮೊದಲ ಸಿಎಂ ಇವರಾಗಿದ್ದಾರೆ.ನಂತರ ಎಲ್ಲ ಬಿಜೆಪಿ ಶಾಸಕರು ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಏನೇ ಅಗಲಿ ಮೊದಲೇ ನಗು ಮುಖದವರಾದ ಸದಾನಂದಗೌಡರು ಮತ್ತಷ್ಟು ಹಸನ್ಮುಖರಾಗಿ ನಗೆ ಬಿರಿ ಸದಾ ಅರಳಲಿ ಎಂದು ಶುಭ ಹಾರೈಸೋಣ ...!!

14 Dec 2011

ಕಡಲೆಹಿಟ್ಟಿನ ನಿಪ್ಪಟ್ಟು..!


ಕಡಲೆಹಿಟ್ಟಿನ ನಿಪ್ಪಟ್ಟು ಮಾಡಲು ಬೇಕಾಗುವ ಪದಾರ್ಥಗಳು:
  • ಕಡಲೆಹಿಟ್ಟು
  • ಅಕ್ಕಿಹಿಟ್ಟು
  • ಅವಲಕ್ಕಿ
  • ಹುರಿದ ಕಡಲೆ ಬೀಜ(ಪುಟಾಣಿ )
  • ಬಿಳಿ ಎಳ್ಳು
  • ಈರುಳ್ಳಿ
  • ಜೀರಿಗೆ
  • ಸೋಡಾ
  • ರುಚಿಗೆ ಉಪ್ಪು
  • ಹಿಡಿ ಕೊತಂಬರಿ ಸೊಪ್ಪು
  • ಅಚ್ಚ ಖಾರದಪುಡಿ
ಬಿಸಿ ಬಿಸಿಯಾದ ನಿಪ್ಪಟ್ಟು ಮಾಡುವ ವಿಧಾನ:
.ಮೊದಲು ಒಣ ಅವಲಕ್ಕಿಯನ್ನು ಹಾಗೂ ಹುರಿದ ಪುಟಾಣಿಯನ್ನು ಮಿಕ್ಷಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಪಾತ್ರೆಯಲ್ಲಿ ಅಕ್ಕಿಹಿಟ್ಟು,ಕಡಲೆಹಿಟ್ಟು,ಪುಡಿ ಮಾಡಿದ ಪುಟಾಣಿ,ಅವಲಕ್ಕಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ,ಜೀರಿಗೆ,ಖಾರದ ಪುಡಿ ,ಉಪ್ಪು ಸೋಡಾ,ಹಿಡಿ ಕೊತಂಬರಿ ಸೊಪ್ಪು ಹಾಕಿ ಸ್ವಲ್ಪ ನಿರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸುವದು ೫ ನಿಮಿಷ ಬಿಟ್ಟು ೨ ಪ್ಲಾಸ್ಟಿಕ್ ಹಾಳೆ ತೆಗೆದುಕೊಂಡು ಹಿಟ್ಟಿನ ಉಂಡೆಯನ್ನುಅದರಲ್ಲಿ ಹಾಕಿ ಚಪಾತಿ ಮಣೆಯ ಮೇಲೆ ಲಟ್ಟಿಸಿ ಬೇಕಾದ ಆಕಾರಕ್ಕೆ ಮಾಡಿಕೊಂಡು ಎಣ್ಣೆಯಲ್ಲಿ ಕರಿಯುವದು ನಿಪ್ಪಟ್ಟು ತಿಂದರೆ ರುಚಿಯಾಗಿರತ್ತೆ ನಿಪ್ಪಟ್ಟನ್ನು ಸಂಜೆಯ ತಿಂಡಿಗೆ ಮಾಡಿದರೆ ಇನ್ನು ಚನ್ನಾಗಿರುತ್ತೆ,ಹಾಗೆ ರುಚಿ ರುಚಿಯಾದ ನಿಪ್ಪಟ್ಟು ಮಾಡಿ ಮನೆಯವರ ಮನಸನ್ನು ಅಹಲ್ಲಾದಕರವಾಗಿಸಿ.ರುಚಿಯಾದ ಆಹಾರ ಆರೋಗ್ಯಕ್ಕೆ ಉತ್ತಮವಾದುದು ,

9 Dec 2011

ಇಂದು 78 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ..

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಶಾಸಕ ಪರಣ್ಣ ಮುನ್ನವಳ್ಳಿ ಯವರಿಂದ ಚಾಲನೆ ನೀಡಲಾಯಿತು.ಸಾಯಿಬಾಬ ಮಂದಿರದಿಂದ ಚಾಲನೆ ಮಾಡಿ ದ್ವಜಾರೋಹನವನ್ನು ಶಾಸಕ ಲಕ್ಷ್ಮನ್ ಸೌದಿಯವರು ನೆರವೇರಿಸಿದರು.ಹಾಗೇ ಕನ್ನಡ ದ್ವಜವನ್ನು ಸಾಹಿತಿ ನಲ್ಲೂರು ಪ್ರಸಾದರು ಹಾರಿಸಿದರು .ಸಮ್ಮೇಳನದಲ್ಲಿ ಎಲ್ಲೆಲ್ಲು ರಂಗೋಲಿ ರಾರಾಜಿಸುತ್ತಿದೆ.ಜನರು ಕೂಡ ಅದ್ದೂರಿ ಕನ್ನಡದ ಸಂಭ್ರಮದಲ್ಲಿದ್ದಾರೆ.ಸಮ್ಮೇಳನದ ಅದ್ಯಕ್ಷ್ಯರಾದ ಸಿ ಪಿ ಕೆ ಯವರನ್ನು ಮೆರವಣಿಗೆ ಮಾಡಲಾಯಿತು ಸಾವಿರಾರು ಕನ್ನಡಿಗರು ವಿವಿದೆಡೆಯಿಂದ ಬಂದು ಸಂಬ್ರಮದಲ್ಲಿ ಭಾಗವಹಿಸಿದ್ದಾರೆ.ಎಲ್ಲೆಲ್ಲು ಸಾಹಿತ್ಯದ ಕಂಪು ಹರಡಿದೆ.ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾಮೇಳಗಳು ಆಗಮಿಸಿವೆ.ಕಾವ್ಯಗಾಯನ ಕಾರ್ಯಕ್ರಮವು ನಡೆಯಲಿದೆ ಇಂದಿನಿಂದ ೩ ದಿನಗಳವರೆಗೂ ಕನ್ನಡ ಸಮ್ಮೇಳನ ನಡೆಯಲಿದೆ.ಹಾಗೆಯೆ ಆಗಮಿಸುತ್ತಿರುವ ಲಕ್ಷಾಂತರ ಕನ್ನಡಿಗರಿಗಾಗಿ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿದೆ.ರಾಜಸ್ತಾನದಿಂದ ವಿಶೇಷ ಅಡುಗೆಯವರು ಬಂದಿದ್ದಾರೆ. ರುಚಿ ರುಚಿಯಾದ ಉತ್ತರ ಕನ್ನಡದ ತಿಂಡಿಗಳು ಆಗಲೇ ತಯಾರಾಗಿವೆ.ಬನ್ನಿ ನಾವು ಕನ್ನಡ ಸಂಭ್ರಮದಲ್ಲಿ ಸೇರೋಣ ಕನ್ನಡದ ತೇರನ್ನು ಎಳೆಯೋಣ..ಜೈ ಕನ್ನಡಾಂಬೆ.

7 Dec 2011

ವಿರಾಟ್ ಕೊಹ್ಲಿಗೆ ಐಸಿಸಿ ಛೀಮಾರಿ..!

ಅಹಮದಾಬಾದನಲ್ಲಿ ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವೆ ಸೋಮವಾರ ನಡೆದ ODI ಪಂದ್ಯದಲ್ಲಿ ವಿರಾಟ್ ಹಾಗೂ ರೋಹಿತ ಶರ್ಮಾ ಬ್ಯಾಟಿಂಗ್ ಮಾಡುವಾಗ lbw ಆಗಿದ್ದು ಅಂಪಾಯರ್ ಔಟ್ ಕೊಟ್ಟಾಗ ಕೊಹ್ಲಿ ಕೋಪದಿಂದ ಅಂಪಾಯರಗೆ ಬಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರೋಶ ವ್ಯಕ್ತಪಡಿಸಿದ್ದನ್ನು ಖಂಡಿಸಿದ ಭಾರತದವರೇ ಆದ ಅಂಪಾಯರ ಸುದೀರ ಅಸನಾನಿ ಹಾಗೂ ಅವರ ಕುಟುಂಬದವರು, ಅವರ ಸ್ನೇಹಿತರಿಗೂ ಕೊಹಿಲಿಯ ಅಸಭ್ಯ ವರ್ತನೆಯಿಂದ ಮನನೊಂದು ಕೊಹಿಲಿ ಮಾಡಿದ್ದೂ ಸರಿಯಲ್ಲವೆಂದು ಬೇಸರವ್ಯಕ್ತಪ್ದಿಸಿದ್ದಾರೆ . ೨೩ ವರ್ಷದ ಕಿರಿಯ ಆಟಗಾರನಾದ ಕೊಹಿಲಿ ವರ್ತನೆ ಅಭಿಮಾನಿಗಳಿಗೂ ಬೇಸರ ತಂದಿದೆ.ಅಷ್ಟೇ ಅಲ್ಲ ಸಿಸಿ ಕ್ರಿಕೆಟ್ ಸಮಿತಿಯು ವಿರಾಟನನ್ನು ತರಾಟೆಗೆ ತೆಗೆದುಕೊಂಡಿದೆ 'ನೀನು ಮಾಡಿದ್ದು ಸರಿಯಲ್ಲವೆಂದು ಮತ್ತೆ ಇಂಥ ತಪ್ಪು ನಡೆಯಬಾರದೆಂದು ಎಚ್ಚರಿಕೆ ನೀಡಿದೆ.ವಿರಾಟ್ ತನ್ನ ತಪ್ಪಿನ ಅರಿವಾಗಿ ಸಿಸಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಅದರೂ ಉತ್ತಮ ಸ್ತಾನದಲ್ಲಿರುವ ಕ್ರಿಕೆಟಿಗ ಹೀಗೆ ಮಾಡಿದ್ದೂ ಸರಿಯೇ.. ಇಲ್ಲಿಯವರೆಗೂ ಭಾರತದ ಹಿರಿಯ ಆಟಗಾರರಾದ ಅನಿಲ್ ಕುಂಬ್ಳೆ ,ಧೋನಿ,ಸಚಿನ,ದ್ರಾವಿಡರಂತಹ ಪ್ರಭಾವಿ ಆಟಗಾರರು ಇಂಥಹ ಅಸಭ್ಯ ವರ್ತನೆಯನ್ನು ತೋರಿಸಿರಲಿಲ್ಲ ಏನೆ ಆಗಲಿ ವಿರಾಟ್ ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯ ಉತ್ತಮ ಆಟಗಾರ ಎಂದೆನಿಸಿಕೊಳ್ಳಬಹುದು.

4 Dec 2011

ದೇವ ಆನಂದ : ಹಿಂದಿ ಚಿತ್ರ ರಂಗದ ಅದ್ಬುತ ಶೈಲಿಯ ಚಿತ್ರ ನಟ.


Watch video inside

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಜಯಪುರ : ಭಾರತ ಕ್ರಿಕೆಟ್ ಕಂಡ ದಂತಕತೆ ದಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸೀಸನ್ ಇಪಿಎಲ್ ನಲ್ಲಿ ಆಸ್ತ್ರೆಲಿಯಾದ್ ಸ್ಪಿನ್ ಆಟಗಾರ ಶೇನ್ ವಾರ್ನ್ ನಾಯಕನಾಗಿದ್ದರು. ತದನಂತರ ವಾರ್ನ್ ಆಯಪಿಎಲ್ ಗೆ ವಿದಾಯ ಹೇಳಿದ ನಂತರ ನಾಯಕನ ಸ್ಥಾನ ಖಾಲಿಯಾಗಿತ್ತು . ೨೦೧೧ ರಲ್ಲಿ ರಾಜಸ್ತಾನ್ ತಂಡ ರಾಹುಲ್ ರನ್ನು ೫೦೦,೦೦೦ ಡಾಲರ್ ಗೆ ಕರಿದಿಸಿದ್ದರು ಇದಕಿಂತಲ್ಲು ಮುಂಚೆ ನಮ್ಮ ಬೆಂಗಳೂರು ತಂಡ ದಲ್ಲಿ ಆಡುತ್ತಿದ್ದರು . ದ್ರಾವಿಡ್ ಹೇಳಿಕೆ : "ನಮ್ಮ ತಂಡದಲ್ಲಿನ ಎಲ್ಲ ಆಟಗಾರರ ಸಾಮರ್ಥ್ಯ ನನಗೆ ಗೊತ್ತು ಎಲ್ಲರು ಅತ್ತ್ಯುತಮ ಆಟಗಾರರು ಆದ್ದರಿಂದ ನನ್ನ ತಂಡವನ್ನುಸಮರ್ಥ ರೀತಿಯಲ್ಲಿ ಮುನ್ನಡೆಸುತ್ತೆನೆಂಬ ಆತ್ಮ ವಿಶ್ವಾಸ,ನಂಬಿಕೆ ನನ್ನಲ್ಲಿದೆ ಉತ್ತಮ ಸ್ಥಾನ ಉಳಿಸಿಕೊಳ್ಳುವುದೇ ನನ್ನ ಗುರಿ" ಎಂದಿದ್ದಾರೆ. ಶೆನವಾರ್ನ್ ಹೇಳಿಕೆ : ರಾಹುಲ್ ವಿಶ್ವದ ಶ್ರೇಷ್ಟ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಅವರ ವ್ಯಕ್ತಿತ್ವ ಶ್ರೇಷ್ಟವಾದುದು ನಾಯಕರಾಗುವ ಅಹರ್ತೆ ಅವರಿಗಿದೆ ಎಂದಿದ್ದಾರೆ ಅಲ್ಲದೇ ಟಿಮ್ ನಲ್ಲಿ ಉತ್ತಮ ಆಟಗಾರರಿದ್ದಾರೆ ಅವರೆಂದರೆ ಸದ್ಯ ನ್ಯೂಜಿಲೆಂಡ್ ತಂಡದ ನಾಯಕನಾಗಿರುವ ರಾಸ್ ಟೇಲರ್,ಜೊನಾಥನ್ ಟ್ರೋಟ್ ಮತ್ತು ಪೌಲ್ ಕಾಲಿಂಗ್ ವುಡ್ದ್ ಮತ್ತೊಬ್ಬ ಆಸ್ಟ್ರೇಲಿಯಾದ ಆಲ್ ರೌಂಡರ ಶೇನ್ ವ್ಯಾಟ್ಸನ್ ಗಳೂ ನಾಯ್ಕ ರಾಗಲು ಸಮರ್ಥರು ಆದೆರೆ ರಾಹುಲ್ ರನ್ನೇ ಆಯ್ಕೆ ಮಾಡಲು ಸೂಚಿಸಿದ್ದರು ಆದ್ದರಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ.ಕರ್ನಾಟಕದ ಹೆಮ್ಮೆಯ ಆಟಗಾರರಾಗಿ ಉತ್ತಮ ಮಟ್ಟಕ್ಕೆರಲಿ ಎನ್ನುವದೇ ನಮ್ಮೆಲ್ಲರ ಆಶಯ..ದೀ ವಾಲ್ ಬೆಸ್ಟ್ ಆಫ್ ಲಕ್ .

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.ಬಾರಿ ಅಬ್ಬರದ ಪ್ರಚಾರದಿಂದ ಆಡಳಿತದ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ಹ್ವಿಯಗಿದ್ದಾರೆ.ಈ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಮತ್ತು ಕಾಂಗ್ರೆಸ್ಸ್ ಗೆ ಬಾರಿ ಮುಖಭಂಗವಾಗಿದೆ.ಶ್ರೀರಾಮುಲುಗೆ ಬಂದ ಒಟ್ಟು ಮತಗಳು 74,527 ಬಿಜೆಪಿಗೆ 17366 ಕಾಂಗ್ರೆಸ್ಸ್ ಗೆ 27,737 ಮತಗಳು ಶ್ರೀರಾಮುಲು ಒಟ್ಟು 46790 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ ಹಾಗೆ ಬಿಜೆಪಿ ಅಭ್ಯರ್ತಿ ಕಡಿಮೇ ಮತದಿಂದಾಗಿ ಡಿಫ್ಯಾಜಿಟ್ಟನ್ನು ಕಳೆದುಕೊಂಡಿದ್ದಾರೆ.ಸಂಭ್ರಮದ ನಡುವೆ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು "ಇದು ನನ್ನ ಗೆಲುವಲ್ಲ ನನ್ನ ಅಭಿಮಾನಿ ಜನರ ಗೆಲುವು " ಎಂದರು.ಒಟ್ಟಾರೆ ಗಡಿನಾಡಲ್ಲಿ ಸ್ವಾಭಿಮಾನಿ ಶ್ರೀರಮುಲೂ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿದೆ.ಶ್ರೀರಮುಲೂಗೆ ಜಯವಾಗಲಿ..

2 Dec 2011

ಮಗಧಿರನ "ಮೆಗಾ'ಎಂಗೇಜ್ಮೆಂಟ್

ಹೈದ್ರಬಾದ:ನಿನ್ನೆಮುತ್ತಿನನಗರಿ ಹೈದ್ರಬಾದನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಪುತ್ರ ರಾಮಚರಣ್ ತೇಜಅವರಎಂಗೇಜ್ಮೆಂಟ್
ಬಹಳ ವಿಜೃಂಭಣೆಯಿಂದ ನೆರವೇರಿತು.ರಾಮಚರಣ್ ರ ಬಾಲ್ಯದ ಗೆಳತಿ ಉಪಾಸನಾಳೊಂದಿಗೆ ಗಾಂಧೀಪೆಟ್ ಬಳಿ ಇರುವ ಫ್ಹಾರ್ಮ್ ಹೌಸನಲ್ಲಿ ಅದ್ದೂರಿಎಂಗೇಜ್ಮೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋತರವಾಗಿ ನೆರವೇರಿತು ಎಲ್ಲ ಕಡೆ ಮಂತ್ರಗೋಷಗಳು ಮೊಳಗಿದವು. ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್,ಟಾಲಿವುಡ್ ನ ನಟ-ನಟಿಯರು ಆಗಮಿಸಿದ್ದರು.ಅಲ್ಲದೆ ಮಗಧಿರ್ ಚಿತ್ರ ನಿರ್ದೇಶಕ ರಾಜಮೌಳಿ,ನಟಿ ಜಯಪ್ರದಾ ಹಾಗೂ ರಾಜಕೀಯದ ಎಲ್ಲ ಗಣ್ಯರು,ಆಂದ್ರಪ್ರದೇಶದ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಕೂಡ ಸಮಾರಂಭಕ್ಕೆ ಉಪಸ್ತಿತರಿದ್ದರು.ಸಮಾರಂಭಕ್ಕೆದೇಶ-ವಿದೇಶದ ಹೂಗಳನ್ನು ತಂದು ಸ್ಟೆಜನ್ನುಅಲಂಕರಿಸಲಾಗಿತ್ತು.ನಟ ನಾಗಾರ್ಜುನ ಹಾಗೂ ನಿರ್ದೇಶಕರು,ಜು,ಏನ್ ಟಿ ಆರ್ ಶ್ರೇಯಾ,ದ್ಯಾನರು ಆಗಮಿಸಿ ಶುಭಕೋರಿದರು ರಾಮಚರಣ್ ತೇಜ್1.5 ಲಕ್ಷದ ಶೇರ್ವಾನಿ ತೊಟ್ಟು ಕಂಗೋಗೋಳಿಸಿದರು.ಎಲ್ಲರ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡು ಗುರು ಹಿರಿಯರಿಂದ ಆಶಿರ್ವಾದ ಪಡೆದುಕೊಂಡರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನ್ರತ್ಯಪ್ರದರ್ಶನಗಳು ನೆರವೇರಿದವು.ಅಲ್ಲದೆ 200 ಬಗೆಯ ಸಸ್ಯಾಹಾರಿಯ ಹಾಗೂ ಮಾಂಸಾಹಾರಿಯಾ ತಿಂಡಿಗಳನ್ನೂ ಭೋಜನಕ್ಕೆ ತಯಾರಿಸಲಾಗಿತ್ತು ಬಂದಂತಹ ಗಣ್ಯರು ಉಡುಗೊರೆ ಕೊಟ್ಟುಶುಭಕೋರಿದರು.ಒಟ್ಟು ಕಾರ್ಯಕ್ರಮಕ್ಕೆ10 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಮಗಧಿರನಿಗೆ ಶುಭವಾಗಲಿ..

1 Dec 2011

ಕನಿಮೋಳಿಗೆ ಜಾಮೀನು ..!



ನವದೆಹಲಿ :ಇಲ್ಲಿಯವರೆಗೆ 193 ದಿನದ ನಂತರ ದೇಶದ ಅತೀ ದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ದ ಆರೋಪಿ ಕನಿಮೋಳಿ ಜಾಮೀನು ಪಡೆದು ತಿಹಾರ ಜೈಲಿನಿಂದ ಬಹಳ ಶಾಂತ ರೀತಿಯಿಂದ ಹೊರಬಂದು ಮಾದ್ಯಮಗಳಿಗೆ ಮುಖ ತೋರಿಸಿದೆ ಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.ಕರುಣಾನಿಧಿಯ ಕಡೆಯ ಜನ ಕನಿಮೋಳಿಯ ಮನೆಯಲ್ಲಿ ಸ್ವಾಗತ ಕೋರಲು ಸಿದ್ದತೆ ಮಾಡಿಕೊಂಡು ಸ್ವಾಗತಕ್ಕಾಗಿ ತರಾತುರಿಯಲ್ಲಿದ್ದರು.ಡಿಎಂಕೆ ಸಂಸದೆ ಕನಿಮೋಳಿ ೨ಜಿ ಬಹುಕೋಟಿ ಹಗರಣದಿಂದ ಮೇ 20 ರಂದು ತಿಹಾರ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು.ಈಗ ದಿಲ್ಲಿಯ ಹೈಕೋರ್ಟ ಸೋಮವಾರದಂದು ಜಾಮೀನು ನೀಡಿತು ಕನಿಮೋಳಿಯೊಂದಿಗೆ ಈ ಹಗರಣದಲ್ಲಿ ಶಾಮೀಲಾಗಿದ್ದ ನಾಲ್ಕು ಜನರಿಗೂ ಜಾಮೀನು ಸಿಕ್ಕಿತು.ಅವರುಗಳೆಂದರೆ ಶರದ್ ಕುಮಾರ,ಆಸಿಪ ಬಲವಾ,ಕರಿಮ ಮೊರಾನಿ(ಬಾಲಿವುಡ್ ನಿರ್ಮಾಪಕ),ರಾಜೀವ್ ಅಗರವಾಲ ಇವರುಗಳಿಗೆ ೫ ಲಕ್ಷ ರೂ.ದಂಡದೊಂದಿಗೆ ದೇಶದಿಂದ ಹೊರ ಹೋಗದಂತೆ ಆದೇಶ ನೀಡಿ ಶರತ್ತುಬದ್ದ ಜಾಮೀನು ನೀಡಿದೆ.ಈಗ ಕನಿಮೋಳಿ ಜಾಮೀನು ಪಡೆದು ಮನೆಗೆ ತೆರಳಿದ್ದಾರೆ.

Share

Twitter Delicious Facebook Digg Stumbleupon Favorites More