ಲಂಡನ್, ಸೆ.11: ಸತತವಾಗಿ ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಮತ್ತೊಂದು ಆಘಾತ. ನಿನ್ನೆ ನಡೆದ 4ನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 280 ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರಗಳಲ್ಲಿ 6 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ರದ್ಡಾಯಿತು. ಡಕ್-ವರ್ತ ನಿಯಮದ ಪ್ರಕಾರ ಇಂಗ್ಲೆಂಡ್ ಅಷ್ಟೇ ಓವರಗಳಲ್ಲಿ 270 ರನ ಗಳಿಸಿದ್ದರಿಂದ ಪಂದ್ಯ ಟೈ ಎಂದು ಘೋಷಿಸಲಾಯಿತು. ಇದಕ್ಕಿಂತ ಮೊದಲು ಮೂರು ಸಲ ಮಳೆಯಿಂದ ಆಟ ನಿಂತಿತ್ತು. ಇದರಿಂದ ಭಾರತ ಸರಣಿ ಸೋಲು ಅನುಭವಿಸಿದೆ. ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಜಂಟಿಯಾಗಿ ಸುರೇಶ ರೈನಾ ಹಾಗೂ ರವಿ ಬೋಪಾರಾಗೆ ನೀಡಲಾಯಿತು. ಮಳೆ ಬಂದು ಎಲ್ಲಾ ಹಾಳು ಮಾಡುಬಿಟ್ಟಿತು ಎಂದು ನಾಯಕ ಧೋನಿ ಹೇಳಿದ್ದಾರೆ.
ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ ....!!!
-
ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಸಿನಿಮಾ ನಟಿಯರಂತೆ ಸ್ಲಿಮ್ ಆಗಿ
ದೇಹವನ್ನು ತಳಕು ಬಳಕಿನ ಬಳ್ಳಿಯಂತೆ ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ
ಜಿಮ್ ,ಯೋಗ ವ್ಯಾಯಾ...
12 years ago
0 comments:
Post a Comment