ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬ.೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿತ್ಯಾಗ,ತಾಳ್ಮೆ ,ಪ್ರೀತಿ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಬ್ರಿಟಿಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನೂಹೊಂದಿದ್ದ ಕರ್ನಾಟಕ, ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್. ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ,ಬಾಗಲಕೋಟೆ, ಹಾವೇರಿ ಉಡುಪಿ, ಕೊಪ್ಪಳ, ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ, ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು. ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ.ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ
"ಜೈ ಕರ್ನಾಟಕ ಮಾತೇ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀನು ಕನ್ನಡಿಗನಾಗಿರು "
0 comments:
Post a Comment