ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

10 Feb 2012

ಪಾಲಾಕ ಪಕೋಡ..!!

ಪಾಲಾಕ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು :

  • ಕಡಲೆಹಿಟ್ಟು
  • ಮೈದಾಹಿಟ್ಟು
  • ಚಿರೋಟಿ ರವೆ
  • ಕತ್ತರಿಸಿದ ಈರುಳ್ಳಿ
  • ಹಿಡಿ ಪಾಲಾಕ ಸೊಪ್ಪು
  • ಪುದಿನಾ ಸೊಪ್ಪು
  • ಸ್ವಲ್ಪ ತುಪ್ಪ
  • ಅಚ್ಚಖಾರದಪುಡಿ
  • ಗರಂ ಮಸಾಲೆ
  • ರುಚಿಗೆ ಉಪ್ಪು
  • ಕರಿಯಲು ಎಣ್ಣೆ
  • ಸೋಡಾ
  • ಕೊತಂಬರಿ ಸೊಪ್ಪು
  • ಪಕೋಡಮಾಡುವವಿಧಾನ :ಮೊದಲು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೆ ಹಿಟ್ಟು ,ಮೈದಾ ಹಿಟ್ಟು ,ರವೆ ,ಕತ್ತರಿಸಿದ ಈರುಳ್ಳಿ ,ಖಾರದ ಪುಡಿ,ಗರಂ ಮಸಾಲೆ ,ಉಪ್ಪು ,ಪಾಲಾಕ ,ಪುದಿನಾ ಸೊಪ್ಪು,ಕೊತಂಬರಿ ,ಸೋಡಾ ಹಾಕಿ ಪಕೋಡ ಹದಕ್ಕೆ ಕಲಸಿ ೧೦ ನಿಮಿಷ ನೆನೆಯಲು ಬಿಟ್ಟು ನಂತರ ಬಜ್ಜಿ ಹಾಗೆ ಎಣ್ಣೆಯಲ್ಲಿ ಕರಿಯುವದು ಬಿಸಿ ಬಿಸಿಯಾದ ಪಕೋಡ ಚಳಿಗಾಲದಲ್ಲಿ ಪುದಿನ ಚಟ್ನಿ,ಟಮೊಟೋ ಸಾಸನೊಂದಿಗೆ ತಿಂದರೆ ರುಚಿಕರವಾಗಿರುತ್ತೆ ಹಾಗಿದ್ದರೆ ತಡ ಏಕೆ ಮಾಡಿ ನೋಡಿ ...!

27 Dec 2011

ಭಾರತದ ರಾಷ್ಟ್ರಗೀತೆಗೆ ಶತಮಾನೋತ್ಸವದ ಸಂಭ್ರಮ ..!!

ಭಾರತದ ರಾಷ್ಟ್ರಗೀತೆಯಾದ 'ಜನಗಣ ಮನ ಅಧಿನಾಯಕ ಜಯಹೇ' ಗೀತೆಯನ್ನು "ಗೀತಾಂಜಲಿ" ಕೃತಿಗೆಗಾಗಿ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಕವಿ ರವಿಂದ್ರನಾಥ್ ಟ್ಯಾಗೋರರವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ.ಈ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ಭಾರತದ ಸಂವಿಧಾನದಲ್ಲಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು ಈ ಗೀತೆಯನ್ನು 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕಲ್ಕತ್ತಾ ದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಅದ್ದರಿಂದ ಅಂದಿನಿಂದ ಈ ರಾಷ್ಟ್ರ ಗೀತೆಯನ್ನು ಈಗ ಶಾಲೆ,ಕಾಲೇಜು,ಸರಕಾರಿ ಆಫೀಸ್ಗಳಲ್ಲಿ ಹಾಡಲಾಗುತ್ತಿದೆ.ಈ ಗೀತೆ ನಮ್ಮ ದೇಶದ ರಾಷ್ಟ್ರಭಿಮಾನವನ್ನು ಎತ್ತಿತೊರಿಸುವಲ್ಲಿ ಪ್ರೇರಣೆಯಾಗಿದೆ.ಇದರಲ್ಲಿ 5 ಪ್ಯಾರಗಳಿದ್ದು 52 ಸೆಕೆಂಡ್ ಗಳಲ್ಲಿ ಹಾಡಿ ಮುಗಿಸಲೇಬೇಕು.ಈ ಗೀತೆಯಲ್ಲಿ ಇಡೀ ಭಾರತದ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಂಬಿಸಲಾಗಿದೆ. ಇಂದಿಗೆ ಈ ಗೀತೆಯು 100 ವರ್ಷ ಪೂರೈಸಿ ಶತಮಾನೋತ್ಸವದ ಹೊಸ್ತಿಲಿಗೆ ಕಾಲಿಟ್ಟಿದೆ.ಇನ್ನು ಹೆಚ್ಹು ಹೆಚ್ಚು ನಮ್ಮ ರಾಷ್ಟ್ರದ ಸ್ವಾಭಿಮಾನದ ಕೀರ್ತಿ ಪತಾಕೆ ಎಲ್ಲೆಡೆ ಹಾರಿ ಭಾರತೀಯ ದೆಶಾಭಿಮಾನಿಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ತುಂಬಲು ರಾಷ್ಟ್ರಗೀತೆಯು ಉತ್ತಮವಾದ ಸಾಧನೆಗಳಲ್ಲೊಂದಾಗಿದೆ. ಹಾಗೆಯೇ ರಾಷ್ಟ್ರಾಭಿಮಾನದ ಸಂಭ್ರಮವನ್ನು ಹೆಚ್ಚಿಸಿ ಭಾರತವು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸುಧಾರಣೆಯಾಗಿ ಅಭಿವೃದ್ದಿಯತ್ತ ಸಾಗಲಿ ಜೈ ಹಿಂದ ಭಾರತ ಮಾತಾಕಿ ಜೈ ...!!
ಭಾರತದ ರಾಷ್ಟ್ರಗೀತೆ
ಜನಗಣಮನ ಅಧಿನಾಯಕ ಜಯಹೇ !!
ಭಾರತ ಭಾಗ್ಯವಿದಾತ!!
ಪಂಜಾಬ ಸಿಂಧು ಗುಜರಾತ ಮರಾಠ !!
ದ್ರಾವಿಡ ಉತ್ಕಲ ವಂಗಾ !!
ವಿಂದ್ಯ ಹಿಮಾಚಲ ಯಮುನಾ ಗಂಗಾ !!
ಉಚ್ಛಲ ಜಲಧಿತ ರಂಗಾ !!
ತವಶುಭ ನಾಮೇ ಜಾಗೇ !!
ತವಶುಭ ಅಶಿಸ ಮಾಗೇ !!
ಗಾಹೇ ತವ ಜಯ ಗಾಥಾ !!
ಜನಗಣ ಮಂಗಳ ದಾಯಕ ಜಯಹೇ !!
ಭಾರತ ಭಾಗ್ಯವಿಧಾತಾ !!
ಜಯ ಹೇ, ಜಯ ಹೇ, ಜಯ ಹೇ !!
ಜಯ ಜಯ ಜಯ ಜಯಹೇ !!

26 Dec 2011

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ವಿಧಿವಶ...!!!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರೆಪ್ಪನವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ 12 .45 ಕ್ಕೆಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದರು.ಬಂಗಾರಪ್ಪನವರು ಇತ್ತಿಚೆಯಿಂದ ಮಧುಮೇಹರೋಗ ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.ಕ್ರಿಯಾಶೀಲ ಚತುರ ರಾಜಕಾರಣಿ ಬಡವರ,ರೈತರ,ದಿನದಲಿತರ ನಾಯಕರಾಗಿ ಸೇವೆಸಲ್ಲಿಸಿದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು.ಶಿವಮೊಗ್ಗ ಜಿಲ್ಲೆಯ ಸೊರಬ ತಾಲುಕಿನವರಾದ ಇವರು 1962 ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ನಂತರ 1979 -80 ರಲ್ಲಿ ಕೆಪಿಸಿಸಿ ಅದ್ಯಕ್ಷ್ಯರಾಗಿ 19 91 -92 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.ಇತ್ತೀಚಿಗೆ ಕಾಂಗ್ರೆಸ ಪಕ್ಷ ಬಿಟ್ಟು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು ಇವರು ಪತ್ನಿ ಹಾಗೂ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು ಅಗಲಿದ್ದಾರೆ.ಅಲ್ಲದೇ ಸುದ್ದಿ ತಿಳಿಯುತ್ತಿದ್ದಂತೆ ಅಳಿಯನಾದ ಚಿತ್ರನಟ ಶಿವರಾಜಕುಮಾರ,ಪಾರ್ವತಮ್ಮ ರಾಜಕುಮಾರ ಹಾಗೂ ಪ್ರತಿಷ್ಠಿತ ರಾಜಕಾರಣಿಗಳಾದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ,ವಿದೇಶಾಂಗ ಸಚಿವರಾದ ಎಸ್.ಎಂ .ಕೃಷ್ಣ ,ಎಚ್. ಡಿ ದೇವೇಗೌಡ,ಮಲ್ಲಿಕಾರ್ಜುನ್ ಕಾರ್ಗೆ,ಶೋಭಾ ಕರಂದ್ಲಾಂಜೆ,ಡಿ.ಕೆ.ಶಿವುಕುಮಾರ ಅಲ್ಲದೇ ಇನ್ನಿತರ ಗಣ್ಯನಾಯಕರು ರಾಜಕಾರಣಿಗಳು ಬೆಂಗಳುರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿನೀಡಿ ಕುಟುಂಬದವರಿಗೆ ಸಮಾಧಾನಹೇಳಿ ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದರು.ಅಲ್ಲದೇ ಅನೇಕ ಚಿತ್ರರಂಗದ ಹಿರಿಯ ಗಣ್ಯರು ಬಂದು ಕಂಬನಿ ಮಿಡಿದು ಅಂತಿಮ ದರ್ಶನ ಪಡೆದರು.ನಾಳೆ ಬಂಗರಪ್ಪನವರ್ ಹುಟ್ಟುರಾದ ಶಿವಮೊಗ್ಗದ ಸೊರಬನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಅಲ್ಲದೇ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆ ,ಕಾಲೇಜುಗಳಿಗೆ ರಜೆ ಘೋಸಿಸಲಾಗಿದ್ದು ರಾಜ್ಯಾಯಾದ್ಯಂತ 3 ದಿನ ಶೋಕಾಚರಣೆ ಆಚರಿಸುವದಾಗಿ ಸಿಎಂ ಸದಾನಂದಗೌಡರು ಹೇಳಿದ್ದಾರೆ. ಯಶಸ್ವಿ,ಧಿಮಂತ ರಾಜಕಾರಣಿಯ ನಿಧನದಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.ಗ್ರಾಮೀಣ ಜನರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ ವರ್ಣರಂಜಿತ ರಾಜಕೀಯ ಮುತ್ಸದಿ,ಬಡವರಬಂಧುಗೆ ಆತ್ಮಕ್ಕೆಚಿರಶಾಂತಿ ದೊರೆಯಲಿ ಅವರ ನೆನಪು ಸದಾ ಅವಿಸ್ಮರಣೀಯ ಅಜರಾಮರ..!!!

Share

Twitter Delicious Facebook Digg Stumbleupon Favorites More