ಬ್ರೆಡ್ ನಿಂದ ಜಾಮೂನ್ ಮಾಡಲು ಬೇಕಾಗುವ ಪದಾರ್ಥಗಳು
೧. ೧೦ ಬ್ರೆಡ್ ಪಿಸ್ಸ್
೨. ತುಪ್ಪ ೧ ೧/೨ಬಟ್ಟಲು
೩.ಹಾಲು ೧ ಬಟ್ಟಲು
೩.೫ಗೋಡಂಬಿ,೫ ಬದಾಮ್
೪. ಸಕ್ಕರೆ
೫.ಏಲಕ್ಕಿ
ಬ್ರೆಡ್ ಗುಲಾಬ್ ಜಾಮೂನ್ ಮಾಡುವ ವಿಧಾನ :
ಮೊದಲು ಜಾಮೂನ್ ಮಾಡಲು ಸಕ್ಕರೆ ಪಾಕ ತಯಾರಿಸಿಕೊಳ್ಳಬೇಕು. ನಂತರ ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು ಆಮೇಲೆ ಪೌಡರನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪತುಪ್ಪ,ಏಲಕ್ಕಿ
ಗೋಡಂಬಿ,ಬಾದಾಮಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ರೆಡಿ ಮಾಡಿಕೊಳ್ಳುವದು . ೧೦ ನಿಮಿಷದ ನಂತರ ಕಲಸಿದ ಬ್ರೆಡ್ ನ್ನು ಚಿಕ್ಕ ಚಿಕ್ಕ ಉಂಡೆಯನ್ನು ಮಾಡಿಕೊಳ್ಳಿ ಅದರ ಒಳಗಡೆ ಕತ್ತರಿಸಿ ಕೊಂಡ ಗೋಡಂಬಿ ,ಬಾದಾಮಿಯನ್ನು ತುಂಬಿಸಿಕೊಳ್ಳಿ ನಂತರ ಬಿಸಿಯಾದ ತುಪ್ಪದಲ್ಲಿ ಉಂಡೆಯನ್ನು ಹಾಕಿ ಕರಿದುಕೊಳ್ಳಿ ಆಮೇಲೆ ಮಾಡಿಟ್ಟುಕೊಂಡ ಸಕ್ಕರೆ ಪಾಕ್ ನಲ್ಲಿ ಹಾಕಿ ೨ಗಂಟೆ ಮುಚ್ಚಿಡಿ . ಈಗ ರುಚಿ ರುಚಿಯಾದ ಬ್ರೆಡ್ ಗುಲಾಂ ಜಾಮೂನು ಸವಿಯಲು ರೆಡಿ . ನಿಮಗೇನಾದ್ರು ಇಷ್ಟ ಆದ್ರೆ ಮನೆಯಲ್ಲೇ ಬ್ರೆಡ್ ಜಾಮೂನ್ ಮಾಡಿ ಸವಿಯಿರಿ