ಬಾಳಾಠಾಕ್ರೆ ಅಜ್ಜಾನ್ದು ಬಾಳಾ ಆಯ್ತು

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆಗೆ ನಾವು ಅಂದ್ರೆ ಕನ್ನಡಿಗರು ಬಾಳಾಠಾಕ್ರೆ ಅಂತಾ ಕರೆಯಬೇಕಾ..? ಅಥವಾ ಇನ್ನೇನಾದ್ರು ಕರೆಯಬೇಕಾ ಅರ್ಥಾಆಗ್ತಿಲ್ಲಾ ಛೇ!ಛೇ !ನಾವು ಕನ್ನಡಿಗರು ಆ ಥರಾ ಮಾತಾಡಲ್ಲಾ ಅಂತಾಯಿದ್ದಾರೆ ಕನ್ನಡ ಜನ.ಏಕೆಂದರೆ ಜ್ಞಾನದ ಅರಿವೇ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಏನ್ ಗೊತ್ತುರೀ..

ವಿಧಾನ ಪರಿಷತ್ ಚುನಾವಣೆ: ಸದಾನಂದಗೌಡರಿಗೆ ಭರ್ಜರಿ ಜಯ!!

ವಿಧಾನ ಪರಿಷತ್ 1 ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡು ಭಾರಿ ಪೈಪೋಟಿಯ ನಡುವೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸದಾನಂದಗೌಡರಿಗೆ ಭರ್ಜರಿ ಜಯ ಲಭಿಸಿದೆ.

ರಾಹುಲ್ ದ್ರಾವಿಡ್ ಗೆ ನಾಯಕನ ಸ್ಥಾನ

ಭಾರತ ಕ್ರಿಕೆಟ್ ಕಂಡ ದಂತಕತೆ ಡಿ ವಾಲ್ ಕರ್ನಾಟಕ ಹೆಮ್ಮೆಯ ಕ್ರಿಕೆಟ್ ಆಟಗಾರ ರಾಹುಲ ಶರದ್ ದ್ರಾವಿಡ್ ಈಗ IPL ನ ರಾಜೆಸ್ತಾನ ರಾಯಲ್ ನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ನಲ್ಲಿ ಮ್ಯಾಚ್ ಪಿಕ್ಸಿಂಗ್ !!...ವಿನೋದ್ ಕಾಂಬಳೆ.

1996 ರಲ್ಲಿ ಕೊಲ್ಕತ್ತಾದ ಈಡ್ದನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಕ್ರಿಕೆಟ್ ವಿಶ್ವಕಪ್ ಸೆಮಿಪೈನಲ್ ಮ್ಯಾಚ್ ನಲ್ಲಿ ಪಿಕ್ಸಿಂಗ್ ಆಗಿತ್ತು ಎಂದು ಮಾಜಿ ಕ್ರಿಕೆಟರ್ ವಿನೋದ್ ಕಾಂಬಳೆ ಖಾಸಗಿ ಟಿವಿ ಚಾನಲ್ಲೊಂದರಲ್ಲಿ ಹೇಳಿದ್ದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ ಅಂದಿನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಜರುದ್ದೀನ್ ಟಾಸ್ ಗೆದ್ದಿದ್ದರು

ಬಳ್ಳಾರಿಯ ಪೈಟಿಂಗ್ ನಲ್ಲಿ ರಾಮುಲುಗೆ ಜಯ

ಬಳ್ಳಾರಿಯ ಗಡಿನಾಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲೂ ಬಾರಿ ಮುನ್ನಡೆಯಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

6 Sept 2011

ವಜ್ರಖಚಿತ ಕಿರೀಟ ವಾಪಸಗೆ ಆಗ್ರಹ

ತಿರುಮಲ ಸೆ.6: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಹಾಗೂ ಸೋದರರು ತಿರುಪತಿ ತಿಮ್ಮಪ್ಪನಿಗೆ ನೀಡಿದ ವಜ್ರಖಚಿತ ಕಿರೀಟವನ್ನು ದೇವರಿಗೆ ತೊಡಿಸಬಾರದು ಎಂದು ಭಕ್ತರು ಆಗ್ರಹಿಸಿದ್ದಾರೆ. ರೆಡ್ಡಿ ಬಂಧನವಾಗಿ ಚಂಚಲಗುಡ ಜೈಲಿಗೆ ಸೇರಿದ ಮೇಲೆ ಈ ರೀತಿ ಆಗ್ರಹಿಸಿದ್ದಾರೆ. ಜನಾರ್ದನ ರೆಡ್ದಿ ಅವರು ನೀಡಿದ 30 ಕೆ.ಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ 2009ರ ಜೂನ್ 11ರಂದು ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು.

5 Sept 2011

ಜನಾರ್ದನ ರೆಡ್ಡಿ ಬಂಧನ: ಪ್ರತಿಭಟನೆ

ಬೆಳಿಗ್ಗೆ ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿ 30 ಕೆ.ಜಿ. ಚಿನ್ನ ಹಾಗೂ 4.50 ಕೋಟಿ ನಗದು ವಶಪಡಿಸಿ ಕೊಂಡಿದ್ದಾರೆ. ಅವರನ್ನು ಬಂಧಿಸಿ ಹೈದರಾಬಾದ ಸಿಬಿಐ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 4 ಕ್ಕೆ ಕೋಟ್೯ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

4 Sept 2011

ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

ಕ್ರಿಕೆಟ್:ನಿನ್ನೆ ನಡೆದ ಇಂಗ್ಲೆ೦ಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 275 ರನ್ನಗಳ ಗುರಿ ನೀಡಿತ್ತು. ನಂತರ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆ೦ಡ್ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದಾಗ ಮಳೆಯಿಂದ ಪ೦ಧ್ಯ ರದ್ದಾಯಿತು. 5 ರನ್ ಗಳಿಂದ ಪಾಥೀ೯ವ ಪಟೇಲ ಶತಕ ವಂಚಿತರಾದರು. ಅವರು 107 ಬಾಲ್ ಗಳಿಂದ 95 ರನ್ ಗಳಿಸಿ ಔಟಾದರು.ಎರಡನೇ ಎಕದಿನ ಸೆ. 6 ರಂದು ನಡೆಯಲಿದೆ.

ಸ್ವಾಭಿಮಾನಕ್ಕೆ ದಕ್ಕೆ : ಬಿ. ಶ್ರೀರಾಮುಲು ರಾಜೀನಾಮೆ

ಬೆಂಗಳೂರು ಸೆ.04: ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿರುವ ಕಾರಣ ಮಾಜಿ ಸಚಿವ ಬಿ. ಶ್ರೀರಾಮುಲು ಇಂದು ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪ್ಪಯ್ಯ ಅವರಿಗೆ ಪತ್ರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಮಡಿಕೇರಿ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಲೋಕಾಯುಕ್ತರ ಬಗ್ಗೆ ನನಗೆ ಅಪಾರ ಗೌರವವಿದೆ. 20 ವರ್ಷಗಳಿಂದ ರಾಜಕೀಯ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಾಮಾಣಿಕ, ಯಾವುದೇ ಕಳಂಕ ಇಲ್ಲದವನು. ಅಕ್ರಮ ಗಣಿಗಾರಿಕೆಯಲ್ಲಿ ಖಂಡಿತ ಭಾಗಿಯಾಗಿಲ್ಲ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನಗೆ ಸಾಕಷ್ಟು ನೋವನ್ನು ತಂದಿದೆ. ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು. ನನ್ನ ಜತೆ ಬಳ್ಳಾರಿ ಅನೇಕ ಶಾಸಕರು ನನ್ನೊಂದಿಗೆ ಇದ್ದಾರೆ. ಆದರೆ ನಾನೊಬ್ಬ ಮಾತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.

31 Aug 2011

ರಾಜೀವ ಹಂತಕರಿಗೆ ಗಲ್ಲು 8 ವಾರ ತಡೆ:

1991 ಮೇ 21 ರಂದು ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ ಗಾ0ಧಿ ಹಂತಕರ ಗಲ್ಲು ಶಿಕ್ಷೆಗೆ ಮದ್ರಾಸ ಹೈಕೋಟ್೯ 8 ವಾರಗಳ ತಡೆ ನೀಡಿದೆ. ಗಲ್ಲು ಶಿಕ್ಷೆ ನೀಡಲು 11 ವಷ೯ಗಳ ವಿಳಂಬಕ್ಕೆ ವಿವರಣೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋಟ್೯ ಆದೇಶಿಸಿದೆ. ಇದರಿಂದ ಹಂತಕರು 8 ವಾರಗಳ ಜೀವದಾನ ಪಡೆದಂತಾಗಿದೆ. 2000ರಲ್ಲಿ ಮೂವರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಸುಪ್ರೀಂ ಕೋಟ್೯, 2011 ಆಗಷ್ಟ ೧೧ರಂದು ರಾಷ್ಟ್ರಪತಿಗಳು ಕ್ಷಮಾದಾನ ನಿರಾಕರಿಸಿದ್ದರು.

30 Aug 2011

ವಿವಾಹಿತ ಮಹಿಳೆ ಕೊಲೆ :


ಬನಹಟ್ಟಿ: ಇಲ್ಲಿನ ಸದಾಸಿವನಗರದ ಪ್ರಶಾಂತ ಭಸ್ಮೆ ಅವರ ಹೆಂಡತಿಯಾದ ಮಯೂರಿ, ಅಕ್ರಮ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಮೈದುನ ರಾಘವೇಂದ್ರನಿಂದ ಶನಿವಾರ ಮಧ್ಯಾಹ್ನ ಕೊಲೆಗೀಡಾಗಿದ್ದಾಳೆ. ದೈಹಿಕ ಸಂಪರ್ಕಕ್ಕೆ ಒಪ್ಪದ ಎರಡು ಮಕ್ಕಳ ತಾಯಿಯಾದ ಮಯೂರಿಯನ್ನು ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ವಿಕಾರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಯಡಿಯೂರಪ್ಪಗೆ ಜಾಮೀನು ನಿರಾಕರಣೆ:

ಭೂಹಗರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಮು. ಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ನ್ಯಾಯಲಯಕ್ಕೆ ಹಾಜರಾದರು.ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿ ನಾಶದ ಸಾಧ್ಯತೆ ಇರುವುದರಿಂದ ನ್ಯಾಯಾಧಿಶರು ಜಾಮೀನು ನೀಡಲು ನಿರಾಕರಿಸಿದರು.ಪ್ರಕರಣದ ವಿಚಾರಣೆಯನ್ನು ಸೆ. ೭ಕ್ಕೆ ಮುಂದೂಡಿದರು.

21 Aug 2011

ಅಣ್ಣ ಉಪವಾಸ ಅಂತ್ಯ:

ಕೇ0ದ್ರ ಸರಕಾರ ಮೂರೂ ಬೇಡಿಕೆಗಳನ್ನು ಒಪ್ಪಿದ್ದರಿ೦ದ ಅಣ್ಣಾ ಹಜಾರೆ ರವಿವಾರ ಬೆಳಿಗ್ಗೆ ೧೦:೦೦ ಗಂಟೆಗೆ ಉಪವಾಸ ಅ೦ತ್ಯಗೊಳಿಸಿದ್ದಾರೆ.

Share

Twitter Delicious Facebook Digg Stumbleupon Favorites More