ದೀಪಾವಳಿ ಸಂಭ್ರಮ ಮೂರು ದಿನ ಮನೆಮನಗಳಲ್ಲಿ ತುಂಬಿರುತ್ತೆ. ಜೊತೆಗೆ ಎಲ್ಲೆಲ್ಲೂ ಪಟಾಕಿಗಳ ಅಬ್ಬರ ಜೋರಿರುತ್ತೆ. ಆದರೆ ಈ ಖುಷಿಯ ಹೊರತಾಗಿ ಆರೋಗ್ಯ ಸಮಸ್ಯೆಯತ್ತ ಯೋಚಿಸಿದರೆ ಪಟಾಕಿಯಿಂದ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಅರಿವಾಗುತ್ತದೆ.
ಉಸಿರಾಟದ ತೊಂದರೆ, ಹೃದ್ರೋಗಿಗಳು, ಹಸುಗೂಸು, ಪುಟ್ಟ ಮಕ್ಕಳು ಈ ಸಮಯದಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಇಲ್ಲದಿದ್ದರೆ ಈ 3 ದಿನಗಳ ಅವಧಿ ಉಂಟಾಗುವ ಪ್ರದೂಷಣೆ ಪರಿಣಾಮ ಜೀವನವಿಡೀ ಉಳಿದುಕೊಳ್ಳಬಹುದು.
ಪಟಾಕಿ ಹೊಗೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
1. ಪಟಾಕಿ ಹೊಗೆಯಿಂದ ಮಕ್ಕಳ ಮೂಗು ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮ ಆರೋಗ್ಯವುಳ್ಳ ಮಕ್ಕಳಲ್ಲಿ ಊತವೂ ಕಾಣಿಸಿಕೊಳ್ಳುತ್ತೆ. ಕೆಮ್ಮು ಆರಂಭವಾಗಿ ಎದೆ ಉರಿಯಾಗುತ್ತದೆ.
2. ಪಟಾಕಿ ಹೊಗೆಯಿಂದ ಕಣ್ಣಿನಲ್ಲಿ ಉರಿ ಉಂಟಾಗಿ ಕಣ್ಣು ಕೆಂಪಗಾಗುವಂತೆ ಮಾಡುತ್ತದೆ. ಎಲ್ಲಾ ವಯೋಮಾನದವರಲ್ಲೂ ಈ ಪರಿಣಾಮ ಗೋಚರಿಸುತ್ತದೆ. ಇದರ ಶಬ್ದ ಕಿವಿಯ ತಮಟೆಯ ಶಕ್ತಿಯನ್ನೂ ಕುಂದಿಸುತ್ತದೆ.
3. ಪಟಾಕಿಗಳನ್ನು ಸಿಡಿಸುವುದರಿಂದ ಬಿಪಿಯಿಂದ ಬಳಲುತ್ತಿದ್ದವರಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ತಲೆಸುತ್ತು, ತಲೆ ನೋವು ಮತ್ತು ತಲೆ ತಿರುಗುವುದು ಈ ಪರಿಣಾಮಗಳು ನಂತರ ಗೋಚರಿಸಲು ಪ್ರಾರಂಭವಾಗುತ್ತದೆ.
4. ಪಟಾಕಿ ಹೊಗೆಯಿಂದ ಶ್ವಾಸಕೋಶದ ತೊಂದರೆ ಉಂಟಾಗಿ ಕೆಮ್ಮು, ಸೀನು ಹೆಚ್ಚಾಗುತ್ತದೆ. ಅಲ್ಲದೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಪಟಾಕಿ ವಾತಾವರಣದಿಂದ ದೂರವಿದ್ದರೆ ಉತ್ತಮ. ಇಲ್ಲದಿದ್ದರೆ ತೊಂದರೆ ಉಲ್ಬಣವಾಗುವ ಸಾಧ್ಯತೆಯೇ ಹೆಚ್ಚು.
5. ಈ ವಿಷಕಾರಿ ಅನಿಲವನ್ನು ಗರ್ಭಿಣಿಯರು ಸೇವಿಸಿದರೆ ತಾಯಿಗೆ ಮತ್ತು ಹುಟ್ಟಲಿರುವ ಮಗುವಿಗೆ, ಇಬ್ಬರಿಗೂ ತೊಂದರೆ, ಹುಟ್ಟುತ್ತಲೇ ಉಸಿರಾಟದ ತೊಂದರೆಗೆ ಮಗು ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ಜಾಗ್ರತೆ ವಹಿಸಲೇಬೇಕು. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದು ತೊಂದರೆಗೀಡುಮಾಡಬಹುದು.
0 comments:
Post a Comment