ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ 12 .45 ಕ್ಕೆಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದರು.ಬಂಗಾರಪ್ಪನವರು ಇತ್ತಿಚೆಯಿಂದ ಮಧುಮೇಹರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕ್ರಿಯಾಶೀಲ ಚತುರ ರಾಜಕಾರಣಿ ಬಡವರ,ರೈತರ,ದಿನದಲಿತರ ನಾಯಕರಾಗಿ ಸೇವೆಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಶಿವಮೊಗ್ಗ ಜಿಲ್ಲೆಯ ಸೊರಬ ತಾಲುಕಿನವರಾದ ಇವರು 1962 ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ನಂತರ 1979 -80 ರಲ್ಲಿ ಕೆಪಿಸಿಸಿ ಅದ್ಯಕ್ಷ್ಯರಾಗಿ 19 91 -92 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.ಇತ್ತೀಚಿಗೆ ಕಾಂಗ್ರೆಸ ಪಕ್ಷ ಬಿಟ್ಟು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು ಇವರು ಪತ್ನಿ ಹಾಗೂ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಅಗಲಿದ್ದಾರೆ.ಅಲ್ಲದೇ ಸುದ್ದಿ ತಿಳಿಯುತ್ತಿದ್ದಂತೆ ಅಳಿಯನಾದ ಚಿತ್ರನಟ ಶಿವರಾಜಕುಮಾರ,ಪಾರ್ವತಮ್ಮ ರಾಜಕುಮಾರ ಹಾಗೂ ಪ್ರತಿಷ್ಠಿತ ರಾಜಕಾರಣಿಗಳಾದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ,ವಿದೇಶಾಂಗ ಸಚಿವರಾದ ಎಸ್.ಎಂ .ಕೃಷ್ಣ ,ಎಚ್. ಡಿ ದೇವೇಗೌಡ,ಮಲ್ಲಿಕಾರ್ಜುನ್ ಕಾರ್ಗೆ,ಶೋಭಾ ಕರಂದ್ಲಾಂಜೆ,ಡಿ.ಕೆ.ಶಿವುಕುಮಾರ ಅಲ್ಲದೇ ಇನ್ನಿತರ ಗಣ್ಯನಾಯಕರು ರಾಜಕಾರಣಿಗಳು ಬೆಂಗಳುರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿನೀಡಿ ಕುಟುಂಬದವರಿಗೆ ಸಮಾಧಾನಹೇಳಿ ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದರು.ಅಲ್ಲದೇ ಅನೇಕ ಚಿತ್ರರಂಗದ ಹಿರಿಯ ಗಣ್ಯರು ಬಂದು ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು.ನಾಳೆ ಬಂಗರಪ್ಪನವರ್ ಹುಟ್ಟುರಾದ ಶಿವಮೊಗ್ಗದ ಸೊರಬನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಅಲ್ಲದೇ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆ ,ಕಾಲೇಜುಗಳಿಗೆ ರಜೆ ಘೋಸಿಸಲಾಗಿದ್ದು ರಾಜ್ಯಾಯಾದ್ಯಂತ 3 ದಿನ ಶೋಕಾಚರಣೆ ಆಚರಿಸುವದಾಗಿ ಸಿಎಂ ಸದಾನಂದಗೌಡರು ಹೇಳಿದ್ದಾರೆ. ಯಶಸ್ವಿ,ಧಿಮಂತ ರಾಜಕಾರಣಿಯ ನಿಧನದಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.ಗ್ರಾಮೀಣ ಜನರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ ವರ್ಣರಂಜಿತ ರಾಜಕೀಯ ಮುತ್ಸದಿ,ಬಡವರಬಂಧುಗೆ ಆತ್ಮಕ್ಕೆಚಿರಶಾಂತಿ ದೊರೆಯಲಿ ಅವರ ನೆನಪು ಸದಾ ಅವಿಸ್ಮರಣೀಯ ಅಜರಾಮರ..!!!
0 comments:
Post a Comment