ಬೆಂಗಳೂರು ಸೆ ೧೯: ಕಾದಂಬರಿಕಾರ, ನಾಟಕಕಾರ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯಾದ ಕವಿ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಒಲಿದು ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ ಎಂಟನೆ ಬಾರಿ ಪಡೆಯುವುದರೊಂದಿಗೆ ಕನ್ನಡ ಸಾಹಿತ್ಯವು ಅಷ್ಟದಿಕ್ಪಾಲಕರ ಪಡೆಯಾಗಿದೆ. ಕನ್ನಡಕ್ಕೆ ಒಟ್ಟು ಎಂಟು ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ.
ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನೆವರಿ 2, 1937 ರಲ್ಲಿ ಜನಿಸಿದ ಚಂದ್ರಶೇಖರ ಕಂಬಾರರಿಗೆ ಅವರ ತಾಯಿಯೇ ಕಾವ್ಯದ ಮೊದಲು ಗುರು. ಬಹುಮುಖ ಪ್ರತಿಬೆಯಾದ ಕಂಬಾರರಿಗೆ ಇನ್ನೊಂದು ಪ್ರೀತಿಯ ಕ್ಷೇತ್ರ ಸಿನಿಮಾ. ಅದರ ಫಲವಾಗಿಯೇ ಕಾಡುಕುದುರೆ, ಕರಿಮಾಯಿ ಹಾಗು ಸಂಗೀತಾ ರೂಪುಗೊಂಡವು.
1 comments:
wow... super
Post a Comment